Back
Home » ಗಾಸಿಪ್
ದುಬೈ ಉದ್ಯಮಿ ಬಿಆರ್ ಶೆಟ್ಟಿಯ 1000 ಕೋಟಿ ಸಿನಿಮಾ ನಿಲ್ಲಲು ಕಾರಣ ಇಲ್ಲಿದೆ
Oneindia | 5th Apr, 2019 10:01 AM
 • ಭಿನ್ನಾಭಿಪ್ರಾಯ ಕಾರಣವಂತೆ

  ಸ್ವತಃ ನಿರ್ಮಾಪಕ ಬಿಆರ್ ಶೆಟ್ಟಿ ಹೇಳಿರುವ ಪ್ರಕಾರ, ''ನಿರ್ದೇಶಕ ಶ್ರೀಕುಮಾರ್ ಮತ್ತು ಬರಹಗಾರ ವಾಸುದೇವನ್ ನಾಯರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸದ್ಯಕ್ಕೆ ಒಳ್ಳೆಯ ಸ್ಕ್ರಿಪ್ಟ್ ರೈಟರ್ ಗಾಗಿ ಹುಡುಕುತ್ತಿದ್ದೇವೆ. ಸದ್ಯಕ್ಕೆ ಈ ಪ್ರಾಜೆಕ್ಟ್ ಸ್ಥಗಿತವಾಗಿದೆ. ಸಮಯ ತೆಗೆದುಕೊಂಡರು ಪರವಾಗಿಲ್ಲ, ಮುಂದಿನ ದಿನದಲ್ಲಿ ಈ ಸಿನಿಮಾ ಶುರು ಮಾಡ್ತೀವಿ'' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


 • ಸಿನಿಮಾ ಫೈನಲ್ ಆಗಿಲ್ಲ

  ಮತ್ತೊಂದೆಡೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಈ ಚಿತ್ರದಲ್ಲಿ ಮುಖ್ಯ ಪಾತ್ರ ನಿಭಾಯಿಸುತ್ತಾರೆ ಎನ್ನಲಾಗಿತ್ತು. ಮೋಷನ್ ಪೋಸ್ಟರ್ ಕೂಡ ವೈರಲ್ ಆಗಿತ್ತು. ಆದ್ರೆ, ಈ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ''ಸದ್ಯಕ್ಕೆ ಈ ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ನನಗೆ ಗೊತ್ತಿಲ್ಲ. ಈ ಸಿನಿಮಾ ಬಗ್ಗೆಯೂ ಅಂತಿಮವಾಗಿಲ್ಲ. ಹಾಗೇನಾದರೂ ಫೈನಲ್ ಆದ್ರೆ ನಾನೇ ಹೇಳುತ್ತೇನೆ'' ಎಂದಿದ್ದಾರೆ. ಭೀಮನ ಪಾತ್ರದಲ್ಲಿ ಮೋಹನ್ ಲಾಲ್ ನಟಿಸುತ್ತಿದ್ದಾರೆ ಎನ್ನಲಾಗಿದೆ.

  1000 ಕೋಟಿಯ 'ಮಹಾಭಾರತ'ಕ್ಕೆ ಅಮೀರ್ ಖಾನ್ ಹಾಕಿದ್ರು ಬ್ರೇಕ್.!


 • ದೊಡ್ಡ ಕಲಾವಿದರನ್ನ ಕರೆತರುವ ಕಸರತ್ತು

  ಅಂದ್ಹಾಗೆ, ಈ ಸಿನಿಮಾ ಬಹುಭಾಷೆಯಲ್ಲಿ ಮಾಡಬೇಕೆಂದುಕೊಂಡಿದ್ದ ಕಾರಣ, ಆಯಾ ಭಾಷೆಯ ದೊಡ್ಡ ಕಲಾವಿದರನ್ನ ಈ ಚಿತ್ರಕ್ಕಾಗಿ ಕರೆತರುವ ಯೋಚನೆಯೂ ಇತ್ತು. ಅದನ್ನ ಸ್ವತಃ ನಿರ್ಮಾಪಕರೇ ಹೇಳಿಕೊಂಡಿದ್ದರು. ರಾಮ್ ಚರಣ್ ತೇಜ, ಪ್ರಭಾಸ್, ಅಮಿತಾಬ್ ಬಚ್ಚನ್, ರಜನಿಕಾಂತ್, ವಿಕ್ರಂ ಅಂತವರ ಹೆಸರುಗಳು ಕೇಳಿ ಬಂದಿದ್ದವು.


 • ಅಮೀರ್ ಖಾನ್ ಮಾಡ್ತೀನಿ ಅಂದಿದ್ರು

  ದುಬೈ ಮೂಲದ ಉದ್ಯಮಿಯ ಚಿತ್ರ ಒಂದು ಕಡೆಯಾದ್ರೆ, ಇನ್ನೊಂದು ಕಡೆ ಅಮೀರ್ ಖಾನ್ ಕೂಡ 1000 ಕೋಟಿ ಬಜೆಟ್ ನಲ್ಲಿ ಮಹಾಭಾರತ ಸಿನಿಮಾ ಮಾಡ್ತೀನಿ ಎಂದಿದ್ದರು. ಆದ್ರೆ, ಆ ಚಿತ್ರವೂ ಸೆಟ್ಟೇರುವ ಸಾಧ್ಯತೆ ಇಲ್ಲ. ಸ್ಕ್ರಿಪ್ಟ್ ಕೆಲಸಕ್ಕೂ ಚಾಲನೆ ನೀಡಿದ್ದ ಅಮೀರ್ ಖಾನ್ ಅಂತಿಮವಾಗಿ ಬಜೆಟ್ ಕಾರಣದಿಂದ ಈ ಸಿನಿಮಾ ಕೈಬಿಟ್ಟರು ಎನ್ನಲಾಗಿದೆ.
ಬಾಹುಬಲಿ ಚಿತ್ರದ ನಂತರ ದಕ್ಷಿಣ ಭಾರತದಲ್ಲೊಂದು 1000 ಕೋಟಿ ಬಜೆಟ್ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ ಎಂಬ ಸುದ್ದಿ ಸದ್ದು ಮಾಡಿತ್ತು. ದುಬೈ ಮೂಲದ ಉದ್ಯಮಿ ಬಿಆರ್ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹಾಕಲು ಮುಂದಾಗಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಸ್ನೇಹಿತರಾಗಿದ್ದ ಬಿಆರ್ ಶೆಟ್ಟಿ, ಅಂಬಿ ಜೊತೆ ಕೂಡ ಕಾಣಿಸಿಕೊಂಡಿದ್ದರು. ಸ್ವತಃ ಅಂಬರೀಶ್ ಅವರೇ ಹೇಳಿದ್ದರು, ಶೆಟ್ಟಿ 1000 ಕೋಟಿ ಸಿನಿಮಾ ಮಾಡ್ತಿದ್ದಾರೆ ಅಂತ.

ಸಿನಿಮಾ ಕೂಡ ಅಧಿಕೃತವಾಗಿ ಆರಂಭವಾಗಿತ್ತು. ಮಲಯಾಳಂನ ಖ್ಯಾತ ಬರಹಗಾರರ ವಾಸುದೇವನ್ ನಾಯರ್ ಬರೆದಿದ್ದ 'ರಾಂಡಪೂಜಮ್' ಪುಸ್ತಕವನ್ನ ಆಧಾರವಾಗಿಟ್ಟುಕೊಂಡು, ಮಹಾಭಾರತ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಸಲಾಗಿತ್ತು.

1000 ಕೋಟಿ ಬಜೆಟ್ 'ಮಹಾಭಾರತ' ಚಿತ್ರದಲ್ಲಿ ಆಮೀರ್ ಖಾನ್ ಪಾತ್ರವೇನು.?

ಮಲಯಾಳಂ, ತಮಿಳು, ತೆಲುಗು, ಹಿಂದಿ, ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಪ್ಲಾನ್ ಮಾಡಿ, ಬೇರೆ ದೇಶದ ಭಾಷೆಗಳಿಗೂ ಡಬ್ ಮಾಡಲಾಗುತ್ತಿದೆ ಎಂದಿದ್ದರು. ಈ ಚಿತ್ರದ ಬಗ್ಗೆ ಭಾರತೀಯ ಅಭಿಮಾನಿಗಳು ಮಹಾದಾಸೆಯನ್ನ ಇಟ್ಟುಕೊಂಡಿದ್ದರು. ಆದ್ರೀಗ, ಈ ಸಿನಿಮಾ ಆಗುತ್ತಿಲ್ಲ. ಪ್ರಾಜೆಕ್ಟ್ ನಿಂತು ಹೋಗಿದೆ ಎಂದು ಸ್ವತಃ ನಿರ್ಮಾಪಕರೇ ಹೇಳಿದ್ದಾರೆ. ಕಾರಣವೇನು? ಮುಂದೆ ಓದಿ.....

   
 
ಹೆಲ್ತ್