Back
Home » ಆರೋಗ್ಯ
ಡಯಾಬಿಟಿಸ್ ಇದ್ದರೆ ಬೆನ್ನುನೋವು, ಕುತ್ತಿಗೆ ನೋವು ಬರುವ ಸಾಧ್ಯತೆ ಹೆಚ್ಚಂತೆ!!
Boldsky | 20th Mar, 2019 10:46 AM
 • ಸಂಶೋಧಕ ಹಾಗೂ ತಜ್ಞರು ವಿವರಿಸುವ ಪ್ರಕಾರ

  ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದಲ್ಲಿ ಸಂಶೋಧಕ ಹಾಗೂ ತಜ್ಞರು ವಿವರಿಸುವ ಪ್ರಕಾರ "ಈ ಎರಡೂ ಸ್ಥಿತಿಗಳಿಗೆ ಸ್ಥೂಲಕಾಯ ಹಾಗೂ ಜಡತನ ಎರಡೂ ಪ್ರಮುಖ ಕಾರಣಗಳಾಗಿದ್ದು ಈ ಮಾಹಿತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸಮತೋಲನ ದಲ್ಲಿರಿಸುವುದು, ದೇಹದ ತೂಕವನ್ನು ಆರೋಗ್ಯಕರ ಮಿತಿಗಳಲ್ಲಿರಿಸುವುದು ಹಾಗೂ ಮುಖ್ಯವಾಗಿ ಸಾಕಷ್ಟು ದೈಹಿಕ ಕಸರತ್ತು ನಡೆಸುವುದು ಈ ಸ್ಥಿತಿಗಳನ್ನು ಉಂಟಾಗದಂತೆ ಹಾಗೂ ಮಾರಕ ರೋಗಗಳು ಆವರಿಸದಂತೆ ತಡೆಯಲು ನಡೆಸಬೇಕಾದ ಅಗತ್ಯಕ್ರಮಗಳಾಗಿವೆ"

  Most Read: ನೀವು ಬೆಳಗ್ಗೆ ಕುಡಿಯಬೇಕಾದ 9 ಆರೋಗ್ಯಕಾರಿ ಪಾನೀಯಗಳು


 • ಕೆಳಬೆನ್ನ ನೋವು ಅಥವಾ ಕುತ್ತಿಗೆಯ ನೋವು

  ಮಧುಮೇಹಿಗಳಲ್ಲಿ ಪ್ರತಿ ಇಬ್ಬರಲ್ಲೊಬ್ಬರಿಗೆ ಕೆಳಬೆನ್ನ ನೋವು ಅಥವಾ ಕುತ್ತಿಗೆಯ ನೋವು ಜೀವಮಾನದಲ್ಲೆಂದಾದರೂ ಆವಿರಿಸಿಯೇ ಇರುತ್ತದೆ. ಇದಕ್ಕೂ ಮುನ್ನ ನಡೆಸಿದ ಕೆಲವು ಸಂಶೋಧನೆಗಳಲ್ಲಿ ಈ ನೋವು ತೀವ್ರಗೊಳ್ಳಲು ಮಧುಮೇಹ ಕಾರಣವಾಗಬಹುದು ಎಂದು ತಿಳಿಸಲಾಗಿದೆ. ಆದರೆ ಈ ಸಂಶೋಧನೆಗಳ ವಿವರಗಳು ಕಲಸುಮಲಸಾಗಿದ್ದು ಮಧುಮೇಹಕ್ಕೂ ಈ ನೋವುಗಳಿಗೂ ಸ್ಪಷ್ಟವಾದ ಸಂಭವಿರುವುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದು ಅವರು ವಿವರಿಸುತ್ತಾರೆ.


 • ಎರಡೂ ಬಗೆಯ ಮಧುಮೇಹಿಗಳ ಆರೋಗ್ಯದ ಮಾಹಿತಿ

  ಸಂಶೋಧಕರು ಎರಡೂ ಬಗೆಯ ಮಧುಮೇಹಿಗಳ ಆರೋಗ್ಯದ ಮಾಹಿತಿಗಳನ್ನು ಕಲೆಹಾಕಿದ್ದು ವಿಶೇಷವಾಗಿ ಈಗಾಗಲೇ ಈ ನೋವು ತೀವ್ರವಾಗಿರುವ ವ್ಯಕ್ಗಿಗಳನ್ನು ಪರಿಗಣಿಸಿ ಇವರು ತಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಹೇಗೆ ನಿಯಂತ್ರಿಸುತ್ತಿದ್ದಾರೆಂದು ಸೂಕ್ಷ್ಮವಾಗಿ ಅವಲೋಕಿಸಿದ್ದರು. ಅತಿ ಹೆಚ್ಚಾಗಿ ಕಾಣಬರುವ ಟೈಪ್ 2 ಮಧುಮೇಹಿಗಳಿಗೆ ಸ್ಥೂಲಕಾಯ ಮತ್ತು ವಯಸ್ಸಿನ ಪ್ರಭಾವದಿಂದ ಅಗತ್ಯವಿದ್ದಷ್ಟು ಪ್ರಮಾಣದ ಇನ್ಸುಲಿನ್ ಅನ್ನು ಬಳಸಿ ಕೊಳ್ಳಬೇಕಾದ ಕ್ಷಮತೆ ಉಡುಗುತ್ತಾ ಸಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿರುವ ಸಕ್ಕರೆಯನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಲು ವಿಫಲರಾಗುತ್ತಾರೆ. ಕಡಿಮೆ ಪ್ರಮಾಣದಲ್ಲಿ ಕಾಣಬರುವ ಟೈಪ್ 1 ಮಧುಮೇಹ ಮಕ್ಕಳಿದ್ದಾಗ ಅಥವಾ ಚಿಕ್ಕ ವಯಸ್ಸಿನಲ್ಲಿಯೇ ಆವರಿಸಬಹುದು. ಈ ಸ್ಥಿತಿ ಎದುರಾದಾಗ ಮೇದೋಜೀರಕ ಗ್ರಂಥಿ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸುವುದಿಲ್ಲ. ಒಟ್ಟಾರೆಯಾಗಿ, ಈ ಸಂಶೋಧನೆಯನ್ನು ಹನ್ನೊಂದು ದೇಶಗಳ ನಾಗರಿಕರ ಆರೋಗ್ಯ ಮಾಹಿತಿಯನ್ನು ಆಧರಿಸಲಾಗಿತ್ತು ಹಾಗೂ ಈ ಎಲ್ಲಾ ವ್ಯಕ್ತಿಗಳು ಮಧುಮೇಹಿಗಳಾಗಿದ್ದು ಇವರಿಗೆ ಬೆನ್ನುನೋವು ಕುತ್ತಿಗೆನೋವು ಹಾಗೂ ಬೆನ್ನುಹುರಿಯ ನೋವುಗಳಲ್ಲಿ ಒಂದು ಅಥವಾ ಒಂದಕ್ಕಿಂತ ಹೆಚ್ಚು ಬಗೆಯ ನೋವು ಕಾಣಿಸಿಕೊಂಡಿತ್ತು.


 • ಎರಡೂ ಬಗೆಯ ಮಧುಮೇಹಿಗಳ ಆರೋಗ್ಯದ ಮಾಹಿತಿ

  ಆದರೆ ಮಧುಮೇಹಿಗಳಾಗಿದ್ದರೂ ಕಾಲದ ಘಟ್ಟದಲ್ಲಿ ಯಾವುದೇ ಬಗೆಯ ನೋವುಗಳನ್ನು ಅನುಭವಿಸದಿದ್ದ ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಆಧರಿಸಿ ಇನ್ನೊಂದು ಅಧ್ಯಯನವನ್ನು ನಡೆಸಲಾಯ್ತು. ಇವರ ಆರೋಗ್ಯ ಮಾಹಿತಿಯನ್ನು ಸತತವಾಗಿ ಸುಮಾರು ಎರಡರಿಂದ ನಾಲ್ಕು ವರ್ಷಗಳವರೆಗೆ ಕಲೆಹಾಕಿ ಮಧುಮೇಹಕ್ಕೂ ಕುತ್ತಿಗೆ, ಬೆನ್ನು ಅಥವಾ ಬೆನ್ನುಹುರಿಯ ನೋವಿಗೂ ಏನು ಸಂಬಂಧವಿದೆ ಎಂಬುದನ್ನು ಸ್ಪಷ್ಟಗೊಳಿಸಲು ವಿಫಲವಾಯ್ತು.
  ಹಾಗಾಗಿ, ಈ ಎರಡೂ ವೈರುಧ್ಯಗಳ ಮೂಲಕ ಈ ಸಂಶೋಧನೆಯನ್ನು ಕೊನೆಗೊಳಿಸಿ ಬೆನ್ನುನೋವು, ಕುತ್ತಿಗೆ ಅಥವಾ ಬೆನ್ನುಹುರಿಯ ನೋವಿಗೆ ಮಧುಮೇಹ ನೇರವಾಗಿ ಕಾರಣವಾಗಿದೆ ಎಂಬುದನ್ನು ಸಾಬೀತುಗೊಳಿಸಲು ಈ ಸಂಶೋಧನೆ ವಿಫಲವಾಗಿದೆ. ಈ ಸಂಶೋಧನೆಗೆ ಪರ್ಯಾಯವಾಗಿ ನಡೆದ ಇತರ ಚಿಕ್ಕ ಪುಟ್ಟ ಅಧ್ಯಯನಗಳಲ್ಲಿಯೂ ಈ ಸಂಬಂಧದ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭಿಸಲಿಲ್ಲ ಹಾಗೂ ಇವುಗಳ ವಿವರಗಳೂ ವೈರುಧ್ಯವನ್ನು ಹೊಂದಿದ್ದವು. ಆದರೂ, ಸ್ಥೂಲದೇಹಿಗಳಾಗಿದ್ದರೆ ಇವರಿಗೆ ಮಧುಮೇಹ ಹಾಗೂ ಇತರ ಬಗೆಯ ನೋವುಗಳು ಆವರಿಸುವ ಸಾಧ್ಯತೆ ಇತರರಿಗಿಂತ ಹೆಚ್ಚು ಎಂಬುದು ಸ್ಪಷ್ಟವಾದ ಅಂಶವಾಗಿದೆ ಎಂದು ತಜ್ಞರು ತಿಳಿಸುತಾರೆ.


 • ಬೆನ್ನುಮೂಳೆ ಹೊರಬಹುದಾದ ತೂಕಕ್ಕಿಂತಲೂ ಹೆಚ್ಚಿನ ತೂಕವನ್ನು ಹೊರಬೇಕಾಗಿ ಬಂದರೆ

  "ಒಂದು ವೇಳೆ ಬೆನ್ನುಮೂಳೆ ಹೊರಬಹುದಾದ ತೂಕಕ್ಕಿಂತಲೂ ಹೆಚ್ಚಿನ ತೂಕವನ್ನು ಹೊರಬೇಕಾಗಿ ಬಂದರೆ ಇದರಿಂದ ಬೆನ್ನುಮೂಳೆಯ ಅಡ್ಡತಟ್ಟೆಗಳು ಮತ್ತು ಇವನ್ನು ಹಿಡಿದಿರುವ ಸ್ನಾಯುಗಳು ಸ್ಥಾನಪಲ್ಲಟಗೊಳ್ಳುತ್ತವೆ ಹಾಗೂ ಇದು ಹಲವು ಬಗೆಯ ತೊಂದರೆಗಳಿಗೆ ಕಾರಣವಾಗುತ್ತವೆ. ಅಷ್ಟೇ ಅಲ್ಲ, ಚಲನೆಯನ್ನು ಕಡಿಮೆಯಾಗಿಸಿದರೂ ಸ್ನಾಯುಗಳು ತಮ್ಮ ಸಾಮರ್ಥ್ಯವನ್ನು ಕಳೆದುಕೊಂಡು ಬೆನ್ನುಮೂಳೆಗೆ ಅಗತ್ಯವಿದ್ದಷ್ಟು ಆಧಾರ ನೀಡಲು ಅಸಮರ್ಥವಾಗುತ್ತವೆ, ಇದೇ ನೋವಿಗೆ ಪ್ರಮುಖ ಕಾರಣ ಎಂದು ತಜ್ಞರು ವಿವರಿಸುತ್ತಾರೆ.

  Most Read: ಡಯಾಬಿಟಿಸ್ ಸಮಸ್ಯೆ ಇದ್ದವರು ಮೊಟ್ಟೆ ತಿನ್ನಬಹುದೇ? ಇದರಿಂದ ಏನಾದರೂ ಸಮಸ್ಯೆಗಳಿವೆಯೇ?


 • ಸ್ಥೂಲಕಾಯ ಸಮಸ್ಯೆ ಇದ್ದರೆ....

  ಮಧುಮೇಹಿಗಳು ಸ್ಥೂಲಕಾಯರಾಗಿದ್ದರೆ ಇವರಿಗೆ ಮಧುಮೇಹದ ಇತರ ಅಡ್ಡಪರಿಣಾಮಗಳು ಸುಲಭವಾಗಿ ಆವರಿಸಬಹುದು. ಉದಾಹರಣೆಗೆ ರಕ್ತನಾಳಗಳು ಶಿಥಿಲವಾಗುವುದು ಮತ್ತು ನರವ್ಯವಸ್ಥೆ ಕುಸಿಯುವುದು. ತನ್ಮೂಲಕ ಇದು ಬೆನ್ನುಹುರಿ ನಿಯಂತ್ರಿಸುವ ಕಾರ್ಯಗಳನ್ನು ಬಾಧಿಸುತ್ತದೆ ಹಾಗೂ ಬೆನ್ನುನೋವು ಸಹಾ ಉಲ್ಬಣಗೊಳ್ಳುತ್ತದೆ. ಒಂದು ವೇಳೆ ದೀರ್ಘಾವಧಿಯಲ್ಲಿ ಮಧುಮೇಹವನ್ನು ನಿಯಂತ್ರಿಸದೇ ಇದ್ದರೆ ಇದು ರಕ್ತನಾಳಗಳು, ನರಗಳು, ಸ್ನಾಯುಗಳು ಹಾಗೂ ಮೂಳೆಗಳ ಮೇಲೆ ಅಪಾರ ಪ್ರಭಾವ ಬೀರುತ್ತವೆ ಹಾಗೂ ಇವು ಎಲ್ಲಾ ಬಗೆಯ ಸ್ನಾಯುಗಳ ಮತ್ತು ಮೂಳೆಗಳಿಗೆ ಸಂಬಂಧಿಸಿದ ನೋವುಗಳನ್ನು ಹುಟ್ಟುಹಾಕಬಹುದು ಹಾಗೂ ಇವುಗಳಲ್ಲಿ ಕೆಲವು ಉಗ್ರರೂಪವನ್ನೂ ತಾಳಬಹುದು" ಎಂದು ತಜ್ಞರು ವಿವರಿಸುತ್ತಾರೆ.
ಬೆನ್ನು ನೋವು ಮತ್ತು ಕುತ್ತಿಗೆ ನೋವು ಎಂಬ ದೂರು ನೀಡುವ ವ್ಯಕ್ತಿಗಳಲ್ಲಿ ಹೆಚ್ಚಿನವರು ಮಧುಮೇಹಿಗಳೇ ಆಗಿರುತ್ತಾರೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಆದರೆ ಈ ನೋವಿಗೆ ಮಧುಮೇಹ ನೇರವಾದ ಕಾರಣವೇ ಎಂದು ಇದುವರೆಗೆ ಸ್ಪಷ್ಟವಾಗಿಲ್ಲ. ಬೆನ್ನು ನೋವು ಎದುರಾಗುವ ಸಾಧ್ಯತೆ ಮಧುಮೇಹಿಗಳಿಗೆ ಇತರರಿಗಿಂತ 35% ಹೆಚ್ಚು ಎಂದು ಈ ಸಂಶೋಧನೆ ತಿಳಿಸಿದೆ. ಇದಕ್ಕಾಗಿ .ಒಟ್ಟು 131,431 ವ್ಯಕ್ತಿಗಳ ಆರೋಗ್ಯದ ಮಾಹಿತಿಯನ್ನು ಐದು ಅಧ್ಯಾಯಗಳ ಮೂಲಕ ಕಲೆಹಾಕಲಾಗಿತ್ತು ಹಾಗೂ ಸುಮಾರು 6,560 ವ್ಯಕ್ತಿಗಳ ಆರೋಗ್ಯದ ಮಾಹಿತಿಯನ್ನು ಎರಡು ಅಧ್ಯಾಯಗಳಲ್ಲಿ ನಡೆಸಿದ ಬಳಿಕ ಮಧುಮೇಹಿಗಳಿಗೆ ಕುತ್ತಿಗೆ ನೋವು ಆವರಿಸುವ ಸಾಧ್ಯತೆ ಇತರರಿಗಿಂತ 24% ಹೆಚ್ಚು ಎಂದು ಖಚಿತವಾಗಿದೆ.

ಆದರೆ ವ್ಯಕ್ತಿಯ ಆರೋಗ್ಯವನ್ನು ಸಮಯದ ಅಳತೆಯಲ್ಲಿ ಕಲೆಹಾಕಿ ನೋಡಿದಾದ ಆ ವ್ಯಕ್ತಿಯ ಮಧುಮೇಹಕ್ಕೂ ಬೆನ್ನು, ಕುತ್ತಿಗೆ ಅಥವಾ ಬೆನ್ನುಮೂಳೆಯ ನೋವಿಗೂ ನೇರವಾದ ಸಂಬಂಧವಿರುವುದು ಎಂದೆನಿಸುವುದಿಲ್ಲವಂತೆ, ಆದರೆ ಮಧುಮೇಹಿಗಳ ಆರೋಗ್ಯದ ಪರಿಣಾಮವಾಗಿ ಈ ತೊಂದರೆಗಳ ಸಹಿತ ಇತರ ತೊಂದರೆಗಳು ಎದುರಾಗುವ ಸಾಧ್ಯತೆಯೂ ಹೆಚ್ಚಬಹುದು ಎಂದೂ ವರದಿ ತಿಳಿಸುತ್ತದೆ.

   
 
ಹೆಲ್ತ್