Back
Home » ಬಾಲಿವುಡ್
ಲೋಕಸಭಾ ಚುನಾವಣೆಯಲ್ಲಿ ಆಲಿಯಾ ಭಟ್ ವೋಟ್ ಮಾಡಲ್ವಂತೆ!
Oneindia | 14th Apr, 2019 03:47 PM

ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ಈ ಬಾರಿ ಅತೀ ಹೆಚ್ಚು ಮತದಾನ ಆಗಬೇಕೆಂದು ರಾಜಕಾರಣಿಗಳು ಮತ್ತು ಸಿನಿ ತಾರೆಯರು ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಪಿ ಎಂ ನರೇಂದ್ರ ಮೋದಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಬಾಲಿವುಡ್ ನಟ-ನಟಿಯರಿಗೆ ಕರೆಕೊಟ್ಟಿದ್ದರು.

ಬಾಲಿವುಡ್ ನ ಅನೇಕ ತಾರೆಯರು ಮತದಾನ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಬಾಲಿವುಡ್ ಸ್ಟಾರ್ ನಟಿ ಅಲಿಯಾ ಭಟ್ ವೋಟ್ ಮಾಡುವುದಿಲ್ಲ ಅಂತ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪ್ರಧಾನಿ ಮೋದಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವಂತೆ ನಟಿ ಅಲಿಯಾ ಭಟ್ ಅವರ ಬಳಿಯೂ ಮನವಿ ಮಾಡಿಕೊಂಡಿದ್ದರು.

ಫಿಲಂಫೇರ್ ಪ್ರಶಸ್ತಿ ಗೆದ್ದ 'ಲವ್ ಬರ್ಡ್ಸ್' ರಣಬೀರ್, ಆಲಿಯಾ ಭಟ್

ಪ್ರಧಾನಿ ಮನವಿ ಸ್ವೀಕರಿಸಿ ಅಲಿಯಾ ಅಭಿಮಾನಿಗಳಲ್ಲಿ ಮತದಾನದ ಅರಿವು ಮೂಡಿಸಿದ್ದರು. "ಒಂದು ಮತ ರಾಷ್ಟ್ರದ ಧ್ವನಿಯಾಗಿದೆ. ರಾಷ್ಟ್ರದ ಆಯ್ಕೆ, ನಿಮ್ಮ ಧ್ವನಿ ಬಳಸಿ ನಿಮ್ಮ ಆಯ್ಕೆಯನ್ನು ಮಾಡಿ" ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

ಆದ್ರೀಗ ಜಾಗೃತಿ ಮೂಡಿಸಬೇಕಾದವರೆ ವೋಟ್ ಮಾಡಲ್ಲ ಅಂತ ಹೇಳಿರುವುದು ಅಚ್ಚರಿ ಮೂಡಿಸಿದೆ. ಆದ್ರೆ ಅಲಿಯಾ ವೋಟ್ ಮಾಡದಿರಲು ಬಲವಾದ ಕಾರಣವಿದೆಯಂತೆ. ಅಲಿಯಾ ಸದ್ಯ 'ಕಳಂಕ್' ಚಿತ್ರದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಚಾರದ ವೇಳೆ ಮಾತನಾಡಿದ ಅಲಿಯಾ ಭಟ್ "ನಾನು ವೋಟ್ ಮಾಡುವುದಿಲ್ಲ. ಯಾಕೆಂದರೆ ಪಾಸ್ ಪೋರ್ಟ್ ಸಮಸ್ಯೆಯಿದೆ" ಎಂದು ಹೇಳಿ ತಲೆತಗ್ಗಿಸಿದ್ದಾರೆ.

ಮನೆ ಇಲ್ಲದ ತನ್ನ ಡ್ರೈವರ್ ಗೆ 50 ಲಕ್ಷ ಹಣ ನೀಡಿದ ಆಲಿಯಾ

ಯಾಕೆಂದರೆ ಅಲಿಯಾ ಬ್ರಿಟೀಷ್ ಪ್ರಜೆ. ಇನ್ನೂ ಭಾರತೀಯ ಪೌರತ್ವ ಹೊಂದಿಲ್ಲವಂತೆ, ಹಾಗಾಗಿ ಭಾರತದ ವೋಟಿಂಗ್ ಪವರ್ ಅಲಿಯಾ ಭಟ್ ಅವರಿಗೆ ಇಲ್ಲ. ಈ ಕಾರಣದಿಂದ ಅಲಿಯಾ ವೋಟ್ ಮಾಡುವುದಿಲ್ಲ ಎಂದಿದ್ದಾರೆ. ಆದ್ರೆ ಅಭಿಮಾನಿಗಳಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

   
 
ಹೆಲ್ತ್