Back
Home » ಗಾಸಿಪ್
'ವೀಕೆಂಡ್ ವಿತ್ ರಮೇಶ್'ಗೆ ಅತಿಥಿಯಾದ ದೊಡ್ಮನೆ ಮಗ ರಾಘಣ್ಣ.?
Oneindia | 2nd Apr, 2019 01:44 PM
 • ಸಾಧಕರ ಸೀಟಿನಲ್ಲಿ ರಾಘಣ್ಣ

  ಶಿವರಾಜ್ ಕುಮಾರ್, ಪುನೀತ ರಾಜ್ ಕುಮಾರ್ ಬಳಿಕ ಈಗ ರಾಘವೇಂದ್ರ ರಾಜ್ ಕುಮಾರ್ ವೀಕೆಂಡ್ ವಿತ್ ರಮೇಶ್ ಸಾಧಕರ ಸೀಟಿನಲ್ಲಿ ಕೂರಲಿದ್ದಾರಂತೆ. ಈಗಾಗಲೇ ರಾಘಣ್ಣ ಅವರ ಎಪಿಸೋಡ್ 50ರಷ್ಟು ಭಾಗ ಚಿತ್ರೀಕರಣವಾಗಿದೆ ಎನ್ನಲಾಗಿದೆ.

  ವೀಕೆಂಡ್ ವಿತ್ ರಮೇಶ್-4 ಮೊದಲ ಅತಿಥಿಯ ಹೆಸರು ಬಹಿರಂಗ.!


 • ಅಣ್ಣಾವ್ರ ಹುಟ್ಟುಹಬ್ಬಕ್ಕೆ ಪ್ರಸಾರ

  ಡಾ ರಾಜ್ ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಘವೇಂದ್ರ ರಾಜ್ ಕುಮಾರ್ ಅವರ ಎಪಿಸೋಡ್ ಪ್ರಸಾರ ಮಾಡಬೇಕು ಎಂಬ ನಿರ್ಧಾರ ಮಾಡಿದ್ದು, ಅದಕ್ಕೆ ತಕ್ಕಂತೆ ಕಾರ್ಯಕ್ರಮವನ್ನ ರೆಡಿ ಮಾಡಲಾಗುತ್ತಿದೆ ಎಂದು ರಾಘಣ್ಣನ ಆಪ್ತ ಮೂಲಗಳು ತಿಳಿಸಿವೆ.


 • ಇದೇ ತಿಂಗಳು ಆರಂಭವಾಗಬಹುದು

  ಹಾಗ್ನೋಡಿದ್ರೆ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಇದೇ ತಿಂಗಳು ಆರಂಭವಾಗಬಹುದು ಎಂಬ ಸುಳಿವು ಸಿಗುತ್ತಿದೆ. ಒಂದು ವೇಳೆ ಡಾ ರಾಜ್ ಹುಟ್ಟುಹಬ್ಬದ ಪ್ರಯುಕ್ತ ರಾಘಣ್ಣ ಎಪಿಸೋಡ್ ಪ್ರಸಾರ ಮಾಡುವುದಾರೇ, ಇನ್ನು ಮೂರು ವಾರ ಮಾತ್ರ ಬಾಕಿ ಇದೆ. ಅಷ್ಟರೊಳಗೆ ಲಾಂಚ್ ಆಗಬಹುದು.

  'ವೀಕೆಂಡ್ ವಿತ್ ರಮೇಶ್' ತಂಡಕ್ಕೆ ಹ್ಯಾಟ್ಸ್ ಆಫ್ ಹೇಳಿದ ಸಾಧಕರು


 • ಮೊದಲ ಅತಿಥಿ ಇವರೇ

  ಅಂದ್ಹಾಗೆ, ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿಯ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಭಾಗಿಯಾಗಲಿದ್ದಾರೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಇದೇ ತಿಂಗಳು ಈ ಸಂಚಿಕೆ ಪ್ರಸಾರವಾಗಲಿದೆಯಂತೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಆವೃತ್ತಿಯಲ್ಲಿ ಮೊದಲ ಅತಿಥಿಯಾಗಿದ್ದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಈ ಎಪಿಸೋಡ್ ಗೆ ಭಾರಿ ಮೆಚ್ಚುಗೆ ಸಿಕ್ಕಿತ್ತು. ಅಂದು ದೊಡ್ಮನೆಯ ಎಲ್ಲಾ ಸದಸ್ಯರು ಅಪ್ಪು ಬಗ್ಗೆ ಹೇಳಿದ ಅಪರೂಪದ ಕಥೆಗಳು ಅಭಿಮಾನಿಗಳಿಗೆ ಇಷ್ಟವಾಗಿತ್ತು. ಸ್ವತಃ ಪಾರ್ವತಮ್ಮ ರಾಜ್ ಕುಮಾರ್ ಈ ಶೋನಲ್ಲಿ ಭಾಗವಹಿಸಿದ್ದರು.

ಅದೇ ಆವೃತ್ತಿಯಲ್ಲಿ ನಟ ಶಿವರಾಜ್ ಕುಮಾರ್ ಅವರು ಎಪಿಸೋಡ್ ಕೂಡ ಪ್ರಸಾರವಾಗಿತ್ತು. ಡಾ ರಾಜ್ ಅವರ ಇಬ್ಬರು ಪುತ್ರರನ್ನ ವೀಕೆಂಡ್ ಸಾಧಕರ ಸೀಟಿನಲ್ಲಿ ಕೂರಿಸಿ ಅನೇಕ ವಿಷ್ಯಗಳ ಬಗ್ಗೆ ಜನರಿಗೆ ತಿಳಿಸಿಕೊಡಲಾಗಿತ್ತು.

ಕೊನೆಗೂ 'ವೀಕೆಂಡ್ ವಿತ್ ರಮೇಶ್-3'ಗೆ 'ಇವರೆಲ್ಲ' ಬರಲೇ ಇಲ್ಲ.!

ಇದೀಗ, ವೀಕೆಂಡ್ ವಿತ್ ರಮೇಶ್ ನಾಲ್ಕನೇ ಆವೃತ್ತಿ ಬರ್ತಿದೆ. ಈಗಾಗಲೇ ಈ ಕಾರ್ಯಕ್ರಮದ ಪೂರ್ವ ತಯಾರಿ ನಡೆಯುತ್ತಿದ್ದು, ಕೆಲವು ಎಪಿಸೋಡ್ ಗಳು ಕೂಡ ರೆಕಾರ್ಡ್ ಆಗಿದೆ ಎನ್ನಲಾಗಿದೆ. ವಿಶೇಷ ಅಂದ್ರೆ, ಹೊಸ ಆವೃತ್ತಿಯಲ್ಲಿ ಮತ್ತೊಬ್ಬ ದೊಡ್ಮನೆ ಹುಡ್ಗ ಸಾಧಕರ ಸೀಟನ್ನ ಅಲಂಕರಿಸಲಿದ್ದಾರೆ. ಯಾರದು? ಮುಂದೆ ಓದಿ.....

   
 
ಹೆಲ್ತ್