Back
Home » ಆರೋಗ್ಯ
ಅತಿಯಾದ ಬಿಸಿಲಿಗೆ ತೆಂಗಿನ ಹಾಲಿನ ಸ್ನಾನ ಹಾಗೂ ಅದರ ಆರೋಗ್ಯಕರ ಪ್ರಯೋಜನಗಳು.
Boldsky | 10th Apr, 2019 11:56 AM
 • ಪ್ರಕೃತಿಯ ಕೊಡುಗೆ

  ಪ್ರಕೃತಿಯಲ್ಲಿ ಸಿಗುವ ಗಿಡಮೂಲಿಕೆ, ಹಣ್ಣು ಹಂಪಲು ಹಾಗೂ ಸೊಪ್ಪುಗಳ ಬಳಸಿಕೊಂಡು ಸಾಕಷ್ಟು ಔಷಧಿ ಹಾಗೂ ಉಪಚಾರಗಳನ್ನು ಪಡೆದುಕೊಳ್ಳಬಹುದು. ಹಾಗಾಗಿಯೇ ಆಯುರ್ವೇದ ಔಷಧಿಯು ಅತ್ಯಂತ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವರ್ಷದಲ್ಲಿ ನಾವು ಮೂರು ಋತುಮಾನಗಳನ್ನು ಎದುರಿಸಬೇಕು. ಒಂದು ಕಾಲವು ಅಧಿಕ ಮಳೆಯಿಂದ ಕೂಡಿದ್ದರೆ, ಒಂದು ಕಾಲವು ಅಧಿಕ ಚಳಿಯಿಂದ ಕೂಡಿರುತ್ತದೆ. ಅಂತೆಯೇ ಇನ್ನೊಂದು ಕಾಲವು ಅಧಿಕ ಬಿಸಿಲಿನಿಂದ ಕೂಡಿರುತ್ತದೆ. ಒಂದೊಂದು ಕಾಲದಲ್ಲೂ ಜೀವ ಸಂಕುಲವು ವಿಭಿನ್ನ ಬಗೆಯ ಸಮಸ್ಯೆಯನ್ನು ಎದುರಿಸಬೇಕು. ಜೊತೆಗೆ ಆರೋಗ್ಯದ ವಿಷಯದಲ್ಲಿ ಗಮನಾರ್ಹ ಕಾಳಜಿಯನ್ನು ತೋರಬೇಕಾಗುವುದು.


 • ಬೇಸಿಗೆಯ ಕಾಲ

  ಅಂತಹ ಒಂದು ಬಿಸಿಯಾದ ಕಾಲ ಅಥವಾ ಹೆಚ್ಚಿನ ಆರೈಕೆಯ ಬಗ್ಗೆ ಗಮನ ನೀಡಬೇಕಾದಂತಹ ಕಾಲವೆಂದರೆ ಬೇಸಿಗೆಯ ಕಾಲ. ಬೇಸಿಗೆಯ ಕಾಲದಲ್ಲಿ ಸೂರ್ಯನ ಬಿಸಿ ಹೆಚ್ಚು ಸೆಕೆ ಹಾಗೂ ಉರಿಯನ್ನು ಉಂಟುಮಾಡುವುದು. ಇದು ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಗಮನಾರ್ಹ ಕಿರಿಕಿರಿ ಹಾಗೂ ಅನಾರೋಗ್ಯವನ್ನು ಉಂಟುಮಾಡುವುದು. ಅಂತಹ ಬಿಸಿ ಅಥವಾ ಉರಿಯನ್ನು ಬಹುಬೇಗ ತಣ್ಣಗಾಗಿಸುವ ನೈಸರ್ಗಿಕ ಉತ್ಪನ್ನ ಎಂದರೆ ತೆಂಗಿನ ಕಾಯಿ. ಎಳೆಯ ತೆಂಗಿನ ಕಾಯಿ ಅಥವಾ ಎಳನೀರಿನ ಸೇವನೆಯಿಂದ ದೇಹದಲ್ಲಿ ಸಾಕಷ್ಟು ಸಮತೋಲನ ಹಾಗೂ ಅನಾರೋಗ್ಯವನ್ನು ನಿಯಂತ್ರಿಸುವುದು. ಅಲ್ಲದೆ ತೆಂಗಿನ ಹಾಲು ಹಾಗೂ ಅದರ ಉಪಯೋಗದಿಂದಲೂ ಸಾಕಷ್ಟು ಆರೈಕೆ ವಿಧಾನವನ್ನು ಅನುಸರಿಸಬಹುದು. ಹಾಗಾದರೆ ಆ ಆರೈಕೆ ವಿಧಾನಗಳು ಯಾವವು? ಅವುಗಳ ಬಳಕೆಯ ವಿಧಾನ ಹೇಗೆ? ಎನ್ನುವಂತಹ ಅನೇಕ ವಿಚಾರಗಳನ್ನು ತಿಳಿಯೋಣ ಬನ್ನಿ


 • ಬೇಸಿಗೆಯ ಬಿಸಿಯನ್ನು ತಂಪಾಗಸುವ ಮಾರ್ಗ

  ಬೇಸಿಗೆಯ ಬಸಿಯನ್ನು ಅಲೋವೆರಾ, ದಾಸವಾಳ ಎಲೆ, ತೆಂಗಿನ ಹಾಲು, ಬೇವಿನ ಎಲೆ, ಸೇರಿದಂತೆ ಇನ್ನಿತರ ಆರೋಗ್ಯಕರ ಗುಣವನ್ನು ಹೊಂದಿರುವ ಗಿಡಮೂಲಿಕೆ ಹಾಗೂ ಸಸ್ಯಗಳ ಬಳಸಿಕೊಂಡು ಸ್ನಾನ ಮಾಡುವುದರಿಂದ ದೇಹದ ಉಷ್ಣತೆಯನ್ನು ಗಮನಾರ್ಹ ರೀತಿಯಲ್ಲಿ ನಿಯಂತ್ರಿಸಬಹುದು. ಅವುಗಳಲ್ಲಿ ಇರುವ ಔಷಧೀಯ ಗುಣವು ನಮ್ಮ ದೇಹಕ್ಕೆ ತಂಪಾದ ರಕ್ಷಾ ಕವಚವನ್ನು ನೀಡುತ್ತದೆ. ಜೊತೆಗೆ ಉಷ್ಣತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ನಿಯಂತ್ರಿಸುವುದು. ಅಲ್ಲದೆ ದೇಹವು ಉಷ್ಣತೆಯನ್ನು ತಡೆಯುವ ಅಥವಾ ಸಹಿಸಿಕೊಳ್ಳುವ ಶಕ್ತಿಯನ್ನುಪಡೆದುಕೊಳ್ಳುವುದು.


 • ಮನೆಯಲ್ಲಿಯೇ ಪಡೆಯಬಹುದಾದ ಸ್ನಾನದ ಆರೈಕೆ

  ತೆಂಗಿನ ಕಾಯಿ, ತೆಂಗಿನ ಹಾಲು, ಎಳನೀರು ಎಲ್ಲವೂ ಅದ್ಭುತ ಔಷಧೀಯ ಗುಣವನ್ನು ಪಡೆದುಕೊಂಡಿದೆ. ಇದನ್ನು ಬಳಸಿಕೊಂಡು ಮನೆಯಲ್ಲಿಯೇ ವಿಶೇಷ ಆರೈಕೆಯನ್ನು ಪಡೆದುಕೊಳ್ಳಬಹುದು. ತೆಂಗಿನ ಕಾಯಿ ಹಾಗೂ ತೆಂಗಿನ ಹಾಲಿನಲ್ಲಿ ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಬಿ6, ಕಬ್ಬಿಣಾಂಶ ಹಾಗೂ ಮ್ಯಾಗ್ನಿಸಿಯಂ ಅನ್ನು ಹೇರಳವಾಗಿ ಪಡೆದುಕೊಂಡಿದೆ. ಇವುಗಳ ಬಳಕೆಯಿಂದ ಸ್ನಾನವನ್ನು ಮಾಡಿದರೆ ಅದ್ಭುತ ಆರೈಕೆಯನ್ನು ಪಡೆದುಕೊಳ್ಳ ಬಹುದು.


 • ತೆಂಗಿನ ಹಾಲಿನ ಸ್ನಾನದ ವಿಧಾನ

  *ಒಂದು ಬೌಲ್ಅಲ್ಲಿ ತೆಂಗಿನ ಹಾಲು, ಸ್ವಲ್ಪ ಜೇನುತುಪ್ಪ, ಸ್ವಲ್ಪ ಲೆವೆಂಡರ್ ಹನಿ, ಸ್ವಲ್ಪ ಗುಲಾಬಿ ಎಣ್ಣೆ ಯನ್ನು ಬೆರೆಸಿ.
  *ಎಲ್ಲಾ ಘಟಕವನ್ನು ಚೆನ್ನಾಗಿ ಮಿಶ್ರಗೊಳಿಸಿ, ಸ್ನಾನ ಮಾಡುವ ಬಕೇಟ್ ನೀರಿಗೆ ಸೇರಿಸಿ.
  *ನಂತರ ಬಕೇಟ್ ನೀರಿನಿಂದ ಸ್ನಾನ ಮಾಡುವುದರ ಮೂಲಕ ಸಾಕಷ್ಟು ನಿರಾಳತೆಯನ್ನು ಪಡೆದುಕೊಳ್ಳಬಹುದು.
  *ಅಲ್ಲದೆ ದೇಹದ ಉಷ್ಣತೆಯು ಸಮಾನತೆಯನ್ನು ಪಡೆದುಕೊಳ್ಳಬಹುದು.ಜೊತೆಗೆ ಬಿಸಿಲಿನ ದಗೆಗೆ ತಂಪಾದ ಅನುಭವ ದೊರೆಯುವುದು.


 • ಅರೋಗ್ಯಕರ ರಕ್ತ ಪರಿಚಲನೆ

  ಆರೋಗ್ಯಕರ ರಕ್ತ ಹಾಗೂ ಉತ್ತಮ ರಕ್ತ ಪರಿಚಲನೆಗೆ ಮ್ಯಾಂಗನೀಸ್ ಅತ್ಯಗತ್ಯ. ತೆಂಗಿನ ಹಾಲು ಹಾಗೂ ತೆಂಗಿನ ಕಾಯಲ್ಲಿ ಮ್ಯಾಂಗನೀಸ್ ಪ್ರಮಾಣ ಅತ್ಯಧಿಕವಾಗಿ ಇರುತ್ತದೆ. ಕಾಳುಗಳು ಹಾಗೂ ಒಣಗಿದ ಹಣ್ಣುಗಳಲ್ಲಿ ಇದರ ಪ್ರಮಾಣ ಅಧಿಕವಾಗಿ ಇರುವುದರಿಂದ ಬೇಸಿಗೆಯಲ್ಲಿ ಇವುಗಳನ್ನು ಸಹ ಬಳಸಬಹುದು. ತೆಂಗಿನ ಹಾಲು ಸ್ನಾನ ಹಾಗೂ ಎಳನೀರು ಸೇವನೆಯಿಂದ ಬೇಸಿಗೆಯಲ್ಲಿ ಉತ್ತಮ ರಕ್ತ ಪರಿಚಲನೆ ಪಡೆಯಬಹುದು. ದೇಹವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದು.


 • ದೈಹಿಕ ಕಾರ್ಯಗಳನ್ನು ಸುಗಮವಾಗಿಸಲು

  ತಾಮ್ರದ ಅಂಶ,ದೈಹಿಕ ಕಾರ್ಯಗಳನ್ನು ಸುಗಮವಾಗಿಸಲು ಬೇಕಾಗುವ ಅತ್ಯಂತ ಬಹಳ ಮುಖ್ಯ ಖನಿಜಾಂಶ ಇದಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ಕಾಪರ್ ಅಂಶ ದೇಹವನ್ನು ಸರಿಯಾಗಿಡಲು ಸಹಾಯಕ.


 • ಮೂಳೆಗಳಿಗೂ ಉತ್ತಮ ಆರೋಗ್ಯ ನೀಡುವುದು

  ತೆಂಗಿನ ಹಾಲಿನಲ್ಲಿ ಕ್ಯಾಲ್ಸಿಯಂ ಹೆಚ್ಚಿಲ್ಲದಿದ್ದರೂ ಪೊಟ್ಯಶಿಯಂ ಅಂಶ ಅಧಿಕವಾಗಿರುತ್ತದೆ.ಪೊಟ್ಯಶಿಯಂ ದೇಹದ ಮೂಳೆಗಳನ್ನು ಬಲಯುತ ಆಗಿಸಲು ಸಹಾಯಕವಾಗುತ್ತದೆ. ಇದು ದೇಹಕ್ಕೆ ಫಾಸ್ಫೇಟ್ ಸರಬರಾಜು ಮಾಡುವುದರ ಜೊತೆಗೆ ಕ್ಯಾಲ್ಸಿಯಂ ಮತ್ತು ರಂಜಕ ಸೇರಿ ಮೂಳೆ ಸವೆತವನ್ನು ತಡೆಯುತ್ತವೆ.


 • ರಕ್ತಹೀನತೆ ನಿಯಂತ್ರಿಸುವುದು

  ಪ್ರಪಂಚದ ಎಲ್ಲ ಜನರಲ್ಲೂ ಇರುವ ತೊಂದರೆ ಎಂದರೆ ಕಬ್ಬಿಣದ ಅಂಶದ ಕೊರತೆ.ಕಬ್ಬಿಣದ ಕೊರತೆಯಿಂದ ದೇಹದ ರಕ್ತಕಣಗಳಲ್ಲಿ ಸರಿಯಾದ ಸಂಚಲನೆಯಿಲ್ಲದೆ ಹಿಮೊಗ್ಲೋಬಿನ್ ಅಂಶ ಕಡಿಮೆ ಮಾಡುತ್ತದೆ.ಪರಿಣಾಮವಾಗಿ ಅನೀಮಿಯ ಪ್ರಾರಂಭವಾಗುತ್ತದೆ. ಪ್ರತಿ ಒಂದು ಕಪ್ ತೆಂಗಿನ ಹಾಲಿನಲ್ಲಿ ದಿನಕ್ಕೆ ಬೇಕಾದ ಕಾಲು ಭಾಗದ ಕಬ್ಬಿಣದ ಅಂಶ ಸಿಗುತ್ತದೆ.


 • ಸ್ನಾಯುಗಳು ಮತ್ತು ನರಗಳು ಸಡಿಲಗೊಳ್ಳುತ್ತದೆ

  ನಿಮಗೆ ಸ್ನಾಯು ಸೆಳೆತ ಅಥವಾ ಸಹಿಸಲಾಗದ ನೋವು ಬಂದಲ್ಲಿ ತೆಂಗಿನ ಹಾಲನ್ನು ಉಪಯೋಗಿಸಿ. ಇದರಲ್ಲಿರುವ ಮ್ಯಗ್ನೀಶಿಯಂ ಅಂಶವು ನೋವನ್ನು ಹೋಗಲಾಡಿಸುತ್ತದೆ. ಮ್ಯಗ್ನೀಶಿಯಂ ನರ ಜೀವಕೋಶಗಳಲ್ಲಿ ಒಂದು ಗೇಟ್ ಲಾಕ್ ನಂತೆ ವರ್ತಿಸುತ್ತದೆ.
  ಸ್ನಾಯುಗಳ ಹೆಚ್ಚುವರಿ ಸಂಕೊಚನದಿಂದ ನರಕೋಶಗಳು ಅತಿಕ್ರಿಯಾಶೀಲ ಆಗುವುದುಂಟು.ಮ್ಯಗ್ನೀಶಿಯಂ ದೇಹದಲ್ಲಿ ಇಲ್ಲದಿದ್ದರೆ ದೇಹದಲ್ಲಿರುವ ಕ್ಯಾಲ್ಸಿಯಂ ನರ ಜೀವಕೋಶಗಳು ತುಂಬಾ ಸಕ್ರಿಯವಾಗುತ್ತವೆ.
ಬಿಸಿಯ ಉರಿ ಮೊದಲು ತಂಪನ್ನು ಹುಡುಕುವಂತೆ ಮಾಡುತ್ತದೆ. ಸಾಮಾನ್ಯ ತಾಪಮಾನದಿಂದ ಕೊಂಚ ಉರಿಯ ಬಿಸಿ ಏರಿದರು ದೇಹದಲ್ಲಿ ಸಾಕಷ್ಟು ಅನಾರೋಗ್ಯ ಕಾಣಿಸಿಕೊಳ್ಳುವುದು. ವಾತಾವರಣದಲ್ಲಿ ಸೂರ್ಯನ ತಾಪ ಹೆಚ್ಚಾದಂತೆ ದೇಹದಲ್ಲಿ ಬೆವರಿನ ಗ್ರಂಥಿಗಳು ತೆರೆದುಕೊಳ್ಳುತ್ತವೆ. ಇದರ ಪರಿಣಾಮ ದೇಹದಿಂದ ಹೆಚ್ಚು ನೀರಿನಂಶ ಹೊರ ನೂಕಲ್ಪಡುವುದು. ಅದಕ್ಕೆ ಅನುಗುಣವಾಗಿ ನೀರನ್ನು ಸೇವಿಸುತ್ತಾ ಸಾಗಬೇಕು. ಇಲ್ಲವಾದರೆ ದೇಹದಲ್ಲಿ ನಿರ್ಜಲೀಕರಣ ಉಂಟಾಗಬಹುದು. ಇದು ನಿಧಾನವಾಗಿ ವಿವಿಧ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುವುದು.

ಪ್ರಕೃತಿಯ ವಿಸ್ಮಯವನ್ನು ಮನುಷ್ಯ ಕುಲವಾಗಲೀ ಅಥವಾ ಇನ್ಯಾವುದೋ ಜೀವ ಸಂಕುಲವು ಮೀರಿಸಲು ಸಾಧ್ಯವಿಲ್ಲ. ಏಕೆಂದರೆ ಪರಿಸರದಲ್ಲಿ ಯಾವುದೇ ಬಗೆಯ ವ್ಯತ್ಯಾಸ ಉಂಟಾದರೂ ಅದನ್ನು ಮೀರಸುವ ಅಥವಾ ನಿಯಂತ್ರಿಸುವ ಶಕ್ತಿ ಅಥವಾ ಪರಿಹಾರ ಕ್ರಮಗಳು ಪ್ರಕೃತಿಯಲ್ಲಿಯೇ ಅಡಗಿರುತ್ತವೆ ಎಂದು ಹೇಳಲಾಗುವುದು. ವಾತಾವರಣದಲ್ಲಿ ವಿಕೋಪ ಉಂಟಾದರೂ ಅದನ್ನು ಪುನಃ ಸರಿಪಡಿಸಿಕೊಳ್ಳುವ ಶಕ್ತಿ ಪ್ರಕೃತಿಗೆ ಇದೆ. ಅದೇ ರೀತಿ ಪ್ರಕೃತಿಯಲ್ಲಿ ಉಂಟಾದ ವ್ಯತ್ಯಾಸಗಳಿಂದ ಜೀವ ಸಂಕುಲಕ್ಕೆ ಉಂಟಾಗುವ ತೊಂದರೆ ಗಳನ್ನು ಪ್ರಕೃತಿ ದೇವಿಯೇ ಸರಿಪಡಿಸುವಂತಹ ಔಷಧ ಗಿಡಮೂಲಿಕೆಯನ್ನು ಒಳಗೊಂಡಿದೆ.

 
ಹೆಲ್ತ್