Back
Home » ಆರೋಗ್ಯ
ತೂಕ ಇಳಿಸಲಿಕ್ಕೆ ಅರಿಶಿನದ ಬಳಕೆ : ನಿಜಕ್ಕೂ ಈ ವಿಧಾನ ಫಲ ನೀಡುತ್ತದೆಯೇ?
Boldsky | 13th Apr, 2019 03:54 PM
 • ಕುರ್ಕುಮಿನ್

  ಅರಿಶಿನಕ್ಕೆ ಹಳದಿ ಬಣ್ಣ ಬರಲು ಕಾರಣವಾಗಿರುವ ಕುರ್ಕುಮಿನ್ ಎಂಬ ಪೋಷಕಾಂಶವೇ ಇದರ ಔಷಧೀಯ ಗುಣಕ್ಕೂ ಕಾರಣವಾಗಿದೆ. ಅರಿಶಿನದಲ್ಲಿ ಈ ಕುರ್ಕುಮಿನ್ ಪೋಷಕಾಂಶವೇ ಅತ್ಯಂತ ಪ್ರಬಲ ಪೋಷಕಾಂಶವಾಗಿದ್ದು ಇದರಲ್ಲಿ ಉರಿಯೂತ ನಿವಾರಕ ಗುಣ ಹಾಗೂ ಪ್ರಬಲ ಆಂಟಿ ಆಕ್ಸಿಡೆಂಟ್ ಗುಣವನ್ನೂ ಪಡೆದಿದೆ. ಕುರ್ಕುಮಿನ್ ತೂಕ ಇಳಿಸಲು ಹೇಗೆ ನೆರವಾಗುತ್ತದೆ ಎಂಬುದನ್ನು ವಿವರಿಸುವ ಆರು ಕಾರಣಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ..

  Most Read: ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ನೀರು-ಆಯಸ್ಸು ನೂರು!


 • ಕೊಬ್ಬಿನ ಜೀವರಾಸಾಯನಿಕ ಕ್ರಿಯೆಯನ್ನು ಕ್ರಮಬದ್ದಗೊಳಿಸುತ್ತದೆ

  ದೇಹದಲ್ಲಿರುವ ಮೇಧಸ್ಸನ್ನು ನಿಯಂತ್ರಿಸಲು ಕುರ್ಕುಮಿನ್ ನೆರವಾಗುತ್ತದೆ ಹಾಗೂ ಇದು ಸ್ಥೂಲಕಾಯ ಆವರಿಸುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕುರ್ಕುಮಿನ್ ಅನ್ನು ಉರಿಯೂತ ನಿವಾರಕ ಗುಣ ಹೊಂದಿರುವ ಇತರ ಮಸಾಲೆಗಳು ಹಾಗೂ ಮೂಲಿಕೆಗಳೊಂದಿಗೆ ಸೇವಿಸಿದಾಗ ಈ ಗುಣ ಹೆಚ್ಚಿನ ಬಲ ಪಡೆಯುತ್ತದೆ ಹಾಗೂ ತೂಕ ಇಳಿಕೆ ಇನ್ನಷ್ಟು ಶೀಘ್ರವಾಗುತ್ತದೆ. ಸ್ಥೂಲಕಾಯಕ್ಕೆ ಮೂಲವಾಗಿರುವ ಕೊಬ್ಬಿನ ಜೀವಕೋಶಗಳು ಪ್ರೌಢಾವಸ್ಥೆಯನ್ನು ಪಡೆಯುವುದನ್ನು ಈ ಪೋಷಕಾಂಶಗಳು ತಡೆಯುವ ಮೂಲಕ ಅಗತ್ಯ ಮಟ್ಟದ ಕೊಬ್ಬು ಇದ್ದೂ ತೂಕದಲ್ಲಿ ಏರಿಕೆಯಾಗದಂತೆ ತಡೆಯುತ್ತವೆ.


 • ಕುರ್ಕುಮಿನ್ ನ ಇನ್ನೊಂದು ಪಾತ್ರ

  ತೂಕ ಇಳಿಕೆಯಲ್ಲಿ ಕುರ್ಕುಮಿನ್ ನ ಇನ್ನೊಂದು ಪಾತ್ರವೆಂದರೆ ಇದು ದೇಹದಲ್ಲಿರುವ ಬಿಳಿ ಕೊಬ್ಬನ್ನು ಕಂದು ಕೊಬ್ಬಾಗಿ ಪರಿವರ್ತಿಸುವುದಾಗಿದೆ. ಬಿಳಿ ಕೊಬ್ಬು ಎಂದರೆ ಮುಂದಿನ ದಿನಗಳ ಬಳಕೆಗಾಗಿ ಚರ್ಮದ ಅಡಿಯಲ್ಲಿ, ಪ್ರಮುಖ ಅಂಗಗಳ ಸುತ್ತ ಹಾಗೂ ವಿಶೇಷವಾಗಿ ಸೊಂಟದ ಭಾಗದಲ್ಲಿ ಶೇಖರವಾಗಿರುವ ಕೊಬ್ಬು ಆಗಿದೆ. ಸ್ಥೂಲಕಾಯಕ್ಕೆ ಈ ಬಿಳಿ ಕೊಬ್ಬೇ ಪ್ರಮುಖ ಕಾರಣ. ಕಂದು ಕೊಬ್ಬು ಎಂದರೆ ಇಂದಿನ ಚಟುವಟಿಕೆಯ ಅಗತ್ಯಕ್ಕಾಗಿ ಇರುವ ಕೊಬ್ಬು. ಇದು ಗ್ಲುಕೋಸ್ ನೊಂದಿಗೆ ದಹಿಸಲ್ಪಟ್ಟು ಶಕ್ತಿಯಾಗಿ ಬಳಕೆಯಾಗುತ್ತದೆ. ಹಾಗಾಗಿ ಕಂದು ಕೊಬ್ಬು ಇದ್ದಷ್ಟೂ ಇದು ದೈಹಿಕ ಚಟುವಟಿಕೆಯ ಮೂಲಕ ಬಳಸಲ್ಪಟ್ಟು ಕರಗಿ ಹೋಗುವ ಕೊಬ್ಬಾಗಿರುವ ಕಾರಣ ತೂಕ ಹೆಚ್ಚುವುದನ್ನು ತಡೆಯುವುದು ಮಾತ್ರವಲ್ಲ ಕೊಬ್ಬಿನ ಸಂಗ್ರಹವನ್ನು ನಿಧಾನವಾಗಿ ಇಳಿಸಿ ಸ್ಥೂಲಕಾಯವನ್ನೂ ಕಡಿಮೆ ಮಾಡುತ್ತದೆ.


 • ಉರಿಯೂತದ ವಿರುದ್ಧ ಹೋರಾಡುತ್ತದೆ

  ಉರಿಯೂತ ಮತ್ತು ಸ್ಥೂಲಕಾಯ ಎರಡೂ ಗಳಸ್ಯ ಕಂಠಸ್ಯ ಸ್ನೇಹಿತರು. ಒಂದು ವೇಳೆ ಉರಿಯೂತ ಬಹಳವೇ ಹೆಚ್ಚಿದ್ದರೆ ಇದು ದೇಹದ ರಸದೂತಗಳನ್ನೇ ಏರುಪೇರು ಮಾಡಿ ಜೀವರಾಸಾಯನಿಕ ಕ್ರಿಯೆಯನ್ನೇ ಬದಲಿಸಿಬಿಡುತ್ತದೆ ಹಾಗೂ ಅನಗತ್ಯ ಆಹಾರಗಳತ್ತ ಆಕರ್ಷಣೆ ಹೆಚ್ಚಿಸಿ ಸ್ಥೂಲಕಾಯ ಹೆಚ್ಚಿಸುತ್ತದೆ. ಪರ್ಯಾಯವಾಗಿ ಸ್ಥೂಲಕಾಯ ಹೆಚ್ಚಿದಷ್ಟೂ ಅಲ್ಪ ಪ್ರಾಬಲ್ಯದ ಉರಿಯೂತವೂ ಎದುರಾಗಿ ಹೆಚ್ಚುತ್ತಾ ಹೋಗುತ್ತದೆ.
  ಅರಿಶಿನ ಈ ತೊಂದರೆಗೆ ಕಾರಣವಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋದಾಡುವ ಮೂಲಕ ತೊಂದರೆಯ ಮೂಲವನ್ನೇ ನಿವಾರಿಸುತ್ತದೆ. ಅಲ್ಲದೇ ಸ್ಥೂಲಕಾಯದಿಂದ ಇದುವರೆಗೆ ಆಗಿದ್ದ ಹಾನಿಯನ್ನೂ ಸರಿಪಡಿಸುತ್ತದೆ.

  Most Read: ದಿನಕ್ಕೆಷ್ಟು ಪ್ರಮಾಣದಲ್ಲಿ ಅರಿಶಿನ ಸೇವನೆ ಆರೋಗ್ಯಕ್ಕೆ ಉತ್ತಮ?


 • ಜೀವರಾಸಾಯನಿಕ ಕ್ರಿಯೆಯ ತೊಂದರೆಗಳ ವಿರುದ್ದ ಹೋರಾಡುತ್ತದೆ

  ಸಾಮಾನ್ಯವಾಗಿ ಸ್ಥೂಲದೇಹಿಗಳಿಗೆ ಈ ತೊಂದರೆ ಇದ್ದೇ ಇರುತ್ತದೆ. ಪರಿಣಾಮವಾಗಿ ಇವರ ದೇಹದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಟ್ರೈಗ್ಲಿಸರೈಡುಗಳು, ಸೊಂಟದ ಕೊಬ್ಬು, ಅಧಿಕ ರಕ್ತದ ಒತ್ತಡ, ರಕ್ತದ ನೀರಿನಂಶವಾದ ಪ್ಲಾಸ್ಮಾದಲ್ಲಿ ಗ್ಲೂಕೋಸ್ ಅಂಶ ಕಂಡುಬರುವುದು, ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿರುವುದು, ಇನ್ಸುಲಿನ್ ತಾಳಿಕೊಳ್ಳುವ ಶಕ್ತಿ ಕಳೆದುಕೊಂಡಿರುವುದು ಇತ್ಯಾದಿಗಳು ಕಾಣಬರುತ್ತವೆ. ಹಾಗಾಗಿ ಈ ತೊಂದರೆ ಇರುವ ವ್ಯಕ್ತಿಗಳು ತೂಕ ಇಳಿಸಲು ಆರೋಗ್ಯಕರ ಆಹಾರ ಸೇವಿಸಿ ಸಾಕಷ್ಟು ವ್ಯಾಯಾಮ ಮಾಡುತ್ತಿದ್ದರೂ ಇವರ ತೂಕ ಅಷ್ಟು ಸುಲಭಕ್ಕೆ ಇಳಿಯುವುದಿಲ್ಲ.


 • ಅಧ್ಯಯನದಲ್ಲಿ ಕಂಡುಕೊಂಡಂತೆ

  ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಈ ತೊಂದರೆ ಇರುವ ಕೆಲವಾರು ಸ್ಥೂಲದೇಹಿಗಳಿಗೆ ನಿಯಮಿತವಾಗಿ ಕುರ್ಕುಮಿನ್ ಅಂಶವಿರುವ ಆಹಾರವನ್ನು ಸತತವಾಗಿ ಸೇವಿಸುವಂತೆ ಸಲಹೆ ಮಾಡಲಾಗಿತ್ತು. ಪರಿಣಾಮವಾಗಿ ಇವರ ತೂಕದಲ್ಲಿ ಇಳಿಕೆ ಹೆಚ್ಚು ಶೀಘ್ರವಾಗಿದ್ದುದು ಕಂಡುಬಂದಿತ್ತು. ದೇಹದಲ್ಲಿ ಕೊಬ್ಬಿನ ಇಳಿಕೆ, ಸೊಂಟದ ಸುತ್ತಳತೆ ಕಡಿಮೆಯಾಗಿರುವುದು ಹಾಗೂ ಎತ್ತರಕ್ಕೆ ತಕ್ಕ ತೂಕಕ್ಕೆ ಹತ್ತಿರಾಗುತ್ತಿದ್ದುದೂ ಕಂಡುಬಂದಿತ್ತು. ಈ ಅಧ್ಯಯನದ ಮೂಲಕ ಅರಿಶಿನದ ಸೇವನೆಯಿಂದ ದೇಹದ ಹಲವು ಕಾರ್ಯವಿಧಾನಗಳಲ್ಲಿ ನಿಯಂತ್ರಣ ಸಾಧಿಸಲು ಸಾಧ್ಯ ಎಂದು ಸಾಬೀತಾಯಿತು.


 • ಮಾನಸಿಕ ಒತ್ತಡವನ್ನು ಕಡಿಮೆಮಾಡಬಲ್ಲುದು

  ತೂಕದ ಏರಿಕೆಗೆ ಮಾನಸಿಕ ಒತ್ತಡವೂ ಒಂದು ಕಾರಣವಾಗಿದೆ. ಖಿನ್ನತೆ, ಉದ್ವೇಗಗಳು ದೇಹದಲ್ಲಿ ಅಧಿಕ ಪ್ರಮಾನದ ಕಾರ್ಟಿಸೋಲ್ ಎಂಬ ರಸದೂತವನ್ನು ಸ್ರವಿಸಲು ಪ್ರಚೋದನೆ ನೀಡುತ್ತವೆ, ಇವು ದೇಹದ ತೂಕ ಏರಿಕೆಗೆ ನೇರವಾಗಿ ಕಾರಣವಾಗಿವೆ. ಕುರ್ಕುಮಿನ್ ಈ ಕಾರ್ಟಿಸೋಲ್ ಮಟ್ಟವನ್ನು ಕಡಿಮೆಗೊಳಿಸುವ ಕ್ಷಮತೆ ಹೊಂದಿದೆ ಹಾಗೂ ಮೆದುಳಿನ ಮೇಲೆ ಉಂಟುಮಾಡುವ ಋಣಾತ್ಮಕ ಪ್ರಭಾವದಿಂದ ರಕ್ಷಿಸುತ್ತದೆ.


 • ಪಿಕೋಸ್ ಸಂಬಂಧಿತ ತೂಕದ ಏರಿಕೆಯಿಂದ ರಕ್ಷಿಸುತ್ತದೆ

  ಮಹಿಳೆಯರ ದೇಹದಲ್ಲಿ ರಸದೂತಗಳ ಮಟ್ಟದ ಏರುಪೇರಿನಿಂದ ಎದುರಾಗುವ ಪಿಕೋಸ್ (Polycystic ovary syndrome (PCOS) ಮೂಲಕ ತೂಕ ಅಪಾರವಾಗಿ ಏರುತ್ತದೆ. ಅಷ್ಟೇ ಅಲ್ಲ, ಪಿಕೋಸ್ ತೊಂದರೆ ಇರುವ ಮಹಿಳೆಯರ ದೇಹದ ತೂಕವನ್ನು ನಿಯಂತ್ರಿಸುವುದು ಬಹಳವೇ ಕಷ್ಟವಾಗಿದೆ. ಆದರೆ ಅರಿಶಿನದಲ್ಲಿರುವ ಉರಿಯೂತ ನಿವಾರಕ ಗುಣ ಈ ತೊಂದರೆಯನ್ನೂ ನಿಭಾಯಿಸುವ ಮೂಲಕ ತೂಕವನ್ನು ಆರೋಗ್ಯಕರ ಮಟ್ಟದಲ್ಲಿ ಉಳಿಸಿಕೊಳ್ಳಲು ನೆರವಾಗುತ್ತದೆ.


 • ಅರಿಶಿನವನ್ನು ಸೇವಿಸುವ ವಿಧಾನ

  ಅರಿಶಿನವನ್ನು ನಿತ್ಯವೂ ಸೇವಿಸುವ ಮೂಲಕ ಹಲವಾರು ಬಗೆಯ ಪ್ರಯೋಜನಗಳನ್ನು ಪಡೆಯಬಹುದು. ನಿಮ್ಮ ನಿತ್ಯದ ಆಹಾರಗಳಲ್ಲಿ ಅರಿಶಿನವನ್ನು ಬೆರೆಸುವ ಮೂಲಕ, ಅರಿಶಿನ ಸೇರಿಸಿದ ಹಾಲು ಅಥವಾ ಟೀ ಕುಡಿಯುವ ಮೂಲಕ, ನಿಮ್ಮ ನೆಚ್ಚಿನ ಹಣ್ಣಿನ ರಸ, ಕಾಫಿಗಳೊಂದಿಗೆ ಸೇರಿಸಿ ಕುಡಿಯಬಹುದು. ಆದರೆ ದಿನವೊಂದರಲ್ಲಿ ಒಟ್ಟಾರೆ ಪ್ರಮಾಣ ಮೂರು ಗ್ರಾಂಗಿಂತ ಹೆಚ್ಚಾಗಬಾರದು.

  Most Read: ಸಂಧಿವಾತಕ್ಕೆ ಅರಿಶಿನದ ಚಿಕಿತ್ಸೆ-ಒಂದೆರಡು ದಿನಗಳಲ್ಲಿಯೇ ನೋವು ಮಂಗಮಾಯ!


 • ನನಪಿಡಿ

  ತೂಕ ಇಳಿಸಲು ಅರಿಶಿನವೊಂದೇ ನೆರವು ನೀಡಲಾರದು. ಹಾಗಾಗಿ, ಇದರೊಂದಿಗೆ ಉರಿಯೂತ ನಿವಾರಕ ಗುಣವಿರುವ ಇತರ ಆಹಾರಗಳನ್ನೂ ಸೇವಿಸಬೇಕು. ಅಲ್ಲದೇ ಆರೋಗ್ಯಕರ ಆಹಾರ ಸೇವನೆ ಸಾಕಷ್ಟು ವ್ಯಾಯಾಮ, ಅನಗತ್ಯ ಆಹಾರ ಸೇವನೆಯಿಂದ ದೂರವಿರುವುದು ಮೊದಲಾದ ಎಲ್ಲಾ ಕ್ರಮಗಳನ್ನು ಅನುಸರಿಸುವ ಮೂಲಕ ಮಾತ್ರ ತೂಕ ಇಳಿಕೆಯನ್ನು ಸಾಧಿಸಬಹುದು.


 • ಸಲಹೆ

  ಕುರ್ಕುಮಿನ್ ಗೆ ಇಷ್ಟೆಲ್ಲಾ ಗುಣಗಳಿದ್ದರೂ ಇದನ್ನು ನಮ್ಮ ದೇಹ ಪರಿಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವಾಗದಿರುವುದು ಒಂದು ಒಗಟಾಗಿದೆ. ಆದರೆ ಕಾಳುಮೆಣಸಿನಲ್ಲಿರುವ ಫೈಪರಿನ್ ಎಂಬ ಪೋಷಕಾಂಶ ಕುರ್ಕುಮಿನ್ ಹೀರಿಕೊಳ್ಳುವ ಕ್ಷಮತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಅರಿಶಿನ ಮತ್ತು ಕಾಳುಮೆಣಸು ಎರಡನ್ನೂ ಜೊತೆಯಾಗಿ ಸೇವಿಸಬೇಕು. ಮಾರುಕಟ್ಟೆಯಲ್ಲಿ ದೊರಕುವ ಕುರ್ಕುಮಿನ್ ಅಂಶವಿರುವ ಹೆಚ್ಚುವರಿ ಔಷಧಿಗಳಲ್ಲಿಯೂ ಪೈಪರಿನ್ ಅನ್ನು ಸೇರಿಸಿರುತ್ತಾರೆ, ಇದರಿಂದ ಈ ಔಷಧಿಯ ಪರಿಣಾಮಕಾರಿ ಶಕ್ತಿಯನ್ನು ಹೆಚ್ಚಿಸುವಂತೆ ಮಾಡಲಾಗುತ್ತದೆ.
ಅರಿಶಿನ, ಚಿನ್ನದ ಬಣ್ಣದ ಈ ಮಸಾಲೆ ಸಾಮಾಗ್ರಿ ಒಂದು ಅದ್ಭುತ ಔಷಧಿಯೂ ಹೌದು. ಇದರಲ್ಲಿ ಉರಿಯೂತ ನಿವಾರಕ ಗುಣ ಪ್ರಬಲವಾಗಿದ್ದು ಹಲವಾರು ಆರೋಗ್ಯ ಸಂಬಂಧಿ ತೊಂದರೆಗಳಿಗೆ ಔಷಧಿಯ ರೂಪದಲ್ಲಿ ನೆರವು ನೀಡುತ್ತದೆ. ಸಂಧಿವಾತ, ಅಲ್ಜೀಮರ್ಸ್ ಕಾಯಿಲೆ ಹಾಗೂ ಕೆಲವು ಬಗೆಯ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳಿಗೂ ಅರಿಶಿನ ಔಷಧಿಯಾಗಿದೆ. ತೂಕ ಇಳಿಸುವ ಪ್ರಯತ್ನದಲ್ಲಿರುವ ವ್ಯಕ್ತಿಗಳು ಅರಿಶಿನ ತೂಕ ಇಳಿಸಲು ನೆರವಾಗುತ್ತದೆ ಎಂಬ ಮಾಹಿತಿಯನ್ನು ನೋಡಿ ಗಮನಿಸಿಯೇ ಇರುತ್ತಾರೆ. ಆದರೆ ವಾಸ್ತವವಾಗಿ ಅರಿಶಿನದ ಸೇವನೆಯಿಂದ ನಿಜಕ್ಕೂ ತೂಕ ಕಡಿಮೆಯಾಗುತ್ತದೆಯೇ? ಉತ್ತರಕ್ಕಾಗಿ ಇಂದಿನ ಲೇಖನವನ್ನು ಓದಿ:

   
 
ಹೆಲ್ತ್