Back
Home » ಬಾಲಿವುಡ್
'ಬಾಹುಬಲಿ'ಗಿಂತ ದೊಡ್ಡ ಸಿನಿಮಾದಲ್ಲಿ ಕಂಗನಾ, ಡೈರೆಕ್ಟರ್ ಅವರೇ.!
Oneindia | 14th Apr, 2019 11:42 AM
 • ಕಥೆ ಆಯ್ತು, ಫೋಟೋ ಶೂಟ್ ಆಗ್ಬೇಕು

  ಮೇಕಿಂಗ್ ಹಾಗೂ ಬಜೆಟ್ ವಿಷ್ಯದಲ್ಲಿ 'ಬಾಹುಬಲಿ', 'ಪದ್ಮಾವತ್' ಚಿತ್ರಗಳು ಹೆಚ್ಚು ಗಮನ ಸೆಳೆದಿತ್ತು. ಇದೀಗ, ಕಂಗನಾ ರಣಾವತ್ ಈ ಚಿತ್ರವನ್ನ ಮೀರಿಸುವಂತೆ ಸಿನಿಮಾ ಮಾಡ್ತಾರಂತೆ. ಈಗಾಗಲೇ ಈ ಚಿತ್ರಕ್ಕೆ ಕಥೆ ಅಂತಿಮವಾಗಿದ್ದು, ಸದ್ಯದಲ್ಲೇ ಭರ್ಜರಿ ಫೋಟೋಶೂಟ್ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

  Big News: ಜಯಲಲಿತಾ ಬಗ್ಗೆ ಇನ್ನೊಂದು ಬಯೋಪಿಕ್: 'ಅಮ್ಮ'ನ ಪಾತ್ರದಲ್ಲಿ ಖ್ಯಾತ ನಟಿ


 • ಕಬಡ್ಡಿ ಕಥೆ ಆಧಾರಿತ ಸಿನಿಮಾ

  ಅಂದ್ಹಾಗೆ, ಕಂಗನಾ ಮಾಡಲು ಹೊರಟಿರುವುದು ಕಬಡ್ಡಿ ಆಧಾರಿತ ಕಥೆಯಂತೆ. ಈಗಾಗಲೇ ಕಂಗನಾ ಕಬಡ್ಡಿ ಟ್ರೈನಿಂಗ್ ಪಡೆದುಕೊಳ್ಳುತ್ತಿದ್ದಾರಂತೆ. ಆದ್ರೆ, ಬಯೋಪಿಕ್ ಅಥವಾ ಕಾಲ್ಪನಿಕ ಕಥೆನಾ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಕಂಗನಾ ಕಾನ್ಫಿಡೆನ್ಸ್ ನೋಡ್ತಿದ್ರೆ ನಿಜಕ್ಕೂ ಕ್ರೀಡಾ ಆಧಾರಿತ ಚಿತ್ರದಲ್ಲಿ 'ಬಾಹುಬಲಿ' ಚಿತ್ರವನ್ನ ಮೀರಿಸುತ್ತಾರಾ ಎಂಬ ಕುತೂಹಲ ಕಾಡ್ತಿದೆ.

  ಹೃತಿಕ್ ರೋಷನ್ ವಿರುದ್ಧ ಸಿಡಿದೆದ್ದ ಕಂಗನಾ ರಣೌತ್.!


 • ಡೈರೆಕ್ಟರ್ ಅವರೇ.!

  ಅಂದ್ಹಾಗೆ, ಇಂತಹ ದೊಡ್ಡ ಸಿನಿಮಾವನ್ನ ನಿರ್ದೇಶನ ಮಾಡುತ್ತಿರುವುದು ಬೇರೆ ಯಾರೂ ಅಲ್ಲ. ಸ್ವತಃ ಕಂಗನಾ ಆಕ್ಷನ್ ಕಟ್ ಹೇಳಲಿದ್ದಾರಂತೆ. ಈ ಹಿಂದಿನ ಚಿತ್ರ 'ಮಣಿಕರ್ಣಿಕಾ'ಗೂ ಕಂಗನಾ ನಿರ್ದೇಶನ ಮಾಡಿದ ಅನುಭವ ಹೊಂದಿದ್ದಾರೆ. ಹಾಗಾಗಿ, ಅದೇ ಜೋಶ್ ನಲ್ಲಿ ಈ ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರೆ.


 • ಜಯಲಲಿತಾ ಬಯೋಪಿಕ್ ನಂತರ.!

  ಸದ್ಯ ಜಯಲಲಿತಾ ಅವರ ಬಯೋಪಿಕ್ ಚಿತ್ರದಲ್ಲಿ ಕಂಗನಾ ನಟಿಸುತ್ತಿದ್ದಾರೆ. ಎ.ಎಲ್ ವಿಜಯ್ ನಿರ್ದೇಶನ ಮಾಡುತ್ತಿರುವ 'ತಲೈವಿ' ಸಿನಿಮಾದಲ್ಲಿ ಜಯಲಲಿತಾ ಪಾತ್ರ ಮಾಡ್ತಿರುವ ಕಂಗನಾ, ಈ ಸಿನಿಮಾ ಬಳಿಕ ತಮ್ಮದೇ ನಿರ್ದೇಶನದ ಸಿನಿಮಾವನ್ನ ಆರಂಭಿಸಲಿದ್ದಾರಂತೆ.
ಭಾರತೀಯ ಚಿತ್ರರಂಗದಲ್ಲಿ 'ಬಾಹುಬಲಿ' ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಮೇಕಿಂಗ್, ಬಜೆಟ್, ಕಲೆಕ್ಷನ್ ವಿಚಾರದಲ್ಲಿ ದಾಖಲೆ ನಿರ್ಮಿಸಿದ 'ಬಾಹುಬಲಿ' ಸಿನಿಮಾ ಮಾಡಿದ್ದ ಹವಾ ನೋಡಿದ್ರೆ ಸದ್ಯಕ್ಕೆ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತಿ ದೊಡ್ಡ ಸಿನಿಮಾ ಎನ್ನಲಾಗಿದೆ.

ಈ ಚಿತ್ರವನ್ನ ಮೀರಿಸುವಂತೆ ಸಿನಿಮಾ ಮಾಡ್ಬೇಕು ಎನ್ನುವುದು ಈಗ ಅನೇಕರ ಕನಸು. ಅದೇ ಕನಸನ್ನು ಹೊತ್ತು ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ನಟಿ ಕಂಗನಾ ರಣಾವತ್.

ಜಯಲಲಿತಾ ಪಾತ್ರಕ್ಕೆ ಕಂಗನಾ ಪಡೆದ ಸಂಭಾವನೆ ಇಷ್ಟೊಂದಾ

ಹೌದು, 'ಬಾಹುಬಲಿ', 'ಪದ್ಮಾವತ್' ಅಂತಹ ಚಿತ್ರಗಳನ್ನ ಮೀರಿಸುವಂತಹ ಸಿನಿಮಾ ಮಾಡ್ತಿದ್ದಾರಂತೆ. ಈ ಚಿತ್ರಕ್ಕಾಗಿ ಎಲ್ಲಾ ತಯಾರಿ ಮಾಡಿಕೊಂಡಿರುವ ಕಂಗನಾ, ಸದ್ಯದಲ್ಲೇ ಅಧಿಕೃತವಾಗಿ ಪ್ರಕಟ ಮಾಡಲಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದ ನಿರ್ದೇಶಕ ಯಾರು? ಮುಂದೆ ಓದಿ..

   
 
ಹೆಲ್ತ್