Back
Home » ಗಾಸಿಪ್
ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ಸಿನಿಮಾಗಳ ಮುಖಾಮುಖಿ
Oneindia | 8th Apr, 2019 03:19 PM
 • ಮತ್ತೆ 'ಆನಂದ್' ಆದ ಶಿವಣ್ಣ

  ಶಿವರಾಜ್ ಕುಮಾರ್ ಮೊದಲ ಸಿನಿಮಾದ ಹೆಸರು 'ಆನಂದ್'. ಈಗ ಅದೇ ಟೈಟಲ್ ನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಮಾಡುತ್ತಿದ್ದಾರೆ. ದ್ವಾರಕೀಶ್ ಬ್ಯಾನರ್ ನಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪಿ ವಾಸು ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 'ಶಿವಲಿಂಗ' ಬಳಿಕ ಮತ್ತೆ ಶಿವಣ್ಣ - ಪಿ ವಾಸು ಒಂದಾಗಿದ್ದಾರೆ. ರಚಿತಾ ರಾಮ್ ಸಿನಿಮಾದ ನಾಯಕಿ.


 • ಹಬ್ಬಕ್ಕೆ 'ಪೈಲ್ವಾನ್' ಪ್ರವೇಶ

  'ಪೈಲ್ವಾನ್' ಸಿನಿಮಾ ಸುದೀಪ್ ನಟನೆಯ ಬಹುನಿರೀಕ್ಷಿತ ಚಿತ್ರವಾಗಿದೆ. ನಿರ್ದೇಶಕ ಕೃಷ್ಣ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾ ಬಿಡುಗಡೆ ದಿನಾಂಕ ಈಗಾಗಲೇ ಬಹಿರಂಗ ಆಗಿದ್ದು, ಆಗಸ್ಟ್ 9ಕ್ಕೆ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಿಂದಿ, ಭೋಜಪುರಿ, ಮರಾಠಿ ಸೇರಿದಂತೆ ಬೇರೆ ಬೇರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅಕಾಂಕ್ಷ ಸಿಂಗ್ ಚಿತ್ರದ ಹೀರೋಯಿನ್.

  ಯುಗಾದಿ ಹಬ್ಬಕ್ಕೆ ಬಂದ ಹೊಸ ಸಿನಿಮಾ ಪೋಸ್ಟರ್ ಗಳು


 • 'ಭರಾಟೆ'ಯ ಬಿಡುಗಡೆ

  ನಿರ್ದೇಶಕ ಚೇತನ್ ಕುಮಾರ್ ಅವರ 'ಭರಾಟೆ' ಸಿನಿಮಾ ಕೂಡ ವರಮಹಾಲಕ್ಷ್ಮಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗುತ್ತಿದೆ. ಸಿನಿಮಾ ಕೆಲಸಗಳು ಇನ್ನು ಬಾಕಿ ಇದ್ದು, ಇಡೀ ಚಿತ್ರತಂಡ ತಮ್ಮ ತಮ್ಮ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಒಂದು ಹಾಡಿನ ಚಿತ್ರೀಕರಣ ನಡೆದಿದೆ.
ಪ್ರತಿ ಬಾರಿ ಹಬ್ಬಕ್ಕೆ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಲೇ ಇರುತ್ತದೆ. ಚಿತ್ರತಂಡಗಳು ಹಬ್ಬದ ಉಡುಗೊರೆಯಾಗಿ ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುತ್ತಾ ಇರುತ್ತಾರೆ.

ಅದೇ ರೀತಿ ಈ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ ಮೂರು ದೊಡ್ಡ ಸಿನಿಮಾಗಳು ಬಿಡುಗಡೆ ತಯಾರಿ ನಡೆದಿದೆ. ನಟ ಶಿವರಾಜ್ ಕುಮಾರ್ ಅಭಿನಯದ 'ಆನಂದ್', ಸುದೀಪ್ ನಟನೆಯ 'ಪೈಲ್ವಾನ್' ಹಾಗೂ ಶ್ರೀಮುರಳಿ ಅವರ 'ಭರಾಟೆ' ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿವೆ.

ಅನುಪಮಾ, ರಚಿತಾ, ಆಶಿಕಾ : ಯಾರ ಮೇಲೆ ಶ್ರೀಮುರಳಿ ಒಲವು?

'ಆನಂದ್', 'ಪೈಲ್ವಾನ್' ಹಾಗೂ 'ಭರಾಟೆ' ಮೂರು ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬದಂದು ಪ್ರೇಕ್ಷಕರ ಮುಂದೆ ಬರುತ್ತಿವೆ. ಮುಂದೆ ಓದಿ...

   
 
ಹೆಲ್ತ್