Back
Home » ಇತ್ತೀಚಿನ
ಪ್ರತಿ ದಿನ ಟ್ವೀಟರ್ ನಲ್ಲಿ ಫಾಲೋ ಮಾಡುವ ಅಕೌಂಟ್ ಗಳಿಗೆ ಕಡಿವಾಣ
Gizbot | 13th Apr, 2019 07:01 PM
 • 400 ಅಕೌಂಟ್ ಗಳಿಗೆ ಸೀಮಿತ!

  ಮೊದಲು 1000 ಅಕೌಂಟ್ ಗಳನ್ನು ಒಂದು ದಿನ ಫಾಲೋ ಮಾಡುವುದಕ್ಕೆ ಅವಕಾಶವಿತ್ತು. ಇದೀಗ ಈ ಸಂಖ್ಯೆಯನ್ನು ಇಳಿಕೆ ಮಾಡಲಾಗಿದ್ದು ಕೇವಲ 400 ಅಕೌಂಟ್ ಗಳಿಗೆ ಸೀಮಿತಗೊಳಿಸಲಾಗಿದೆ.


 • ಟ್ವೀಟರ್ ಹೇಳಿಕೆ:

  "ಫಾಲೋ, ಅನ್ ಫಾಲೋ, ಫಾಲೋ, ಅನ್ ಫಾಲೋ?" ಈ ರೀತಿ ಯಾರು ಮಾಡ್ತಾರೆ ಹೇಳಿ. ಕೇವಲ ದುರುದ್ದೇಶಪೂರಿತವಾಗಿರುವವರು ಮಾತ್ರ! ಅದೇ ಕಾರಣಕ್ಕೆ ನಾವು ಇದೀಗ ಪ್ರತಿದಿನ ಅಕೌಂಟ್ ಗಳನ್ನು ಫಾಲೋ ಮಾಡಲು ಇರುವ ಸಂಖ್ಯೆಯನ್ನು 1000 ದಿಂದ 400 ಕ್ಕೆ ಇಳಿಸುತ್ತಿದ್ದೇವೆ. ನೀವು ಚಿಂತಿಸುವ ಅಗತ್ಯವಿಲ್ಲ. ನೀವು ಆರಾಮಾಗಿರಬಹುದು ಎಂದು ಟ್ವೀಟರ್ ಅಕೌಂಟ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ತಿಳಿಸಿದೆ.


 • ಪ್ರಶ್ನೆ:

  ಟ್ವೀಟರ್ ಅನುಸರಿಸುತ್ತಿರುವ ಪ್ರೊಸೆಸ್ ಗೆ ಸಾಮಾನ್ಯವಾಗಿ ಫಾಲೋವರ್ ಚರ್ನ್ ಅಥವಾ ಮಚ್ಚೆ ಎನ್ನಲಾಗುತ್ತದೆ. ಇಲ್ಲಿ ಅಕೌಂಟ್ ಗಳು ಫಾಲೋ ಮತ್ತು ಅನ್ ಫಾಲೋ ಪ್ರಕ್ರಿಯೆಯನ್ನು ನಡೆಸುತ್ತವೆ. ಇವುಗಳನ್ನು ಹುಡುಕುವ ಪ್ರಯತ್ನ ನಡೆಸಲಾಗುತ್ತದೆ. ಆದರೆ ಇಲ್ಲಿ ಪ್ರಶ್ನೆಯಾಗಿರುವುದು ಕೇವಲ 400 ಅಕೌಂಟ್ ಗಳಿಗೆ ಲಿಮಿಟ್ ಮಾಡುವ ಮೂಲಕ ಅದ್ಹೇಗೆ ದುರುದ್ದೇಶಪೂರಿತ ಅಕೌಂಟ್ ಗಳನ್ನು ಸಾಯಿಸಲಾಗುತ್ತದೆ ಎಂಬುದಾಗಿದೆ.ಒಂದು ದಿನದಲ್ಲಿ 400 ಅಕೌಂಟ್ ಗಳನ್ನು ಫಾಲೋ ಮಾಡುವುದು ಸಾಮಾನ್ಯ ವಿಚಾರವೇನಲ್ಲ.


 • ಮುಖ್ಯಸ್ಥರ ಅಭಿಪ್ರಾಯ:

  400 ಯಾಕೆ ಅನ್ನೋ ಪ್ರಶ್ನೆಗೆ ಟ್ವೀಟರ್ನ ಸೈಟ್ ಸಮಗ್ರತೆಯ ಮುಖ್ಯಸ್ಥರಾಗಿರುವ ಯೋಯಲ್ ರೋತ್ ಅವರು ಹೇಳುವ ಪ್ರಕಾರ ಈ ಸಂಖ್ಯೆಯನ್ನು ಸೀಮಿತಗೊಳಿಸುವುದರಿಂದ ಸ್ಪ್ಯಾಮಿಂಗ್ ಅನ್ನು ಕಡಿಮೆ ಪರಿಣಾಕಾರಿಯಾಗಿಸಬಹುದು. ಸ್ಪ್ಯಾಮ್ ರೇಟ್ ನ್ನು ಕಡಿಮೆ ಮಾಡುವುದರಿಂದಾಗಿ ಜನರು ತಾವು ಅನುಸರಿಸುವ ಜನರನ್ನು ಬ್ಯಾಲೆನ್ಸ್ ಮಾಡುವುದಕ್ಕೆ ಅನುವು ನೀಡುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.


 • ಸ್ಪ್ಯಾಮ್ ರೇಟ್:

  ನಾವು ನೋಡಿರುವ ಪ್ರಕಾರ 400 ಅಕೌಂಟ್ ಗಿಂತಲೂ ಹೆಚ್ಚು ಅಕೌಂಟ್ ಗಳನ್ನು ಪ್ರತಿದಿನ ಫಾಲೋ ಮಾಡುವ ಅರ್ಧಕ್ಕಿಂತಲೂ ಹೆಚ್ಚು ಅಕೌಂಟ್ ಗಳು ದುರುದ್ದೇಶಪೂರಿತವಾಗಿವೆ. ಬ್ಲಾಕ್ ಆಗುವಿಕೆ ಮತ್ತು ಸ್ಪ್ಯಾಮ್ ರೇಟ್ ಕೂಡ ಈ ಸಂಖ್ಯೆಯಲ್ಲಿದೆ. 20 ಮಿಲಿಯನ್ ಫಾಲೋಗಳು ಈ ರೀತಿ ನಡೆಯುತ್ತಿದೆ. ಹಾಗಾಗಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

  ಎಷ್ಟು ಮಂದಿಗೆ ಎಫೆಕ್ಟ್:

  99.87% ಟ್ವೀಟರ್ ಬಳಕೆದಾರರು ಈ ಹೊಸ ಲಿಮಿಟ್ ನಿಂದಾಗಿ ಪರಿಣಾಮಕ್ಕೆ ಒಳಗಾಗುತ್ತಾರೆ. ಉಳಿದ ಅಕೌಂಟ್ ಗಳಿಗೆ ಕಸ್ಟಮರ್ ಕೇರ್ ಬೆಂಬಲವಿರುತ್ತದೆ. ಆದರೆ ಕೆಲವು ಬ್ಯುಸಿನೆಸ್ ಸಂಬಂಧಿತ ಅಕೌಂಟ್ ಗಳಿಗೆ ಖಂಡಿತ 400 ಕ್ಕಿಂತಲೂ ಅಧಿಕ ಅಕೌಂಟ್ ಗಳ ಫಾಲೋ ಮಾಡುವ ಅಗತ್ಯವಿದೆ. ಆದರೆ ಅವರಿಗಾಗುವ ತೊಂದರೆಯನ್ನು ಪರಿಹರಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಒತ್ತಡವನ್ನು ಕಡಿಮೆ ಮಾಡುವುದಕ್ಕೂ ನಾವು ಇಚ್ಛಿಸುತ್ತೇವೆ ಎಂದು ಅವರು ಹೇಳಿದ್ದಾರೆ.

  ಒಟ್ಟಾರೆ ಟ್ವೀಟರ್ ಇದೀಗ ಫೇಕ್ ಅಕೌಂಟ್ ಗಳಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗುತ್ತಿದೆ ಎಂಬುದು ಸ್ವಾಗತಾರ್ಹವಾಗಿದೆ.
ಟ್ವೀಟರ್ ತನ್ನ ಅಕೌಂಟಿನ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡಿದ್ದು ತನ್ನ ಫ್ಲಾಟ್ ಫಾರ್ಮ್ ನ್ನು ಇನ್ನಷ್ಟು ಸುಭದ್ರವಾಗಿಡಲು ಯೋಜಿಸಿದೆ.ಸ್ಪ್ಯಾಮರ್ ಗಳನ್ನು ಕಿತ್ತೊಗೆಯುವ ಕಾರ್ಯಕ್ರಮದಿಂದ ಇದು ಆರಂಭವಾಗುತ್ತದೆ. ಒಂದು ದಿನಕ್ಕೆ ಇಂತಿಷ್ಟು ಅಕೌಂಟ್ ಗಳನ್ನು ಮಾತ್ರವೇ ಒಂದು ಅಕೌಂಟ್ ಫಾಲೋ ಮಾಡುವುದಕ್ಕೆ ಅವಕಾಶ ನೀಡುವ ಮೂಲಕ ಟ್ವೀಟರ್ ಸಾವಿರಾರು ಅಕೌಂಟ್ ಗಳನ್ನು ಫಾಲೋ ಮಾಡುವ ಅನುಮಾನಾಸ್ಪದ ಅಕೌಂಟ್ ಗಳನ್ನು ತನ್ನ ಖಾತೆಯಿಂದ ತೆಗೆದುಹಾಕುವ ನಿರ್ಧಾರವನ್ನು ಇದೀಗ ಕೈಗೊಂಡಿದೆ.

   
 
ಹೆಲ್ತ್