Back
Home » ಬಾಲಿವುಡ್
ದೀಪಿಕಾ ಪಡುಕೋಣೆ ಗರ್ಭಿಣಿ? ರಣ್ವೀರ್ ಪತ್ನಿ ಹೇಳಿದ್ದೇನು?
Oneindia | 14th Apr, 2019 03:11 PM

ಬಾಲಿವುಡ್ ನ ಕ್ಯೂಟ್ ಕಪಲ್ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕಳೆದ ವರ್ಷ ನವೆಂಬರ್ ನಲ್ಲಿ ಹಸೆಮಣೆ ಏರಿದ್ದರು. ಆದ್ರೀಗ ದೀಪಿಕಾ ತಾಯಿ ಆಗುತ್ತಿದ್ದಾರೆ ಎನ್ನುವ ವಿಚಾರ ಸಾಕಷ್ಟು ಚರ್ಚೆಯಾಗುತ್ತಿದೆ. ದೀಪ್-ವೀರ್ ಸದ್ಯದಲ್ಲೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಲಿದ್ದಾರೆ ಎನ್ನುವ ರೂಮರ್ಸ್ ಹರಿದಾಡುತ್ತಿದೆ.

ತಾಯಿಯಾಗುತ್ತಿದ್ದಾರೆ ಎನ್ನುವ ರೂಮರ್ಸ್ ಗೆ ಡಿಪ್ಪಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ದೀಪಿಕಾ "ಆಗಬೇಕಾದ ಸಮಯಕ್ಕೆ ಎಲ್ಲವು ಆಗುತ್ತೆ. ಮದುವೆಯಾದ ನಂತರ ತಾಯಿಯಾಗುವ ವಿಚಾರವಾಗಿ ಅವರನ್ನು ಪದೇ ಪದೆ ಪ್ರಶ್ನಿಸಬಾರದು. ಇಂತಹ ಖಾಸಗಿ ವಿಚಾರಗಳನ್ನು ಪ್ರಶ್ನಿಸುವುದನ್ನ ನಿಲ್ಲಿಸಿದಾಗ ಮಾತ್ರ ಬದಲಾವಣೆ ಸಾದ್ಯ". ಎಂದು ಹೇಳುವ ಮೂಲಕ ಅಮ್ಮನಾಗುವ ವಿಚಾರಕ್ಕೆ ಎದುರಾಗುವ ಪ್ರಶ್ನೆಗಳಿಗೆ ಸರಿಯಾಗೆ ಉತ್ತರ ನೀಡಿದ್ದಾರೆ.

ಬಿಜೆಪಿ ಪರ ದೀಪಿಕಾ-ರಣ್ವೀರ್ ಪ್ರಚಾರ? ಈ ಫೇಕ್ ಫೋಟೋ ಹಿಂದಿದೆ ಕುತಂತ್ರ

ಸದ್ಯ ದೀಪಿಕಾ 'ಚಪಾಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದ ನಂತರ ಕೊಂಚ ಗ್ಯಾಪ್ ಬಳಿಕ 'ಚಕಾಪ್' ಮೂಲಕ ಕಮ್ ಬ್ಯಾಕ್ ಆಗಿರುವ ದೀಪಿಕಾ ಚಾಲೆಂಜಿಂಗ್ ಪಾತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ. ಈಗಾಗಲೆ 'ಚಪಾಕ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದೆ.

'ಚಪಾಕ್' ಆಸಿಡ್ ದಾಳಿಗೆ ತುತ್ತಾದ ಲಕ್ಷ್ಮಿ ಅಗರವಾಲ್ ಅವರ ಜೀವನಾಧಾರಿತ ಚಿತ್ರವಾಗಿದೆ. ಈ ಚಿತ್ರಕ್ಕೆ ಮೇಘನಾ ಗುಲ್ಜರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

   
 
ಹೆಲ್ತ್