Back
Home » ಬಾಲಿವುಡ್
ಮೋದಿ ವಿಷಯಕ್ಕೆ ಟ್ರೋಲ್ : ಪ್ರತಿಕ್ರಿಯೆ ನೀಡಿದ ಅನುರಾಗ್ ಕಶ್ಯಪ್
Oneindia | 13th Apr, 2019 04:16 PM

ಚುನಾವಣಾ ಸಮಯದಲ್ಲಿ ಬಾಲಿವುಡ್ ನಿರ್ದೇಶಕ, ನಿರ್ಮಾಪಕ ಅನುರಾಗ್ ಕಶ್ಯಪ್ ಟ್ರೋಲ್ ಆಗುತ್ತಿದ್ದಾರೆ. ತಮ್ಮ ಬಗ್ಗೆ ಆಗುತ್ತಿರುವ ಟ್ರೋಲ್ ನೋಡಿ ಸುಮ್ಮನೆ ಇರದ ಅವರು ಅವುಗಳಿಗೆ ಉತ್ತರ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮೋದಿ ವಿರುದ್ಧ ಬಾಲಿವುಡ್ ಚಿತ್ರರಂಗದ ಹಾಗೂ ರಂಗಭೂಮಿಯ ಅನೇಕರು ಸಿಹಿ ಸಂಗ್ರಹ ಮಾಡಿದ್ದರು. ಬಿಜೆಪಿಯನ್ನು ವಿರೋಧಿಸಿ ಸಹಿ ಹಾಕಿದವರಲ್ಲಿ ನಿರ್ದೇಶಕ ಅನುರಾಗ್ ಕಶ್ಯಪ್ ಕೂಡ ಒಬ್ಬರಾಗಿದ್ದರು.

ಮತದಾನ ಮಾಡಿದ ರಾಜಮೌಳಿ ಅಂಡ್ ಟೀಮ್

ಹೀಗಿರುವಾಗ, ಅನುರಾಗ್ ಕಶ್ಯಪ್ ಮೋದಿಗೆ ಮತ ಹಾಕುವಂತೆ ಒಂದು ಮೆಸೇಜ್ ಅನ್ನು ಸ್ವೀಕರಿಸುತ್ತಾರೆ. ಆ ಸಂದೇಶವನ್ನು ಕಳುಹಿಸಿದ್ದರು ಅಖಿಲ ಭಾರತ ಸಿನಿಮಾ ಕಾರ್ಮಿಕರ ಸಂಘದ ಅಧ್ಯಕ್ಷ ಗೌರಕ್ಷಾ ಧೋತ್ರೆ.

ಬಿಜೆಪಿಗೆ ಮತ ಹಾಕುವಂತೆ ಕಳುಹಿಸಿದ ಈ ಮೆಸೇಜ್ ನ ಸ್ರೀನ್ಸ್ ಶಾಟ್ ಅನ್ನು ಟ್ರೋಲ್ ಮಾಡಲು ಶುರು ಮಾಡಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡುರುವ ಅನುರಾಗ್ ''ಇದು ತಮಾಷೆಯಾಗಿದೆ. ಟ್ರೋಲ್ ಮಾಡುವವರು ಒಬ್ಬರ ಪರ ನಿಂತುಕೊಂಡಿದ್ದಾರೆ. ಹೆಚ್ಚು ಹೆಚ್ಚು ಟ್ರೋಲ್ ಮಾಡಿದ ಮಾತ್ರಕ್ಕೆ ನಮ್ಮನ್ನು ಸುಮ್ಮನೆ ಇರುವಂತೆ ಮಾಡಬಹುದು ಎಂದುಕೊಂಡಿದ್ದಾರೆ.'' ಎಂದು ಟ್ವೀಟ್ ಮಾಡಿದ್ದಾರೆ.

ಮೋದಿ ಚಿತ್ರದ ಹಿಂದೆಯೇ ಬರ್ತಿವೆ ಮತ್ತಷ್ಟು ರಾಜಕಾರಣಿಗಳ ಬಯೋಪಿಕ್

ಟ್ರೋಲ್ ಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿರುವ ಅವರು ಚುನಾವಣಾ ಸಮಯ ಅಂತ, ಅಥವಾ ದುಡ್ಡು ಪಡೆದು ಈ ರೀತಿ ಮಾಡುತ್ತಿದ್ದೀರಿ ಎಂದಿದ್ದಾರೆ.

   
 
ಹೆಲ್ತ್