Back
Home » ಇತ್ತೀಚಿನ
ಗೂಗಲ್ ಪೇ ಬಳಕೆದಾರರು ಇದೀಗ ಚಿನ್ನವನ್ನು ಖರೀದಿಸಿ ಮಾರಾಟ ಮಾಡುವ ಆಯ್ಕೆಯನ್ನು ಹೊಂದಿರುತ್ತಾರೆ
Gizbot | 14th Apr, 2019 01:05 PM
 • ಶುದ್ಧ ಚಿನ್ನ ಖರೀದಿ:

  ಈ ಆಪ್ ಬಳಸಿ ಗೂಗಲ್ ಪೇ ಬಳಕೆದಾರರು 99.99% ಶುದ್ಧ 24 ಕ್ಯಾರೆಟ್ ಚಿನ್ನವನ್ನು ಖರೀದಿಸಬಹುದು. ಪ್ರತಿ ನಿಮಿಷಕ್ಕೆ ಚಿನ್ನದ ಬೆಲೆಯಲ್ಲಿ ಬದಲಾವಣೆ ಆಗುತ್ತದೆ ಮತ್ತು ಅದನ್ನು ಗೂಗಲ್ ಪೇ ಆಪ್ ನಲ್ಲಿ ಡಿಸ್ಪ್ಲೇ ಮಾಡಲಾಗುತ್ತದೆ. ಖರೀದಿ ಮಾಡಿದ ಚಿನ್ನವನ್ನು ಆಪ್ ಮೂಲಕ ಗ್ರಾಹಕರ ಭದ್ರತಾ ವ್ಯಾಲೆಟ್ ನಲ್ಲಿ MMTC-PAMP ನ ಸಹಾಯದಿಂದ ಸುರಕ್ಷಿತವಾಗಿ ಇಡಲಾಗುತ್ತದೆ.


 • ಪೇಟಿಎಂ ನಂತ ಗೂಗಲ್ ಪೇ ನಲ್ಲ ಚಿನ್ನ ಖರೀದಿ:

  ಈ ವೈಶಿಷ್ಟ್ಯತೆಯನ್ನು ಭಾರತದ ಮಿಲಿಯನ್ ಗಟ್ಟಲೆ ಬಳಕೆದಾರರಿಗಾಗಿ ನಿರ್ಮಿಸಲಾಗಿದ್ದು ಯಾರೆಲ್ಲ ಅಕ್ಷಯ ತೃತೀಯ, ದಸರಾ ಅಥವಾ ದೀಪಾವಳಿ ಸಂದರ್ಬದಲ್ಲಿ ಚಿನ್ನವನ್ನು ಖರೀದಿಸುವವರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ತಯಾರಿಸಲಾಗಿದೆ. ಪೇಟಿಎಂನಲ್ಲಿ ಈ ಆಯ್ಕೆ ಲಭ್ಯವಿತ್ತು. ಇದೀಗ ಗೂಗಲ್ ಪೇ ಕೂಡ ಚಿನ್ನ ಖರೀದಿಗೆ ಅವಕಾಶ ನೀಡುತ್ತಿದೆ.


 • ವಿಶೇಷ ಸಂದರ್ಬಕ್ಕೆ ಅನುಕೂಲ:

  ಗೂಗಲ್ ಪೇ ಇಂಡಿಯಾದ ಪ್ರೊಡಕ್ಟ್ ಮ್ಯಾನೇಜ್ಮೆಂಟ್ ನ ಅಂಬರೀಷ್ ಕೆಂಘೆ ಅವರು ಈ ರೀತಿ ಅಭಿಪ್ರಾಯ ಪಡುತ್ತಾರೆ " ಭಾರತದ ಸಂಪ್ರದಾಯ ಮತ್ತು ಆಚರಣೆಯಲ್ಲಿ ಚಿನ್ನಕ್ಕೆ ಬಹಳ ಮಹತ್ವವಿದೆ, ಭಾರತ ವಿಶ್ವದ ಎರಡನೇ ಅತೀ ದೊಡ್ಡ ಚಿನ್ನ ಖರೀದಿಸುವ ರಾಷ್ಟ್ರವಾಗಿದೆ. ಅಕ್ಷಯ ತೃತೀಯ, ದಸರಾ, ದೀಪಾವಳಿ ಇತ್ಯಾದಿ ಹಬ್ಬಗಳ ಸಂದರ್ಬದಲ್ಲಿ ಭಾರತೀಯರು ಚಿನ್ನವನ್ನು ಖರೀದಿಸುವುದಕ್ಕೆ ಮುಂದಾಗುತ್ತದೆ.ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ನಾವು ಚಿನ್ನ ಖರೀದಿಸುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಗೂಗಲ್ ಪೇ ನಲ್ಲಿ ಅವಕಾಶ ನೀಡುತ್ತಿದ್ದೇವೆ. ಅಂದರೆ ಅವರು ತಮ್ಮ ಮೊಬೈಲ್ ಫೋನ್ ಮೂಲಕವೇ ಈ ರೀತಿ ಚಿನ್ನ ಖರೀದಿಸುವುದಕ್ಕೆ ಸಾಧ್ಯವಾಗುತ್ತದೆ"


 • ಒಟ್ಟು ವಹಿವಾಟು:

  ಯುಪಿಐ ನಲ್ಲಿ ಗೂಗಲ್ ಪೇ ಮಹತ್ವದ ಸ್ಥಾನವನ್ನು ಪಡೆದಿದೆ.25% ಮಾರ್ಜಿನ್ ನ್ನು ದೇಶದಲ್ಲಿ ಹೊಂದಿದೆ. ಮಾರ್ಚ್ ನಲ್ಲಿ ಗೂಗಲ್ ಸುಮಾರು 43,000 ದಿಂದ 45,000 ಕೋಟಿ ವಹಿವಾಟನ್ನು ನಡೆಸಿದೆ. ಫೋನ್ ಪೇ ಮತ್ತು ಪೇಟಿಎಂ ಗಳು ರೂಪಾಯಿ 31,000-32,000 ಕೋಟಿ ರುಪಾಯಿ ವಹಿವಾಟನ್ನು ಕ್ರಮವಾಗಿ ನಡೆಸಿದೆ. ಫೋನ್ ಪೇ ಪೇಟಿಎಂಗಿಂತ ಸ್ವಲ್ಪ ಮುಂದೆಯೇ ಇದೆ ಎಂದು ಇಂಡಸ್ಟ್ರಿ ತಜ್ಞರು ತಿಳಿಸಿದ್ದಾರೆ.
ಗೂಗಲ್ ಪೇ ಇದೀಗ ತನ್ನ ಬಳಕೆದಾರರಿಗೆ ಆಪ್ ನಲ್ಲಿ ಚಿನ್ನವನ್ನು ಖರೀದಿಸುವುದಕ್ಕೆ ಮತ್ತು ಮಾರಾಟ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಟೆಕ್ ದೈತ್ಯ ಗೂಗಲ್ ಇದೀಗ MMTC-PAMP ಇಂಡಿಯಾ ಜೊತೆಗೆ ಕೈಜೋಡಿಸಿದ್ದು, ದೇಶದ ಏಕೈಕ LBMA ಮಾನ್ಯತೆ ಪಡೆದ ಚಿನ್ನದ ಶುದ್ಧೀಕರಣ ಕಂಪೆನಿ ಇದಾಗಿದೆ.

   
 
ಹೆಲ್ತ್