Back
Home » ಆರೋಗ್ಯ
ವಯಸ್ಸಿಗೆ ಅನುಗುಣವಾಗಿ, ನೀವು ರೂಢಿಸಿಕೊಳ್ಳಬೇಕಾದ ಬಾಯಿ ಶುಚಿತ್ವದ ಅಭ್ಯಾಸಗಳು
Boldsky | 13th Apr, 2019 05:01 PM
 • ಮಕ್ಕಳ ಹಲ್ಲುಗಳ ರಕ್ಷಣೆ

  * ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲ್ಲಿನ ಸಮಸ್ಯೆಗಳನ್ನು ಪೋಷಕರು ಕಾಲ ಕಾಲಕ್ಕೆ ತಕ್ಕಂತೆ ಗಮನಿಸಿ ಅದನ್ನು ಸರಿಯಾದ ರೀತಿಯಲ್ಲಿ ಗುಣಪಡಿಸುವಂತವರಾಗಬೇಕು.
  * ಆಹಾರ ಸೇವಿಸಿದ ನಂತರ ಮಕ್ಕಳ ಹಲ್ಲುಗಳ ಮೇಲೆ ಕಚ್ಚಿಕೊಳ್ಳುವ ಮೃದುವಾದ ಮತ್ತು ಕಠಿಣವಾದ ಆಹಾರದ ಉಳಿಕೆಗಳು .
  * ಹುಳುಕು ಹಲ್ಲುಗಳು ( ಹಲ್ಲುಗಳ ಪದರ ಕಪ್ಪು ಬಣ್ಣಕ್ಕೆ ತಿರುಗಿ ದಂತಕವಚ ಹಾಳಾಗುವುದು ) .
  * ಹಲ್ಲುಗಳ ಜೋಡಣೆ ( ಮಕ್ಕಳಿಗೆ ಎಳೆ ಹಲ್ಲುಗಳಾದ್ದರಿಂದ ಗಟ್ಟಿ ಪದಾರ್ಥಗಳನ್ನು ತಿಂದರೆ ಹಲ್ಲುಗಳು ವಕ್ರವಾಗಿ ತಿರುಗಲು ಶುರು ಮಾಡುತ್ತವೆ .ಭವಿಷ್ಯದಲ್ಲಿ ಈ ಸಮಸ್ಯೆ ದೊಡ್ಡದಾಗಿ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಬಹುದು . ಆದ್ದರಿಂದ ಪೋಷಕರು ಇದನ್ನು ಆಗಾಗ್ಗೆ ಗಮನಿಸುತ್ತಿರಬೇಕು .) ಆರಂಭದಲ್ಲೇ ಸೂಕ್ತ ಪ್ರಯತ್ನಗಳಿಂದ ವೈದ್ಯರ ಸಲಹೆ ಪಡೆದು ಇದನ್ನು ಸರಿಪಡಿಸಬಹುದು .
  * ಮಕ್ಕಳ ಹಾಲು ಹಲ್ಲಿನ ರಕ್ಷಣೆ ಎಲ್ಲಾ ಕೋನಗಳಿಂದ ಮಾಡಬೇಕು .
  * ಪ್ರೌಢಾವಸ್ಥೆಗೆ ಬರುವ ಮುಂಚೆ ಹಲ್ಲುಗಳ ಕೊಳೆಯುವಿಕೆಯನ್ನು ತಡೆಗಟ್ಟಬೇಕು.

  Most Read: ಬಾಯಿ ದುರ್ವಾಸನೆಗೆ ಇಲ್ಲಿದೆ ನೋಡಿ 12 ಸರಳ ಮನೆಮದ್ದುಗಳು


 • ದೊಡ್ಡವರಲ್ಲಿ ತಲೆದೋರುವ ವಿವಿಧ ಬಗೆಯ ಹಲ್ಲಿನ ಸಮಸ್ಯೆಗಳು

  * ಹಲ್ಲುಗಳ ಮೇಲೆ ಕಚ್ಚಿಕೊಳ್ಳುವ ಮೃದುವಾದ ಮತ್ತು ಕಠಿಣವಾದ ಆಹಾರದ ಉಳಿಕೆಗಳು .
  * ಹಲ್ಲುಗಳ ಹೈಪರ್ ಸೆನ್ಸಿಟಿವಿಟಿ .
  * ಹಲ್ಲುಗಳು ಒಂದಕ್ಕೊಂದು ಅಂತರ ಕಾಯ್ದುಕೊಂಡಿರುವುದು , ಹಲ್ಲುಗಳ ನಡುವೆ ಅಸಮರ್ಪಕ ಸಂಪರ್ಕ .
  * ಹಲ್ಲುಗಳು ಕೊಳೆಯುವಿಕೆ .
  * ಒಂದೇ ಸಮನೆ ಹಲ್ಲುಗಳು ಜೋಡಣೆ ಆಗದಿರುವುದು .
  * ಬೇರುಗಳ ನಿಶ್ಯಕ್ತಿಯಿಂದ ಹಲ್ಲುಗಳು ಅಲ್ಲಾಡುವುದು .
  * ಹಲ್ಲುಗಳ ಪದರ ಕಳಚಿಕೊಳ್ಳುವುದು
  * ಹಲ್ಲುಗಳ ಮೇಲೆ ಅತಿ ಹೆಚ್ಚು ಕಪ್ಪು ಬಣ್ಣದ ಚುಕ್ಕಿಗಳು ಕಾಣಿಸಿಕೊಳ್ಳುವುದು .
  * ಹಲ್ಲುಗಳ ವಸಡಿನ ಊತ
  * ಎಷ್ಟೇ ತೊಳೆದರೂ ಬಾಯಿ ದುರ್ವಾಸನೆಯಿಂದ ಕೂಡಿರುವುದು .


 • ವಯಸ್ಸಾದವರಲ್ಲಿ ಕಾಡುವ ಹಲ್ಲಿನ ಸಮಸ್ಯೆಗಳು

  * ಬಾಯಿಯಲ್ಲಿ ಉತ್ಪತ್ತಿಯಾಗುವ ಲಾಲಾರಸ ಕಡಿಮೆಯಾಗಿ ಸದಾ ಬಾಯಿ ಒಣಗುವುದು
  * ಬಾಯಿ ಉರಿಯುವಿಕೆಯ ಅನುಭವ ಉಂಟಾಗುವುದು ( ಹೆಚ್ಚಾಗಿ ಹೆಂಗಸರಲ್ಲಿ ಕಂಡುಬರುತ್ತದೆ )
  * ಗಟ್ಟಿ ಪದಾರ್ಥಗಳನ್ನು ಕೊಟ್ಟರೆ ಅಗೆಯಲು ಆಗದೇ ದವಡೆ ನೋವು ಬರುವುದು
  * ದವಡೆ ಕೀಳುಗಳಲ್ಲಿ ಆಗಾಗ್ಗೆ ನೋವು ಕಾಣಿಸುತ್ತಲೇ ಇರುವುದು
  * ಇನ್ನೂ ಅನೇಕ ಬಗೆಯ ದಂತ ಸಂಬಂಧಿ ರೋಗಗಳು
  ಹಾಗಾದರೆ ನಮ್ಮ ಬಾಯಿಯ ಅಥವಾ ಹಲ್ಲುಗಳ ಆರೋಗ್ಯ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಲು .....


 • ಏನೆಲ್ಲಾ ಮಾಡಬೇಕು ?

  * ದಿನಕ್ಕೆ ಎರಡು ಬಾರಿಯಂತೆ ಪ್ರತಿದಿನವೂ ಬೆಳಗ್ಗೆ ಸಂಜೆ ಟೂತ್ ಬ್ರಷ್ ಮತ್ತು ಟೂತ್ ಪೇಸ್ಟ್ ಸಹಾಯದಿಂದ ಉದ್ದುದ್ದವಾಗಿ ಹಲ್ಲುಜ್ಜಬೇಕು .
  * ಹಲ್ಲುಗಳ ಮದ್ಯದಲ್ಲಿ ಸಿಕ್ಕಿಹಾಕಿಕೊಂಡಿರುವ ಆಹಾರದ ಉಳಿಕೆಗಳನ್ನು ಟೂತ್ ಪಿಕ್ ನ ಸಹಾಯದಿಂದ ತೆಗೆಯಬೇಕು .
  * ನಾಲಗೆಯನ್ನು ಟೂತ್ ಬ್ರಷ್ ಅಥವಾ ಟಂಗ್ ಕ್ಲೀನರ್ ನಿಂದ ಉಜ್ಜಬೇಕು .
  * ಪ್ರತಿ ಆರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳುವುದು.

  Most Read: ನಿದ್ದೆ ಕೆಡಿಸುವ ಹಲ್ಲು ನೋವಿಗೆ, ಪವರ್ ಫುಲ್ ಮನೆಮದ್ದು


 • ಏನೆಲ್ಲಾ ಮಾಡಬಾರದು ?

  * ಧೂಮಪಾನ ಮಾಡಬಾರದು . ಮಾಡುತ್ತಿದ್ದರೆ ಸಂಪೂರ್ಣವಾಗಿ ತ್ಯಜಿಸಬೇಕು . ಧೂಮಪಾನ ಕೇವಲ ಬಾಯಿಯ ಆರೋಗ್ಯಕ್ಕಷ್ಟೇ ಅಲ್ಲದೆ ಸಂಪೂರ್ಣ ದೇಹದ ಆರೋಗ್ಯಕ್ಕೆ ಹಾನಿಕರ .
  * ತಂಬಾಕು ಜಿಗಿಯುವುದನ್ನು ನಿಲ್ಲಿಸಬೇಕು . ತಂಬಾಕು ಸೇವನೆ ಸಹ ಆರೋಗ್ಯಕ್ಕೆ ಹಾನಿಕರ .
  * ಒತ್ತಡದಿಂದ ಅಥವಾ ಬಿಗಿಯಾಗಿ ಹಲ್ಲು ಕಡಿಯಬಾರದು .
  * ಟೂತ್ ಪಿಕ್ ಗಳನ್ನು ಯಾವಾಗ ಅಂದರೆ ಆವಾಗ ಸದಾ ಬಳಸುವುದನ್ನು ಬಿಡಬೇಕು . ಇದರಿಂದ ಹಲ್ಲುಗಳ ಮದ್ಯೆ ಅಂತರ ದೊಡ್ಡದಾಗುತ್ತಾ ಹೋಗುತ್ತದೆ .
  * ಅಂಟು ಪದಾರ್ಥಗಳನ್ನು ಮತ್ತು ಸಿಹಿ ಆಹಾರ ಪದಾರ್ಥಗಳನ್ನು ತಿಂದು ಬಾಯಿ ತೊಳೆಯದೆ ಹಾಗೆ ತಕ್ಷಣ ಮಲಗುವ ಅಭ್ಯಾಸವನ್ನು ಬಿಡಬೇಕು .
  ಈ ಎಲ್ಲಾ ಒಳ್ಳೆಯ ಆರೋಗ್ಯಕರ ಬೆಳೆವಣಿಗೆಗಳನ್ನು ಪ್ರತಿಯೊಬ್ಬರೂ ಆದಷ್ಟು ಬೇಗನೆ ರೂಡಿ ಮಾಡಿಕೊಂಡು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ .
ಒಬ್ಬ ಆರೋಗ್ಯವಂತ ವ್ಯಕ್ತಿಗೆ ತಾನು ಸುಂದರವಾಗಿ ಕಾಣಲು ಹೇಗೆ ತನ್ನ ಎಲ್ಲಾ ಅಂಗಗಳೂ ಮುಖ್ಯವೋ ಅದೇ ತರಹ ಬಾಯಿಯೊಳಗಿನ ಹಲ್ಲುಗಳೂ ಅಷ್ಟೇ ಮುಖ್ಯ . ಮಕ್ಕಳಿಗಂತೂ ಬಾಯಿಯೊಳಗೆ ಹಲ್ಲುಗಳನ್ನು ನೋಡಿದರೆ ದಾಳಿಂಬೆ ಬೀಜಗಳನ್ನು ಜೋಡಿಸಿದಂತೆ ನೋಡಿದವರಿಗೆ ಭಾಸವಾಗುತ್ತದೆ . ಹಲ್ಲುಗಳು ಸುಂದರವಾಗಿ ಕಾಣುವುದಷ್ಟೇ ಅಲ್ಲದೆ ಅವುಗಳ ಆರೋಗ್ಯ ಕಾಪಾಡಿಕೊಳ್ಳುವುದು ಅವುಗಳ ಮಾಲೀಕರಾದ ನಮ್ಮ ಆದ್ಯ ಕರ್ತವ್ಯ . ಅದರಂತೆ ನಮಗಿಂತ ದೊಡ್ಡವರಾದ ನಮ್ಮ ತಂದೆ ತಾಯಂದಿರು ನಮಗೆ ಚಿಕ್ಕಂದಿನಿಂದ ಬಾಯಿ ತೊಳೆದು ಆಹಾರ ಸೇವಿಸುವ ಒಳ್ಳೆಯ ಆರೋಗ್ಯಕರ ಅಭ್ಯಾಸ ರೂಡಿ ಮಾಡಿರುತ್ತಾರೆ . ಇದನ್ನೇ ಕಲಿತ ನಾವು ನಮ್ಮ ಮಕ್ಕಳಿಗೆ ಇದೆ ತರಹ ಹೇಳಿ ಕೊಡುತ್ತೇವೆ .

ನಮ್ಮ ಮಕ್ಕಳಿಗೆ ಆರೋಗ್ಯಕರ ಹಲ್ಲುಗಳನ್ನು " ಬೆಳೆಸಲು " ಮುಂಜಾಗರೂಕತೆ ವಹಿಸಿದರೆ ನಮ್ಮ ಹಲ್ಲುಗಳಿಗೆ ಅವನ್ನು ಆರೋಗ್ಯವಾಗಿ " ಉಳಿಸಿಕೊಳ್ಳಲು ಮತ್ತು ಕಾಪಾಡಿಕೊಳ್ಳಲು " ಜಾಗರೂಕತೆ ವಹಿಸುತ್ತೇವೆ . ಇಷ್ಟಾದರೂ ಒಮ್ಮೊಮ್ಮೆ ನಮ್ಮ ಗಳ ಹಲ್ಲುಗಳಿಗೆ ಕಾಯಿಲೆ ಅಥವಾ ಬಾಧೆ ತಪ್ಪಿದ್ದಲ್ಲ .ಕೆಲವರಿಗೆ ಹುಳುಕು ಹಲ್ಲಾದರೆ ಇನ್ನೂ ಕೆಲವರಿಗೆ ಗಟ್ಟಿ ಪದಾರ್ಥ ತಿಂದಾಗ ಬರುವ ಹಲ್ಲು ನೋವು ಬಹಳವೇ ಕಷ್ಟ ಕೊಡುತ್ತದೆ . ನಮ್ಮ ಹಲ್ಲುಗಳ ಮತ್ತು ನಮ್ಮ ದೇಹದ ಆರೋಗ್ಯ ನಮ್ಮ ದೈನಂದಿನ ಅಭ್ಯಾಸಗಳ ಮೇಲೆ ಅವಲಂಬಿತವಾಗಿರುತ್ತದೆ . ನಾವು ತಿನ್ನುವ ಆಹಾರದಲ್ಲಿ ಎಷ್ಟು ಪ್ರಮಾಣದ " ಕ್ಯಾಲ್ಸಿಯಂ " ನಮ್ಮ ದೇಹವನ್ನು ಪ್ರವೇಶಿಸುತ್ತದೋ ಅಷ್ಟೂ ನಮ್ಮ ಹಲ್ಲುಗಳು ಮತ್ತು ಮೂಳೆಗಳು ಗಟ್ಟಿ ಮುಟ್ಟಾಗಿರುತ್ತವೆ . ಮಕ್ಕಳಿಂದ ಹಿಡಿದು ದೊಡ್ಡವರ ಸಹಿತ ವಿವಿಧ ವಯಸ್ಸಿನವರಿಗೆ ಕಾಡುವ ದಂತ ಸಮಸ್ಯೆಗಳನ್ನೂ ಮತ್ತು ಅವುಗಳಿಗೆ ಪರಿಹಾರ ಮಾರ್ಗೋಪಾಯಗಳನ್ನು ನಾವು ಇಲ್ಲಿ ಹೇಳಲು ಹೊರಟಿದ್ದೇವೆ . ದಯವಿಟ್ಟು ಗಮನಿಸಿ .

   
 
ಹೆಲ್ತ್