Back
Home » ಇತ್ತೀಚಿನ
ಪಬ್‌ಜಿ ಆಡಿ ಪಿಯು ವಿದ್ಯಾರ್ಥಿ ಫೇಲ್!..ವೈರಲ್ ಆದ ಶಾಕಿಂಗ್ ಸ್ಟೋರಿ!
Gizbot | 22nd Mar, 2019 03:44 PM
  • ‘ಸೆಕ್ಸ್‌’ಗಿಂತ ಜನಪ್ರಿಯ ಈ ಗೇಮ್!

    ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುವುದು 'ಸೆಕ್ಸ್‌' ಎಂಬ ಜನಪ್ರಿಯ ಮಾತೊಂದಿದೆ. ಇದನ್ನು ಎಲ್ಲಾ ವಯೋಮಾನದವರು ಆನ್‌ಲೈನಿನಲ್ಲಿ ಬಯಸುವ ಕಂಟೆಂಟ್ ಅನ್ನಿಸಿಕೊಂಡಿದೆ. ಆದರೆ, 16-25ರ ನಡುವಿನ ಯುವ ಜನತೆಯ ವಿಚಾರಕ್ಕೆ ಬಂದರೆ ಅವರು ಹೆಚ್ಚು ಕಾಲ ಕಳೆಯುವುದು ಗೇಮಿಂಗ್‌ ಎಂಬ ಕೆಟಗರಿಯಲ್ಲಿ ಎಂಬುದನ್ನು ನಂಬಲು ನೀವು ತಯಾರಾಗಬೇಕಿದೆ.


  • ಬೇಕೇ ಬೇಕು ಗೇಮ್!

    ಪೋಷಕರಿಗೆ ತಮ್ಮ ಮಕ್ಕಳು ಎಲ್ಲಾ ಈ ಸೆಕ್ಸ್ ಎಂಬ ಮಾಯೆಗೆ ಸಿಲುಕುತ್ತಾರೆ ಎಂಬ ಭಯ ಯಾವಾಗಲೂ ಕಾಡುತ್ತಿರುತ್ತದೆ. ಚಿಕ್ಕವಯಸ್ಸು ಸೆಕ್ಸ್‌ಗೆ ಆಕರ್ಷಣೆ ಎಂದುಕೊಳ್ಳುತ್ತಾರೆ. ಆದರೆ, ಅಂಕಿಅಂಶಗಳು 16-25ರ ನಡುವಿನ ಯುವ ಜನತೆಯ ಆಕರ್ಷಣೆಯನ್ನು ಗೇಮಿಂಗ್ ಎಂದು ದೃಢಪಡಿಸಿವೆ. 16 ರಿಂದ 25 ನೇ ವಯಸ್ಸು ಹೆಚ್ಚು ಗೇಮಿಂಗ್ ಪ್ರಪಂಚಕ್ಕೆ ಆಕರ್ಷಿತವಾಗುತ್ತದೆ.


  • ವಾರದಲ್ಲಿ ಕನಿಷ್ಠ 6 ಗಂಟೆ ಗೇಮಿಂಗ್‌ನಲ್ಲಿ.

    ಹಲವು ಅಧ್ಯಯನಗಳು ಆನ್‌ಲೈನ್‌ ಗೇಮಿಂಗ್ ಎಂಬ ಕೆಟಗರಿಯ ಕುರಿತು ಅಂಕಿ ಅಂಶಗಳನ್ನು ಮುಂದಿಟ್ಟಿವೆ. ಸುಮಾರು 1.2 ಬಿಲಿಯನ್ ಜನ ಗೇಮಿಂಗ್‌ನಲ್ಲಿ ಮುಳುಗಿ ಹೋಗಿದ್ದಾರೆ ಎಂದು ಹೇಳುತ್ತವೆ ಅಧ್ಯಯನಗಳು. ವಾರದಲ್ಲಿ ಕನಿಷ್ಠ 6 ಗಂಟೆಗಳನ್ನು ಗೇಮಿಂಗ್‌ನಲ್ಲಿಯೇ ಕಳೆಯುವ ಸಂಖ್ಯೆ ಇದಾಗಿದೆ. ಹೊಸ ಹೊಸ ಗೇಮ್‌ಗಳು ಅವರನ್ನು ಮತ್ತಷ್ಟು ಆಕರ್ಷಿಸುತ್ತಿವೆ.


  • ಕೋಟ್ಯಾಂತರ ಮಾರುಕಟ್ಟೆ!

    1970ರಲ್ಲಿ ಆರಂಭವಾದ ಆನ್‌ಲೈನ್‌ ಗೇಮ್ ಸುತ್ತ ಕೋಟ್ಯಾಂತರ ರೂಪಾಯಿಗಳ ಮಾರುಕಟ್ಟೆಯೊಂದು ಹುಟ್ಟಿಕೊಂಡಿದೆ. ಮಹತ್ವದ ವಿಚಾರದಿಂದ ಜನರನ್ನು ದೂರ ಇಟ್ಟು, ಕೃತಕ ಪರಿಸರದಲ್ಲಿ ಅವರನ್ನು ಎಂಗೇಜ್ ಮಾಡಿ ಇಡುವ ಕೆಲಸವನ್ನು ಈ ಗೇಮ್‌ಗಳು ಮಾಡುತ್ತಿವೆ. ಹೀಗೆ ತಾವು ಹಣಗಳಿಸಿಕೊಳ್ಳಲು ಹೊಸ ಹೊಸ ಗೇಮ್‌ಗಳನ್ನು ಸೃಷ್ಟಿಮಾಡುತ್ತಾರೆ.


  • ಗೇಮಿಂಗ್ ಎಂಬ ಕರಾಳ ಲೋಕ!

    ನೇರವಾಗಿ ಇದನ್ನು ಒಂದು ಸಮಸ್ಯೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ನೀವೊಮ್ಮೆ ಗೂಗಲ್ ಮಾಡಿದರೆ ಆನ್‌ಲೈನ್‌ ಗೇಮಿಂಗ್ ಗಂಭೀರತೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಅವು ಬೀರುತ್ತಿರುವ ಸಾಮಾಜಿಕ ಸಮಸ್ಯೆಯ ಚಿತ್ರಣ ಕಣ್ಣನ್ನು ರಾಚುತ್ತದೆ. ಜನರನ್ನು ಆಕರ್ಷಿಸುವ ಸಲುವಾಗಿಯೇ ಇಂತಹ ಹೊಸ ಹೊಸ ಗೇಮ್‌ಗಳು ಪ್ರತಿ ವರ್ಷ ಮಾರುಕಟ್ಟೆಗೆ ಬರುತ್ತಿವೆ.


  • ಆನ್‌ಲೈನ್‌ ಗೇಮ್ ಈಗ ಗೇಮ್ ಅಲ್ಲ!

    ಈ ಗೇಮ್‌ಗಳು ಮನರಂಜನೆಗೆ ಸೀಮಿತವಾಗಬೇಕಿತ್ತು. ಆದರೆ, ಗೇಮ್‌ಗಳು ಈಗ ಜನರ, ಯುವಕರ ಮನಸ್ಸನ್ನು ಕದಡುತ್ತಿವೆ. ಜನರು ಕಲ್ಪನೆಯನ್ನು ತಮ್ಮ ಗೇಮ್‌ ಮೂಲಕ ಸಾಕಾರಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ತಮ್ಮನ್ನು ತಾವು ಮರೆಯುತ್ತಿದ್ದಾರೆ. ಗೇಮ್ ಅಲ್ಲದ ಗೇಮ್ ಈಗ ಅವರನ್ನು ಬಹುದೂರ ಕರೆದೊಯ್ಯುತ್ತಿದೆ.


  • ಸಮಸ್ಯೆ ಬಹಳಷ್ಟಿದೆ.

    ಕೋಟ್ಯಾಂತರ ಜನ ಸಮಯ ಕಳೆಯಲು ಗೇಮ್‌ಗಳು ಪ್ರೇರೇಪಿಸುತ್ತಿವೆ. ಹೆಚ್ಚಾಗಿ ಮಧ್ಯಮ ವರ್ಗದ ಜನ ಮಕ್ಕಳು ಗೇಮ್‌ಗಳಿಗೆ ಅಡಿಕ್ಟ್ ಆಗುತ್ತಿದ್ದಾರೆ. ಮಕ್ಕಳಿಗೆ ಪ್ರೀತಿಯಿಂದ ಬುದ್ದಿಹೇಳದ ಪೋಷಕರು ಅವರ ಕೈಗೆ ಕಂಪ್ಯೂಟರ್, ಮೊಬೈಲ್‌ ಕೊಟ್ಟು ಅವರನ್ನು ಹಾಳುಮಾಡುತ್ತಿದ್ದಾರೆ. ಇದಕ್ಕೆಲ್ಲಾ ಫುಲ್‌ಸ್ಟಾಪ್ ಇಡಬೇಕಿದೆ. ಆದರೆ, ಇದು ನಿಮ್ಮಿಂದ ಸಾಧ್ಯವೇ.?




ನನ್ನ ಮಗ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿ. ಆದರೆ ಕಳೆದ ಆರು ತಿಂಗಳಿಂದ ರೂಮಿನ ಬಾಗಿಲು ಹಾಕಿಕೊಂಡೆ ಅಭ್ಯಾಸ ಮಾಡುತ್ತಿದ್ದ. ಪರೀಕ್ಷೆ ಹತ್ತಿರ ಬಂದಿರುವುದರಿಂದ ಓದಿನ ಕಡೆಗೆ ಹೆಚ್ಚು ಗಮನ ಕೊಟ್ಟು ಅಭ್ಯಾಸ ಮಾಡುತ್ತಿರಬಹುದು ಎಂದು ಸುಮ್ಮನಾದೆವು. ಆದರೆ, ಆತ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ, ಉತ್ತರ ಪತ್ರಿಕೆಯ ನಾಲ್ಕೈದು ಕಡೆಗಳಲ್ಲಿ ಯಾವುದೋ ಪಬ್‌ಜಿ ಆಟದ ಗುಣಗಾನ ಮಾಡಿದ್ದಾನೆ ಎಂಬುದು ಫಲಿತಾಂಶ ಬಂದಾಗಲೇ ತಿಳಿದಿದ್ದು ಎಂದು ವಿದ್ಯಾರ್ಥಿಯೋರ್ವನ ತಂದೆ ಅಳಲು ತೋಡಿಕೊಂಡಿದ್ದಾರೆ.

ಹೌದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 73ರಷ್ಟು ಅಂಕಗಳನ್ನು ಪಡೆದು, ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನ ವಾಣಿಜ್ಯ ಶಾಸ ವಿಭಾಗಕ್ಕೆ ಪ್ರವೇಶ ಪಡೆದಿದ್ದ ವಿದ್ಯಾರ್ಥಿಯೋರ್ವ ಪಬ್‌ಜಿ ವ್ಯಸನದಿಂದ ಪಿಯು ಪರೀಕ್ಷೆಯಲ್ಲಿ ಫೇಲ್ ಆಗಿದ್ದಾನೆ. ವಾರ್ಷಿಕ ಪರೀಕ್ಷೆಯ ಎಕಾನಾಮಿಕ್ಸ್ ವಿಷಯದಲ್ಲಿ ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಾಗದೆ, ಉತ್ತರ ಪತ್ರಿಕೆಯ ನಾಲ್ಕೈದು ಕಡೆಗಳಲ್ಲಿ ಪಬ್‌ಜಿ ಆಡುವುದು ಹೇಗೆ ಎಂದು ಬರೆದಿದ್ದಾನೆ. ಇದು ಈಗ ವೈರಲ್ ಆಗಿದ್ದು, ಪಬ್‌ಜಿ ಗೇಮ್ ಬಗ್ಗೆ ಪೋಷಕರನ್ನು ಎಚ್ಚರಿಸುವಂತಿದೆ.

ಮೊದಲು ನಾನು ಚೆನ್ನಾಗಿ ಅಭ್ಯಾಸ ಮಾಡುತ್ತಿದ್ದೆ. ಆದರೆ ಆರು ತಿಂಗಳ ಹಿಂದೆ ಸ್ನೇಹಿತರು ಪಬ್‌ಜೀ ಆಡುವುದನ್ನು ಗಮನಿಸಿ, ನಾನು ಸಹ ಪಬ್‌ಜೀ ಆಡಲು ಆರಂಭಿಸಿದೆ. ಮುಂದೆ ಪಬ್‌ಜೀ ಗುಂಗಿನಲ್ಲೇ ಪರೀಕ್ಷೆಯನ್ನು ಬರೆದೆ ಎಂದು ಆ ವಿದ್ಯಾರ್ಥಿಯೇ ಹೇಳಿ ತನ್ನ ತಪ್ಪನ್ನು ಅರಿತಿದ್ದಾನೆ. ಆದರೆ, ಇದೇ ರೀತಿಯಲ್ಲಿ ಪಬ್‌ಜಿ ಸೇರಿದಂತೆ ಗೇಮಿಂಗ್ ಲೋಕದಲ್ಲಿ ಹಲವು ಮಕ್ಕಳು ಸಿಲುಕಿ ನಲುಗುತ್ತಿದ್ದಾರೆ. ಹಾಗಾದರೆ, ನಿಮ್ಮ ಮಕ್ಕಳನ್ನು ಈ ಗೇಮಿಂಗ್ ಎಂಬ ಕರಾಳ ಲೋಕದಿಂದ ಹೊರತರುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್