Back
Home » ಆರೋಗ್ಯ
ಆರೋಗ್ಯಕಾರಿ ಜೀವನ ಶೈಲಿಗೆ, ನೀವು ಪ್ರತಿನಿತ್ಯ ಅನುಸರಿಸಬೇಕಾದ 8 ಆರೋಗ್ಯಕಾರಿ ಟಿಪ್ಸ್‌
Boldsky | 8th Apr, 2019 12:01 PM
 • ಉಪಾಹಾರ ಯಾವತ್ತಿಗೂ ಬಿಡಬೇಡಿ

  ದಿನದ ಆಹಾರದಲ್ಲಿ ಉಪಾಹಾರವು ಅತೀ ಪ್ರಾಮುಖ್ಯವಾಗಿರುವ ಆಹಾರವಾಗಿರುವುದು. ದಿನದ ಆರಂಭ ಮಾಡಲು ನೀವು ತುಂಬಾ ಶಕ್ತಿಯುತ ಉಪಾಹಾರವನ್ನು ಸೇವಿಸಬೇಕು. ಉಪಾಹಾರದಿಂದ ನಿಮಗೆ ದಿನಪೂರ್ತಿ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಶಕ್ತಿ ಸಿಗುವುದು. ಇದರಿಂದ ಉಪಾಹಾರದಲ್ಲಿ ಹೆಚ್ಚಿನ ಪೋಷಕಾಂಶ ಗಳನ್ನು ಸೇರಿಸಿಕೊಳ್ಳಿ. ಹೊಟ್ಟೆಗೆ ಭಾರವಾಗುವ ಅಥವಾ ಎಣ್ಣೆಯಂಶವಿರುವ ಆಹಾರವನ್ನು ನೀವು ಉಪಾಹಾರಕ್ಕೆ ಸೇವಿಸಬೇಡಿ.


 • ದಿನನಿತ್ಯ ವ್ಯಾಯಾಮ ಮಾಡಿ

  ಹೆಚ್ಚಿನ ಜನರು ಇಂದಿನ ದಿನಗಳಲ್ಲಿ ಸಮಯದ ಅಭಾವದಿಂದಾಗಿ ವ್ಯಾಯಾಮದಿಂದ ವಿಮುಖರಾಗುತ್ತಿದ್ದಾರೆ. ಇದನ್ನು ತಪ್ಪಿಸಿಕೊಳ್ಳುವುದು ತುಂಬಾ ಸುಲಭ. ಪ್ರತಿಯೊಬ್ಬರು ದಿನನಿತ್ಯ ವ್ಯಾಯಾಮ ಮಾಡುವುದೇ ಇಲ್ಲ. ನಿಮಗೆ ಆರೋಗ್ಯವಾಗಿ ಇರಬೇಕು ಎಂದಿದ್ದರೆ ಆಗ ನೀವು ವ್ಯಾಯಾಮವನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಬೇಕು. ಆರೋಗ್ಯಕಾರಿ ಜೀವನ ನಡೆಸಲು ಪ್ರತಿನಿತ್ಯ ನೀವು 30 ನಿಮಿಷ ವ್ಯಾಯಾಮ ಮಾಡಬೇಕು. ಇದರಿಂದ ಇಂದಿನಿಂದಲೇ ನೀವು ವ್ಯಾಯಾಮ ಆರಂಭ ಮಾಡಿ ಮತ್ತು ಉದಾಸೀನತೆಯನ್ನು ದೂರ ಮಾಡಿ.


 • ಆಹಾರದ ಬಗ್ಗೆ ಗಮನವಿರಲಿ

  ನೀವು ಏನು ತಿನ್ನುತ್ತೀರಿ ಎನ್ನುವುದರ ಮೇಲೆ ಆರೋಗ್ಯವು ಅವಲಂಬಿತವಾಗಿರುವುದು. ಹೊಟ್ಟೆ ಹಸಿದಿದೆ ಎಂದು ನೀವು ತಿನ್ನುವ ಬದಲು ಏನು ತಿನ್ನುತ್ತಿದ್ದೀರಿ ಎಂದು ಮುಖ್ಯವಾಗಿ ಗಮನಿಸಬೇಕು. ಒಂದು ಕಾರ್ಯಸೂಚಿಯನ್ನು ತಯಾರಿಸಿಕೊಳ್ಳಿ. ನಿಮ್ಮ ಆಹಾರದಲ್ಲಿ ಕೆಲವೊಂದು ತಾಜಾ ಹಣ್ಣುಗಳು ಮತ್ತು ತರಕಾರಿಗಳು, ಧಾನ್ಯಗಳು, ಬೀಜಗಳು, ಹಾಲಿನ ಉತ್ಪನ್ನಗಳು ಮತ್ತು ಹಸಿರೆಲೆ ತರಕಾರಿಗಳನ್ನು ಸೇರಿಸಿಕೊಳ್ಳಿ. ನೀವು ಈ ರೀತಿಯ ಸಮತೋಲಿತ ಆಹಾರ ಸೇವನೆ ಮಾಡಿದರೆ ಆಗ ಅದರಿಂದ ನಿಮ್ಮ ದೇಹಕ್ಕೆ ಬೇಕಾಗುವಂತಹ ಪೋಷಕಾಂಶಗಳು ಸರಿಯಾದ ರೀತಿಯಲ್ಲಿ ಸಿಗುವುದು.


 • ದೇಹವನ್ನು ನಿರ್ವಿಷಗೊಳಿಸಿ

  ದೇಹದಲ್ಲಿ ಇರುವಂತಹ ವಿಷಕಾರಿ ಅಂಶಗಳನ್ನು ಹೊರಗೆ ಹಾಕಲು ನಿರ್ವಿಷಗೊಳಿಸುವ ಕ್ರಿಯೆಯು ಅತೀ ಅಗತ್ಯವಾಗಿ ಇರುವುದು. ಇದು ನಿಮ್ಮ ಸಂಪೂರ್ಣ ಆರೊಗ್ಯದ ಮೇಲೆ ಪರಿಣಾಮ ಬೀರುವುದು ಮತ್ತು ಎಲ್ಲಾ ಅಂಗಾಂಗಳನ್ನು ಆರೋಗ್ಯವಾಗಿ ಇಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುವುದು. ನೀವು ಬೆಳ್ಳುಳ್ಳಿ, ಸಿಟ್ರಿಕ್ ಹಣ್ಣುಗಳು ಮತ್ತು ಕೆಲವು ನೈಸರ್ಗಿಕ ಗಿಡಮೂಲಿಕೆ ಸೇವಿಸಬೇಕು. ದೇಹವನ್ನು ಶುದ್ಧೀಕರಿಸುವಂತಹ ಪಾನೀಯವನ್ನು ನೀವಾಗಿಯೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು.


 • ಪ್ರೋಟೀನ್ ಕಡೆಗಣಿಸಬೇಡಿ

  ಹೆಚ್ಚಾಗಿ ಜನರು ತಾವು ತಿನ್ನುವಂತಹ ಆಹಾರದಲ್ಲಿ ಎಷ್ಟು ಮಟ್ಟಿನ ಪ್ರೋಟೀನ್ ಇದೆ ಎಂದು ತಿಳಿದುಕೊಳ್ಳದೆ ಇರುವ ಕಾರಣದಿಂದಾಗಿ, ಕೆಲವೊಂದು ಸಲ ಪ್ರೋಟೀನ್ ಕೊರತೆ ಉಂಟಾಗುವುದು. ಯಾಕೆಂದರೆ ಪ್ರೋಟೀನ್ ನ ಲಾಭಗಳು ತಿಳಿಯದೆ ಇರುವ ಕಾರಣದಿಂದಾಗಿ ಈ ರೀತಿಯ ತಪ್ಪುಗಳು ನಡೆಯುತ್ತಲೇ ಇರುತ್ತದೆ. ಆದರೆ ಪ್ರೋಟೀನ್ ಎನ್ನುವುದು ಕೇವಲ ಸ್ನಾಯು ಖಂಡಗಳನ್ನು ಬೆಳೆಸಲು ಮಾತ್ರವಲ್ಲದೆ, ದೇಹಕ್ಕೆ ಬೇಕಾಗಿ ರುವಂತಹ ಪ್ರಮುಖ ಶಕ್ತಿಯಾಗಿದೆ.


 • ಮಾನಸಿಕ ಆರೋಗ್ಯದ ಬಗ್ಗೆ ಗಮನವಿರಲಿ

  ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯವು ಅತೀ ಮುಖ್ಯ ವಾಗಿರುವುದು. ಆದರೆ ಹೆಚ್ಚಿನ ಜನರು ದೈಹಿಕ ಆರೋಗ್ಯದ ಕಡೆ ಮಾತ್ರ ಗಮನ ಹರಿಸುವರು ಮತ್ತು ಮಾನಸಿಕ ಆರೋಗ್ಯವನ್ನು ಕಡೆಗಣಿಸುವರು. ಸಂಪೂರ್ಣ ಆರೋಗ್ಯವು ಬೇಕೆಂದಾದರೆ ಆಗ ಮಾನಸಿಕ ಆರೋಗ್ಯವು ಅತೀ ಅಗತ್ಯವಾಗಿರುವುದು. ಮನಸ್ಸನ್ನು ಶಾಂತಗೊಳಿಸಲು ನೀವು ಉಸಿರಾಟದ ವ್ಯಾಯಾಮ ಮಾಡ ಬಹುದು. ಎಷ್ಟು ಸಾಧ್ಯವೋ ಅಷ್ಟು ನೀವು ಒತ್ತಡದಿಂದ ಮುಕ್ತವಾಗಿರಿ. ನಿಮಗೆ ಅಗತ್ಯ ಎಂದು ಅನಿಸಿದರೆ, ಆಗ ಯಾವುದೇ ಹಿಂಜರಿಕೆ ಇಲ್ಲದೆ ಮನಶಾಸ್ತ್ರಜ್ಞರನ್ನು ಹೋಗಿ ಭೇಟಿಯಾಗಿ.


 • ಸರಿಯಾಗಿ ನಿದ್ರೆ ಮಾಡಿ

  ಸರಿಯಾದ ನಿದ್ರೆಯು ಅತೀ ಅಗತ್ಯವಾಗಿ ಬೇಕು. ಸರಿಯಾಗಿ ನಿದ್ರೆ ಮಾಡದೆ ಇದ್ದರೆ ಆಗ ದೇಹದ ಕಾರ್ಯನಿರ್ವಹಣೆ ಮೇಲೆ ಅದು ಪರಿಣಾಮ ಬೀರುವುದು. ದಿನವನ್ನು ಉತ್ತಮವಾಗಿ ಆರಂಭ ಮಾಡಲು ಮತ್ತು ಸರಿಯಾಗಿ ದಿನದ ಕೆಲಸಗಳನ್ನು ಮಾಡಲು ಸರಿಯಾದ ನಿದ್ರೆ ಕೂಡ ಅತೀ ಅಗತ್ಯವಾಗಿ ಬೇಕು. ನಿದ್ರಿಸುವ ಕೆಲವು ಕೆಟ್ಟ ಹವ್ಯಾಸದಿಂದಾಗಿ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಇತರ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದು. ನೀವು ಸರಿಯಾಗಿ ಎಂಟು ಗಂಟೆಗಳ ಕಾಲ ನಿದ್ರೆ ಮಾಡಲು ಪ್ರಯತ್ನಿಸಿ.


 • ಮೊಬೈಲ್, ಲ್ಯಾಪ್ ಟಾಪ್ ಗಳನ್ನು ಕಡಿಮೆ ಬಳಸಿ

  ಮೊಬೈಲ್ ಮತ್ತು ಲ್ಯಾಪ್ ಟಾಪ್ ಗಳು ಇಂದಿನ ದಿನಗಳಲ್ಲಿ ಅತೀ ಅಗತ್ಯ ಸಾಧನವಾಗಿದೆ. ಇದು ನಮ್ಮ ಜೀವನದ ಅವಿಭಾಜ್ಯ ಅಂಗವೆಂದೇ ಹೇಳಬಹುದು. ಇದನ್ನು ಬಿಟ್ಟಿರಲು ಕೆಲವರಿಗೆ ಸಾಧ್ಯವೇ ಆಗದು. ಆದರೆ ಇಂತಹ ಕೆಲವು ಗಜೆಟ್ಸ್ ಗಳಿಂದಾಗಿ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು ಹಲವಾರು ಸಂಶೋಧನೆಗಳೂ ಹೇಳಿವೆ. ಇದರಿಂದ ಬರುವಂತಹ ಬೆಳಕು ಕಣ್ಣಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲದೆ, ಅದು ಮಾನಸಿಕ ಆರೋಗ್ಯವನ್ನು ಕೆಡಿಸುವುದು ಎಂದು ಅಧ್ಯಯನಗಳು ತಿಳಿಸಿವೆ. ಅನಗತ್ಯವಾಗಿ ನೀವು ಮೊಬೈಲ್ ಬಳಸುವುದನ್ನು ಬಿಟ್ಟುಬಿಡಿ.
ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆರೋಗ್ಯವಿದ್ದರೆ ಎಲ್ಲಾ ಭಾಗ್ಯವು ಇದ್ದಂತೆ ಎನ್ನುವುದು ಇದರ ನಿಜವಾದ ಅರ್ಥ. ಆರೋಗ್ಯವಿಲ್ಲದೆ ಇದ್ದರೆ ಸಂಪಾದಿಸಿದ ಹಣವೆಲ್ಲವೂ ಆಸ್ಪತ್ರೆಗೆ ಹೋಗಿ ಸುರಿಯಬೇಕಾಗುತ್ತದೆ. ಇದರಿಂದ ಆರೋಗ್ಯದ ಕಾಳಜಿ ವಹಿಸುವುದು ಅತೀ ಅಗತ್ಯವಾಗಿ ಇರುವುದು. ಆರೋಗ್ಯವಿಲ್ಲದೆ ಇದ್ದರೆ ಖಂಡಿತವಾಗಿಯೂ ಜೀವನ ದುಸ್ತರ ಎನಿಸುವುದು.

ಅದರಲ್ಲೂ ಇಂದಿನ ದಿನಗಳಲ್ಲಿ ಕಲುಷಿತ ವಾತಾವರಣ, ಒತ್ತಡ ಹಾಗೂ ಅನಾರೋಗ್ಯಕರ ಆಹಾರ ಕ್ರಮದಿಂದಾಗಿ ಆರೋಗ್ಯದ ಮೇಲೆ ಅತಿಯಾದ ಒತ್ತಡ ಬೀಳುವುದು. ಈ ಕಾರಣದಿಂದಾಗಿ ಬದುಕು ಸರಾಗವಾಗಿ ಸಾಗಬೇಕಾದರೆ ಉತ್ತಮ ಆರೋಗ್ಯವಿರಬೇಕು. ಆರೋಗ್ಯಕರ ಜೀವನ ನಡೆಸುವುದು ಕಠಿಣವೇನಲ್ಲ, ಆದರೆ ಇದಕ್ಕೆ ಕೆಲವೊಂದು ಗಂಭೀರವಾದ ಬದ್ಧತೆ ಮತ್ತು ಸತತ ಪ್ರಯತ್ನ ಅಗತ್ಯವಾಗಿ ಬೇಕು. ಪ್ರಯತ್ನ ಎನ್ನುವುದು ದೊಡ್ಡ ಮಟ್ಟದೇನಲ್ಲ, ನಿಮ್ಮ ಜೀವನ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುವುದು. ಬನ್ನಿ ಈ ಲೇಖನದಲ್ಲಿ ನೀವು ದಿನನಿತ್ಯವು ಪಾಲಿಸಬೇಕಾದ ಕೆಲವೊಂದು ಕ್ರಮಗಳನ್ನು ನಾವು ಹೇಳಿಕೊಡಲಿದ್ದೇವೆ. ಇದನ್ನು ನೀವು ತಿಳಿಯಿರಿ.

   
 
ಹೆಲ್ತ್