Back
Home » ಇತ್ತೀಚಿನ
ದೇಶಿಯ ಮಾರುಕಟ್ಟೆಯತ್ತ ಮುಖ ಮಾಡಿದೆ 'ಮೊಟೊ ಜಿ7' ಸ್ಮಾರ್ಟ್‌ಫೋನ್.! ಅಚ್ಚರಿಯ ಬೆಲೆ.!
Gizbot | 22nd Mar, 2019 05:51 PM
 • ಡಿಸೈನ್‌

  ಮೊಟೊ ಜಿ 7' ಮತ್ತು 'ಜಿ 7 ಪ್ಲಸ್' ಸ್ಮಾರ್ಟ್‌ಫೋನ್‌ಗಳ ಒಂದಕ್ಕೊಂದು ಬಹಳ ಸಾಮ್ಯ ಹೊಂದಿವೆ. ಮೊಟೊ ಜಿ7 ಸ್ಮಾರ್ಟ್‌ಫೋನ್ 75.4 mm ಅಗಲ, 156.8 mm ಎತ್ತರ ಹೊಂದಿವೆ ಮತ್ತು 8mm ನಷ್ಟು ತಿಳುವಾಗಿದ ರಚನೆಯಲ್ಲಿದೆ. ಡಿಸ್‌ಪ್ಲೇಯಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಇರಲಿದೆ.


 • ಡಿಸ್‌ಪ್ಲೇ

  ಮೊಟೊ ಜಿ 7 ಸ್ಮಾರ್ಟ್‌ಫೋನ್‌ 1080 x 2270 ಪಿಕ್ಸಲ್‌ ರೆಸಲ್ಯೂಶನ್ ಸಾಮರ್ಥ್ಯ ಇರುವ 6.2 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ನೀಡಲಾಗಿದೆ. ಡಿಸ್‌ಪ್ಲೇ ಮತ್ತು ಫೋನಿನ ಬಾಹ್ಯ ಬಾಡಿಯ ನಡುವಿನ ಅನುಪಾತವು 19.5:9 ಆಗಿದ್ದು, ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ ಒದಗಿಸಲಾಗಿದೆ.


 • ಪ್ರೊಸೆಸರ್

  ಮೊಟೊ ಜಿ 7 ಸ್ಮಾರ್ಟ್‌ಫೋನ್‌ ಆಕ್ಟಾಕೋರ್ ಕ್ವಾಲಂ ಸ್ನ್ಯಾಪ್‌ಡ್ರಾಗನ್ 632 SoC ಪ್ರೊಸೆಸರ್ ಹೊಂದಿದ್ದು, ವೇಗದ ಕೆಲಸ ನಿರ್ವಹಿಸಲಿದೆ. ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಸಂಗ್ರಹ ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ.


 • ಕ್ಯಾಮೆರಾ

  ಮೊಟೊ ಜಿ 7 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಎರಡು ಕ್ಯಾಮೆರಾಗಳನ್ನು ಹೊಂದಿದ್ದು, ಮೊದಲ ಕ್ಯಾಮೆರಾ f/1.8 ಅಪರ್ಚರ್ ನೊಂದಿಗೆ 12 ಮೆಗಾಪಿಕ್ಸಲ್ ಮತ್ತು ಎರಡನೇ ಕ್ಯಾಮೆರಾ f/2.2 ಅಪರ್ಚರ್ ನೊಂದಿಗೆ 5 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿವೆ ಮತ್ತು ಸೆಲ್ಫೀಗಾಗಿ 8 ಮೆಗಾಪಿಕ್ಸಲ್ ಸಾಮರ್ಥ್ಯ ಹೊಂದಿದ ಕ್ಯಾಮೆರಾ ನೀಡಲಾಗಿದೆ.


 • ಲಭ್ಯತೆ ಮತ್ತು ಬೆಲೆ

  ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ 'ಮೊಟೊ ಜಿ 7' ಸ್ಮಾರ್ಟ್‌ಫೋನ್‌ ಇದೇ ಮಾರ್ಚ್‌ 25ರಂದು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೊಟೊ ಜಿ 7' ಸ್ಮಾರ್ಟ್‌ಫೋನ್‌ ಬೆಲೆಯು 24,000ರೂ.ಗಳು ಇರಲಿವೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ ಮೊಟೊ ಜಿ7, ಮೊಟೊ ಜಿ7 ಪ್ಲಸ್, ಮೊಟೊ ಜಿ7 ಪವರ್‌ ಮತ್ತು ಮೊಟೊ ಜಿ7 ಪ್ಲೇ ಸೇರಿದಂತೆ ಒಟ್ಟು ನಾಲ್ಕು ಸ್ಮಾರ್ಟ್‌ಫೋನ್ ಬ್ರೆಜಿಲ್‌ನಲ್ಲಿ ಬಿಡುಗಡೆ ಮಾಡಿ ಸಖತ ಸುದ್ದಿ ಮಾಡಿದ್ದ ಮೊಟೊರೊಲಾ ಸಂಸ್ಥೆ ಇದೀಗ ಭಾರತದ ಮಾರುಕಟ್ಟೆಯತ್ತ ಮುಖ ಮಾಡಿದೆ. ಬಹುನಿರೀಕೆಯಿಂದ ಕಾಯುತ್ತಿದ್ದ ದೇಶಿಯ ಗ್ರಾಹಕರಿಗೆ ಸಿಹಿಸುದ್ದಿ ನೀಡಲು ಮುಂದಾಗಿದ್ದು, ಭಾರತದಲ್ಲಿಯೂ 'ಮೊಟೊ ಜಿ7' ಸ್ಮಾರ್ಟ್‌ಫೋನ್ ಲಾಂಚ್‌ ಮಾಡಲಿದೆ.

ಹೌದು, ಭಾರೀ ಗಮನ ಸೆಳೆದಿರುವ ಮೊಟೊ ಜಿ7 ಸ್ಮಾರ್ಟ್‌ಫೋನ್ ದೇಶಿಯ ಮಾರುಕಟ್ಟೆಗೆ ಇದೇ ಮಾರ್ಚ್‌ 25ರಂದು ಎಂಟ್ರಿ ಕೊಡಲಿದೆ ಎಂದು ಕಂಪನಿಯು ಅಧಿಕೃತವಾಗಿ ತಿಳಿಸಿದೆ. ಈ ಸ್ಮಾರ್ಟ್‌ಫೋನ್ ವೇಗದ ಕಾರ್ಯವೈಖರಿಗಾಗಿ ಸ್ನ್ಯಾಪ್‌ಡ್ರಾಗನ್‌ ಆಕ್ಟಾಕೋರ್‌ 632 ಪ್ರೊಸೆಸರ್‌ ಅನ್ನು ಹೊಂದಿದ್ದು, ಇದರೊಂದಿಗೆ 4GB RAM ಮತ್ತು 64GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒಳಗೊಂಡಿರಲಿದೆ.

ಮೊಟೊ ಜಿ7 ಪ್ರೀಮಿಯಮ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿದ್ದು, ಸ್ಪ್ಲಾಶ್ ರೆಸಿಸ್ಟೆನ್ಸ್ ಮತ್ತು P2i ವಾಟರ್‌ ರೆಸಿಸ್ಟೆನ್ಸ್ ಆಗಿದೆ. ಫೇಸ್‌ಅನ್‌ಲಾಕ್, ಫಿಂಗರ್‌ಪ್ರಿಂಟ್ ಸೆನ್ಸಾರ್ ಫೀಚರ್ಸ್‌ಗಳೊಂದಿಗೆ ಫಾಸ್ಟ್ ಚಾರ್ಜಿಂಗ್‌ ಸೌಲಭ್ಯಗಳನ್ನು ಸಹ ಹೊಂದಿದೆ. ಹಾಗಾದರೇ ಮೊಟೊರೊಲಾ ಜಿ7 ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ವಿಶೇಷ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್