Back
Home » ಆರೋಗ್ಯ
ವಿಭಿನ್ನ ಬಗೆಯ ಕಲರ್-ಕಲರ್ ದೊಣ್ಣೆ ಮೆಣಸು ಹಾಗೂ ಅವುಗಳ ಆರೋಗ್ಯಕಾರಿ ಪ್ರಯೋಜನಗಳು
Boldsky | 5th Apr, 2019 02:24 PM
 • ಹಸಿರು ದೊಣ್ಣೆಮೆಣಸು

  ಆಹಾರತಜ್ಞರ ಪ್ರಕಾರ, ಇವು ಕೇವಲ ಗಾತ್ರ ಪಡೆದ ಎಳೆಯ ದೊಣ್ಣೆಮೆಣಸು ಆಗಿದ್ದು ಇನ್ನೂ ಎಳೆಯದಾಗಿರುತ್ತವೆ. ಬಲಿತ ಬಳಿಕ ಗಾಢ ಹಸಿರು ಬಣ್ಣ ಹಳದಿ ಬಣ್ಣಕ್ಕೆ ತಿರುಗತೊಡಗುತ್ತದೆ ಹಾಗೂ ಕಡೆಯದಾಗಿ ಕೆಂಪು ಬಣ್ಣ ಪಡೆಯುತ್ತವೆ. ಕೆಂಪು ಬಣ್ಣ ಪಡೆದಾಗ ಇದರ ಬೀಜಗಳು ಮೊಳೆಯುವ ಸಾಮರ್ಥ್ಯ ಪಡೆದುಕೊಳ್ಳುತ್ತವೆ. ರುಚಿಯನ್ನು ಪರಿಗಣಿಸಿದರೆ ಹಸಿರು ದೊಣ್ಣೆಮೆಣಸು ಕೊಂಚ ಕಹಿಯಾಗಿದ್ದು ಗರಿಮುರಿಯಾಗಿರುತ್ತವೆ. ಇವುಗಳಿಗೆ ಹಳದಿ ಕಿತ್ತಳೆ ಅಥವಾ ಕೆಂಪು ದೊಣ್ಣೆಮೆಣಸಿನ ರುಚಿ ಬರಲು ಸಾಧ್ಯವಿಲ್ಲ.


 • ಹಳದಿ ದೊಣ್ಣೆಮೆಣಸು

  ಹಸಿರು ದೊಣ್ಣೆಮೆಣಸು ಬಲಿಯಲು ತೊಡಗಿದ ಬಳಿಕ ಹಳದಿ ಬಣ್ಣ ಪಡೆಯುತ್ತವೆ. ಇವುಗಳ ರುಚಿ ಮೆಣಸಿಗಿಂತಲೂ ಹಣ್ಣಿನಂತೆ ಇರುತ್ತದೆ ಆದರೆ ಕೆಂಪು ಮತ್ತು ಕಿತ್ತಳೆ ದೊಣ್ಣೆಮೆಣಸಿಗಿಂತ ಕಡಿಮೆ. ಇದೇ ಕಾರಣಕ್ಕೆ ಈ ದೊಣ್ಣೆಮೆಣಸನ್ನು ಪ್ಯಾನ್ ಏಶಿಯನ್ ಅಡುಗೆಗಳಲ್ಲಿ ಹುರಿಯಲು ಮತ್ತು ಗ್ರಿಲ್ ಮಾಡಲು ಬಳಸಲಾಗುತ್ತದೆ. ಇತರೆಡೆಗಳಲ್ಲಿ ಇವು ಖಾದ್ಯಗಳಿಗೆ ನವಿರಾದ ಸಿಹಿಯನ್ನು ಪಡೆಯಲು ಬಳಸಲಾಗುತ್ತದೆ ಹಾಗೂ ಊಟದ ಬಳಿಕ ಸೇವಿಸುವ ಹಣ್ಣಿನ ರೂಪದಲ್ಲಿಯೂ ಸೇವಿಸಲಾಗುತ್ತದೆ.


 • ಕೆಂಪು ದೊಣ್ಣೆಮೆಣಸು

  ಇವು ಪೂರ್ಣ ಬಲಿತ ದೊಣ್ಣೆಮೆಣಸುಗಳಾಗಿದ್ದು ಗರಿಷ್ಟ ಸಿಹಿಯನ್ನು ಪಡೆದು ಪ್ರಖರ ಕೆಂಪು ಬಣ್ಣವನ್ನು ಪಡೆಯುತ್ತವೆ,. ಇವುಗಳಲ್ಲಿ ಕ್ಯಾರೋಟಿನಾಯ್ಡ್ ಮತ್ತು ಫೈಟೋನ್ರೂಟ್ರಿಯೆಂಟ್ ಹಾಗೂ ವಿಟಮಿನ್ ಸಿ ಸಮೃದ್ಧವಾಗಿರುತ್ತವೆ ಹಾಗೂ ಹಸಿರು ದೊಣ್ಣೆಮೆಣಸಿಗೆ ಹೋಲಿಸಿದರೆ ಇವುಗಳಲ್ಲಿ ಬೀಟಾ ಕ್ಯಾರೋಟೀನ್ ಹನ್ನೊಂದು ಪಟ್ಟು ಹೆಚ್ಚಿರುತ್ತದೆ. ಇವುಗಳನ್ನು ಸಾಲಾಡ್ ರೂಫದಲ್ಲಿ ಹಾಗೂ ಗ್ರಿಲ್ ಮತ್ತು ಹುರಿದ ರೂಪದಲ್ಲಿ ಇತರ ಖಾದ್ಯಗಳನ್ನು ಅಲಂಕರಿಸಲೂ ಬಳಸಲಾಗುತ್ತದೆ.

  Most Read: ಸ್ವಾದದ ಘಮಲನ್ನು ಹೆಚ್ಚಿಸುವ ಕ್ಯಾಪ್ಸಿಕಂ ಚಿಲ್ಲಿ ರೆಸಿಪಿ!


 • ಕಿತ್ತಳೆ ಬಣ್ಣದ ದೊಣ್ಣೆಮೆಣಸು

  ಇವುಗಳು ಸಿಹಿಯಾಗಿದ್ದರೂ ಕೆಂಪು ದೊಣ್ಣೆಮೆಣಸಿಗಿಂತ ಕೊಂಚ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ಇವುಗಳನ್ನು ಹಸಿಯಾಗಿ ಸೇವಿಸುವ ಸಾಲಾಡ್ ರೂಫದಲ್ಲಿ ಅಥವಾ ಏಶಿಯನ್ ಅಡುಗೆಗಳಲ್ಲಿ ಹುರಿದು ಇತರ ಖಾದ್ಯಗಳೊಡನೆ ಬೆರೆಸಿ ಸೇವಿಸಲಾಗುತ್ತದೆ.


 • ದೊಣ್ಣೆಮೆಣಸಿನ ಆರೋಗ್ಯಕರ ಪ್ರಯೋಜನಗಳು

  ಅಧ್ಯಯನಗಳ ಪ್ರಕಾರ, ದೊಣ್ಣೆಮೆಣಸು ಹೃದಯ ಮತ್ತು ರಕ್ತಪರಿಚಲನೆ ವ್ಯವಸ್ಥೆಗಳ ಕಾಯಿಲೆಯಿಂದ ರಕ್ಷಿಸುತ್ತದೆ. ಇವುಗಳು ನರಗಳನ್ನು ಸಡಿಲಿಸುವ ಹಾಗೂ ದೇಹವನ್ನು ಬೆಚ್ಚಗಾಗಿಸುವ ಗುಣ ಹೊಂದಿವೆ. ಅಲ್ಲದೇ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಫೈಟೋಕೆಮಿಕಲ್ಸ್ ಅಥವಾ ಹೋರಾಡುವ ರಾಸಾಯನಿಕಗಳನ್ನು ದೇಹವಿಡೇ ಪಸರಿಸಲು ನೆರವಾಗುತ್ತವೆ. ತನ್ಮೂಲಕ ಡಿ ಎನ್ ಎ ಘಾಸಿಯಿಂದ ಅಂಗಾಂಶಗಳಿಗಾಗುವ ಘಾಸಿಯಿಂದ ರಕ್ಷಿಸುತ್ತದೆ ಹಾಗೂ ಈಗಾಗಲೇ ಆಗಿರುವ ಘಾಸಿಯನ್ನು ಸರಿಪಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಗುಣ ಘಾಸಿಕೊಂಡ ಮೆದುಳಿನ ಜೀವಕೋಶಗಳನ್ನು ಮತ್ತೆ ಸರಿಪಡಿಸುವಲ್ಲಿ ನೆರವಾಗುತ್ತವೆ ಹಾಗೂ ಉತ್ಕರ್ಷಣಶೀಲ ಒತ್ತಡದ ಸಾಧ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೇ ಮಕ್ಕಳಿಗೆ ಎದುರಾಗುವ ಅಸ್ತಮಾ ಹಾಗೂ ಕ್ಯಾನ್ಸರ್ ಗಳಿಂದ ರಕ್ಷಿಸುತ್ತದೆ. ಅಲ್ಲದೇ ಮೂಳೆಗಳ ಆರೋಗ್ಯವನ್ನೂ ಉತ್ತಮಗೊಳಿಸುತ್ತದೆ. ದೊಣ್ಣೆಮೆಣಸಿನಲ್ಲಿರುವ ವಿಟಮಿನ್ನುಗಳು ಜೀವಕೋಶ ಮತ್ತು ಅಂಗಾಂಶಗಳ ಮೇಲೆ ಆಂಟಿ ಆಕ್ಸಿಡೆಂಟ್ ನೀಡುವ ಪರಿಣಾಮವನ್ನು ಒದಗಿಸುತ್ತದೆ, ತನ್ಮೂಲಕ ತ್ವಚೆಯ ಆರೋಗ್ಯ ಹೆಚ್ಚಿಸಿ ವೃದ್ಧಾಪ್ಯವನ್ನು ತಡವಾಗಿಸುತ್ತದೆ. ವಿಶೇಷವಾಗಿ ಮಹಿಳೆಯರಿಗೆ ಮಾಸಿಕ ದಿನಗಳ ಸೆಡೆತದಿಂದ ಶೀಘ್ರವೇ ಹಿಂದಿರುಗಳು ನೆರವಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಪ್ರಯೋಜನಗಳಿರುವ ದೊಣ್ಣೆಮೆಣಸನ್ನು ಬಳಸಿ ತಯಾರಿಸಲಾಗುವ ಸುಲಭ ಖಾದ್ಯಗಳು ಯಾವುವು ನೋಡೋಣ..

  Most Read:ಪನ್ನೀರ್ ಹಾಗೂ ದೊಣ್ಣೆಮೆಣಸಿನ ರೆಸಿಪಿ ಅದೆಷ್ಟು ರುಚಿಕರ..!


 • ದೊಣ್ಣೆಮೆಣಸಿನ ಸೂಪ್

  ಇದಕ್ಕಾಗಿ ಹಸಿರು ದೊಣ್ಣೆಮೆಣಸನ್ನು ಕತ್ತರಿಸಿ ಒಳಗಿನ ಎಳೆಯ ಬೀಜ ಮತ್ತು ಬಿಳಿಯ ಭಾಗವನ್ನೆಲ್ಲಾ ನಿವಾರಿಸಿ ಕೇವಲ ಹಸಿರು ಭಾಗದ ತಿರುಗಳನ್ನು ಕೊಂಚ ಹಾಲು ಮತ್ತು ಕ್ರೀಮ್ ನೊಂದಿಗೆ ನುಣ್ಣಗೆ ಅರೆಯಬೇಕು. ಕೊಂಚ ಮಸಾಲೆಗಳೊಂದಿಗೆ ಅಗತ್ಯವಿದ್ದಷ್ಟು ನೀರು ಬೆರೆಸಿ ಕುದಿಸಿ ತಣಿಸಿದ ಸೂಪ್ ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು. ಇದರೊಂದಿಗೆ ಏರ್ ಫ್ರೆಯರ್ ನಲ್ಲಿ ಹುರಿದ ಕೆಲವು ಒಣಫಲಗಳು ಈ ಸೂಪ್ ಅನ್ನು ಇನ್ನಷ್ಟು ಆಕರ್ಷಕ ಹಾಗೂ ರುಚಿಕರವಾಗಿ಼ಸಬಲ್ಲುದು.


 • ದೊಣ್ಣೆಮೆಣಸಿನ ರಾಯ್ತಾ

  ಮೊಸರು ಮತ್ತು ಹಸಿರು ದೊಣ್ಣೆಮೆಣಸು ಎರಡರ ಪ್ರಯೋಜನವನ್ನು ಜೊತೆಯಾಗಿ ಪಡೆಯಲು ಈ ರಾಯ್ತಾ ಉತ್ತಮ ಆಯ್ಕೆಯಾಗಿದೆ. ಅದರಲ್ಲೂ ಬಿರಿಯಾನಿ ಅಥವಾ ಪಲಾವ್ ಮಾಡಿದ್ದರೆ ಈ ರಾಯ್ತಾ ಅತ್ಯುತ್ತಮ ಆಯ್ಕೆಯಾಗಿದೆ. ಇದನ್ನು ಇನ್ನಷ್ಟು ಆಕರ್ಷಕವಾಗಿಸಲು ಕೊಂಚ ಸೌತೆ ಅಥವಾ ದಾಳಿಂಬೆಯ ಬೀಜಗಳನ್ನು ಸೇರಿಸಬಹುದು.

  Most Read: ಆಹಾ, ದೊಣ್ಣೆಮೆಣಸು-ಪನ್ನೀರ್ ಬಟಾಣಿ ಕರಿ!


 • ದೊಣ್ಣೆಮೆಣಸಿನ ಪಲಾವ್

  ಪಲಾವ್ ನಲ್ಲಿ ನಡುನಡುವೆ ಬಣ್ಣಬಣ್ಣದ ಚಿಕ್ಕ ಚೌಕಾಕಾರದ ತುಂಡುಗಳಿದ್ದರೆ? ಈ ತುಂಡುಗಳನ್ನು ಕೆಂಪು, ಹಳದಿ ಹಾಗೂ ಹಸಿರು ದೊಣ್ಣೆಮೆಣಸುಗಳಿಂದ ಹುರಿದು ತಯಾರಿಸಿಕೊಳ್ಳಬಹುದು. ನಿಮ್ಮ ಆಯ್ಕೆಯ ಬಾಸ್ಮತಿ ಅಕ್ಕಿಯನ್ನು ಬಳಸಿ ಪಲಾವ್ ಸಿದ್ಧಪಡಿಸಿ, ಇವುಗಳಿಗೆ ನಿಮ್ಮ ಆಯ್ಕೆಯ ತರಕಾರಿಗಳನ್ನು ಸಹಾ ಬೆರೆಸಿ ಇನ್ನಷ್ಟು ಸತ್ವಯುತ ಮತ್ತು ಆಕರ್ಷಕವಾಗಿಸಬಹುದು.


 • ದೊಣ್ಣೆಮೆಣಸಿನ ಸಾರುದೊಣ್ಣೆಮೆಣಸಿನ ಸಾರು

  ಸಾರು ಸಾಂಬಾರ್ ಗಳಲ್ಲಿ ಸದಾ ಉಪಯೋಗಿಸಿಕೊಂಡೇ ಬರುತ್ತಿದ್ದ ಕುಂಬಳಕಾಯಿ ಕೋಸುಗಳಿಗೆ ಕೊಂಚ ವಿರಾಮ ನೀಡಿ, ಈ ಬಾರಿ ಇವುಗಳ ಬದಲಿಗೆ ದೊಣ್ಣೆಮೆಣಸನ್ನು ಬಳಸಿ ನೋಡಿ. ಈ ಸಾಂಬಾರ್ ಬೆರೆಸಿ ಸೇವಿಸುವ ಅನ್ನವೂ ಮೃಷ್ಟಾನ್ನದಂತೆ ತೋರುತ್ತದೆ. ಊಟವನ್ನು ಪರಿಪೂರ್ಣವಾಗಿಸಲು ನೀವು ಸಲಾಡ್ ಮತ್ತು ರಾಯ್ತಾವನ್ನೂ ಸೇರಿಸಿಕೊಳ್ಳಬಹುದು.
ಇಂದಿನ ದಿನಗಳಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿ ವ್ಯಕ್ತವಾಗುತ್ತಿದ್ದು ಆರೋಗ್ಯಕರ ಆಹಾರದತ್ತ ಜನರು ಹೆಚ್ಚು ಗಮನ ನೀಡುತ್ತಾರೆ. ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ದೊಣ್ಣೆಮೆಣಸು ಪ್ರಮುಖ ಸ್ಥಾನದಲ್ಲಿದೆ. ದೊಣ್ಣೆಮೆಣಸು ವಿವಿಧ ಬಣ್ಣಗಳಲ್ಲಿ ಲಭ್ಯವಿದ್ದರೂ ಪೋಷಕಾಂಶಗಳ ವಿಷಯದಲ್ಲಿ ಇವು ಹಸಿರು ದೊಣ್ಣೆಮೆಣಸಿಗಿಂತ ಭಿನ್ನವೇನೂ ಅಲ್ಲ. ವಾಸ್ತವವಾಗಿ ಹಸಿರು ದೊಣ್ಣೆಮೆಣಸು ಹಣ್ಣಾದ ಬಳಿಕವೇ ವಿವಿಧ ಬಣ್ಣಗಳನ್ನು ಪಡೆಯುತ್ತದೆ. ಕೆಂಪು ಬಣ್ಣ ಹಣ್ಣಾಗುವ ಹಂತದ ಅಂತಿಮ ಹಂತವಾಗಿದ್ದು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ಬೇಗ ಬೇಗ ಇಳುವರಿ ಪಡೆಯಬೇಕಾದರೆ ಬೇಗನೇ ಕಟಾವು ಮಾಡಬೇಕಾಗಿ ಬರುವ ಕಾರಣದಿಂದಲೇ ಮಾರುಕಟ್ಟೆಯಲ್ಲಿ ಹಸಿರು ದೊಣ್ಣೆಮೆಣಸು ಮಾತ್ರವೇ ಹೆಚ್ಚಾಗಿ ಲಭ್ಯವಿರುತ್ತದೆ. ಪೂರ್ಣವಾಗಿ ಬಲಿಯುವ ಮುನ್ನವೇ ಕೊಯ್ದಿರುವ ಕಾರಣ ಇವು ಕೊಂಚ ಕಹಿಯಾದ ರುಚಿಯನ್ನು ಹೊಂದಿರುತ್ತವೆ ಹಾಗೂ ಉಳಿದ ದೊಣ್ಣೆಮೆಣಸುಗಳಿಗಿಂತ ಅಗ್ಗವಾಗಿರುತ್ತವೆ.

ಆಹಾರತಜ್ಞರ ಪ್ರಕಾರ ಹಳದಿ ದೊಣ್ಣೆಮೆಣಸು ಬಣ್ಣ ಬದಲಾವಣೆಯ ಪರ್ವದ ನಡುವಿನ ಹಂತದಲ್ಲಿದ್ದು ಇತರ ಬಣ್ಣದ ದೊಣ್ಣೆಮೆಣಸುಗಳಿಗೆ ಹೋಲಿಸಿದರೆ ರುಚಿಯ ತೀವ್ರತೆ ಕನಿಷ್ಟವಾಗಿರುತ್ತದೆ. ಆದರೆ ವಾಸ್ತವವಾಗಿ ಮಾರುಕಟ್ಟೆಯಲ್ಲಿ ಆಕರ್ಷಕವಾಗಿ ಕಾಣಬರುವ ದೊಣ್ಣೆಮೆಣಸುಗಳು ಕೇವಲ ವರ್ಣದಲ್ಲಿ ಭಿನ್ನವಾಗಿರುವುದು ಮಾತ್ರವಲ್ಲ ನೋಟ, ಪರಿಮಳ ಹಾಗೂ ಖಾರವೂ ಕಡಿಮೆಯಾಗಿರುವುದಕ್ಕೆ ಇವುಗಳ ನೈಸರ್ಗಿಕ ಪೋಷಕಾಂಶಗಳಿಗಿಂತಲೂ ಇವುಗಳನ್ನು ಈ ಸ್ಥಿತಿಗೆ ತರಲು ಬಳಸಲಾದ ರಾಸಾಯನಿಕಗಳೇ ಕಾರಣವಾಗಿವೆ. ಹಸಿರು ದೊಣ್ಣೆಮೆಣಸನ್ನು ಬೇಗನೇ ಹಣ್ಣಾಗುವಂತೆ ಈ ರಾಸಾಯನಿಕಗಳು ಪ್ರಚೋದಿಸುತ್ತವೆ. ಆದರೆ ನೈಸರ್ಗಿಕ ಹಣ್ಣಾಗುವ ಪ್ರಕ್ರಿಯೆಯ ಪ್ರಕಾಗ ಹಣ್ಣಾದ ದೊಣ್ಣೆಮೆಣಸಿನಲ್ಲಿ ಮಾತ್ರವೇ ರುಚಿಕರ ಮತ್ತು ಆರೋಗ್ಯಕರ ಪೋಷಕಾಂಶಗಳಿರುತ್ತವೆ. ಆಹಾರತಜ್ಞರ ಪ್ರಕಾರ, ಕಂಪು, ಹಳದಿ ಮತ್ತು ಕಿತ್ತಳೆ ಬಣ್ಣದ ದೊಣ್ಣೆಮೆಣಸುಗಳು ಹಸಿರು ದೊಣ್ಣೆಮೆಣಸುಗಳಿಗಿಂತಲೂ ಹೆಚ್ಚು ಪೋಷಕಾಂಶವನ್ನು ಹೊಂದಿರುತ್ತವೆ. ಈ ಬಣ್ಣಗಳ ರಹಸ್ಯವೇನು? ಇವುಗಳ ಆರೋಗ್ಯಕರ ಪ್ರಯೋಜನಗಳು ಮತ್ತು ರುಚಿಕರ ಖಾದ್ಯಗಳ ಬಗ್ಗೆ ಅರಿಯಲು ಮುಂದೆ ಓದಿ..

   
 
ಹೆಲ್ತ್