Back
Home » ಇತ್ತೀಚಿನ
ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಖರೀದಿಗೆ ಇದೀಗ ಕ್ಯೂ ಏಕೆ ಗೊತ್ತಾ?
Gizbot | 21st Mar, 2019 10:39 AM
 • ಡಿಸ್‌ಪ್ಲೇ ಮತ್ತು ವಿನ್ಯಾಸ?

  ಶಿಯೋಮಿ 'ಮಿ ಎ2'" ಸ್ಮಾರ್ಟ್‌ಪೋನ್, 19:9 ಅನುಪಾತದ 5,99 ಇಂಚು ಡಿಸ್‌ಪ್ಲೆಯನ್ನು ಹೊಂದಿದೆ. ಎರಡೂ ಬದಿಯಲ್ಲಿ ಬೆಜೆಲ್ ಲೆಸ್ ಡಿಸ್‌ಪ್ಲೆ ಹೊಂದುವ ಮೂಲಕ ಶಿಯೋಮಿ ಕಂಪೆನಿ ರೆಡ್‌ ಮಿ ನೋಟ್ 5 ಫೋನಿನ ವಿನ್ಯಾಸದಲ್ಲಿಯೇ ಇದೆ ಎನ್ನಬಹುದಾಗಿದ್ದು, ಹಿಂಬಾಗದಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹಾಗೂ ಫಿಂಗರ್‌ಪ್ರಿಂಟ್ ಆಯ್ಕೆ ಲಭ್ಯವಿದೆ.


 • ಪ್ರೊಸೆಸರ್ ಮತ್ತು RAM!

  ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 660 soc ಪ್ರೊಸೆಸರ್ (ನಾಲ್ಕು 2.2GHz ಕಿರೋ 260 ಕೋರ್ಗಳು + ನಾಲ್ಕು 1.8GHz ಕಿರೋ 260 ಕೋರ್ಗಳು) ಮತ್ತು ಅಡ್ರಿನೊ 512 ಜಿಪಿಯು ಅನ್ನು 'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನ್ ಹೊಂದಿದೆ. 4/6GB LPDDR4x ಡ್ಯುಯಲ್ ಚಾನೆಲ್ RAM ಮತ್ತು 128GB ಆಂತರಿಕ ಸ್ಟೋರೇಜ್ ಆಯ್ಕೆಗಳೊಂದಿಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ.


 • ಡ್ಯುಯಲ್ ರಿಯರ್ ಕ್ಯಾಮೆರಾ!

  'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನ್ ಅದ್ಬುತ ಎನ್ನುವಂತೆ f / 1.75 ಅಪಾರ್ಚರ್ ಮತ್ತು ಸ್ಥಿರ ಫೋಕಲ್ ಇರುವ 20-ಮೆಗಾಪಿಕ್ಸೆಲ್ ಸೋನಿ IMX376 ಸೆಲ್ಫಿ ಕ್ಯಾಮೆರಾ ಹಾಗೂ 20 ಮತ್ತು 12 ಮೆಗಾಪಿಕ್ಸೆಲ್‌ನ ಎರಡು ರಿಯರ್ ಕ್ಯಾಮೆರಾಗಳನ್ನು ಹೊಂದಿದೆ. 20-ಮೆಗಾಪಿಕ್ಸೆಲ್‌ನ ಎರಡೂ ಕ್ಯಾಮೆರಾಗಳು 1-ಮೈಕ್ರಾನ್ ಪಿಕ್ಸೆಲ್ ಅಪಾರ್ಚರ್ ಗಾತ್ರ ಹೊಂದಿದ್ದು, ಸಾಫ್ಟ್-ಎಲ್ಇಡಿ ಫ್ಲಾಶ್, ಆಟೋಫೋಕಸ್ ಮತ್ತು ದ್ವಿ-ಟೋನ್ ಎಲ್ಇಡಿ ಫ್ಲಾಶ್‌ಗಳನ್ನು ಸ್ಮಾರ್ಟ್‌ಫೋನ್ ಕ್ಯಾಮೆರಾಗಳಲ್ಲಿ ನೀಡಲಾಗಿದೆ.


 • ಕೃತಕ ಬುದ್ದಿಮತ್ತೆ AI ತಂತ್ರಜ್ಞಾನ!

  'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ ಹಲವು ತಂತ್ರಜ್ಞಾನಗಳು ಕೃತಕ ಬುದ್ದಿಮತ್ತೆಯಿಂದ ಕಾರ್ಯನಿರ್ವಹಿಸಲಿವೆ. ಫೋಟೋಗಳಲ್ಲಿ ಉತ್ತಮ ಬಣ್ಣಗಳಿಗಾಗಿ AI ದೃಶ್ಯ ಗುರುತಿಸುವಿಕೆ, ಕೃತಕ ಬುದ್ದಿಮತ್ತೆ ಬೊಕೆ ಚಿತ್ರಗಳು, ಕೃತಕ ಬುದ್ದಿಮತ್ತೆ ಸ್ಮಾರ್ಟ್ ಬ್ಯೂಟಿ 4.0, ಕೃತಕ ಬುದ್ದಿಮತ್ತೆ ಕರೆನ್ಸಿ ಪರಿವರ್ತನೆ ಹಾಗೂ ಕೃತಕ ಬುದ್ದಿಮತ್ತೆ ಭಾಷಾಂತ ಸೇವೆಗಳನ್ನು ಸ್ಮಾರ್ಟ್‌ಫೋನ್ ಮೂಲಕ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ.


 • ಚಾರ್ಜಿಂಗ್ ತಂತ್ರಜ್ಞಾನ

  'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ 3010mAh ಸಾಮರ್ಥ್ಯದ ಬ್ಯಾಟರಿಯನ್ನು ಅಳವಡಿಸಲಾಗಿದೆ. ಬ್ಯಾಟರಿ ಚಾರ್ಜಿಂಗ್ ತಂತ್ರಜ್ಞಾನದಲ್ಲಿ ಶಿಯೋಮಿ ಸ್ವಲ್ಪ ಅಪ್‌ಡೇಟ್ ಆಗಿದ್ದು, 'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ ಕ್ವಿಕ್ಚಾರ್ಜ್ 3.0 ಗೆ ಬೆಂಬಲವನ್ನು ಸ್ಮಾರ್ಟ್‌ಫೋನಿನಲ್ಲಿ ತಂದಿದೆ. ಇದರಿಂದ ಶಿಯೋಮಿ ಮಿ ಎ2 ಸ್ಮಾರ್ಟ್‌ಪೋನ್ ಕೇವಲ 30 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ.


 • ಇತರೆ ಏನೆಲ್ಲಾ ಫೀಚರ್ಸ್?

  4G LTE, ಡ್ಯುಯಲ್-ಬ್ಯಾಂಡ್ Wi-Fi ಎ / ಬೌ / ಗ್ರಾಂ / ಎನ್ / ಎಸಿ, ವೈ-ಫೈ ಡೈರೆಕ್ಟ್, ಮಿರಾಕಾಸ್ಟ್, ಬ್ಲೂಟೂತ್ 5.0, ಐಆರ್ ಎಮಿಟರ್, ಯುಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಫೇಸ್‌ ಅನ್‌ಲಾಕ್ ಫೀಚರ್ಸ್‌ಗಳನ್ನು'ಶಿಯೋಮಿ ಮಿ ಎ2' ಸ್ಮಾರ್ಟ್‌ಪೋನಿನಲ್ಲಿ ನೀಡಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಈ ಸ್ಮಾರ್ಟ್‌ಫೋನಿನಲ್ಲಿ 3.5 ಮಿಮೀ ಇಯರ್ಫೋನ್ ಜಾಕ್ ತರದೇ ಇರುವುದು ಎಲ್ಲರಿಗೂ ಆಶ್ಚರ್ಯ ಮೂಡಿಸಿತ್ತು.!
ಕೇವಲ ನಾಲ್ಕು ತಿಂಗಳ ಹಿಂದೆ 17,499 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದ್ದ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಬೆಲೆ ಇದೀಗ ಕೇವಲ 11,999 ರೂ.ಗಳು ಎಂದರೆ ನೀವು ನಂಬಲೇಬೇಕು. ಏಕೆಂದರೆ, ಶಿಯೋಮಿ ತನ್ನ ನೂತನ ರೆಡ್‌ಮಿ ನೋಟ್ 7 ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ನಂತರ 'ಮಿ ಎ2' ಸ್ಮಾರ್ಟ್‌ಫೋನ್ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ.

ಹೌದು, ಆಂಡ್ರಾಯ್ಡ್ ಪೈ ಅಪ್‌ಡೇಟ್ ಜೊತೆಗೆ ಭಾರೀ ಫೀಚರ್ಸ್ ಹೊತ್ತ ಎರಡನೇ ಆಂಡ್ರಾಯ್ಡ್ ಒನ್ ಪ್ರೋಗ್ರಾಂ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಬೆಲೆ ಭಾರೀ ಇಳಕೆಯಾಗಿದೆ. ಕಳೆದ ತಿಂಗಳು 3000 ಸಾವಿರದಷ್ಟು ಬೆಲೆ ಕಳೆದುಕೊಂಡಿದ್ದ ಈ ಸ್ಮಾರ್ಟ್‌ಪೋನ್ ಮೇಲೆ ಇದೀಗ ಒಟ್ಟು 5,500 ರೂ. ಡಿಸ್ಕೌಂಟ್ಸ್ ನೀಡಿ ಶಿಯೋಮಿ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಸ್ಮಾರ್ಟ್‌ಪೋನ್‌ಗಳಲ್ಲಿ ಒಂದಾದ ಶಿಯೋಮಿ 'ಮಿ ಎ2' ಸ್ಮಾರ್ಟ್‌ಫೋನ್ ಇದೀಗ ಬೆಲೆ ಕಳೆದುಕೊಂಡು ಮಿ.ಕಾಮ್ ಮತ್ತು ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಅಮೆಜಾನ್ ಇಂಡಿಯಾದಲ್ಲಿ ಮಾರಾಟಕ್ಕಿದೆ. ಹಾಗಾದರೆ, ಜನಪ್ರಿಯ 'ಮಿ ಎ2' ಸ್ಮಾರ್ಟ್‌ಫೋನ್ ಫೀಚರ್ಸ್ ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್