Back
Home » ಗಾಸಿಪ್
ತೆರೆಮೇಲೆ ಮಾಯಾವತಿ ಜೀವನ: ಬೆಹನ್ ಜಿ ಪಾತ್ರದಲ್ಲಿ ವಿದ್ಯಾಬಾಲನ್.!
Oneindia | 28th Mar, 2019 08:07 PM

ನರೇಂದ್ರ ಮೋದಿ, ರಾಹುಲ್ ಗಾಂಧಿ, ಎನ್.ಟಿ.ಆರ್, ಜಯಲಲಿತಾ, ಮಮತಾ ಬ್ಯಾನರ್ಜಿ ಅಂತಹ ದಿಗ್ಗಜ ರಾಜಕಾರಣಿಗಳ ಜೀವನ ಆಧಾರಿತ ಚಿತ್ರಗಳು ತಯಾರಾಗುತ್ತಿದೆ. ಇದೀಗ, ಬಿಎಸ್ಪಿ ಪಕ್ಷದ ನಾಯಕಿ ಮಾಯಾವತಿ ಬಯೋಪಿಕ್ ಬರಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರ ಜೀವನವನ್ನ ಆದಷ್ಟೂ ಬೇಗ ಬೆಳ್ಳಿತೆರೆ ಮೇಲೆ ಬರಲಿದೆ ಎಂಬ ಮಾತು ಈಗ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದೆ. ನಿರ್ದೇಶಕ ಸುಭಾಷ್ ಕಪೂರ್ ಈ ಚಿತ್ರವನ್ನ ನಿರ್ದೇಶಿಸಿಲಿದ್ದು, ಮಾಯಾವತಿ ಪಾತ್ರಕ್ಕಾಗಿ ವಿದ್ಯಾಬಾಲನ್ ಅವರನ್ನ ಆಯ್ಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೋದಿ ಚಿತ್ರದ ಹಿಂದೆಯೇ ಬರ್ತಿವೆ ಮತ್ತಷ್ಟು ರಾಜಕಾರಣಿಗಳ ಬಯೋಪಿಕ್

ಆದ್ರೆ, ಈ ಬಗ್ಗೆ ನಿರ್ದೇಶಕ ಆಗಲಿ ಅಥವಾ ಮಾಯಾವತಿ ಆಗಲಿ ಖಚಿತಪಡಿಸಿಲ್ಲ. ಇಂತಹದೊಂದು ಯೋಜನೆ ಸದ್ದಿಲ್ಲದೇ ನಡೆಯುತ್ತಿದ್ದು, ಎಲ್ಲವೂ ಓಕೆ ಆದ್ಮೇಲೆ ಘೋಷಣೆ ಮಾಡಲಿದ್ದಾರಂತೆ.

ಈಗಷ್ಟೇ ಎನ್.ಟಿ.ಆರ್ ಕಥಾನಾಯಕಡು, ಹಾಗೂ ಮಹಾನಾಯಕಡು ಚಿತ್ರದಲ್ಲಿ ನಟಿಸಿದ್ದು, ವಿದ್ಯಾಬಾಲನ್ ಈಗ ವೆಬ್ ಸೀರಿಸ್ ವೊಂದರಲ್ಲಿ ಮಾಜಿ ಪ್ರಧಾನಿ ಇಂದಿರಗಾಂಧಿ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಮೋದಿ ಟ್ರೇಲರ್ ನೋಡಿ ಚೀಪ್ ಟ್ರಿಕ್ ಎಂದ ನಟ ಸಿದ್ಧಾರ್ಥ್

ಮಾಯಾವತಿ ಅಂದ್ರೆ ರಾಷ್ಟ್ರರಾಜಕಾರಣದಲ್ಲಿ ದೊಡ್ಡ ಹೆಸರು. ಸದ್ಯ ಮುಂದಿನ ಪ್ರಧಾನಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ಮಾಯಾವತಿ, ತಮ್ಮ ಜೀವನದಲ್ಲಿ ಅನೇಕ ಏಳು ಬೀಳುಗಳನ್ನ ಕಂಡಿದ್ದಾರೆ. ಒಂದು ವೇಳೆ ಬಯೋಪಿಕ್ ಸಿನಿಮಾ ಆಗುವುದಾರೇ ಯಾವೆಲ್ಲ ಅಂಶಗಳನ್ನ ಈ ಸಿನಿಮಾದಲ್ಲಿ ತೋರಿಸಲಾಗುತ್ತೆ ಎಂಬುದು ಸದ್ಯದ ಪ್ರಶ್ನೆಯಾಗಿದೆ.

   
 
ಹೆಲ್ತ್