Back
Home » ಇತ್ತೀಚಿನ
ಸ್ಪೈ ಕ್ಯಾಮ್ ಬಳಸಿ 1600ಕ್ಕೂ ಹೆಚ್ಚು ದಂಪತಿಗಳ ಅಶ್ಲೀಲ ವಿಡಿಯೋ!..ನೀವು ಹುಷಾರು!
Gizbot | 22nd Mar, 2019 03:36 PM
 • ಏನಿವು ಸ್ಪೈ ಕ್ಯಾಮೆರಾಗಳು?

  ಸಿಸಿಟಿವಿ ಕ್ಯಾಮೆರಾಗಳು ಕಣ್ಣಿಗೆ ಕಾಣಿಸಬಲ್ಲವು. ಆದರೆ ಸ್ಪೈ ಕ್ಯಾಮೆರಾಗಳು ಹಾಗಲ್ಲ, ಕಣ್ಣಿಗೆ ಗೋಚರಿಸದಷ್ಟು ಪುಟ್ಟದಾಗಿರುತ್ತವೆ. ಎಲ್ಲಿ ಇರಿಸುತ್ತಾರೆ ಎಂಬುದನ್ನು ಪತ್ತೆ ಹಚ್ಚುವುದೇ ಕಷ್ಟ. ಅಷ್ಟು ಪುಟ್ಟ ಗಾತ್ರದಲ್ಲಿರುತ್ತದೆ. ಆದರೆ ಅದರ ಸಾಮರ್ಥ್ಯ‌ ಅಗಾಧ. ಇವುಗಳನ್ನು ಪೆನ್ನಿನ ಕ್ಯಾಪ್‌ನಲ್ಲಿರುವ ಕ್ಲಿಪ್‌ನ ತುದಿಯಲ್ಲಿ, ಅಂಗಿಯ ಬಟನ್‌ನಲ್ಲಿ, ಡೆಸ್ಕ್‌ ಮೇಲಿರುವ ಪೆನ್‌ ಸ್ಟ್ಯಾಂಡ್‌, ಗೊಂಬೆಗಳ ಕಣ್ಣು, ಗಡಿಯಾರದ ಮುಳ್ಳು, ವಾಹನದ ಕೀಚೈನ್, ಪರ್ಸ್, ಡಿವಿಡಿ ಕೇಸ್‌, ಏರ್‌ಫಿಲ್ಟರ್‌, ಟಿವಿ ಮೇಲಿಡುವ ಫೋಟೋ ಫ್ರೇಮ್ ಹೀಗೆ ಸ್ಪೈ ಕ್ಯಾಮೆರಾಗಳನ್ನು ಇರಿಸಬಹುದಾದ ಸಾಧ್ಯತೆಗಳು ಇರುತ್ತವೆ. ಇವುಗಳನ್ನು ನಾವು ಈ ಕೆಳಗಿನಂತೆ ಕಂಡುಹಿಡಿಯಬಹುದು.


 • ಟೂ ವೇ ಮಿರರ್ ಬಗ್ಗೆ ಎಚ್ಚರ!

  ಟೂ ವೇ ಮಿರರ್ ಅಥವಾ ಒಂದು ಬದಿಯಿಂದ ಕನ್ನಡಿ, ಇನ್ನೊಂದು ಬದಿಯಿಂದ ಪಾರದರ್ಶಕವಾದ ನಿಲುವುಗನ್ನಡಿ. ಈ ಬಗೆಯ ಕನ್ನಡಿಗಳನ್ನು ಕ್ಯಾಮೆರಾ ಬದಲಾಗಿ ಅಳವಡಿಸಲಾಗಿರುತ್ತದೆ. ಅದರ ಹಿಂದೆ ದೊಡ್ಡ ಗಾತ್ರದ ಕ್ಯಾಮೆರಾ ನಿಲ್ಲಿಸಲಾಗಿರುತ್ತದೆ. ಹಾಗಾಗಿ, ನೀವು ನಿಮ್ಮ ಬೆರಳನ್ನು ನೇರವಾಗಿ ಕನ್ನಡಿಯ ಮೇಲೆ ತಾಗಿಸಿ. ಒಂದು ವೇಳೆ ಇದು ಟೂ ವೇ ಮಿರರ್ ಆಗಿದ್ದರೆ ಬೆರಳಿಗೂ ಕನ್ನಡಿಯ ಬುಡಕ್ಕೂ ಕೊಂಚ ಅಂತರವಿರುತ್ತದೆ. ಏಕೆಂದರೆ ಕನ್ನಡಿಯ ಹಿಂಬದಿಯಲ್ಲಿ ಪಾದರಸದ ಲೇಪನವಿರುತ್ತದೆ. ಒಂದು ವೇಳೆ ಬೆರಳು ಪ್ರತಿಬಿಂಬಕ್ಕೆ ತಾಕಿದಂತೆ ಇರುವಂತಿದ್ದರೆ, ಅಂದರೆ ಬೆರಳಿಗೂ ಬಿಂಬಕ್ಕೂ ಯಾವುದೇ ಅಂತರವಿಲ್ಲದೇ ಇದ್ದಲ್ಲಿ ಇದು ಟೂ ವೇ ಮಿರರ್ ಎಂದು ಖಚಿತವಾಗುತ್ತದೆ.


 • ಹಿಡನ್ ಕ್ಯಾಮೆರಾ ಡಿಟೆಕ್ಟರ್

  ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಹಿಡನ್ ಕ್ಯಾಮೆರಾ ಡಿಟೆಕ್ಟರ್ ಆಪ್‌ ಡೌನ್‌ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್ ಕ್ಯಾಮೆರಾಗಳನ್ನು ಪತ್ತೆಹಚ್ಚಬಹುದು. ನೀವು ತಂಗುವ ಜಾಗದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ ತೆರೆದರೆ ಅದು ರೂಮ್‌ ಅನ್ನು ಸ್ಕ್ಯಾನ್ ಮಾಡುತ್ತದೆ. ಎಲೆಕ್ಟ್ರಾನಿಕ್‌ ಡಿವೈಸ್‌ ಯಾವುದಾದರೂ ಇದ್ದರೆ ಅದನ್ನು ಇದು ಸಿಗ್ನಲ್ ನೀಡುವ ಮೂಲಕ ತೋರಿಸುತ್ತದೆ. ಅವುಗಳಲ್ಲಿ ಎಚ್ಚರಿಕೆ ಸಿಗ್ನಲ್ ತೋರಿಸಿದರೆ ನೀವು ಆಗ ಜಾಗರೂಕರಾಗಿರಬಹುದು. ಇಂತಹ ಸಮಯದಲ್ಲಿ ಸಿಗ್ನಲ್‌ಗಳನ್ನು ಸೂಸುವ ಟಿವಿ ಆಫ್ ಮಾಡಿದರೆ ಒಳ್ಳೆಯದು.


 • ವೈಫೈ ಅನಲೈಸರ್ ಆಪ್

  ಈ ಪರಿಯ ಕ್ಯಾಮೆರಾಗಳನ್ನು ಪತ್ತೆ ಮಾಡಲು ವೈರ್‌ಲೆಸ್‌ ಕ್ಯಾಮೆರಾ ಡಿಟೆಕ್ಟರ್ ಎಂಬ ಸಾಧನಗಳು ಆನ್‌ಲೈನ್‌ನಲ್ಲಿ ಲಭ್ಯ. ಕೆಲವೊಮ್ಮೆ ವೈಫೈ ಅನಲೈಸರ್ ಎಂಬ ಆಪ್‌ ಮೂಲಕವೂ ವೈಫೈ ಇರುವ ಕಳ್ಳ ಕ್ಯಾಮೆರಾಗಳನ್ನು ಪತ್ತೆ ಮಾಡಬಹುದು. ನಿಮಗೆ ಸಂದೇಹ ಬಂದ ಸ್ಪಾಟ್‌ನಲ್ಲಿ ವೈಫೈ ಅನಲೈಸರ್ ತೆರೆದು ನಿಮ್ಮ ಮೊಬೈಲ್‌ ಫೋನನ್ನು ಆಡಿಸಿದಾಗ ಫ್ರೀಕ್ವೆನ್ಸಿಗಳು ಪರಸ್ಪರ ಘರ್ಷಿಸಿ ನಮ್ಮಲ್ಲಿರುವ ಮೊಬೈಲ್‌ ಫೋನ್‌ನಲ್ಲಿ ಸ್ಪೀಕರ್‌ ಇರುವುದರಿಂದ, ಫೋನ್‌ನಲ್ಲಿ ವಿಚಿತ್ರವಾದ ಕರ್ಕಶ ಸದ್ದು ಕೇಳುತ್ತದೆ.ಈ ರೀತಿಯ ಸದ್ದು ಕೇಳಿದರೆ ಅಲ್ಲಿ ಕಳ್ಳಗಣ್ಣು ಇರುವ ಸಾಧ್ಯತೆಗಳು ಅಧಿಕ.


 • ಎಚ್ಚರಿಕೆ ಅಗತ್ಯ

  ರೂಮ್​ಗಳಲ್ಲಿ ಟಿವಿ, ಸ್ವಿಚ್​ ಬೋರ್ಡ್​, ಹೇರ್​ ಡ್ರೈಯರ್​ಗಳಲ್ಲಿ ಈ ಸ್ಪೈಕ್ಯಾಮ್​ಗಳನ್ನ ಅಳವಡಿಸಿರುವುದನ್ನು ಕಂಡುಕೊಳ್ಳಬಹುದಾದರೂ ಸಹ ಇಂತಹ ಕೃತ್ಯ ಎಸಗುವುದರ ಬಗ್ಗೆ ನಾವು ಎಚ್ಚರಿಕೆ ವಹಿಸಿದರೆ ಒಳ್ಳೆಯದು. ಹೊರಗೆ ಹೋದಾಗ ಹೋಟೆಲ್ ರೂಮ್‌ಗಳಲ್ಲಿ ಲೈಂಗಿಕತೆ ಬೇಡ ಎಂದು ನಿರ್ಲಕ್ಷಿಸಿ. ನಿಮ್ಮ ಖಾಸಾಗಿ ಮಾಹಿತಿಗಳನ್ನು ಹೊರಪ್ರಪಂಚದಲ್ಲಿ ಹಂಚಿಕೊಳ್ಳಬೇಡಿ. ಈಗ ಹೋಟೆಲ್‌ಗಳಲ್ಲಿ, ಮಾಲ್‌ಗಳಲ್ಲಿ, ಬಸ್‌-ವಿಮಾನ-ರೈಲು ನಿಲ್ದಾಣಗಳಲ್ಲಿ, ಕಾಫಿ ಶಾಪ್‌ನಲ್ಲಿ ಮಾತ್ರವೇ ಅಲ್ಲ, ಸಣ್ಣ ಪುಟ್ಟ ದಿನಸಿ ಅಂಗಡಿಗಳಲ್ಲಿಯೂ ಕೂಡ ಸ್ಪೈಕ್ಯಾಮೆರಾಗಳು ಇರಬಹುದು.
ಇತ್ತೀಚಿನ ಕ್ಯಾಮೆರಾ ತಂತ್ರಜ್ಞಾನವನ್ನು ಹೇಗೆಲ್ಲಾ ಕೆಟ್ಟದಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ದಕ್ಷಿಣ ಕೊರಿಯಾದ ಹಲವು ಹೋಟೆಲ್​ಗಳಲ್ಲಿ ನಡೆದಿರುವ ಸ್ಪೈ ಕ್ಯಾಮ್​ಗಳೇ ಸಾಕ್ಷಿ.! ಏಕೆಂದರೆ, ದೂರದ ಪ್ರಯಾಣ ಹೋದಾಗ ಹೋಟೆಲ್​, ಲಾಡ್ಜ್​ಗಳಲ್ಲಿ ಉಳಿದುಕೊಳ್ಳುವ ದಂಪತಿಗಳನ್ನೇ ಟಾರ್ಗೆಟ್ ಮಾಡಿರುವ ನಾಲ್ವರು ಆರೋಪಿಗಳು, ಸ್ಪೈ ಕ್ಯಾಮ್ಗಳ ಮೂಲಕ ಸುಮಾರು 1600ಕ್ಕೂ ಹೆಚ್ಚು ದಂಪತಿಗಳ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

ಹೌದು, ದಕ್ಷಿಣ ಕೊರಿಯಾ ಪೊಲೀಸರು ಇಂತಹದೊಂದು ಪ್ರಕರಣವನ್ನು ಇದೀಗ ಭೇದಿಸಿದ್ದಾನೆ. ಪೊಲೀಸರು ಹೇಳಿರುವಂತೆ, ನಾಲ್ವರು ಆರೋಪಿಗಳು 30ಕ್ಕೂ ಅಧಿಕ ಹೋಟೆಲ್​ಗಳ 42 ಕ್ಕೂ ಹೆಚ್ಚು ರೂಮ್​ಗಳಲ್ಲಿ ಟಿವಿ, ಸ್ವಿಚ್​ ಬೋರ್ಡ್​, ಹೇರ್​ ಡ್ರೈಯರ್​ಗಳಲ್ಲಿ ಈ ಸ್ಪೈಕ್ಯಾಮ್​ಗಳನ್ನ ಅಳವಡಿಸಿ ಇಂತಹ ಕೃತ್ಯ ಎಸಗಿದ್ದಾರಂತೆ. ಈ ರೀತಿಯಲ್ಲಿ ದಕ್ಷಿಣ ಕೊರಿಯಾದ ಹೋಟೆಲ್​ಗಳಲ್ಲಿ 1600 ಕ್ಕೂ ಹೆಚ್ಚು ದಂಪತಿಗಳ ಅಶ್ಲೀಲ ವಿಡಿಯೋವನ್ನ ರೆಕಾರ್ಡ್​ ಮಾಡಿ ವೆಬ್‌ಸೈಟ್‌ಗಳಲ್ಲಿ ಲೈವ್ ಆಗಿ ಹರಿಬಿಟ್ಟಿದ್ದಾರೆ.

ರೂಮ್​ಗಳಲ್ಲಿ ಉಳಿದುಕೊಳ್ಳಲು ಬರುವ ದಂಪತಿಗಳ ಅಶ್ಲೀಲ ವಿಡಿಯೋವನ್ನು ಸೆರೆಹಿಡಿದು, ದಿನದ 24 ಗಂಟೆಯೂ ವಿಡಿಯೋವನ್ನ ಅವರ ವೆಬ್​ಸೈಟ್​ಗಳಲ್ಲಿ ಪ್ರಸಾರ ಮಾಡಲಾಗಿದೆಯಂತೆ. 44 ಡಾಲರ್ ನೀಡಿ ಚಂದಾದಾರರಾಗಬಹುದಾಗಿದ್ದ ಈ ವೆಬ್​ಸೈಟ್​ಗಳಿಗೆ ಸುಮಾರು 4000 ಜನ ಸಬ್‌ಸ್ರೈಬರ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏನೇ ಆದರೂ, ನಾವು ಕೂಡ ಇಂತಹ ಸ್ಪೈ ಕ್ಯಾಮ್​ಗಳ ಬಗ್ಗೆ ಎಚ್ಚರವಾಗಿರಬೇಕು. ಹಾಗಾದರೆ, ಹೋಟೆಲ್‌ಗಳಲ್ಲಿ ಸ್ಪೈ ಕ್ಯಾಮ್​ಗಳಿದ್ದರೆ ಭೇದಿಸುವುದು ಹೇಗೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್