Back
Home » ಇತ್ತೀಚಿನ
ಆಂಡ್ರಾಯ್ಡ್ ಡಿವೈಸ್ ನಿಂದ ಶಾಶ್ವತವಾಗಿ ಡಾಟಾ ಅಳಿಸುವುದು ಹೇಗೆ?
Gizbot | 21st Mar, 2019 07:00 PM
 • ಕಣ್ಣಿಗೆ ಕಾಣದಂತೆ ಉಳಿಯುತ್ತದೆ:

  ಫ್ಯಾಕ್ಟರಿ ರಿಸೆಟ್ ಮಾಡಿದರೆ ಸ್ಮಾರ್ಟ್ ಫೋನ್ ನಲ್ಲಿರುವ ಎಲ್ಲಾ ಡಾಟಾವು ಡಿಲೀಟ್ ಆಗುತ್ತದೆ ಎಂಬುದೊಂದು ಕಲ್ಪನೆ ಎಲ್ಲರಲ್ಲೂ ಇದೆ. ಆದರೆ ಅದು ನಿಜವಲ್ಲ. ಫೈಲ್ ಗಳು ಡಿಲೀಟ್ ಆದಾಗ ಸಂಪೂರ್ಣವಾಗಿ ಫೈಲ್ ಅಳಿಸಿಹೊಗಿರುವುದಿಲ್ಲ ಎಂಬುದು ನೆನಪಿರಲಿ. ಸ್ಟೋರೇಜ್ ನಲ್ಲಿರುವ ಇತರೆ ಯಾವುದೇ ಖಾಲಿ ಜಾಗದಲ್ಲಿ ಕೆಲವು ಮಾಹಿತಿಗಳು ಅಳಿಸಿ ಹೋಗದೆ ಉಳಿದು ಹಿಡನ್ ಆಗಿ ಇರುತ್ತದೆ. ಅಂದರೆ ಕಣ್ಣಿಗೆ ಕಾಣದ ರೂಪದಲ್ಲಿ ಉಳಿದುಬಿಡುವ ಸಾಧ್ಯತೆ ಇರುತ್ತದೆ.

  ಫ್ಯಾಕ್ಟರಿ ರಿಸೆಟ್ ಆಯ್ಕೆಯು ಡಿವೈಸ್ ನ್ನು ಡೀಫಾಲ್ಟ್ ಸ್ಥಿತಿಗೆ ತರುತ್ತದೆ ಮತ್ತು ಹೆಚ್ಚಿನ ಡಾಟಾವು ಈ ರೀತಿಯಾಗಿ ಡಿಲೀಟ್ ಆಗುತ್ತದೆ. ಮಲ್ಟಿಮೀಡಿಯಾ,ಇಮೇಲ್ ಇತ್ಯಾದಿ ಕೆಲವು ಸಣ್ಣ ಮಾಹಿತಿಗಳು ಹಾಗೆಯೇ ಇಂಟರ್ನಲ್ ಮೆಮೊರಿಯಲ್ಲಿ ಉಳಿದುಬಿಡುವ ಸಾಧ್ಯತೆ ಇರುತ್ತದೆ.

  ಹಾಗಂತ ಚಿಂತೆ ಮಾಡುವ ಅಗತ್ಯವಿಲ್ಲ. ಆಂಡ್ರಾಯ್ಡ್ ಡಿವೈಸ್ ನಲ್ಲಿ ಎಲ್ಲವನ್ನೂ ಸಂಪೂರ್ಣವಾಗಿ ಶಾಶ್ವತವಾಗಿ ಡಿಲೀಟ್ ಮಾಡುವುದಕ್ಕೆ ಸಾಧ್ಯವಾಗುತ್ತದೆ.ಈ ವಿಧಾನವು ಹಳೆಯ ಸ್ಮಾರ್ಟ್ ಫೋನ್ ನ್ನು ಬೇಡವೆಂದು ಎಸೆಯುವ ಸಂದರ್ಬದಲ್ಲಿ ಬಹಳ ನೆರವಿಗೆಬರುತ್ತದೆ. ಆಂಡ್ರಾಯ್ಡ್ ಡಿವೈಸ್ ನಲ್ಲಿ ಸುರಕ್ಷತೆಯಿಂದ ಡಾಟಾವನ್ನು ಅಳಿಸಿ ಹಾಕುವುದಕ್ಕೆ ಎರಡು ವಿಧಾನಗಳಿವೆ.


 • ಡಿವೈಸ್ ಸ್ಟೋರೇಜ್ ನ್ನು ಎನ್ಕ್ರಿಪ್ಟ್ ಮಾಡಿ:

  ಸ್ಮಾರ್ಟ್ ಫೋನ್ ನಲ್ಲಿ ಸ್ಟೋರ್ ಆಗಿರುವ ಡಾಟಾ ಮತ್ತು ಮಾಹಿತಿಯನ್ನು ಎನ್ಕ್ರಿಪ್ಶನ್ ಕನ್ವರ್ಟ್ ಮಾಡಿ ಫ್ಯಾಕ್ಟರಿ ರಿಸೆಟ್ ಮಾಡುವ ಮುನ್ನ ಕ್ರಿಪ್ಟಿಕ್ ಫಾರ್ಮೆಟ್ ಗೆ ಪರಿವರ್ತಿಸಬೇಕು. ಸರಿಯಾದ ಡಿಕ್ರಿಪ್ಶನ್ ಇಲ್ಲದೆ ಇದ್ದರೆ ಡಾಟಾವು ಗೊಂದಲದ ರೀತಿಯಲ್ಲಿ ಅವ್ಯವಸ್ಥೆಯಾಗುತ್ತದೆ. ಡಿವೈಸ್ ಸ್ಟೋರೇಜ್ ನ್ನು ಎನ್ಕ್ರಿಪ್ಟಿಂಗ್ ಮಾಡುವುದರಿಂದಾಗಿ ಫ್ಯಾಕ್ಟರಿ ರಿಸೆಟ್ ಆಪರೇಷನ್ ನ ನಂತರ ಯಾವುದಾದರೂ ಡಾಟಾ ಒಂದು ವೇಳೆ ಹಾಗೆಯೇ ಉಳಿದಿದ್ದರೆ ಅವುಗಳೂ ಕೂಡ ನಿಜವಾದ ರೀತಿಯಲ್ಲಿ ಇಲ್ಲದೆ ರ್ಯಾಂಡಮ್ ಆಗಿ ಅವ್ಯವಸ್ಥಿತ ರೂಪದಲ್ಲಿ ಉಳಿದಿರುತ್ತದೆ.

  ಡಿವೈಸ್ ಸ್ಟೋರೇಜ್ ನ್ನು ಎನ್ಕ್ರಿಪ್ಟ್ ಮಾಡುವುದಕ್ಕಾಗಿ ಸೆಟ್ಟಿಂಗ್ಸ್ ನ್ನು ನೇವಿಗೇಟ್ ಮಾಡಿ > ಸೆಕ್ಯುರಿಟಿ (ಅಥವಾ ಸಂಬಂಧಿತ ಸೆಟ್ಟಿಂಗ್ಸ್) ಗೆ ತೆರಳಿ ಮತ್ತು ಎನ್ಕ್ರಿಪ್ಟ್ ಫೋನ್ ಆಯ್ಕೆಯನ್ನು ಟ್ಯಾಪ್ ಮಾಡಿ. ಡಿವೈಸ್ ನಲ್ಲಿ ಎಷ್ಟು ಡಾಟಾ ಸೇವ್ ಆಗಿದೆ ಅನ್ನುವುದರ ಆಧಾರದಲ್ಲಿ ಕೆಲವು ಸಮಯವನ್ನು ಈ ಪ್ರೊಸೀಜರ್ ತೆಗೆದುಕೊಳ್ಳಬಹುದು.ಒಮ್ಮೆ ಎನ್ಕ್ರಿಪ್ಶನ್ ನಡೆದ ನಂತರ ಫ್ಯಾಕ್ಟರಿ ರಿಸೇಟೆ ಕೆಲಸವನ್ನು ಮಾಡಬೇಕು.


 • ಎಸೆಯುವ ಡಾಟಾವನ್ನು ಓವರ್ ರೈಟ್ ಮಾಡಿ:

  ಸಾಮಾನ್ಯವಾಗಿ ಡಿವೈಸ್ ಎನ್ಕ್ರಿಪ್ಶನ್ ಮತ್ತು ನಂತರ ನಡೆಸುವ ಫ್ಯಾಕ್ಟರಿ ರಿಸೆಟ್ ಕಾರ್ಯಕ್ರಮವು ಡಾಟಾವನ್ನು ಭದ್ರತೆಯಿಂದ ಡಿಲೀಟ್ ಮಾಡುವುದಕ್ಕೆ ಸಾಕಾಗುತ್ತದೆ. ಆದರೆ ಹೆಚ್ಚುವರಿ ಕೆಲಸ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ. ಇದನ್ನು ಮಾಡುವುದಕ್ಕೆ ಸ್ಮಾರ್ಟ್ ಫೋನ್ ನಲ್ಲಿ ಫ್ಯಾಕ್ಟರಿ ರಿಸೆಟ್ಟಿಂಗ್ ಆದ ನಂತರ ಸೆಟ್ ಅಪ್ ಮಾಡಬೇಕು.ಆದರೆ ಈ ಬಾರಿ ಯಾವುದೇ ಇಮೇಲ್ ವಿವರಗಳನ್ನು ಸೇರಿಸಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.

  ಒಮ್ಮೆ ಸೆಟ್ ಅಪ್ ಸಂಪೂರ್ಣಗೊಂಡ ನಂತರ ಇಂಟರ್ನಲ್ ಸ್ಟೋರೇಜ್ ಫುಲ್ ಆಗುವವರೆಗೆ ಜಂಕ್ ವೀಡಿಯೋವನ್ನು ರೆಕಾರ್ಡ್ ಮಾಡಿ. ಈ ರೀತಿ ಮಾಡುವುದರಿಂದಾಗಿ ಖಾಲಿ ಜಾಗವು ಓವರ್ ರೈಟ್ ಆಗುತ್ತದೆ ಮತ್ತು ಡಾಟಾವು ಎಸೆಯಲ್ಪಡುತ್ತದೆ.
ಪ್ರತಿಯೊಬ್ಬರ ಜೀವನವೂ ಡಿಜಿಟಲ್ ಮಯವಾಗುತ್ತಿರುವಾಗ ಸ್ಮಾರ್ಟ್ ಫೋನ್ ಗಳು ಜೀವನದ ಒಂದು ಭಾಗವಾಗಿ ಬಿಟ್ಟಿದೆ. ದಿನದ 24 ಘಂಟೆಯೂ ತಮ್ಮೊಂದಿಗೆ ಇಟ್ಟುಕೊಳ್ಳುವ ಗೆಡ್ಜೆಟ್ ಎಂದರೆ ಅದು ಸ್ಮಾರ್ಟ್ ಫೋನ್ .ಕೇವಲ ಸಂವಹನಕ್ಕಾಗಿ ಮಾತ್ರವಲ್ಲ ಬದಲಾಗಿ ಪ್ರತಿಯೊಬ್ಬರ ವಯಕ್ತಿಕ ಮಾಹಿತಿಯೂ ಸೇರಿದಂತೆ ಕಾಂಟ್ಯಾಕ್ಟ್ಸ್, ಫೋಟೋಗಳು, ಇಮೇಲೇ ಇತ್ಯಾದಿಗಳೆಲ್ಲವೂ ಕೂಡ ಫೋನಿನಲ್ಲೇ ಇರುತ್ತದೆ.

ಹಾಗಾಗಿ ನೀವು ಒಂದು ವೇಳೆ ನಿಮ್ಮ ಫೋನ್ ನ್ನು ಯಾರಿಗಾದರೂ ಮಾರಾಟ ಮಾಡುತ್ತೀರಿ ಅಥವಾ ಬೇರೆಯವರಿಗೆ ಕೊಡುತ್ತೀರಿ ಎಂದಾಗ ನಿಮ್ಮ ಫೋನಿನ ಎಲ್ಲಾ ಡಾಟಾವನ್ನು ಡಿಲೀಟ್ ಮಾಡುವುದು ಅಥವಾ ಅಳಿಸುವುದು ಬಹಳ ಮುಖ್ಯವಾಗಿರುವ ಅಂಶವಾಗಿರುತ್ತದೆ.

   
 
ಹೆಲ್ತ್