Back
Home » ಆರೋಗ್ಯ
ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮಿರ್‌ ಖಾನ್‌ರವರ ಆರೋಗ್ಯದ ಫಿಟ್ನೆಸ್ ರಹಸ್ಯ
Boldsky | 21st Mar, 2019 02:54 PM
 • 2016 ರಲ್ಲಿ ದಂಗಲ್ ಎಂಬ ಹಿಂದಿ ಚಲನಚಿತ್ರದಲ್ಲಿ

  2016 ರಲ್ಲಿ ದಂಗಲ್ ಎಂಬ ಹಿಂದಿ ಚಲನಚಿತ್ರದಲ್ಲಿ ಅತ್ಯುತ್ತಮ ದೇಹದಾರ್ಢ್ಯವನ್ನು ಹಾಗೂ ಸ್ಥೂಲಕಾಯವನ್ನು ಹೊಂದಿರುವ ಪರಿಯನ್ನು ಪ್ರಕಟಿಸಿರುವುದು ಅದ್ಭುತ. ಇವರು ಕೇವಲ ದೇಹದಾರ್ಢ್ಯವನ್ನು ಪಡೆದಿರುವುದು ಮಾತ್ರವಲ್ಲ, ತೂಕವನ್ನೂ ಕಳೆದುಕೊಂಡಿದ್ದರು. ವಾಸ್ತವದಲ್ಲಿ, ಈ ಚಿತ್ರದ ಮೊದಲ ಭಾಗದಲ್ಲಿ ಇವರು ಕಡಿಮೆ ತೂಕವನ್ನೂ, ನಂತರದ ಭಾಗದಲ್ಲಿ ಸ್ಥೂಲಕಾಯವನ್ನೂ ಪಡೆದಿರುವಂತೆ ಚಿತ್ರಿಸಲಾಗಿದೆ. ವಾಸ್ತವದಲ್ಲಿ ಇವರು ಮೊದಲು ಸ್ಥೂಲಕಾಯವನ್ನು ಪಡೆದು ಆ ಪಾತ್ರದ ಚಿತ್ರೀಕರಣವನ್ನು ಮೊದಲು ನಿರ್ವಹಿಸಲಾಗಿತ್ತು. ಬಳಿಕ ಅಪಾರವಾದ ತೂಕವನ್ನು ಇವರು ಕ್ಷಿಪ್ರವಾಗಿ ಕಳೆದುಕೊಂಡು ಸಿಂಹಕಟಿಯ ದಾರ್ಢ್ಯವನ್ನು ಪಡೆದ ಬಳಿಕ ಚಿತ್ರದ ಮೊದಲ ಭಾಗವನ್ನು ಚಿತ್ರೀಕರಿಸಲಾಗಿತ್ತು ಈ ಬಗೆಯ ಭಾರೀ ಬದಲಾವಣೆ ತೂಕ ಕಳೆದುಕೊಳ್ಳುವವರಿಗೆ ಒಂದು ಮಾದರಿ ಎನಿಸಿದೆ. ಈ ಪ್ರಯೋಗ ಹಾಗೂ ನಿಜಜೀವನವನ್ನು ಆಧರಿಸಿದ ಚಿತ್ರಕಥೆ ಹಿಂದಿ ಚಿತ್ರರಂಗಕ್ಕೊಂದು ಮೈಲುಗಲ್ಲಿಯಾಗಿದ್ದು ಚಿತ್ರ ಭಾರೀ ಪ್ರಮಾಣದಲ್ಲಿ ಯಶಸ್ವಿಯಾಗಿತ್ತು. ಒಂದು ವೇಳೆ ನೀವೂ ತೂಕ ಕಳೆದುಕೊಳ್ಳುವ ಯೋಜನೆಯನ್ನು ಹೊಂದಿದ್ದರೆ ಈ ಲೇಖನ ನಿಮಗೆ ಹಲವು ಮಹತ್ವದ ಮಾಹಿತಿಗಳನ್ನು ನೀಡಲಿದೆ.


 • ಇದರ ಗುಟ್ಟು ನೀರೇ?

  ಘಜನಿ ಚಿತ್ರದ ಯಶಸ್ಸಿನ ಬಳಿಕ, ಅಂದರೆ 2010 ರಲ್ಲಿ ತಮ್ಮ ಬ್ಲಾಗ್ ಮೂಲಕ ಅಮಿರ್ ಖಾನ್ರವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದರು. ಈ ಲೇಖನದಲ್ಲಿ ತಮ್ಮ ತೂಕ ಇಳಿಕೆಗೆ ಪ್ರಮುಖ ಕಾರಣ ನೀರು ಎಂದು ವಿವರಿಸಿದ್ದರು. ಅಲ್ಲದೇ ತೂಕ ಇಳಿಸಲಿಕ್ಕಾಗಿ ದಿನವೊಂದರಲ್ಲಿ ಸುಮಾರು ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುತ್ತಿದ್ದರು ಎಂದು ತಿಳಿಸಿದ್ದಾರೆ.

  Most Read: ಹೈ ಬಿಪಿ ಸಮಸ್ಯೆ ಇದೆಯೇ? ಇದಕ್ಕೆ ಮಾತ್ರೆಯ ಬದಲು ಇಂತಹ ನೈಸರ್ಗಿಕ ಟಿಪ್ಸ್ ಅನುಸರಿಸಿ


 • ಅಂದರೆ ನೀರು ನಿಜಕ್ಕೂ ಸಹಾಯಕಾರಿಯೇ?

  ಈ ಬಗ್ಗೆ ನಡೆಸಿದ ಹಲವಾರು ಸಂಶೋಧನೆಗಳಲ್ಲಿ ನೀರು ತೂಕ ಕಳೆದುಕೊಳ್ಳಲು ನೆರವಾಗುತ್ತದೆ ಎಂದು ಸಾಬೀತಾಗಿದೆ. ತೂಕವನ್ನು ಪರಿಣಾಮಕಾರಿಯಾಗಿ ಇಳಿಸಲು ನೀರು ಖಂಡಿತವಾಗಿಯೂ ನೆರವಾಗುತ್ತದೆ. ಏಕೆಂದರೆ ನೀರು ಹೊಟ್ಟೆಯನ್ನು ಸತತವಾಗಿ ತುಂಬಿಸುತ್ತಾ ಬರುವ ಮೂಲಕ ಹಸಿವಾಗುವುದನ್ನು ತಪ್ಪಿಸುತ್ತದೆ ಹಾಗೂ ಅನಗತ್ಯ ಕ್ಯಾಲೋರಿಗಳ ಸೇವನೆಯಿಂದ ತಡೆಯುತ್ತದೆ. ಆದರೆ ತೂಕ ಇಳಿಸಲು ಕೇವಲ ನೀರು ಒಂದೇ ಸಾಕಾಗಲಾರದು, ಆದರೆ ತೂಕ ಇಳಿಸುವ ಪ್ರಕ್ರಿಯೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಲ್ಲುದು. ಅಲ್ಲದೇ ನೀರು ನಿಮ್ಮ ಒಟ್ಟಾರೆ ಆರೋಗ್ಯಕ್ಕೂ ಅತ್ಯುತ್ತಮವಾಗಿದೆ. ನೀರು ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ ಹಾಗೂ ತ್ವಚೆಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಅಲ್ಲದೇ ಸಕ್ಕರೆಭರಿತ ಪೇಯಗಳ ಬದಲು ಕ್ಯಾಲೋರಿಗಳೇ ಇಲ್ಲದ ಕೇವಲ ನೀರು ಕುಡಿಯುವುದರಿಂದ ಅಷ್ಟು ಮಟ್ಟಿಗೆ ಕ್ಯಾಲೋರಿಗಳನ್ನು ಸೇವಿಸುವುದರಿಂದ ತಡೆದಂತಾಗುತ್ತದೆ. ಅಲ್ಲದೇ ಆಹಾರದಲ್ಲಿಯೂ ಹೆಚ್ಚು ಹೆಚ್ಚಿನ ನೀರಿನಂಶವನ್ನು ಸೇರಿಸುವ ಮೂಲಕ ತೂಕ ಇಳಿಸುವುದನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಹುದು. ಅಲ್ಲದೇ ಅಮಿರ್ ಖಾನ್ರವರ ಪ್ರಕಾರ ತೂಕ ಇಳಿಸಿ ಅಂಗಸೌಷ್ಠವವನ್ನು ಉತ್ತಮಗೊಳಿಸಲು ಒಟ್ಟಾರೆ ಮೂರು ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ.


 • ಮೊದಲನೆಯದಾಗಿ ಆರೋಗ್ಯಕರ ಮತ್ತು ಸಮತೋಲನದ ಆಹಾರ

  ದಂಗಲ್ ಚಿತ್ರದ ಮೂಲಕ ದೇಹದಾರ್ಢ್ಯದ ಬಗ್ಗೆ ಭಾರೀ ಪ್ರಚಾರ ಪಡೆದುಕೊಂಡ ಬಳಿಕ ಅಮಿರ್ ಖಾನ್ರವರು ಈ ವಿಷಯದ ಬಗ್ಗೆ ವಿವರಿಸುತ್ತಾ ಇದಕ್ಕೆ ಅನ್ವಯಿಸುವ ಚಿನ್ನದ ನಿಯಮ ಎಂದರೆ ನಾವು ದಿನದಲ್ಲಿ ಎಷ್ಟು ಕ್ಯಾಲೋರಿಗಳನ್ನು ಸೇವಿಸುತ್ತೇವೋ ಅದಕ್ಕೂ ಹೆಚ್ಚು ಕ್ಯಾಲೋರಿಗಳನ್ನು ದಹಿಸಬೇಕಾಗಿರುವುದು. ದೇಹದ ಅಗತ್ಯಕ್ಕೆ ಎಷ್ಟು ಕ್ಯಾಲೋರಿಗಳ ಅಗತ್ಯವಿದೆಯೋ ಅಷ್ಟೇ ಪ್ರಮಾಣದ ಆಹಾರವನ್ನು ಸೇವಿಸಲು ಸೂಕ್ತ ಆಹಾರವನ್ನು ಆಯ್ದುಕೊಳ್ಳುವುದು ಅಗತ್ಯ. ಅಲ್ಲದೇ ತಮ್ಮ ಬ್ಲಾಗ್ ನಲ್ಲಿ ಯಾರು ಯಾರೋ ತಮ್ಮ ದೃಢಕಾಯಕ್ಕೆ ಕಾರಣ ಎಂದು ವಿವರಿಸುವ ಜನಪ್ರಿಯ ಖಾದ್ಯಗಳಿಗೆ ಮನಸೋಲದಿರಿ ಎಂದೂ ವಿವರಿಸಿದ್ದಾರೆ.


 • ಎರಡನೆಯದಾಗಿ ಕಡ್ಡಾಯ ವ್ಯಾಯಾಮ

  ಕೇವಲ ಸೂಕ್ತ ಆಹಾರ ಸೇವನೆ ಮಾತ್ರವೇ ಸಾಕಾಗದು, ತೂಕ ಇಳಿಯಬೇಕೆಂದರೆ ಕಡ್ಡಾಯವಾಗಿ ನಿತ್ಯವೂ ಸೂಕ್ತವಾದ ವ್ಯಾಯಾಮಗಳನ್ನೂ ಮಾಡಲೇಬೇಕು. ಬ್ಲಾಗ್ ನಲ್ಲಿ ಬರೆದು ಕೊಂಡಿರುವಂತೆ ಇವರಿಗೆ ನಡಿಗೆ, ಲಘುವೇಗದ ಓಟ, ಈಜು, ಇಷ್ಟದ ಆಟವೊಂದನ್ನು ಆಡುವುದು ಮೊದಲಾದವೇ ವ್ಯಾಯಾಮಕ್ಕೆ ಸಾಕಾಗುತ್ತದೆ. ಅಲ್ಲದೇ ಒಟ್ಟಾರೆ ಆರೋಗ್ಯ ಮತ್ತು ತೂಕವನ್ನು ಕಾಯ್ದುಕೊಳ್ಳಲು ಯೋಗಾಭ್ಯಾಸವೂ ಅತ್ಯುತ್ತಮ ಎಂದು ವಿವರಿಸಿದ್ದಾರೆ.

  Most Read: ರಾತ್ರಿ ಮಲಗುವ ಮುನ್ನ ಒಂದು ಲೋಟ ಉಗುರು ಬೆಚ್ಚಗಿನ ಬಿಸಿನೀರು ಕುಡಿಯಿರಿ-ಆರೋಗ್ಯವಾಗಿರುವಿರಿ


 • ಮೂರನೆಯದಾಗಿ ಸಾಕಷ್ಟು ವಿಶ್ರಾಂತಿ

  ಸಾಮಾನ್ಯವಾಗಿ ಹೆಚ್ಚಿನವರು ಈ ವಿಷಯವನ್ನು ಅಲಕ್ಷಿಸುತ್ತಾರೆ ಅಥವಾ ವಿಶ್ರಾಂತಿಯ ಅಗತ್ಯತೆಯ ಬಗ್ಗೆ ತಿಳಿದುಕೊಂಡೇ ಇರುವುದಿಲ್ಲ. "ವಿಶ್ರಾಂತಿಯ ಪ್ರಾಮುಖ್ಯತೆಯನ್ನು ಹೆಚ್ಚಿನವರು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನೀವು ಎಷ್ಟು ಕಠಿಣ ಪರಿಶ್ರಮ ನಡೆಸಿದರೂ ಸರಿ, ಒಂದು ವೇಳೆ ದೇಹಕ್ಕೆ ಅವಶ್ಯವಿದ್ದಷ್ಟು ವಿಶ್ರಾಂತಿ ನೀಡದೇ ಇದ್ದರೆ ದೇಹ ಈ ಪರಿಶ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಿಲ್ಲ" ಎಂದು ಅವರು ಬರೆಯುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ಸತತವಾದ ಎಂಟು ಘಂಟೆಗಳ ಗಾಢ ನಿದ್ದೆ ಅತ್ಯಂತ ಅಗತ್ಯವಾಗಿದೆ ಹಾಗೂ ಘಜನಿ ಚಿತ್ರಕ್ಕಾಗಿ ತಮ್ಮನ್ನು ಮಾರ್ಪಾಡಿಸಿಕೊಳ್ಳಲು ಈ ವಿಧಾನಗಳನ್ನೇ ಅನುಸರಿಸಿರುವುದಾಗಿ ಅವರು ವಿವರಿಸಿದ್ದಾರೆ.
ಪಾತ್ರವೊಂದಕ್ಕೆ ಜೀವ ತುಂಬುವ ಮಾತು ಬಂತೆಂದರೆ ಕನ್ನಡದ ಮಟ್ಟಿಗೆ ಡಾ.ರಾಜ್ ರವರನ್ನು ಮೀರಿಸುವ ನಟ ಇನ್ನೊಬ್ಬನಿಲ್ಲ. ಅಂತೆಯೇ ಬಾಲಿವುಡ್ ನಲ್ಲಿ ಈ ಗುಣವನ್ನು ಖ್ಯಾತ ಚಿತ್ರನಟ ಅಮಿರ್ ಖಾನ್ರವರು ಪಡೆದಿದ್ದಾರೆ ಎಂದು ಹೇಳಬಹುದು. ಆದರೆ ಪಾತ್ರವೊಂದಕ್ಕೆ ಜೀವತುಂಬಲು ತಮ್ಮ ದೇಹವನ್ನೇ ಅತಿರೇಕ ಎನಿಸುವಷ್ಟು ಮಾರ್ಪಾಡಿಸಿಕೊಂಡಿರುವುದು ಮಾತ್ರ ಅಚ್ಚರಿ ಮೂಡಿಸುತ್ತದೆ.

ಅತ್ಯಂತ ಕಾಳಜಿಯಿಂದ ತಮ್ಮ ಪಾತ್ರವನ್ನು ಆಯ್ದುಕೊಳ್ಳುವ ಅವರು ಇದಕ್ಕಾಗಿ ತಮ್ಮ ಅತ್ಯುತ್ತಮವಾದುದನ್ನೇ ನೀಡುವ ಬಯಕೆ ಹೊಂದಿದ್ದಾರೆ ಹಾಗೂ ತಮ್ಮ ವೃತ್ತಿ ಜೀವನದುದ್ದಕ್ಕೂ ತಮ್ಮನ್ನು ಮಾರ್ಪಾಡಿಸಿಕೊಂಡು ಬರುತ್ತಿದ್ದಾರೆ. 2008ರಲ್ಲಿ ಬಿಡುಗಡೆಯಾಗ ಝಜನಿ ಎಂಬ ಚಿತ್ರದಲ್ಲಿ ಅದ್ಭುತ ಅಂಗಸೌಷ್ಟವನ್ನು ಪಡೆದು ನಾಯಕನ ಪಾತ್ರಕ್ಕೆ ನೀಡಿದ ಜೀವ ಎಲ್ಲರನ್ನೂ ದಂಗುಬಡಿಸಿತ್ತು... ಮುಂದೆ ಓದಿ

   
 
ಹೆಲ್ತ್