Back
Home » ಆರೋಗ್ಯ
ಸೈನಸ್‌ನಿಂದ ಬಳಲುತ್ತಿರುವಾಗ ಯಾವ ಆಹಾರ ತಿನ್ನಬೇಕು, ತಿನ್ನಬಾರದು?
Boldsky | 8th Apr, 2019 05:31 PM
 • ಉಗುರು ಬೆಚ್ಚಗಿನ ನೀರು

  ಬೆಳಗ್ಗೆ ಎದ್ದು ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಒಂದು ಚಿಟಿಕೆ ಅರಿಶಿನ ಮತ್ತು ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದರಿಂದ ನಿಮ್ಮ ದೇಹಕ್ಕೆ ಸೈನಸ್ ನಿಂದ ಬಹಳ ಬೇಗನೆ ಪರಿಹಾರ ಕಂಡಂತಾಗುತ್ತದೆ . ಏಕೆಂದರೆ ಬಿಸಿ ನೀರು ನಿಮ್ಮ ಗಂಟಲು ಕಟ್ಟಿ ಕೊಂಡಿರುವುದನ್ನು ಬಿಡಿಸಲು ಸಹಾಯ ಮಾಡಿದರೆ ಅರಿಶಿನ ಸೈನಸ್ ಬ್ಯಾಕ್ಟೀರಿಯಾ ಗಳನ್ನು ಕೊಲ್ಲುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ . ಹಾಗೆಯೇ ಮೆಣಸು ಗಂಟಲು ನೋವು ಮತ್ತು ಉರಿ ಯಿಂದ ಊದಿಕೊಂಡಿದ್ದರೆ ಅದನ್ನು ಕ್ಷಣ ಮಾತ್ರದಲ್ಲಿ ಶಮನ ಮಾಡುತ್ತದೆ.


 • ಗಿಡಮೂಲಿಕೆಯ ಚಹಾ

  ಈ ಅದ್ಭುತವಾದ ಚಮತ್ಕಾರಿ ಚಹಾವನ್ನು ತಯಾರು ಮಾಡಲು ಕುದಿಯುವ ನೀರಿಗೆ ಸ್ವಲ್ಪ ಕಾಳು ಮೆಣಸು , ಲವಂಗ , ತುಳಸಿ ದಳ , ಶುಂಠಿ ಮತ್ತು ಟೀ ಪುಡಿ ಯನ್ನು ಹಾಕಿದರೆ ಸಾಕು . ಚೆನ್ನಾಗಿ ಕುದಿಸಿದ ನಂತರ ಅದನ್ನು ಪಕ್ಕಕ್ಕಿಟ್ಟು ಸ್ವಲ್ಪ ಆರಿಸಿ ಶೋಧಿಸಿದ ನಂತರ ಒಂದು ಟೀ ಚಮಚದಷ್ಟು ಜೇನು ತುಪ್ಪವನ್ನು ಹಾಕಿ ಕುಡಿದರೆ ಅದರಿಂದಾಗುವ ಪ್ರಯೋಜನಗಳನ್ನು ತಕ್ಷಣವೇ ಗುರುತಿಸಬಹುದು . ಇಲ್ಲಿ ತುಳಸಿ ಎಲೆಗಳು ಕಟ್ಟಿರುವ ಮೂಗನ್ನು ಸರಿ ಮಾಡಿದರೆ ಶುಂಠಿ , ಲವಂಗ , ಜೇನು ತುಪ್ಪ ಮತ್ತು ಕಾಳು ಮೆಣಸು ಗಂಟಲು ಉರಿಯೂತವನ್ನು ಕಡಿಮೆ ಮಾಡಿ ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವಲ್ಲಿ ಯಶಸ್ವಿಯಾಗಿವೆ.

  Most Read: ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!


 • ಚಿಕನ್ ಸೂಪ್

  ಚೀನಾ ಮತ್ತು ಜಪಾನ್ ನಂತಹ ದೇಶಗಳಲ್ಲಿ ಶೀತ ಎದುರಾದರೆ ಈ ಆಹಾರ ಪದ್ಧತಿಯನ್ನು ಇಂದಿಗೂ ಅನುಸರಿಸುತ್ತಿದ್ದಾರೆ . ನೀವು ಮಾಂಸಾಹಾರಿ ಗಳಾದರೆ ಒಂದು ಬಟ್ಟಲು ಚಿಕನ್ ಸೂಪ್ ಗೆ ಒಂದು ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿಯನ್ನು ಬೆರೆಸಿ ಕುಡಿದರೆ ನಿಮಗೆ ಶೀತದಿಂದ ಉಂಟಾಗಿರುವ ಈ ಸಮಸ್ಯೆ ದೂರವಾಗುವುದು ಖಂಡಿತ. ಚಿಕನ್ ಸೂಪ್ ಇಂತಹ ಕಾಯಿಲೆಗಳಿಗೆಲ್ಲಾ ಒಳ್ಳೆಯ ಆಹಾರವಾಗಿದ್ದು ಎದೆ ಕಟ್ಟಿಕೊಂಡಿ ರುವುದನ್ನು ಕಡಿಮೆ ಮಾಡಿ ಅದಕ್ಕೆ ಬೆರೆಸಿರುವ ಅನೇಕ ಪದಾರ್ಥಗಳಿಂದ ಗಂಟಲು ಉರಿಯೂತವನ್ನೂ ಸಹ ಕಡಿಮೆ ಮಾಡುತ್ತದೆ.


 • ಬಿಸಿ ಹಾಲಿಗೆ ಸ್ವಲ್ಪ ಅರಿಶಿನ

  ಇದು ನಮ್ಮ ಭಾರತೀಯರೇ ಕಂಡು ಹಿಡಿದ ಔಷಧಿ . ಚಿಕ್ಕ ಮಕ್ಕಳಿಗೆ ಶೀತ ಬಾಧೆ ಉಂಟಾದಾಗ ಹಿಂದಿನ ಕಾಲದಲ್ಲಿ ಆಸ್ಪತ್ರೆಗಳಿಲ್ಲದೆ ಮನೆಯಲ್ಲೇ ಹಾಲನ್ನು ಬಿಸಿ ಮಾಡಿ ಅದಕ್ಕೆ ಚಿಟಿಕೆ ಅರಿಶಿನ ಹಾಕಿ ಕುಡಿಸುತ್ತಿದ್ದರು . ಈಗ ದೊಡ್ಡವರೂ ಇದನ್ನು ಅನುಸರಿಸುತ್ತಾರೆ . ಅಷ್ಟು ಪ್ರಖ್ಯಾತಿ ಪಡೆದಿರುವ ಪದ್ಧತಿ ಇದು . ಯಾವುದೇ ತರಹದ ಉರಿಯೂತ ಸಮಸ್ಯೆಗೂ ಹಾಲು ಮತ್ತು ಅರಿಶಿನ ಒಳ್ಳೆಯ ಸ್ನೇಹಿತರಿದ್ದಂತೆ . ಹಾಲು ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಯನ್ನು ಹೆಚ್ಚು ಮಾಡಿದರೆ ಅರಿಶಿನ ಮೊದಲೇ ಹೇಳಿದಂತೆ ಬ್ಯಾಕ್ಟೀರಿಯಾ ಗಳನ್ನು ದೂರವಿಡುತ್ತದೆ . ನೀವು ಸೈನಸ್ ನಿಂದ ಬಳಲುತ್ತಿದ್ದಾಗ ಯಾವ ಯಾವ ಆಹಾರಗಳನ್ನು ತಿನ್ನಬಾರದು


 • ಮೊದಲನೆಯದಾಗಿ ಮೊಸರು

  ಮೊಸರಿಗೆ ದೇಹ ತಂಪು ಮಾಡುವ ಗುಣವಿರುವುದರಿಂದ ಈ ಸಮಯದಲ್ಲಿ ಮೊಸರು ಸೇವನೆಯಿಂದ ಆದಷ್ಟು ದೂರವಿರಿ. ಒಂದು ವೇಳೆ ಸೇವಿಸಿದ್ದೇ ಆದರೆ ಎದೆಯಲ್ಲಿ ಕಫ ಕಟ್ಟಿಕೊಳ್ಳುವುದು , ಸೀನುವುದು, ನೆಗಡಿ, ತಲೆ ನೋವು ಮತ್ತು ಗಂಟಲು ನೋವು ಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾದೀತು ಜೋಕೆ.


 • ಎರಡನೆಯದಾಗಿ ತಣ್ಣನೆಯ ಆಹಾರಗಳು ಮತ್ತು ತಂಪು ಪಾನೀಯಗಳು

  ಫ್ರಿಡ್ಜ್ ನ ಆಹಾರಗಳು ಅದರಲ್ಲೂ ಸಕ್ಕರೆಯುಕ್ತ ಆಹಾರಗಳು ಸೈನಸ್ ಅನ್ನು ಇರುವುದಕ್ಕಿಂತ ಜಾಸ್ತಿ ಮಾಡಲು ಸಹಕಾರಿಯಾಗಿವೆ . ನಮ್ಮ ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವುದಲ್ಲದೆ ನಮ್ಮ ದೇಹಕ್ಕೆ ಬಹಳ ಹಾನಿ ಉಂಟು ಮಾಡುತ್ತದೆ. ಫ್ರಿಡ್ಜ್ ನ ತಣ್ಣನೆಯ ನೀರಂತೂ ಅಲರ್ಜಿಗೆ ಸಹಾಯ ಮಾಡುವುದರಿಂದ ಈ ಸಮಯದಲ್ಲಿ ಬೇಡವೇ ಬೇಡ.

  Most Read: ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!


 • ಮೂರನೆಯದು ಬಾಳೆ ಹಣ್ಣು

  ವೈದ್ಯರು ಒಬ್ಬ ಆರೋಗ್ಯಕರ ಮನುಷ್ಯನಿಗೆ ಪ್ರತಿದಿನ ಒಂದೊಂದು ಬಾಳೆ ಹಣ್ಣನ್ನು ತಿನ್ನಲು ಸೂಚಿಸಿರುತ್ತಾರೆ . ಆದರೆ ಸೈನಸ್ ಇದ್ದವರು ಬಾಳೆ ಹಣ್ಣನ್ನು ದೂರವಿಡಿ . ಏಕೆಂದರೆ ಬಾಳೆ ಹಣ್ಣಿಗೆ ಅದರಲ್ಲೂ ಕಡಿಮೆ ಬೆಲೆಗೆ ಸಿಗುವ ಪಚ್ಚ ಬಾಳೆ ಹಣ್ಣಿಗಂತೂ ದೇಹದ ಉಷ್ಣದ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಇಳಿಕೆ ಮಾಡುವ ಸಾಮರ್ಥ್ಯವಿದ್ದು ಎದೆಯಲ್ಲಿ ಕಫ ಹೆಚ್ಚಿಸುತ್ತದೆ ಮತ್ತು ಗಂಟಲು ಊದಿಕೊಳ್ಳುತ್ತದೆ . ಆದ್ದರಿಂದ ನೀವು ಯಾವಾಗಲೇ ಹಣ್ಣು ತಿಂದರೂ ಒಂದು ಚಿಟಿಕೆ ಉಪ್ಪನ್ನು ಬೆರೆಸಿ ತಿನ್ನುವುದನ್ನು ರೂಡಿ ಮಾಡಿಕೊಳ್ಳಿ . ಏಕೆಂದರೆ ಉಪ್ಪು ಎದೆಯೊಳಗಿನ ಸಿಂಬಳವನ್ನು ಕರಗಿಸುವಲ್ಲಿ ಸಹಾಯ ಮಾಡುತ್ತದೆ , ಕಫ ಕಟ್ಟುವುದನ್ನು ದೂರ ಮಾಡುತ್ತದೆ ಮತ್ತು ಶ್ವಾಸಕೋಶವನ್ನು ಸರಾಗ ಮಾಡುತ್ತದೆ .


 • ರಾತ್ರಿ ಹೊತ್ತು ಅನ್ನ ಅಥವಾ ಹಣ್ಣುಗಳನ್ನು ತಿನ್ನಬೇಡಿ

  ಹಣ್ಣು ಮತ್ತು ಅನ್ನ ಇವೆರಡೂ ದೇಹವನ್ನು ತಂಪಾಗಿಸುವ ಗುಣ ಲಕ್ಷಣಗಳನ್ನು ಹೊಂದಿರುವುದರಿಂದ ರಾತ್ರಿ ಮಲಗುವ ಸಮಯದಲ್ಲಿ ಇವನ್ನು ಸೇವಿಸಬೇಡಿ . ಮೊದಲೇ ರಾತ್ರಿ ಹೊತ್ತು ನಮ್ಮ ದೇಹ ಯಾವುದೇ ಕೆಲಸವಿಲ್ಲದೇ ನಿಶ್ಚಲವಾಗಿರುತ್ತದೆ . ಇವನ್ನು ಸೇವಿಸಿದರೆ ದೇಹ ಇನ್ನಷ್ಟು ತಂಪಾಗಿ ತಲೆ ನೋವು ಮತ್ತು ನೆಗಡಿ ಇದ್ದಕ್ಕಿದ್ದಂತೆ ಶುರುವಾಗಬಹುದು . ಆದ್ದರಿಂದ ಬೇಯಿಸಿದ ಅನ್ನ ಮತ್ತು ಹಣ್ಣುಗಳನ್ನು ನಿಮ್ಮ ದೇಹ ಕಾರ್ಯ ಪ್ರವೃತ್ತಿಯಲ್ಲಿರುವಾಗ ಅಂದರೆ ಮಧ್ಯಾಹ್ನ ಸೇವಿಸಿದರೆ ಒಳ್ಳೆಯದು . ಈ ರೀತಿಯ ಆಹಾರ ಪದ್ದತಿಗಳನ್ನು ಪಾಲಿಸಿ ನಿಮ್ಮ ದೇಹವನ್ನು ಶೀತದ ಲಕ್ಷಣಗಳಿಂದ ಕಾಪಾಡಿಕೊಳ್ಳಿ .
ನಿಮಗೆ ವಿಪರೀತ ತಲೆನೋವು ಬರುತ್ತಿದೆಯೇ? ಶೀತ ಮತ್ತು ಕೆಮ್ಮು ಇದೆಯೇ? ಹಾಗಿದ್ದರೆ " ವಿಕ್ಸ್ ಆಕ್ಷನ್ 500 " ಮಾತ್ರೆ ತಗೊಳ್ಳಿ ಎಂಬ ಟಿವಿ ಜಾಹಿರಾತನ್ನು ನಾವೆಲ್ಲರೂ ಈಗಾಗಲೇ ನೋಡಿರುತ್ತೇವೆ ಕೇಳಿರುತ್ತೇವೆ . ಆದರೆ ಅದನ್ನು ನೋಡಿ ಸುಮ್ಮನೆ ಕಾಲಹರಣವೆಂದು ಸುಮ್ಮನಾಗಿರುತ್ತೇವೆ. ಆದರೆ ಇದು " ಸೈನಸ್ " ಎಂಬ ಭಯಾನಕ ಕಾಯಿಲೆಯ ಲಕ್ಷಣವಾಗಿರಬಹುದು. ಏಕೆಂದರೆ ನಾವೆಲ್ಲರೂ ಅಷ್ಟೇ ಯಾವುದೇ ಕಾಯಿಲೆ ಬಂದರೂ ಕೇವಲ ಹತ್ತು ಇಪ್ಪತ್ತು ರೂಪಾಯಿಯೊಳಗಿನ ಮಾತ್ರೆ ತೆಗೆದುಕೊಂಡು ಕಾಯಿಲೆ ವಾಸಿ ಮಾಡಿಕೊಂಡೆವು ಎಂದು ಖುಷಿ ಪಡುತ್ತೇವೆ.

ಆದರೆ ಕಾಯಿಲೆಯ ದೇಹದ ಒಳಗಿನ ತೀವ್ರತೆ ನಮಗೆ ಗೊತ್ತಾಗುವುದೇ ಅದು ಗಂಭೀರ ಸ್ವರೂಪ ತಾಳಿ ನಮ್ಮನ್ನು ಯಾವ ಕೆಲಸವನ್ನೂ ಮಾಡದಂತೆ ಕಟ್ಟಿ ಹಾಕಿದಾಗ . ಈ ಲೇಖನದಲ್ಲಿ ನಾವು ಸೈನಸ್ ಎಂಬ ಕಾಯಿಲೆಯ ಗುಣ ಲಕ್ಷಣ ಗಳೇನು, ಅದಕ್ಕಿರುವ ಸರಳ ಪರಿಹಾರಗಳೇನು ಮತ್ತು ಬರದಂತೆ ತಡೆಗಟ್ಟುವುದು ಹೇಗೆ ಎಂಬುದರ ಬಗ್ಗೆ ವಿವರವಾಗಿ ತಿಳಿಸುತ್ತೇವೆ .

"ಸೈನಸೈಟಿಸ್" ಒಂದು ಧೀರ್ಘಕಾಲದ ಅಲರ್ಜಿಯಾಗಿದೆ.ಯಾವಾಗಲೂ ಸುರಿಯುವ ಮೂಗು ಅಂದರೆ ನೆಗಡಿ ಮತ್ತು ವಿಪರೀತ ತಲೆನೋವು ಇದರ ಪ್ರಮುಖ ಮತ್ತು ಅತ್ಯಂತ ಕಿರಿಕಿರಿ ಉಂಟುಮಾಡುವ ಲಕ್ಷಣಗಳು. ಯಾವಾಗಲೂ ಸೀನುವುದು ಮತ್ತು ತೇವವಾದ ಊದಿಕೊಂಡಿರುವ ಕಣ್ಣುಗಳನ್ನು ಉಜ್ಜಿ ಉಜ್ಜಿ ಕೆಂಪಾಗಿಸಿಕೊಳ್ಳುವುದು,ಎದೆ ಕಟ್ಟಿಕೊಂಡಂತಾಗುವುದು ಮತ್ತು ಗಂಟಲು ನೋವಿನಿಂದ ಬಳಲಿ ನಿಮ್ಮ ಇಡೀ ದಿನ ಇದರಲ್ಲೇ ಕಳೆಯುವುದಲ್ಲದೆ 3 - 5 ದಿನ ಜ್ವರದಿಂದ ಯಾತನೆ ಅನುಭವಸಬೇಕಾಗಿ ಬರುವುದು ಇದರ ಇನ್ನೊಂದು ಮುಖವಾಡ. ಕೆಲವು ಉಪಯುಕ್ತ ಆಹಾರ ಪದ್ಧತಿಗಳಿಂದ ನೀವು ಈ ಸೈನಸ್ ನಿಂದ ಮತ್ತು ಅದರ ಲಕ್ಷಣಗಳಿಂದ ಸ್ವಲ್ಪ ಮಟ್ಟಿಗೆ ಮುಕ್ತಿ ಪಡೆಯಬಹುದು . ಹಾಗಾದರೆ ಯಾವ್ಯಾವ ಆಹಾರ ಪದ್ದತಿಗಳನ್ನು ಅನುಸರಿಸಬೇಕು?

   
 
ಹೆಲ್ತ್