Back
Home » ಆರೋಗ್ಯ
ನೀವು ಕುಡಿಯಬೇಕಾದ ಅತ್ಯಂತ ಆರೋಗ್ಯಕರ 5 ಹಣ್ಣಿನ ಜ್ಯೂಸ್‌ಗಳು
Boldsky | 22nd Mar, 2019 10:40 AM
 • ಕಿತ್ತಳೆ ರಸ

  ಬೇಸಿಗೆಯಲ್ಲಿ ಈ ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಮತ್ತು ಕರಗಿರುವ ನಾರು ಸಮೃದ್ಧವಾಗಿದೆ. ಕಿತ್ತಳೆ ರಸದ ನಿಯಮಿತ ಸೇವನೆ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುತ್ತದೆ. ಹಲವಾರು ಅಧ್ಯಯನಗಳ ಮೂಲಕ ಕಿತ್ತಳೆ ರಸದ ಸೇವನೆಯಿಂದ ಕಣ್ಣಿನಲ್ಲಿ ಹೂ ಬರುವ ಕ್ಯಾಟರಾಕ್ಟ್ ಮತ್ತು ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ ಎಂದು ಕಂಡುಕೊಳ್ಳಲಾಗಿದೆ. ಕಿತ್ತಳೆರಸದಲ್ಲಿ ಪ್ರಬಲ ಆಂಟಿ ಆಕ್ಸಿಡೆಂಟುಗಳಿವೆ, ಇವು ಹಲವಾರು ಮಾರಕ ರೋಗಗಳ ವಿರುದ್ದ ರಕ್ಷಣೆ ಒದಗಿಸುತ್ತವೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಕ್ಯಾನ್ಸರ್ ಪೀಡಿತ ಜೀವಕೋಶಗಳ ಬೆಳವಣಿಗೆ ತಡೆಯುತ್ತದೆ. ವಿಶೇಷವಾಗಿ ಗರ್ಭವತಿಯರು ಕಿತ್ತಳೆ ರಸವನ್ನು ಸೇವಿಸುವ ಮೂಲಕ ಗರ್ಭದಲ್ಲಿರುವ ಮಗುವಿಗೆ ಹಲವಾರು ಪ್ರಯೋಜನಗಳು ದೊರಕುತ್ತವೆ. ಅಲ್ಲದೇ ಕಿತ್ತಳೆಯಲ್ಲಿರುವ ಮೆಗ್ನೀಶಿಯಂ ಮತ್ತು ಪೊಟ್ಯಾಶಿಯಂ ಅಧಿಕ ರಕ್ತದೊತ್ತಡದ ತೊಂದರೆ ಇರುವ ವ್ಯಕ್ತಿಗಳಿಗೆ ಅತ್ಯುತ್ತಮವಾದ ಪೋಷಕಾಂಶಗಳಾಗಿವೆ.


 • ದಾಳಿಂಬೆ ರಸ

  ಈ ಹಣ್ಣಿನಲ್ಲಿ ಹಲವಾರು ವಿಟಮಿನ್ನುಗಳ ಆಗರವಿದೆ. ವಿಟಮಿನ್ ಎ, ಸಿ ಮತ್ತು ಇ ಹಾಗೂ ಫೋಲಿಕ್ ಆಮ್ಲ ಇವುಗಳಲ್ಲಿ ಪ್ರಮುಖವಾದವು. ಅಲ್ಲದೇ ಆಂಟಿ ಆಕ್ಸಿಡೆಂಟ್ ಮತ್ತು ವೈರಸ್ ನೀರೋಧಕ ಗುಣವೂ ಇವೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಇತರ ಆಂಟಿ ಆಕ್ಸಿಡೆಂಟುಗಳು ದೇಹಕ್ಕೆ ಎದುರಾಗಬಹುದಾದ ಹಲವಾರು ಸೋಂಕುಗಳಿಂದ ರಕ್ಷಣೆ ಒದಗಿಸುತ್ತವೆ. ಫೋಲಿಕ್ ಆಮ್ಲ ಅಧಿಕ ರಕ್ತದೊತ್ತಡ ಮತ್ತು ರಕ್ತಹೀನತೆಯ ಸಾಧ್ಯತೆಗಳಿಂದ ರಕ್ಷಿಸುತ್ತದೆ. ಅಲ್ಲದೇ ರಕ್ತದಲ್ಲಿ ಹೀಮೋಗ್ಲೋಬಿನ್ ಕೊರತೆಯಾದರೆ ಇದನ್ನು ತುಂಬಲು ದಾಳಿಂಬೆ ರಸ ಅತ್ಯುತ್ತಮವಾಗಿದೆ. ಆದರೆ ಮಧುಮೇಹಿಗಳಿಗೆ ದಾಳಿಂಬೆ ಸೂಕ್ತವಲ್ಲ! ಗರ್ಭಿಣಿಯರು ಅಗತ್ಯವಾಗಿ ಈ ರಸವನ್ನು ಸೇವಿಸಬೇಕು. ಇದರಿಂದ ಗರ್ಭದಲ್ಲಿರುವ ಮಗುವಿಗೆ ಹಲವು ಬಗೆಯ ಪ್ರಯೋಜನಗಳು ದೊರಕುತ್ತವೆ.

  Most Read: ರಣಬಿಸಿಲಿನ ದಾಹವನ್ನು ತಣಿಸುವ ಸೌತೆಕಾಯಿ-ಶು೦ಠಿ ಜ್ಯೂಸ್!


 • ಹಲವಾರು ತರಕಾರಿಗಳ ರಸ

  ಇದು ಅತಿ ಹೆಚ್ಚಿನ ಪ್ರಯೋಜನಕಾರಿ ಮತ್ತು ಅತ್ಯಂತ ಆರೋಗ್ಯಕರ ರಸವಾಗಿದೆ. ಹೆಸರೇ ತಿಳಿಸುವಂತೆ ಹಲವಾರು ತರಕಾರಿಗಳನ್ನು ಸಂಗ್ರಹಿಸಿ ರಸ ಹಿಂಡಲಾಗುತ್ತದೆ. ಕ್ಯಾರೆಟ್, ಸೌತೆ, ಬೀಟ್ರೂಟ್, ಲಿಂಬೆ, ಪುದಿನಾ. ನೆಲ್ಲಿಕಾಯಿ, ಟೊಮಾಟೋ, ಸೋರೆಕಾಯಿ ಹಾಗೂ ಇತರ ದಪ್ಪನೆಯ ಎಲೆಗಳಾದ ಪಾಲಕ್, ಬಸಲೆ ಹಾಗೂ ಕೋಸುಗಳಾದ ಎಲೆಕೋಸು ಹೂಕೋಸು ಮೊದಲಾದವುಗಳನ್ನು ಬಳಸಬಹುದು. ಈ ಮೂಲಕ ಈ ಎಲ್ಲಾ ತರಕಾರಿಗಳಲ್ಲಿರುವ ವಿವಿಧ ಪೋಷಕಾಂಶಗಳು ಏಕಕಾಲದಲ್ಲಿ ಲಭ್ಯವಾಗುತ್ತವೆ ಹಾಗೂ ಎಲ್ಲಾ ತರಕಾರಿಗಳ ಪ್ರಯೋಜನವನ್ನು ಕ್ರೋಢೀಕರಿಸಿ ಪಡೆದಂತಾಗುತ್ತದೆ.


 • ಅನಾನಾಸು ರಸ

  ಇದು ಹುಳಿಮಿಶ್ರಿತ ಸಿಹಿಯಾಗಿದ್ದು ಎಲ್ಲರ ಮನಗೆಲ್ಲುವ ರಸವಾಗಿದೆ. ಇದಲ್ಲಿರುವ ಪೋಷಕಾಂಶಗಳು ಕಣ್ಣು ಮತ್ತು ಮೂಳೆಗಳಿಗೆ ಹೆಚ್ಚಿನ ಪೋಷಣೆ ಒದಗಿಸುತ್ತವೆ. ಅಲ್ಲದೇ ಅನಾನಸಿನ ರಸದ ಸೇವನೆಯಿಂದ ಅಸ್ತಮಾ ಎದುರಾಗುವ ಸಾಧ್ಯತೆ ತಗ್ಗುತ್ತದೆ. ಈ ರಸದಲ್ಲಿ ಉರಿಯೂತ ನಿವಾರಕ ಗುಣಗಳಿವೆ ಹಾಗೂ ನೋವನ್ನು ಕಡಿಮೆಗೊಳಿಸುತ್ತದೆ. ವಿಶೇಷವಾಗಿ ಸಂಧಿವಾತದ ನೋವನ್ನು ಕಡಿಮೆಗೊಳಿಸುತ್ತದೆ.

  Most Read: ದೇಹದ ಎರಡೂ ಕಿಡ್ನಿಗಳನ್ನು ಸ್ವಚ್ಛಗೊಳಿಸುವ ನೈಸರ್ಗಿಕ ಜ್ಯೂಸ್‌ಗಳು


 • ಟೊಮಾಟೋ ರಸ

  ಸಸ್ಯಶಾಸ್ತ್ರದ ಪ್ರಕಾರ ಟೊಮಾಟೋ ಒಂದು ಹಣ್ಣು. ಇದರಲ್ಲಿಯೂ ಆಂಟಿ ಆಕ್ಸಿಡೆಂಟುಗಳು ಹಾಗೂ ಲೈಕೋಪೀನ್ ಎಂಬ ಪೋಷಕಾಂಶ ಸಮೃದ್ದವಾಗಿದೆ ಹಾಗೂ ಇವು ಹೊಟ್ಟೆ ಮತ್ತು ಶ್ವಾಸಕೋಶದ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಇದರ ಜೊತೆಗೇ ಮೇದೋಜೀರಕ ಗ್ರಂಥಿ, ಕರುಳು ಮತ್ತು ಗುದನಾಳ, ಬಾಯಿ, ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನೂ ತಗ್ಗಿಸುತ್ತದೆ. ಅಲ್ಲದೇ ಲೈಕೋಪೀನ್ ಹೃದಯ ಮತ್ತು ಶ್ವಾಸಕೋಶಗಳನ್ನು ಘಾಸಿಗೊಳ್ಳುವುದರಿಂದ ರಕ್ಷಿಸುತ್ತದೆ ಎಂದು ನಂಬಲಾಗಿದೆ.
ಕೆಲವರಿಗೆ ಹಣ್ಣಿನ ರಸಗಳು ಅಂದರೆ ಅವರ ಊಟದ ಅತ್ಯಂತ ಪ್ರಮುಖ ಭಾಗವಾಗಿರುತ್ತದೆ. ಆದರೆ ಹೆಚ್ಚಿನವರಿಗೆ ಈ ಜ್ಯೂಸ್‌ಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದೆಂದರೆ ಆಗದ ಕೆಲಸ ಇವರು ಮಾರುಕಟ್ಟೆಯಲ್ಲಿ ದೊರೆಯುವ ಸಿದ್ಧ ರೂಪದ ಜ್ಯೂಸ್ ಗಳನ್ನೇ ಕೊಳ್ಳುತ್ತಾರೆ ಆದರೆ ಈ ಜ್ಯೂಸ್ ಗಳು ಕೇವಲ ಆ ಹಣ್ಣಿನ ಕೃತಕ ರುಚಿಯನ್ನು ಮತ್ತು ಆಗಾಧ ಪ್ರಮಾಣದ ಸಕ್ಕರೆಯನ್ನು ಮಾತ್ರವೇ ಹೊಂದಿದ್ದು ಆರೋಗ್ಯಕ್ಕೆ ಯಾವುದೇ ಬಗೆಯ ಪ್ರಯೋಜನಗಳನ್ನು ಕೊಡುವುದಿಲ್ಲ ಎಂದು ನಿಮಗೆ ಗೊತ್ತೇ ಅದರಲ್ಲೂ ಪ್ಯಾಕ್ ಮಾಡಿದ ಜ್ಯೂಸ್ ಗಳು ಆರೋಗ್ಯಕ್ಕೆ ಹಾನಿಕರ, ಸ್ಥೂಲಕಾಯಕ್ಕೆ ಆಹ್ವಾನ.

ಆರೋಗ್ಯಕ್ಕೆ ಅತ್ಯುತ್ತಮವಾದ ಒಟ್ಟು ಐದು ಜ್ಯೂಸ್ ಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದ್ದು ಸಾಧ್ಯವಾದಷ್ಟೂ ಈ ತಾಜಾ ಹಣ್ಣಿನ ರಸಗಳನ್ನೇ ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಇವುಗಳಲ್ಲಿ ಆಂಟಿ ಆಕ್ಸಿಡೆಂಟುಗಳು, ಖನಿಜಗಳು ಹಾಗೂ ವಿಟಮಿನ್ನುಗಳು ಸಮೃದ್ಧವಾಗಿವೆ. ನಿಯಮಿತವಾಗಿ ಮಿತಪ್ರಮಾಣದಲ್ಲಿ ಈ ಜ್ಯೂಸ್ ಗಳನ್ನು ಸೇವಿಸುತ್ತಾ ಬಂದರೆ ಇದು ಹಲವಾರು ಬಗೆಯ ಕಾಯಿಲೆಗಳಿಂದ ರಕ್ಷಣೆ ಒದಗಿಸುತ್ತದೆ ಹಾಗೂ ಆರೋಗ್ಯಕರ ಜೀವನ ನಡೆಸಲು ನೆರವಾಗುತ್ತದೆ. ಬನ್ನಿ, ಈ ಐದು ಜ್ಯೂಸ್ ಗಳು ಯಾವುವು ಎಂದು ನೋಡೋಣ....

   
 
ಹೆಲ್ತ್