Back
Home » ಇತ್ತೀಚಿನ
ವಾಟ್ಸ್ಆಪ್, ಫೇಸ್‌ಬುಕ್ ಇನ್ನು ಸರ್ಕಾರದ ಮುಷ್ಠಿಯಲ್ಲಿ?!
Gizbot | 25th Mar, 2019 05:05 PM

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸುತ್ತಿದ್ದವರ ಮೂಲವನ್ನು ಹುಡುಕಲು ಸರ್ಕಾರ ಮುಂದಾಗಿದೆ. ಸಾಮಾಜಿಕ ಜಾಲತಾಣಗಳ ಹೊಣೆಗಾರಿಕೆ ಹಾಗೂ ಉತ್ತರದಾಯಿತ್ವ ಕುರಿತು ಮಾರ್ಗದರ್ಶಿಯನ್ನು ಚುನಾವಣೆಯ ನಂತರ ಶೀಘ್ರ ಬಿಡುಗಡೆಗೊಳಿಸಲಾಗುವುದು' ಎಂದು ಹಿರಿಯ ಸರಕಾರಿ ಅಧಿಕಾರಿಗಳು ತಿಳಿಸಿದ್ದು, ಇನ್ಮುಂದೆ ಸುಳ್ಳು ಸುದ್ದಿಗಳನ್ನು ಹುಟ್ಟಿಹಾಕುವವರನ್ನು ಜೈಲಿಗೆ ಕಳುಹಿಸುವಂತಹ ಪ್ರಕ್ರಿಯೆ ಶುರುವಾಗಲಿದೆ ಎಂದು ಹೇಳಿದ್ದಾರೆ.

ಹೌದು, ವಾಟ್ಸ್ಆಪ್, ಫೇಸ್‌ಬುಕ್ ಸೇರಿದಂತೆ ಬಹುತೇಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿ, ಪ್ರಚೋದನ್ಮಾಕ ಹೇಳಿಕೆಗಳ ಪ್ರಸಾರವನ್ನು ತಡೆಯಲು ಸರ್ಕಾರ ಮುಂದಾಗಿದೆ. ಅವಹೇಳನಕಾರಿ ಹಾಗೂ ಪ್ರಚೋದನಕಾರಿ ಪೋಸ್ಟ್‌ಗಳನ್ನು ಹಾಕುವವರ ಪತ್ತೆಗೆ ಭದ್ರತಾ ಸಂಸ್ಥೆಗಳಿಗೆ ಸಹಕರಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಕಾನೂನಿನ ಮೂಲಕ ಚಾಟಿ ಬೀಸಲು ದಂಡ ಹಾಗೂ ಜೈಲು ಶಿಕ್ಷೆಯನ್ನೂ ವಿಧಿಸುವ ಪ್ರಸ್ತಾಪವನ್ನೂ ಹೊಸ ನೀತಿ ಹೊಂದಿದೆ.

ನಕಲಿ ಸುದ್ದಿ ಹಾಗೂ ವದಂತಿಗಳು ಹರಡದಂತೆ ತಡೆಯಲು ಸಾಮಾಜಿಕ ಜಾಲತಾಣಗಳಿಗೆ ಮಾರ್ಗದರ್ಶಿ, ಬಿಗಿಯಾದ ಕಾನೂನು ಅಗತ್ಯ ಎಂದು ಸರ್ಕಾರ ಪರಿಗಣಿಸಿದೆ. ಹಾಗಾಗಿ, ಸುಳ್ಳು ಸುದ್ದಿಗಳನ್ನು ಹುಟ್ಟಿಹಾಕುವವರ ಮೂಲವನ್ನು ಕಂಡುಹಿಡಿಯುವಂತೆ ಸಾಮಾಜಿಕ ಜಾಲ ತಾಣಗಳ ಕಾರ್ಯವನ್ನು ನಿಗದಿಪಡಿಸುವ ಹೊಸ ನಿಯಮಾವಳಿಗಳನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಒಂದು ವೇಳೆ ಇದಕ್ಕೆ ಸಾಮಾಜಿಕ ಜಾಲತಾಣಗಳು ಬೆಂಬಲ ನೀಡದಿದ್ದರೆ ಅವುಗಳ ಅಧಿಕಾರಿಗಳೂ ಹೊಣೆ ಹೊತ್ತುಕೊಳ್ಳಬೇಕಾಗಲಿದೆ.

ಇತ್ತೀಚಿಗೆ ಡ್ರಗ್ಸ್ ಬಳಕೆ ಅಥವಾ ಕಳ್ಳ ಸಾಗಣೆ ಇತ್ಯಾದಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಜಾಲತಾಣಗಳನ್ನು ಬಳಸುವ ದುಷ್ಕರ್ಮಿಗಳ ಪತ್ತೆಗೆ ಸಹಕರಿಸುವಂತೆ ಸಾಮಾಜಿಕ ಜಾಲತಾಣಗಳಿಗೆ ಸರ್ಕಾರ ಸೂಚಿಸಿತ್ತು. ಆದರೆ, ಇದೆಲ್ಲ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಜಾಲತಾಣಗಳು ಸರಕಾರದ ಯತ್ನವನ್ನು ವಿಫಲಪಡಿಸಿದ್ದವು. ಆದರೆ, ಇದೀಗ ಹೊಸ ಕಾನೂನು ಜಾರಿಯಾಗಲಿರುವುದರಿಂದ ಸಾಮಾಜಿಕ ತಾಣಗಳು ಕಾನೂನು ಪ್ರಕಾರ ಸಹಕರಿಸಬೇಕಾಗುತ್ತದೆ.

ಬಳಕೆದಾರರ ಖಾಸಾಗಿತನವನ್ನು ರಕ್ಷಿಸಬೇಕೆಂದು ಸರ್ಕಾರದ ವಿರುದ್ಧ ಹಲವು ದಿನಗಳಿಂದಲೂ ಸೆಣೆಸಾಡುತ್ತಿರುವ ವಾಟ್ಸ್‌ಆಪ್‌ಗೆ ಇದರಿಂದ ಬ್ರೇಕ್ ಬೀಳಲಿದೆ ಎಂದು ಹೇಳಲಾಗಿದೆ. ಸರಕಾರಿ ಅಧಿಕಾರಿಗಳು ವಾಟ್ಸ್‌ಆಪ್‌ ಜತೆಗೆ ಈ ವಿಚಾರದಲ್ಲಿ ಹಲವು ಸಲ ಮಾತುಕತೆ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ಹೊಸ ಮಾರ್ಗದರ್ಶಿ ಪರಿಹಾರವಾಗಬಲ್ಲ ಸಾಧ್ಯತೆ ಇದೆ. ಆದರೆ, ಇದರ ಉಪಯೋಗವನ್ನು ಸದುಪಯೋಗಪಡಿಸಿಕೊಳ್ಳುವಲ್ಲ ಸರ್ಕಾರದ ಪಾಲು ಹೆಚ್ಚಿದೆ.

   
 
ಹೆಲ್ತ್