Back
Home » ಆರೋಗ್ಯ
ಏಪ್ರಿಲ್ ತಿಂಗಳಲ್ಲಿ ನಿತ್ಯವೂ ಬೇವಿನ ಎಲೆಗಳನ್ನು ಬಳಸುವುದು ಕಡ್ಡಾಯ! ಏಕೆಂದು ಗೊತ್ತೇ?
Boldsky | 6th Apr, 2019 08:01 AM
 • ಬೇವಿನಲ್ಲಿರುವ ಪೋಷಕಾಂಶಗಳ ವಿವರ

  ಒಂದು ಕಪ್ (ಮೂವತ್ತೈದು ಗ್ರಾಂ) ನಷ್ಟು ಎಳೆಯ ಬೇವಿನ ಎಲೆಗಳಲ್ಲಿರುವ ಪೋಷಕಾಂಶಗಳೆಂದರೆ:
  45 ಕ್ಯಾಲೋರಿಗಳು
  2.48 ಗ್ರಾಂ ಪ್ರೋಟೀನ್
  8.01 ಗ್ರಾಂ ಕಾರ್ಬೋಹೈಡ್ರೇಟುಗಳು
  0.03 ಗ್ರಾಂ ಕೊಬ್ಬು
  178.5 ಮಿಲಿಗ್ರಾಂ ಕ್ಯಾಲ್ಸಿಯಂ
  5.98 ಮಿಲಿಗ್ರಾಂ ಕಬ್ಬಿಣ
  6.77 ಗ್ರಾಂ ಕರಗದ ನಾರು


 • ಪ್ರಯೋಜನಗಳು: ಮಧುಮೇಹದ ನಿಯಂತ್ರಣ

  ನಿತ್ಯವೂ ಬೇವಿನ ಎಲೆಗಳನ್ನು ಕುದಿಸಿದ ನೀರನ್ನು ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ. ಈ ಎಲೆಗಳಲ್ಲಿರುವ ರಾಸಾಯನಿಕ ಸಂಯುಕ್ತಗಳು ದೇಹದ ಇನ್ಸುಲಿನ್ ಬಳಸಿಕೊಳ್ಳುವ ಕ್ಷಮತೆಯನ್ನು ಅತ್ಯುತ್ತಮವಾಗಿಸುತ್ತದೆ ಹಾಗೂ ಈ ಮೂಲಕ ಇನ್ಸುಲಿನ್ ಅನ್ನು ಗರಿಷ್ಟ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಂತೆ ಮಾಡುತ್ತದೆ. ತನ್ಮೂಲಕ ಮಧುಮೇಹ ಎದುರಾಗುವ ಸಾಧ್ಯತೆಯಿಂದ ರಕ್ಷಣೆ ಒದಗಿಸುತ್ತದೆ.


 • ಮೊಡವೆಗಳನ್ನು ಗುಣಪಡಿಸುತ್ತದೆ

  ಒಂದು ವೇಳೆ ಮೊಡವೆಗಳಿಂದ ನೀವು ಬಳಲುತ್ತಿದ್ದರೆ ಬೇವು ಇದಕ್ಕೆ ಅತ್ಯುತ್ತಮ ಪರಿಹಾರ ಒದಗಿಸಬಲ್ಲುದು. ಬೇವಿನಿಂದ ಪ್ರತ್ಯೇಕಿಸಲ್ಪಟ್ಟ ಪೋಷಕಾಂಶಗಳು ಮೊಡವೆಯ ಜಿಡ್ಡುಗಳನ್ನು ನಿವಾರಿಸಿ ಇವುಗಳಲ್ಲಿ ಅಡಗಿದ್ದ ಬ್ಯಾಕ್ಟೀರಿಯಾಗಳನ್ನೂ ನಿವಾರಿಸುತ್ತವೆ. ಈ ಬ್ಯಾಕ್ಟೀರಿಯಾಗಳೇ ಮೊಡವೆಗಳಾಗಲು ಮೂಲ ಕಾರಣವಾಗಿದ್ದು ಚರ್ಮದ ಅಡಿಯಲ್ಲಿ ಸೋಂಕು ಉಂಟುಮಾಡುತ್ತವೆ. ಬೇವಿನ ಬ್ಯಾಕ್ಟೀರಿಯಾ ನಿವಾರಕ ಗುಣ ಈ ಬ್ಯಾಕ್ಟೀರಿಯಾಗಳನ್ನು ನಿವಾರಿಸುವ ಜೊತೆಗೇ ಆರ್ದ್ರತೆಯನ್ನು ಒದಗಿಸಿ ಚರ್ಮ ಒಣಗದಿರುವಂತೆ ಮಾಡುತ್ತದೆ. ಅಲ್ಲದೇ ತುರಿಕೆ, ಕೆಂಪಗಾಗುವುದು, ಮೊಡವೆಗಳು ಮತ್ತು ಚರ್ಮದಲ್ಲಿ ಕಲೆಗಳು ಮೂಡುವುದು ಮೊದಲಾದ ತೊಂದರೆಗಳಿಂದ ರಕ್ಷಣೆ ಒದಗಿಸುತ್ತದೆ.

  Most Read: ನೀವರಿಯದ ಬೇವಿನ ಎಲೆಗಳ ಸೀಮಾತೀತ ಗುಣಗಳು


 • ಬಾಯಿಯ ಆರೋಗ್ಯ

  ಭಾರತದಲ್ಲಿ ಮೌಖಿಕ ಆರೋಗ್ಯ ಉತ್ಪನ್ನಗಳಲ್ಲಿ ಬೇವು ಒಂದು ಸಾಮಾನ್ಯವಾದ ಅಂಶವಾಗಿದೆ. ಅದರ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಬಾಯಿಯಲ್ಲಿ ಸೂಕ್ಷ್ಮಜೀವಿಗಳ ವಿರುದ್ದ ಹೋರಾಡಲು ಮತ್ತು ನಮ್ಮ ಲಾಲಾರಸದ ಕ್ಷಾರೀಯ ಮಟ್ಟವನ್ನು ನಿರ್ವಹಿಸಲು ನೆರವಾಗುತ್ತದೆ. ಬೇವಿನ ಎಳೆಯ ಕಡ್ಡಿಯನ್ನು ಜಗಿಯುವ ಮೂಲಕ ಹಲ್ಲುಗಳ ಸಂಧುಗಳ ನಡುವೆ ಉತ್ಪತ್ತಿಯಾದ ಕೂಳೆಯನ್ನು ನಿವಾರಿಸಿ ಇಲ್ಲಿ ಕುಳಿಗಳಾಗುವ ಸಾಧ್ಯತೆಯನ್ನು ತಪ್ಪಿಸಬಹುದು.


 • ತಲೆಹೊಟ್ಟಿನ ನಿವಾರಣೆ

  ಇದರ ಶಿಲೀಂಧ್ರ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳು ತಲೆಹೊಟ್ಟನ್ನು ನಿವಾರಿಸಲೂ ಸಮರ್ಥವಾಗಿವೆ. ಅಲ್ಲದೇ ಕೂದಲ ಬುಡದ ಆರೋಗ್ಯವನ್ನು ಹೆಚ್ಚಿಸಿ ಆರೋಗ್ಯಕರ ಕೂದಲು ಉದ್ದವಾಗಿ ಬೆಳೆಯಲು ನೆರವಾಗುತ್ತದೆ ಹಾಗೂ ಇವುಗಳ ಆಂಟಿ ಆಕ್ಸಿಡೆಂಟುಗಳು ಕೂದಲನ್ನು ಇನ್ನಷ್ಟು ದೃಢವಾಗಿಸುತ್ತವೆ.


 • ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ:

  ಹಲವಾರು ಅಧ್ಯಯನಗಳ ಪ್ರಕಾರ ಕ್ಯಾನ್ಸರ್ ಬರದೇ ಇರುವಂತೆ ಮಾಡುವ ಶಕ್ತಿ ಬೇವಿನ ಎಲೆಗಳಿಂದ ನಿವಾರಿಸಲ್ಪಟ್ಟ ಪೋಷಕಾಂಶಗಳಿಗಿವೆ. ಇವು ಜೀವಕೋಶಗಳ ಅಸಹಜ ಸಾವನ್ನು ತಡೆಯುವುದು, ಅನಿಯಂತ್ರಿತ ಜೀವಕೋಶ ಬೆಳವಣಿಗೆಯನ್ನು ತಡೆಗಟ್ಟುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿವೆ.


 • ಕರುಳಿನ ಹುಣ್ಣುಗಳನ್ನು ಗುಣಪಡಿಸುತ್ತದೆ

  ಒಂದು ವೇಳೆ ಕರುಳಿನಲ್ಲಿ ಹುಣ್ಣುಗಳಾಗಿದ್ದು ಭಾರೀ ಉರಿ ಇದ್ದರೆ ಬೇವಿನ ಎಲೆಗಳನ್ನು ಹಸಿಯಾಗಿ ಜಗಿದು ನುಂಗುವುದರಿಂದ ತಕ್ಷಣವೇ ಪರಿಹಾರ ದೊರಕುತ್ತದೆ. ಈ ಹುಣ್ಣುಗಳನ್ನು ಶಮನಗೊಳಿಸುವ ಜೊತೆಗೇ ನಿತ್ಯದ ಸೇವನೆಯ ಮೂಲಕ ಕರುಳುಗಳಿಗೆ ಎದುರಾಗುವ ಮಲಬದ್ದತೆ, ಹೊಟ್ಟೆಯುಬ್ಬರಿಕೆ, ಹೊಟ್ಟೆಯ ಸೆಡೆತ ಮೊದಲಾದ ಇತರ ತೊಂದರೆಗಳಿಂದಲೂ ರಕ್ಷಿಸುತ್ತದೆ.

  Most Read: ಕೂದಲಿನ ಸರ್ವ ರೋಗಕ್ಕೂ ಸರಳವಾಗಿ ಮಾಡಬಹುದಾದ 'ಬೇವಿನ ಟಾನಿಕ್' !


 • ಮಲೇರಿಯಾವನ್ನೂ ಗುಣಪಡಿಸುತ್ತದೆ:

  ಮಲೇರಿಯಾ ಜ್ವರ ಎದುರಾದಾಗ ಹಿಂದಿನ ದಿನಗಳಲ್ಲಿ ಬೇವನ್ನು ಔಷಧಿಯಾಗಿ ಬಳಸಲಾಗುತ್ತಿತ್ತು. ಇದರಲ್ಲಿರುವ ಗೆಡ್ಯುನಿನ್ (gedunin) ಎಂಬ ಪೋಷಕಾಂಶ ಮಲೇರಿಯಾದ ರೋಗಾಣುಗಳನ್ನು ನಿಗ್ರಹಿಸುವ ಗುಣ ಹೊಂದಿದೆ. ಸತತವಾಗಿ ಬೇವಿನ ಎಲೆಗಳನ್ನು ಸೇವಿಸುವ ಮೂಲಕ ಮಲೇರಿಯಾದ ಲಕ್ಷಣಗಳು ಉಡುಗುತ್ತಾ ಬರುತ್ತವೆ ಹಾಗೂ ಪ್ರಾಣಾಪಾಯದಿಂದಲೂ ಪಾರಾಗಲು ನೆರವಾಗುತ್ತದೆ.
ಭಾರತದ ಹಲವು ಕಡೆಗಳಲ್ಲಿ ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ದಿನಗಳಲ್ಲಿ ಅಂದರೆ ಸುಮಾರು ಏಪ್ರಿಲ್ ತಿಂಗಳ ಅವಧಿಯಲ್ಲಿ ಬೇವಿನ ಚಿಗುರೆಲೆಗಳನ್ನು ಕೊಂಚ ನೀರಿನೊಂದಿಗೆ ಖಾಲಿಹೊಟ್ಟೆಯಲ್ಲಿ ದಿನದ ಪ್ರಥಮ ಆಹಾರವಾಗಿ ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಚಿಗುರೆಲೆಗಳು ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕ, ಉರಿಯೂತ ನಿವಾರಕ ಹಾಗೂ ಶಿಲೀಂಧ್ರನಿವಾರಕ ಗುಣಗಳನ್ನು ಹೊಂದಿವೆ. ನಿತ್ಯವೂ ಈ ಎಲೆಗಳನ್ನು ಒಂದು ತಿಂಗಳ ಕಾಲ ಸೇವಿಸುವ ಮೂಲಕ ವರ್ಷವಿಡೀ ದೇಹವನ್ನು ಎದುರಾಗುವ ಹಲವು ಬಗೆಯ ಸೋಂಕಿನಿಂದ ರಕ್ಷಿಸಿಕೊಳ್ಳ ಬಹುದಾಗಿದೆ. ಈ ಎಲೆಗಳಲ್ಲಿ ನಿಂಬಿನ್, ನಿಂಬಿನೆನ್, ನಿಮೋಲೈಡ್, ನಿಮಾಂಡಿಯಲ್, ನಿಂಬಿನೈನ್ ಸಹಿತ ಸುಮಾರು ನೂರಾಮೂವತ್ತು ಬಗೆಯ ಅವಶ್ಯಕ ಪೋಷಕಾಂಶಗಳಿವೆ ಹಾಗೂ ಇವು ಹಲವಾರು ಬಗೆಯ ತೊಂದರೆಗಳ ವಿರುದ್ದ ಹೋರಾಡುವ ಗುಣ ಹೊಂದಿವೆ.

ತಲೆಹೊಟ್ಟನ್ನು ನಿವಾರಿಸುವುದರಿಂದ ತೊಡಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವವರೆಗೆ ಇವುಗಳ ಬಳಕೆಯಾಗುತ್ತದೆ ಹಾಗೂ ಮಲೇರಿಯಾದಂತದ ಮಾರಣಾಂತಿಕ ರೋಗದಿಂದ ರಕ್ಷಣೆ ಒದಗಿಸುವ ಜೊತೆಗೇ ಮೊಡವೆಗಳನ್ನು ಸರಿಪಡಿಸುವಷ್ಟು ಸೌಮ್ಯವೂ ಆಗಿವೆ. ಬೇವಿನ ಎಲೆಗಳು ಬಿಳಿ ಬಣ್ಣದಲ್ಲಿರುತ್ತವೆ ಹಾಗೂ ಹೂಬಿಟ್ಟ ಸಮಯದಲ್ಲಿ ವಾತಾವರಣದಲ್ಲಿ ನಸುಗಂಪು ಮೂಡಿಸುತ್ತವೆ. ಈ ಹೂವುಗಳು ಮುದುಡಿ ಬೀಜವಾಗಿ ಚಿಕ್ಕ ನೇರಳೆ ಹಣ್ಣುಗಳಂತಹ ಹಣ್ಣಾಗುತ್ತವೆ. ಈ ಹಣ್ಣುಗಳು ಅತಿ ಕಹಿಯಾಗಿರುತ್ತವೆ. ಈ ಅವಧಿಯಲ್ಲಿ ಬೇವನ್ನು ಸೇವಿಸುವ ಮೂಲಕ ಪಡೆಯಬಹುದಾದ ಗುಣಗಳು ನಿಮ್ಮನ್ನು ಅಚ್ಚರಿಗೊಳಿಸಬಹುದು.

   
 
ಹೆಲ್ತ್