Back
Home » ಬಾಲಿವುಡ್
ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದ ನಟ ಇರ್ಫಾನ್ ಖಾನ್
Oneindia | 3rd Apr, 2019 05:11 PM

ಬಾಲಿವುಡ್ ನ ಖ್ಯಾತ ನಟ ಇರ್ಫಾನ್ ಖಾನ್ ಅನಾರೋಗ್ಯದ ಕಾರಣ ಸುಮಾರು ಒಂದು ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ತೀರ ಅಪರೂಪದ ನ್ಯೂರೋಎಂಡೋಕ್ರೈನ್ ಕಾಯಿಲೆ ಯಿಂದ ಬಳಲುತ್ತಿದ್ದ ಇರ್ಫಾನ್ ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಯ ನಂತರ ಗುಣಮುಖರಾಗಿ ಭಾರತಕ್ಕೆ ಮರಳಿರುವ ಇರ್ಫಾನ್ ಮತ್ತೆ ಬಣ್ಣ ಹಚ್ಚಲು ಸಿದ್ಧವಾಗಿದ್ದಾರೆ.

ಮತ್ತೆ ಬಾಲಿವುಡ್ ಗೆ ಮರಳುತ್ತಿದ್ದಂತೆ ಇರ್ಫಾನ್ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ. 'ಗೆಲುವಿನ ಅನ್ವೇಷಣೆಯಲ್ಲಿ ನಾವು ಎಷ್ಟು ಪ್ರೀತಿಸುತ್ತೇವೆ ಎನ್ನುವುದನ್ನೆ ಮರೆತುಬಿಡುತ್ತೇವೆ. ತಮ್ಮ ದುರ್ಬಲತೆಯನ್ನು ನೆನಪಿಸಿಕೊಳ್ಳುತ್ತೇವೆ. ನನ್ನ ಜೀವನದಲ್ಲಿ ಅಪಾರ ಪ್ರೀತಿ ಮತ್ತು ಬೆಂಬಲವನ್ನು ನೀಡಿದ ಎಲ್ಲರಿಗೂ ನಾನು ಕೃತಜ್ಞರಾಗಿರಲು ಬಯಸುತ್ತೇನೆ. ಈ ಸಮಯದಲ್ಲಿ ನನ್ನನ್ನು ಬೆಂಬಲಿಸಿದ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು' ಎಂದು ಪ್ರೀತಿಸುವ ಅಭಿಮಾನಿಗಳಿಗೆ ಹೇಳಿದ್ದಾರೆ.

ನ್ಯೂರೋಎಂಡೋಕ್ರೈನ್ ಟ್ಯೂಮರ್ ವಿರುದ್ಧ ಗೆದ್ದು ಬಂದ ಇರ್ಫಾನ್: ಹೊಸ ಸಿನಿಮಾ ಅನೌನ್ಸ್

ಇರ್ಫಾನ್ ಖಾನ್ ಈ ಪತ್ರಕ್ಕೆ ಬಾಲಿವುಡ್ ನ ಸಾಕಷ್ಟು ಕಲಾವಿದರು ಪ್ರತಿಕ್ರಿಯೆ ನೀಡಿದ್ದಾರೆ. ಇರ್ಫಾನ್ ಖಾನ್ ಮತ್ತೆ ಬಣ್ಣ ಹಚ್ಚುತ್ತಿರುವ ವಿಷಯ ಅಭಿಮಾನಿಗಳಿಗೆ ಮಾತ್ರವಲ್ಲದೇ ಬಾಲಿವುಡ್ ನ ನಟ-ನಟಿಯರೂ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

ಇರ್ಫಾನ್ ಈ ಹಿಂದೆ ನ್ಯೂರೋಎಂಡೋಕ್ರೈನ್ ಖಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಅಭಿಮಾನಿಗಳಿಗೆ ತಿಳಿಸಿ ಲಂಡನ್ ಗೆ ತೆರಳಿದ್ದರು. ಆ ನಂತರ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಅಪ್ ಡೇಟ್ ನೀಡಿರಲಿಲ್ಲ. ಈಗ ಮರಳಿ ಬಂದಿರುವ ಬಗ್ಗೆ ಎಲ್ಲರೊಂದಿಗೆ ಸಂತಸ ಹಂಚಿಕೊಂಡಿರುವ ಇರ್ಫಾನ್ ಸದ್ಯ ಹಿಂದಿ ಮೀಡಿಯಂ-2 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಕರೀನಾ ಕಪೂರ್ ಖಾನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

   
 
ಹೆಲ್ತ್