Back
Home » ಗಾಸಿಪ್
ಜಯಲಲಿತಾ ಆದ ಕಾಜೋಲ್, ಶಶಿಕಲಾ ಆದ ಅಮಲಾ ಪೌಲ್.!
Oneindia | 10th Apr, 2019 02:53 PM
 • ಜಯಲಲಿತಾ ಕಾಜೋಲ್

  ಶಶಿಲಲಿತಾ ಚಿತ್ರದಲ್ಲಿ ಇಬ್ಬರದ್ದು ಪ್ರಮುಖ ಪಾತ್ರವಾಗಿದ್ದು, ಜಯಲಲಿತಾ ಪಾತ್ರಕ್ಕಾಗಿ ಬಾಲಿವುಡ್ ನಟಿ ಕಾಜೋಲ್ ಅವರನ್ನ ಸಂಪರ್ಕಿಸಲಾಗಿದೆಯಂತೆ. ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಈ ಸಿನಿಮಾ ಬರುತ್ತಿರುವ ಕಾರಣ ಬಿಟೌನ್ ಇಂಡಸ್ಟ್ರಿಯ ನಟಿಯೊಬ್ಬರು ಇದ್ದರೇ ಉತ್ತಮ ಎಂಬ ನಿರ್ಧಾರ ಮಾಡಿದೆ ಚಿತ್ರತಂಡ.


 • ಶಶಿಕಲಾ ಆಗ್ತಾರಾ ಅಮಲಾ

  ಇನ್ನು ಸೌತ್ ಇಂಡಿಯಾದ ಸ್ಟಾರ್ ನಟಿ ಅಮಲಾ ಪೌಲ್ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಜಯಲಲಿತಾ ಪಾತ್ರದಷ್ಟೇ ಪ್ರಾಮುಖ್ಯತೆ ಹೊಂದಿರುವ ಶಶಿಕಲಾ ಪಾತ್ರದಲ್ಲಿ ಅಮಲಾಗೆ ನಟಿಸುವಂತೆ ಆಫರ್ ಮಾಡಲಾಗಿದೆಯಂತೆ. ಆದ್ರೆ, ಇವರಿಬ್ಬರು ನಟಿಸುವ ಬಗ್ಗೆ ಖಚಿತಪಡಿಸಿಲ್ಲ.


 • ತಲೈವಿ ಆದ ಕಂಗನಾ

  ಮತ್ತೊಂದೆಡೆ ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಜಯಲಲಿತಾ ಅವರ ಬಯೋಪಿಕ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಎ.ಎಲ್ ವಿಜಯ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ವಿಜಯೇಂದ್ರ ಪ್ರಸಾದ್ ಕಥೆ ಬರೆಯುತ್ತಿದ್ದಾರೆ. ತಲೈವಿ ಎಂದು ಈ ಚಿತ್ರಕ್ಕೆ ಟೈಟಲ್ ಇಟ್ಟಿದ್ದು ತಮಿಳು ಮತ್ತು ಹಿಂದಿಯಲ್ಲಿ ಸಿನಿಮಾ ಬರಲಿದೆ.

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ


 • 'ಐರನ್ ಲೇಡಿ' ನಿತ್ಯಾ ಮೆನನ್

  ಈಗಾಗಲೇ ಐರನ್ ಲೇಡಿ ಎಂದು ಮತ್ತೊಂದು ಚಿತ್ರ ಶುರುವಾಗಿದೆ. ಇದು ಕೂಡ ಜಯಲಲಿತಾ ಅವರ ಬಯೋಪಿಕ್ ಆಗಿದ್ದು, ನಿತ್ಯಾ ಮೆನನ್ ಅಮ್ಮನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವರಲಕ್ಷ್ಮಿ ಶರತ್ ಕುಮಾರ್ ಶಶಿಕಲಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯದರ್ಶನಿ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.

  ಊಹೆ ಮಾಡಿದ್ದು ಒಂದು, ಆಗಿದ್ದೇ ಇನ್ನೊಂದು: ನಿತ್ಯಾ ಮೆನನ್ ಗೆ ಇದು ಅದೃಷ್ಟ.!


 • ಆರ್.ಜಿ.ವಿ 'ಶಶಿಕಲಾ'

  ಈ ಎಲ್ಲಾ ಬಯೋಪಿಕ್ ನಡುವೆ ರಾಮ್ ಗೋಪಾಲ್ ವರ್ಮಾ ಕೂಡ ಶಶಿಕಲಾ ಎಂಬ ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಅದು ಯಾವಾಗ ಸೆಟ್ಟೇರುತ್ತೆ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಆದ್ರೆ, ಒಬ್ಬರ ವ್ಯಕ್ತಿ ಬಗ್ಗೆ ಇಷ್ಟೊಂದು ಬಯೋಪಿಕ್ ಚಿತ್ರಗಳು ಬರ್ತಿರುವುದು ನಿಜಕ್ಕೂ ವಿಶೇಷ ಮತ್ತು ಆಶ್ಚರ್ಯ. ಯಾವ ಬಯೋಪಿಕ್ ಯಾವ ಕಥೆ ಹೇಳ್ತಾರೆ ಎನ್ನುವುದು ಕೂಡ ಕುತೂಹಲ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಖ್ಯಾತ ಚಲನಚಿತ್ರ ನಟಿ ಜಯಲಲಿತಾ ಅವರ ಬಯೋಪಿಕ್ ಚಿತ್ರ ಮಾಡಲು ಹಲವರು ಮಗಿಬಿದ್ದಿದ್ದಾರೆ. ಈಗಾಗಲೇ ಕೆಲವು ಸಿನಿಮಾ ಘೋಷಣೆ ಮಾಡಿದ್ದಾರೆ. ಸಿನಿಮಾ ಮಾತ್ರವಲ್ಲದೇ ವೆಬ್ ಸಿರೀಸ್ ಕೂಡ ಆಗಲಿದೆ.

ಇತ್ತೀಚಿಗಷ್ಟೆ 'ಶಶಿಲಲಿತಾ' ಎಂಬ ಸಿನಿಮಾ ಅನೌನ್ಸ್ ಆಗಿತ್ತು. ಜಯಲಲಿತಾ ಮತ್ತು ಆಕೆಯ ಗೆಳೆತಿ ಶಶಿಕಲಾ ಇಬ್ಬರ ಕುರಿತು ಈ ಸಿನಿಮಾ ಮೂಡಿ ಬರುತ್ತಿದ್ದು, ಇವರಿಬ್ಬರ ನಡುವಿನ ಮಿಸ್ಟರಿಯನ್ನ ತೆರೆಮೇಲೆ ತರಲಾಗುತ್ತಿದೆ.

'ಶಶಿಲಲಿತಾ ದಿ ಸ್ಟಾರ್ಮ್' ಸಿನಿಮಾದ ಫಸ್ಟ್ ಲುಕ್ ಬಿಡುಗಡೆ

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಯಾರು ಜಯಲಲಿತಾ ಆಗ್ತಾರೆ, ಯಾರು ಶಶಿಕಲಾ ಆಗ್ತಾರೆ ಎಂಬ ಕುತೂಹಲ ಮೂಡಿತ್ತು. ಇದೀಗ, ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದ್ದು, ಭಾರತೀಯ ಚಿತ್ರರಂಗದ ಇಬ್ಬರು ಸ್ಟಾರ್ ನಟಿಯರು ಬಯೋಪಿಕ್ ನಲ್ಲಿ ನಟಿಸಲಿದ್ದಾರಂತೆ. ಯಾರು ಯಾವ ಪಾತ್ರಕ್ಕೆ? ಮುಂದೆ ಓದಿ.....

   
 
ಹೆಲ್ತ್