Back
Home » ಇತ್ತೀಚಿನ
ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿದ್ದ ಓಲಾ ಬ್ಯಾನ್ ಆಗಿದ್ದೇಕೆ?
Gizbot | 23rd Mar, 2019 11:29 AM

ಭಾರತದಲ್ಲಿ ಮೊದಲ ಬಾರಿಗ ಮೊಬೈಲ್ ಆಪ್ ಆಧಾರಿತ ಟ್ಯಾಕ್ಸಿ ಸೇವೆ ತಂದ ಓಲಾ ಕರ್ನಾಟಕ ಸರ್ಕಾರದಿಂದ ಬ್ಯಾನ್ ಆಗಿದೆ. ಓಲಾ ಕ್ಯಾಬ್ ಸಂಸ್ಥೆಗೆ ನೀಡಿದ್ದ ಪರವಾನಿಗೆಯನ್ನು ರಾಜ್ಯ ಸರಕಾರ ರದ್ದು ಮಾಡಿದ್ದು, ಸಾರಿಗೆ ಇಲಾಖೆ ನೀಡಿದ ಪರವಾನಿಗೆಯನ್ನು ದುರ್ಬಳಕೆ ಮಾಡಿದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಓಲಾ ಲೈಸೆನ್ಸನ್ನು ಅಮಾನತು ಮಾಡಲಾಗಿದೆ.

ರಾಜ್ಯ ರಾಜಧಾನಿಯಲ್ಲಿ ಅಕ್ರಮವಾಗಿ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸಿದ್ದ 'ಓಲಾ' ಕಂಪನಿಗೆ ಚಾಟಿ ಬೀಸಿರುವ ಸಾರಿಗೆ ಇಲಾಖೆ, ಟ್ಯಾಕ್ಸಿ ಸೇವೆ ನೀಡಲು ರಾಜ್ಯ ಸಾರಿಗೆ ಪ್ರಾಧಿಕಾರದಿಂದ( ಆರ್‌ಟಿಒ) ಪಡೆದಿದ್ದ ಅಗ್ರಿಗೇಟ​ರ್ಸ್ ಪರವಾನಗಿಯನ್ನು ಆರು ತಿಂಗಳ ಕಾಲ ಅಮಾನುತುಗೊಳಿಸಿದೆ. ಹೀಗಾಗಿ ಇಂದಿನಿಂದಲೇ ರಾಜ್ಯಾದ್ಯಂತ ಓಲಾ ಕ್ಯಾಬ್ ಆಟೋ ಸೇವೆ ಬಂದ್‌ ಆಗಿದೆ.

ಆಪ್ ಆಧಾರಿತಸೇವೆ ನೀಡುವ ಓಲಾಗೆ ಪರವಾನಿಗೆ ನೀಡುವ ವೇಳೆ ವಿಧಿಸಲಾಗಿದ್ದ ನಿಯಮಗಳ ಉಲ್ಲಂಘನೆಯಾಗಿರುವುದು ಖಚಿತವಾಗಿದೆ. ಇನ್ನು ನಿಗದಿಗಿಂತ ದುಪ್ಪಟ್ಟು ದರ ಸುಲಿಗೆ ಮಾಡುವುದೂ ಸೇರಿದಂತೆ ಅನೇಕ ದೂರುಗಳು ಓಲಾ ಸಂಸ್ಥೆ ವಿರುದ್ಧ ಕೇಳಿಬಂದಿದ್ದವು. ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಓಲಾದಿಂದ ಸಾರಿಗೆ ನಿಯಮಗಳ ಉಲ್ಲಂಘನೆಯಾಗಿತ್ತು. ಈ ಸಂಬಂಧ ಒಂದು ವಾರದೊಳಗೆ ವಿವರಣೆ ನೀಡಬೇಕೆಂದು ಸಾರಿಗೆ ಇಲಾಖೆ ಫೆ. 15ರಂದು ನೋಟೀಸ್ ಕೂಡ ನೀಡಿತ್ತು. ಇದಕ್ಕೆ ಸಂಸ್ಥೆ ನೀಡಿದ ವಿವರಣೆ ಸಮಪರ್ಕವಾಗಿಲ್ಲವೆಂದು ಪರಿಗಣಿಸಿದ ಸರಕಾರ ಓಲಾಗೆ ನೀಡಿದ್ದ ಪರವಾನಿಗೆಯನ್ನು ರದ್ದುಗೊಳಿಸಿ ಟ್ಯಾಕ್ಸಿ ಸೇವೆಯನ್ನು ತತ್​ಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ.

ಇನ್ನು ಆರು ತಿಂಗಳು ಕ್ಯಾಬ್ ಸೇವೆ ಸ್ಥಗಿತಗೊಳಿಸದರೆ ಚಾಲಕರು ಏನು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಇನ್ನು ಮೂರು ದಿನಗಳ ವರೆಗೆ ಕಾದು ನೋಡುತ್ತೇವೆ. ಅಷ್ಟರಲ್ಲಿ ಓಲಾ ಸಂಸ್ಥೆ ಏನು ಕ್ರಮ ಕೈಗೊಳ್ಳಲಿದೆ ಎಂಬುದು ಗೊತ್ತಾಗುತ್ತದೆ. ನಂತರ ಚಾಲಕರ ಮುಂದಿನ ನಡೆ ಬಗ್ಗೆ ಚರ್ಚಿಸಲಿದ್ದೇವೆ ಎಂದು ಓಲಾ ಚಾಲಕರ ಸಂಘದ ಅಧ್ಯಕ್ಷ ಚಂದ್ರು ಅವರು ಹೇಳಿದ್ದಾರೆ.

   
 
ಹೆಲ್ತ್