Back
Home » ಇತ್ತೀಚಿನ
ಕತ್ತಲಲ್ಲಿ 30 ನಿಮಿಷ ಮೊಬೈಲ್ ಬಳಸಿದರೆ ಏನಾಗಲಿದೆ?..ಸಂಶೋಧನೆ ಹೇಳಿದ್ದು ಹೀಗೆ!
Gizbot | 23rd Mar, 2019 09:05 AM
  • ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

    ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.


  • ನರಗಳ ಬೆಳವಣಿಗೆಯಲ್ಲಿ ತೊಂದರೆ.

    ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.


  • ಮೊಬೈಲ್‌ನಿಂದ ಮಾನಸಿಕ ಒತ್ತಡ.

    ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.


  • ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆ

    ಮೊಬೈಲ್‌ ಅನ್ನು ಬ್ಯಾಗ್‌ನಲ್ಲಿ ಇಡುವುದಕ್ಕಿಂತ ಜೇಬಿನಲ್ಲಿ ಇಡುವುದರಿಂದ ಆಗುವ ಸಮಸ್ಯೆಗಳು ಹೆಚ್ಚಿವೆ. ಜೇಬಿನಲ್ಲಿ ಮೊಬೈಲ್ ಇದ್ದಾಗ ಅದರ ರೇಡಿಯೇಷನ್ ದೇಹದಲ್ಲಿ ಮೇಲೆ 7 ಪಟ್ಟು ಅಧಿಕ ಬಿದ್ದು, ಡಿಎನ್‌ಎ ಸಂರಚನೆಯಲ್ಲಿ ವ್ಯತ್ಯಾಸ ಉಂಟಾಗಿ ಗಡ್ಡೆ ಬೆಳೆಯುವುದು, ಸಂತಾನೋತ್ಪತ್ತಿ ಸಾಮರ್ಥ್ಯ ಕಡಿಮೆಯಾಗುವುದು ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ.


  • ಸಾವಿಗೂ ಕಾರಣವಾಗಬಹುದು

    ಮೊಬೈಲ್ ಸಮೀಪ ಇಟ್ಟು ಮಲಗುವುದರಿಂದ ದೇಹದ ಮೇಲಾಗುವ ಪರಿಣಾಮ ಮಾತ್ರ ಭೀಕರವಾದದ್ದು ಎಂದು ಮತ್ತೊಂದು ಸಂಶೋಧನೆ ಅಭಿಪ್ರಾಯಪಟ್ಟಿದೆ. ಮೊಬೈಲ್ ನಿಮ್ಮ ಸವಿನಿದ್ದೆಗೆ ಭಂಗ ಉಂಟು ಮಾಡಿ ನಿದ್ರಾಹೀನತೆ ಸಮಸ್ಯೆ, ದೃಷ್ಟಿ ಕಳೆದುಕೊಳ್ಳುವ ಸಮಸ್ಯೆಗಳು ಸೇರಿಂದರೆ, ಮೊಬೈಲ್‌ನ ಅತಿ ಬಳಕೆ ಸಾವಿಗೂ ಕಾರಣವಾಗಬಹುದು ಎಂದು ಎಚ್ಚರಿಸಿದೆ.




ರಾತ್ರಿವೇಳೆ ಅಥವಾ ಕತ್ತಲಲ್ಲಿ ಕೇವಲ 30 ನಿಮಿಷಗಳು ಮೊಬೈಲ್ ಪರದೆಯನ್ನು ನೋಡುವುದು ಅತ್ಯಂತ ಅಪಾಯಕಾರಿ ಎಂಬುದು ಇತ್ತೀಚಿನ ಸಂಶೋಧನೆ ಒಂದರಲ್ಲಿ ಸಾಬೀತಾಗಿದೆ. ಅಮೇರಿಕನ್ ಫೌಂಡೇಶನ್ ಸಂಶೋಧನೆಯ ಪ್ರಕಾರ, ನಾವು ಮೊಬೈಲ್ ಪರದೆಯಲ್ಲಿ ದೈನಂದಿನ ಮಂದ ಬೆಳಕಿನಲ್ಲಿ 30 ನಿಮಿಷಗಳು ಕೆಲಸ ಮಾಡಿದರೆ, ನಂತರ ನಮ್ಮ ಕಣ್ಣುಗಳು ಶುಷ್ಕವಾಗುತ್ತವೆ. ಜೊತೆಗೆ ಕಣ್ಣುಗಳ ರೆಟಿನಾದಲ್ಲಿ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದೆ.

ಹೆಚ್ಚು ಜನರು ನಿದ್ರೆ ಮಾಡುವ ಮೊದಲು ಅಥವಾ ಕತ್ತಲಿನಲ್ಲಿ ಮೊಬೈಲ್ ಬಳಸುತ್ತಾರೆ. ಇದು ಕಣ್ಣುಗಳು ಮತ್ತು ಮಿದುಳಿನ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತದೆ. ನಾವು ಮೊಬೈಲ್ ಪರದೆಯಲ್ಲಿ ದೈನಂದಿನ ಮಂದ ಬೆಳಕಿನಲ್ಲಿ 30 ನಿಮಿಷಗಳು ಕೆಲಸ ಮಾಡಿದರೆ, ನಂತರ ನಮ್ಮ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ದಿನಚರಿಯನ್ನು ದೀರ್ಘಕಾಲದವರೆಗೆ ಇಟ್ಟು ಕೊಳ್ಳುವುದರಿಂದ, ಕಣ್ಣಿನ ದೃಷ್ಟಿ ಕಡಿಮೆಯಾಗುತ್ತದೆ ಎಂಬುದನ್ನು ಈ ಸಂಶೋಧನೆ ಒತ್ತಿ ಹೇಳಿದೆ.

ಇನ್ನು ಇತ್ತೀಚಿಗಷ್ಟೇ ಅದೇ ಹಾರ್ವರ್ಡ್ ವಿಶ್ವವಿದ್ಯಾನಿಲಯ ಮತ್ತು ವೋರ್ಸೆಸ್ಟರ್ ವಿಶ್ವವಿದ್ಯಾಲ ಕೂಡ, ಕತ್ತಲಿನಲ್ಲಿ ಮೊಬೈಲ್ ಗಳನ್ನು ಬಳಸುವುದು ಮಾರಣಾಂತಿಕವಾಗಿದೆ ಎಂದು ಅಧ್ಯಯನದ ವರದಿ ಮೂಲಕ ತಿಳಿಸಿತ್ತು. ನೀವು ಸರಿಯಾದ ಸಮಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ, ಈ ಸಮಸ್ಯೆ ದೇಹದ ಇತರ ಭಾಗಗಳ ಮೇಲೂ ಸಹ ಪರಿಣಾಮ ಬೀರುತ್ತದೆ ಎಂದು ಹೇಳಿತ್ತು. ಹಾಗಾದರೆ, ಇದೇ ರೀತಿಯಲ್ಲಿ ಮೊಬೈಲ್‌ನಿಂದ ಆಗುತ್ತಿರುವ ಇನ್ನಿತರ ಸಮಸ್ಯೆಗಳ ಬಗ್ಗೆ ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್