Back
Home » ಇತ್ತೀಚಿನ
ಮಿಡ್‌ ರೇಂಜ್‌ ಬೆಲೆಯಲ್ಲಿ ಗ್ರಾಹಕರನ್ನು ಸೆಳೆಯಲಿದೆ 'ಹಾನರ್‌ 10ಐ' ಸ್ಮಾರ್ಟ್‌ಫೋನ್‌.!!
Gizbot | 21st Mar, 2019 08:00 AM
 • ಡಿಸ್‌ಪ್ಲೇ

  ಹಾನರ್‌ 10ಐ ಸ್ಮಾರ್ಟ್‌ಫೋನ್ 1080x2340 ಪಿಕ್ಸಲ್‌ ರೆಸಲ್ಯಾಶನ್‌ ಸಾಮರ್ಥ್ಯದೊಂದಿಗೆ 6.2 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇ ಯನ್ನು ಹೊಂದಿದ್ದು, ಬಾಹ್ಯ ಬಾಡಿ ಮತ್ತು ಡಿಸ್‌ಪ್ಲೇಯ ನಡುವಿನ ಅನುಪಾತವು 19.5:9 ಆಗಿದೆ. ಮಿಡ್‌ ರೇಂಜ್‌ ದರದಲ್ಲಿದ್ದರು ವಾಟರ್‌ ನಾಚ್‌ ರಚನೆಯಲ್ಲಿರಲಿದೆ.


 • ಪ್ರೊಸೆಸರ್‌

  ಆಕ್ಟಾಕೋರ್‌ ಹಿಸಿಲಿಕಾನ್ ಕಿರನ್ 710 SoC ಪ್ರೊಸೆಸರ್ ಶಕ್ತಿಯನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಈ ಸ್ಮಾರ್ಟ್‌ಫೋನಿನಲ್ಲಿ ಕಾರ್ಯನಿರ್ವಹಿಸಲಿದೆ. 4GB RAM ಸಾಮರ್ಥ್ಯವನ್ನು ಹೊಂದಿದ್ದು, ಆಂತರಿಕ ಸಂಗ್ರಹಕ್ಕಾಗಿ 128GB ಸ್ಥಳಾವಕಾಶ ಒದಗಿಸಲಾಗಿದೆ ಎನ್ನಲಾಗಿದೆ.


 • ಕ್ಯಾಮೆರಾ

  ಮಿಡ್‌ ರೇಂಜ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದರೂ ಇದರಲ್ಲಿ ತ್ರಿವಳಿ ಕ್ಯಾಮೆರಾ ನೀಡಿರುವುದು ವಿಶೇಷ. ಮೊದಲ ಕ್ಯಾಮೆರಾ 24ಮೆಗಾಪಿಕ್ಸಲ್, ದ್ವೀತಿಯ ಕ್ಯಾಮೆರಾ 8ಮೆಗಾಪಿಕ್ಸಲ್ ಮತ್ತು ಮೂರನೇ ಕ್ಯಾಮೆರಾ 2ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿ ಇರಲಿವೆ ಎಂದು ಹೇಳಲಾಗುತ್ತಿದೆ.


 • ಸೆಲ್ಫಿ ಕ್ಯಾಮೆರಾ

  ಹಾನರ್‌ 10ಐ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿಗಾಗಿ 32 ಮೆಗಾಪಿಕ್ಸಲ್‌ ಸಾಮರ್ಥ್ಯದ ಕ್ಯಾಮೆರಾ ನೀಡಿರುವುದು ಮತ್ತೊಂದು ವಿಶೇಷವಾಗಿದೆ. ಈ ಸೆಲ್ಫಿ ಕ್ಯಾಮೆರಾದಲ್ಲಿ ಕೃತಕ ಬುದ್ಧಿಮತ್ತೆ ಸಾಮರ್ಥ್ಯವು ಇದ್ದು, ಆಟೋಮ್ಯಾಟಿಕ್ ಆಗಿ ಗ್ರಹಿಸುವ ಶಕ್ತಿಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.


 • ಬ್ಯಾಟರಿ

  3,400mAh ಸಾಮರ್ಥ್ಯದ ಉತ್ತಮ ಬ್ಯಾಟರಿ ಒದಗಿಸಿದ್ದು, ದೀರ್ಘಕಾಲ ಬಾಳುವ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಇನ್ನೂ ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ನೀಡಿರುವ ಬಗ್ಗೆ ಮಾಹಿತಿ ತಿಳಿದಿಲ್ಲ. ಇದರೊಂದಿಗೆ 4G VoLTE ಬೆಂಬಲ ಹೊಂದಿದ್ದು, ವೈಫೈ ಮತ್ತು ಬ್ಲೂಟೂತ್ ಸಂಪರ್ಕ ಸಹ ನೀಡಲಾಗಿದೆ.
ವಿಶ್ವಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿರುವ ಹುವಾಯಿ ಕಂಪನಿಯ ಸಬ್‌ ಬ್ರ್ಯಾಂಡ್‌ ಹಾನರ್‌ ಈಗಾಗಲೇ ಹಲವು ವಿಶೇಷ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು, ಇತ್ತೀಚಿಗೆ ಹಾನರ್‌ ವ್ಯೂವ್‌ 20 ಸ್ಮಾರ್ಟ್‌ಫೋನ್‌ ಮೂಲಕ ಕಂಪನಿಯ ಹೆಸರು ಚಾಲ್ತಿಯಲ್ಲಿತ್ತು. ಇದೀಗ ಮತ್ತೆ ಕಂಪನಿಯ ಹೆಸರು ಮುನ್ನೆಲೆಗೆ ಬಂದಿದ್ದು, ಹಾನರ್‌ 10ಐ ಸ್ಮಾರ್ಟ್‌ಫೋನ್‌ ಹೆಸರಿನ ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ.

ಹೌದು, ಹಾನರ್‌ ಸಂಸ್ಥೆ ಸದ್ಧಿಲ್ಲದೇ ತನ್ನ ಹೊಸ '10ಐ' ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ರಷ್ಯಾದಲ್ಲಿ ರಿಲೀಸ್‌ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಅತೀ ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಗೆ ಎಂಟ್ರಿಕೊಡಲಿದೆ. ಇದೊಂದು ಮಿಡ್‌ ರೇಂಜ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಆಕ್ಟಾಕೋರ್‌ ಕಿರನ್ 710 SoC ಪ್ರೊಸೆಸರ್‌ನೊಂದಿಗೆ ಆಂಡ್ರಾಯ್ಡ್‌ 9.0 ಪೈ ಆಪರೇಟಿಂಗ್ ಸಿಸ್ಟಮ್ ಕಾರ್ಯನಿರ್ವಹಿಸಲಿದೆ.

ಮಿಡ್‌ ರೇಂಜ್‌ ದರದಲ್ಲಿ ಫೇಸ್‌ಅನ್‌ಲಾಕ್‌, ಎನ್‌ಎಫ್‌ಸಿ ಫೀಚರ್ಸ್‌ಗಳನ್ನು ಒಳಗೊಂಡಿರುವ ಹಾನರ್‌ 10ಐ ಸ್ಮಾರ್ಟ್‌ಫೋನ್‌ ತ್ರಿವಳಿ ಕ್ಯಾಮೆರಾವನ್ನು ಸಹ ಹೊಂದಿದೆ, ಜೊತೆಗೆ 32 ಮೆಗಾಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ನೀಡಿರುವುದು ವಿಶೇಷ. ಹಾಗಾದರೇ ಹಾನರ್‌ ಸ್ಮಾರ್ಟ್‌ಫೋನ್‌ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಹೊತ್ತು ಬರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್