Back
Home » ಇತ್ತೀಚಿನ
ಪುಲ್ವಾಮ ಉಗ್ರನಿಂದ 'ವರ್ಚುವಲ್‌ ಸಿಮ್' ಬಳಕೆ!..ಅಷ್ಟಕ್ಕೂ ಏನಿದು 'ವರ್ಚುವಲ್‌ ಸಿಮ್'?
Gizbot | 25th Mar, 2019 12:05 PM
 • ಏನಿದು ವರ್ಚುವಲ್‌ ಸಿಮ್!

  ಮೊದಲೇ ತಿಳಿಸಿದಂತೆ, ಈ ವರ್ಚುವಲ್‌ ಸಿಮ್ ಸೇವೆಯನ್ನು ಅಮೆರಿಕ ( ಖಾಸಾಗಿ ಕಂಪೆನಿಗಳು ಕೂಡ) ಒದಗಿಸುತ್ತದೆ. ಈ ವರ್ಚುವಲ್‌ ಸಿಮ್ ತಂತ್ರಜ್ಞಾನದಲ್ಲಿ ಬಳಕೆದಾರರಿಗೆ ಬೇಕಾದ ದೂರವಾಣಿ ಸಂಖ್ಯೆಯನ್ನು ಕಂಪ್ಯೂಟರ್‌ ಸೃಷ್ಟಿಸುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಇದರ ಅಪ್ಲಿಕೇಷನ್ ಡೌನ್‌ಲೋಡ್‌ ಮಾಡಿಕೊಂಡು ಹಣ ಪಾವತಿಸಿದರೆ ಯಾರೂ ಬೇಕಾದರೂ ತಮಗೆ ಬೇಕಾದ ವ್ಯಕ್ತಿಗಳ ಜತೆ ಸಂಭಾಷಣೆ ನಡೆಸಬಹುದಾಗಿದೆ.


 • ವರ್ಚುವಲ್‌ ಸಿಮ್ ಸಂಪರ್ಕ ಹೇಗೆ?

  ವರ್ಚುವಲ್‌ ಸಿಮ್ ಸೇವೆ ನೀಡುವ ಅಪ್ಲಿಕೇಷನ್ ಡೌನ್‌ಲೋಡ್‌ ಮಾಡಿಕೊಂಡರೆ, ಸಾಮಾಜಿಕ ಜಾಲತಾಣಗಳಾದ ವಾಟ್ಸ್‌ಆಪ್‌, ಫೇಸ್‌ಬುಕ್‌, ಟೆಲಿಗ್ರಾಂ ಹಾಗೂ ಟ್ವಿಟರ್‌ ಜೊತೆ ಸಂಪರ್ಕ ಕಲ್ಪಿಸಬೇಕು. ಯಾವುದಾದರೂ ಜಾಲತಾಣಕ್ಕೆ ಸಂಪರ್ಕ ಹೊಂದಿದ ಬಳಿಕ ಪ್ರಮಾಣೀಕರಣ ಸಂಖ್ಯೆ ನಮೂದಾಗುತ್ತದೆ. ಇದಾದ ನಂತರ ಸ್ಮಾರ್ಟ್‌ಫೋನ್ ಮೂಲಕವೇ ನಂಬರ್ ಇಲ್ಲದೇ ಸಂಭಾಷಣೆ ನಡೆಸಬಹುದು.


 • ಉಗ್ರರಿಂದ ವರ್ಚುವಲ್‌ ಸಿಮ್ ಬಳಕೆ

  ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್‌ ಸಿಮ್ ಬಳಸಿ ಯಶಸ್ವಿಯಾಗಿರುವುದನ್ನು ತನಿಖಾಧಿಕಾರಿಗಳು ಈಗಾಗಲೇ ಪತ್ತೆಹಚ್ಚಿದ್ದಾರೆ. ಮೇಲೆ ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿದ ಜೆಇಎಂ ದಾಳಿಕೋರ 'ವರ್ಚುವಲ್‌ ಸಿಮ್' ಬಳಸಿದ್ದು ದೃಢಪಟ್ಟಿದೆ. ಈ ತಂತ್ರಜ್ಞಾನದ ಮೂಲಕ ಅವರು ಸಂವಹನ ನಡೆಸಿರುವುದರಿಂದ ಭಾರತದ ಗುಪ್ತಚರ ತಂಡದ ಅಧಿಕಾರಿಗಳ ಕೈಗೆ ಸಿಗಂದಂತೆ ಯಶಸ್ವಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.


 • ಗುಪ್ತಚರ ಇಲಾಖೆಗೆ ತಿಳಿಯಲಿಲ್ಲ ಏಕೆ?

  ದಾಳಿಗೆ ಸಂಚು ರೂಪಿಸಲು ಉಗ್ರರು ಬಳಸಿದ 'ವರ್ಚುವಲ್‌ ಸಿಮ್' ಅನ್ನು ಅಮೆರಿಕಾದಿಂದ ನಿರ್ವಹಣೆ ಮಾಡಲಾಗುತ್ತದೆ. 'ವರ್ಚುವಲ್‌ ಸಿಮ್' ಮೇಲೆ ಭಾರತ ಸರ್ಕಾರ ಮತ್ತು ಭಾರತದ ಯಾವುದೇ ಖಾಸಾಗಿ ಕಂಪೆನಿಗೂ ನಿಯಂತ್ರಣ ಇಲ್ಲದೇ ಇರುವುದರಿಂದ ಇದು ಭಾರತೀಯ ತನಿಖಾ ಅಧಿಕಾರಿಗಳ ಕೈಗೆ ಸಿಗದೇ ನಡೆದಿದೆ. ಭಾರತದಲ್ಲಿ ತಜ್ಞರು ಇವುಗಳ ಮೇಲೆ ಕಣ್ಣಿಡಬಹುದಾದೂ ಸಹ ಅದು ಅಷ್ಟು ಸುಲಭವಲ್ಲ ಎನ್ನುತ್ತವೆ ವರದಿಗಳು.


 • ಮುಂಬಯಿ ದಾಳಿ ವೇಳೆಯಲ್ಲೂ ಬಳಕೆ!

  ಇಂಥ ಸಿಮ್‌ ಕಾರ್ಡ್‌ಗಳನ್ನು 2008ರ ಮುಂಬಯಿ ದಾಳಿ ವೇಳೆಯಲ್ಲೂ ಬಳಸಲಾಗಿದ್ದು, ಈ ತಂತ್ರಜ್ಞಾನಕ್ಕಾಗಿ ಪಾಕ್‌ ಆಕ್ರಮಿತ ಕಾಶ್ಮೀರದ ನಿವಾಸಿ ಜಾವೇದ್‌ ಎಂಬಾತ ಅಮೆರಿಕದ ಕಾಲ್‌ಫೋನಿಕ್ಸ್‌ ಕಂಪನಿಗೆ 15,000 ರೂ. ಪಾವತಿಸಿದ್ದ ಎನ್ನಲಾಗಿದೆ. ಭಾರತೀಯ ತನಿಖಾಧಿಕಾರಿಗಳು ಹೆಚ್ಚಿನ ತನಿಖೆಗೆ ಅಮೆರಿಕದ ಮೊರೆ ಹೋಗಲು ತೀರ್ಮಾನಿಸಿದ್ದಾರೆ. ಇಂಟರ್‌ನೆಟ್‌ ಪ್ರೊಟೊಕಾಲ್‌ ಮಾಹಿತಿ ನೀಡಿ ಎಂದು ಭಾರತ ಸರ್ಕಾರ ಅಮೆರಿಕವನ್ನು ಕೋರಿದೆ.
ಇದೇ ಫೆ.14ರಂದು ಸಿಆರ್‌ಪಿಎಫ್ ಯೋಧರು ಸಾಗುತ್ತಿದ್ದ ವಾಹನದ ಮೇಲೆ ನಡೆದ ಆತ್ಮಾಹುತಿ ದಾಳಿಯಿಂದ 40 ಯೋಧರು ಹುತಾತ್ಮರಾಗಿದ್ದ ಘಟನೆಯಲ್ಲಿ ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್‌ ಸಿಮ್ ಬಳಸಿ ಯಶಸ್ವಿಯಾಗಿದ್ದರು ಎಂದು ತಿಳಿದುಬಂದಿದೆ. ಭಯೋತ್ಪಾದಕರು ತಮ್ಮ ಕುಕೃತ್ಯ ನಡೆಸಲು ವರ್ಚುವಲ್‌ ಸಿಮ್ ಬಳಸಿ ಯಶಸ್ವಿಯಾಗಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.

ಹೌದು, ಭಯೋತ್ಪಾದನಾ ದಾಳಿ ನಡೆದ ಸ್ಥಳ ಸ್ಥಳದಲ್ಲಿ ಜಮ್ಮು ಕಾಶ್ಮೀರ ಪೊಲೀಸರು, ರಾಷ್ಟ್ರೀಯ ತನಿಖಾದಳ (ಎನ್‌ಐಎ) ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದರು. ಈ ವೇಳೆ ಸಿಆರ್‌‍ಪಿಎಫ್‌ ಮೇಲೆ ದಾಳಿ ನಡೆಸಿದ್ದ ಆತ್ಮಾಹುತಿ ದಾಳಿಕೋರ ವರ್ಚುವಲ್‌ ಸಿಮ್ ಬಳಸಿ ಉಗ್ರರೊಂದಿಗೆ ಸಂಪರ್ಕದಲ್ಲಿರುವುದು ಖಚಿತಪಟ್ಟಿದೆ. ಹಾಗಾಗಿ, ಭಾರತವೀಗ ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಅಮೆರಿಕಕ್ಕೆ ಭಾರತ ಮನವಿ ಸಲ್ಲಿಸಿದೆ.

ಪುಲ್ವಾಮಾ ದಾಳಿ ನಡೆಸಿದ ವರ್ಚುವಲ್‌ ಸಿಮ್ ತಂತ್ರಜ್ಞಾನ ಬಳಸಿ ನಿರಂತರ ಸಂಭಾಷಣೆ ನಡೆಸಿದ್ದನು. ವರ್ಚುವಲ್‌ ಸಿಮ್ ಸೇವೆಯನ್ನು ಅಮೆರಿಕ ಒದಗಿಸುತ್ತದೆ. ಹಾಗಾಗಿ, ಈ ಬಗ್ಗೆ ವಿಸ್ತೃತ ಮಾಹಿತಿ ನೀಡುವಂತೆ ಕೋರಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ, ಏನಿದು .ವರ್ಚುವಲ್‌ ಸಿಮ್ ತಂತ್ರಜ್ಞಾನ?, ಈ ತಂತ್ರಜ್ಞಾನ ಬಳಕೆ ಮಾಡಿದರೆ ಏನು ತೊಂದರೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

   
 
ಹೆಲ್ತ್