Back
Home » ಬಾಲಿವುಡ್
ದಬಾಂಗ್-3 ಐಟಂ ಸಾಂಗ್ ಗೆ ಪೈಪೋಟಿ, ಸನ್ನಿ-ಮೌನಿ ಯಾರಿಗೆ ಅವಕಾಶ
Oneindia | 6th Apr, 2019 11:50 AM

ಬಾಲಿವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ 'ದಬಾಂಗ್-3' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೇ ಚಿತ್ರತಂಡ ಮಧ್ಯ ಪ್ರದೇಶದ ನರ್ಮದಾ ನದಿ ತೀರದಲ್ಲಿ ಚಿತ್ರದ ಅದ್ಧೂರಿ ಸಾಂಗ್ ಶೂಟಿಂಗ್ ಸೆರೆ ಹಿಡಿಯುತ್ತಿದೆ.

'ದಬಾಂಗ್-3' ಸೆಟ್ಟೇರಿದಾಗಿನಿಂದಲು ಒಂದಲ್ಲೊಂದು ವಿಷಯಕ್ಕೆ ಸುದ್ದಿ ಮಾಡುತ್ತಲೇ ಇದೆ. ಈಗ ಚಿತ್ರದಿಂದ ಮತ್ತೊಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಚಿತ್ರದ ಸ್ಪೆಷಲ್ ಸಾಂಗ್ ಒಂದಕ್ಕೆ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಡಾನ್ಸ್ ಮಾಡುತ್ತಿದ್ದಾರಂತೆ. ದಬಾಂಗ್ ಎರಡೂ ಸರಿಣಿಯಲ್ಲಿ ಐಟಂ ಸಾಂಗ್ ಭಾರಿ ಸದ್ದು ಮಾಡಿತ್ತು.

ರಾಜಕೀಯ ತಿರುವು ಪಡೆದ ಸಲ್ಮಾನ್ ಖಾನ್ ದಬಾಂಗ್ 3 ವಿವಾದ

ಹಾಗಾಗಿ 'ದಬಾಂಗ್-3' ಚಿತ್ರದಲ್ಲಿ ಐಟಂ ಸಾಂಗ್ ಯಾರು ಮಾಡ್ತಾರೆ ಎನ್ನುವ ಕುತೂಹಲ ಇತ್ತು. ಆದ್ರೀಗ ಸ್ಪೆಷಲ್ ಹಾಡಿಗೆ ಸನ್ನಿ ಲಿಯೋನ್ ಹೆಜ್ಜೆ ಹಾಕುತ್ತಿದ್ದಾರೆ ಇನ್ನುವ ಮಾತುಗಳು ಕೇಳಿ ಬುರುತ್ತಿದೆ. ಇನ್ನೊಂದೆಡೆ ನಟಿ ಮೌನಿ ರಾಯ್ ಹೆಸರು ಕೂಡ ಕೇಳಿ ಬರುತ್ತಿದೆ.

ಈ ಹಾಡಿಗೆ ನಟಿ ಮೌನಿ ರಾಯ್ ಪಕ್ಕಾ ಮ್ಯಾಚ್ ಆಗುತ್ತಾರೆ ಎಂದು ನಟ ಸಲ್ಮಾನ್ ಖಾನ್ ಸಹ ಹೇಳಿದ್ದಾರಂತೆ. ಹಾಗಾಗಿ ದಬಾಂಗ್-3 ಚಿತ್ರದ ಐಟಂ ಸಾಂಗ್ ನಲ್ಲಿ ಮೌನಿ ರಾಯ್ ಇರ್ತಾರಾ ಅಥವಾ ಸನ್ನಿ ಲಿಯೋನ್ ಡಾನ್ಸ್ ಮಾಡುತ್ತಾರಾ ಇನ್ನುವ ಕುತೂಹಲ ಹೆಚ್ಚಾಗಿದೆ.

'ದಬಾಂಗ್' ಮೊದಲ ಸರಣಿಯಲ್ಲಿ ಸಲ್ಮಾನ್ ಖಾನ್ ಅತ್ತಿಗೆ ಅರ್ಬಾಜ್ ಖಾನ್ ಮಾಜಿ ಪತ್ನಿ ಮಲೈಕಾ ಅರೋರ ಮುನ್ನಿ ಡಾನ್ಸ್ ಸಖತ್ ಖ್ಯಾತಿ ಗಳಿಸಿತ್ತು. ಎರಡನೇ ಸರಣಿಯ ಸ್ಪೆಷಲ್ ಸಾಂಗ್ ಗೆ ಕರೀನಾ ಕಪೂರ್ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಮನ ತಣಿಸಿದ್ದರು.

   
 
ಹೆಲ್ತ್