Back
Home » ಬಾಲಿವುಡ್
ಮತ್ತೆ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಮರಳಿದ ಐಶ್ವರ್ಯ ರೈ
Oneindia | 4th Apr, 2019 06:02 PM

ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಮತ್ತೆ ದಕ್ಷಿಣ ಭಾರತೀಯ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಬಾಲಿವುಡ್ ನಲ್ಲಿ 'ಫೆನ್ನಿ ಖಾನ್' ಚಿತ್ರದ ನಂತರ ಐಶ್ ಮತ್ತೆ ಬಣ್ಣ ಹಚ್ಚಿರಲಿಲ್ಲ. ಆದ್ರೀಗ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.

ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಚಿತ್ರದಲ್ಲಿ ಐಶ್ವರ್ಯ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಇದಕ್ಕಿದ್ದಂತೆ ಭಾವುಕರಾಗಿ ಕಣ್ಣೀರಿಟ್ಟ ನಟಿ ಐಶ್ವರ್ಯ ರೈ: ಕಾರಣ ಏನು.?

ಅಂದ್ಹಾಗೆ 'ಪೊನ್ನಿಯಿನ್ ಸೆಲ್ವನ್' ಐತಿಹಾಸಿಕ ಸಿನಿಮಾವಾಗಿದ್ದು, ಈ ಚಿತ್ರದಲ್ಲಿ ದೊಡ್ಡ ತಾರಾಬಳಗ ಇರಲಿದೆಯಂತೆ. ಚಿಯಾನ್ ವಿಕ್ರಮ್, ಮೋಹನ್ ಬಾಬು, ಕಾರ್ತಿಕ್ ಮತ್ತು ಜಯಂ ರವಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ ಎನ್ನಲಾಗಿದೆ. ಇನ್ನು'ಮಹಾನಟಿ' ಖ್ಯಾತಿಯ ನಟಿ ಕೀರ್ತಿ ಸುರೇಶ್ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನು ಐಶ್ವರ್ಯ ರೈ ಮತ್ತು ಮಣಿರತ್ನಂ ಗೆಳೆತನ ನಿನ್ನೆ ಮೊನ್ನೆಯದಲ್ಲ. ಐಶ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಮಣಿರತ್ನಂ ಸಿನಿಮಾ ಮೂಲಕ. 1997 ರಲ್ಲಿ ಮಣಿರತ್ನಂ ನಿರ್ದೇಶನದ 'ಇರುವನ್' ಚಿತ್ರದಲ್ಲಿ ನಾಯಕಿಯಾಗಿ ಮಿಂಚುವ ಮೂಲಕ ಮಾಜಿ ವಿಶ್ವ ಸುಂದರಿಯ ಸಿನಿಪಯಣ ಪ್ರಾರಂಭವಾಗಿತ್ತು. ಆ ನಂತರ ಮಣಿರತ್ನಂ ನಿರ್ದೇಶನದ 'ಗುರು' ಮತ್ತು 'ರಾವಣ್' ಸಿನಿಮಾಗಳಲ್ಲಿ ಐಶ್ವರ್ಯ ಕಾಣಿಸಿಕೊಂಡಿದ್ದರು.

ಅಯ್ಯಯ್ಯೋ... ಐಶ್ವರ್ಯ ರೈ ಬಚ್ಚನ್ ಸಂಭಾವನೆಗೂ ಕತ್ರಿ ಬಿತ್ತು.!

ಈಗ ಮತ್ತೆ 9 ವರ್ಷಗಳ ಬಳಿಕ ಐಶ್ ಅವರನ್ನು ತಮಿಳು ಚಿತ್ರರಂಗಕ್ಕೆ ಕರೆತರುವ ಪ್ಲಾನ್ ಮಾಡಿದ್ದಾರೆ. ವಿಶೇಷ ಅಂದ್ರೆ ಇದೇ ಚಿತ್ರದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನುವುದು ಚರ್ಚೆಯಾಗುತ್ತಿದೆ. ಆದ್ರೆ ಯಾವುದು ಸಹ ಅಧಿಕೃತವಾಗಿಲ್ಲ.

   
 
ಹೆಲ್ತ್