Back
Home » ಬಾಲಿವುಡ್
ಚೀನಾದಲ್ಲಿ ಬಿಡುಗಡೆಯಾಗುತ್ತಿದೆ ಶ್ರೀದೇವಿ ಕೊನೆಯ ಸಿನಿಮಾ
Oneindia | 4th Apr, 2019 01:03 PM

ಬಾಲಿವುಡ್ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ನಟನೆಯ ಕೊನೆಯ ಸಿನಿಮಾ ಈಗ ಚೀನಾದಲ್ಲಿ ಬಿಡುಗಡೆಯಾಗುತ್ತಿದೆ. 'ಮಾಮ್' ಸಿನಿಮಾವನ್ನು ತಾಯಂದಿರ ದಿನದ ವಿಶೇಷವಾಗಿ ರಿಲೀಸ್ ಮಾಡಲಾಗುತ್ತಿದೆ.

ಮೇ 10 ರಂದು ಚೀನಾದಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಚಿತ್ರವನ್ನು ಎಲ್ಲ ತಾಯಂದಿರಿಗೆ ಅರ್ಪಣೆ ಮಾಡಲಾಗುತ್ತಿದೆ. ಭಾರತ ನಂತರ ಚೀನಾ ಪ್ರೇಕ್ಷಕರ ಮುಂದೆ ಈ ಸಿನಿಮಾ ಬಂದಿದೆ. ಚೀನಾ ಭಾಷೆಯ ಪೋಸ್ಟರ್ ಕೂಡ ಹೊರಬಂದಿದೆ. ಜೀ ಸ್ಟೂಡಿಯೊ ಚಿತ್ರವನ್ನು ರಿಲೀಸ್ ಮಾಡುತ್ತಿದೆ.

ಬಾಲಿವುಡ್ ನಲ್ಲಿ 'ಮಾಮ್' ಆಗಿ ಶ್ರೀದೇವಿ ಫಸ್ಟ್ ಲುಕ್ ಹೇಗಿದೆ ನೋಡಿದ್ರಾ?

'ಮಾಮ್' ಒಂದು ಕ್ರೈಮ್ ಥಿಲ್ಲರ್ ಸಿನಿಮಾ ಆಗಿತ್ತು. ರವಿ ಉದ್ಯಾವರ್ ನಿರ್ದೆಶನ ಮಾಡಿದ್ದರು. ಎ ಆರ್ ರೆಹಮಾನ್ ಸಿನಿಮಾಗೆ ಸಂಗೀತ ನೀಡಿದ್ದರು. ಬಾಕ್ಸ್ ಆಫೀಸ್ ನಲ್ಲಿ ಚಿತ್ರ 650 ಗಳಿಕೆ ಮಾಡಿತ್ತು.

'ಮಾಮ್' ಶ್ರೀದೇವಿಯವರ 300ನೇ ಸಿನಿಮಾ ಆಗಿದ್ದು, ಅದೇ ಅವರ ಕೊನೆಯ ಸಿನಿಮಾ ಆಗುವ ಹಾಗೆ ಆಯಿತು. ಭಾರತದಲ್ಲಿ ಈ ಸಿನಿಮಾ ಜುಲೈ 7 ರಂದು ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

   
 
ಹೆಲ್ತ್