Back
Home » ಸೌಂದರ್ಯ
ಸುಂದರವಾದ ಕೂದಲಿಗೆ ಮನೆಯಲ್ಲಿಯೇ ಮಾಡಬಹುದಾದ ಆರು ಹೇರ್ ಮಾಸ್ಕ್‌ಗಳು
Boldsky | 16th Apr, 2019 10:58 AM
 • ಕೂದಲ ಹೊಳಪಿಗಾಗಿ

  ಇದಕ್ಕಾಗಿ ಮೊಟ್ಟೆ ಮತ್ತು ಬಾಳೆಹಣ್ಣಿನ ಲೇಪ ಅತ್ಯುತ್ತಮ ಆಯ್ಕೆಯಾಗಿದೆ ಹಾಗೂ ಇದು ಕೂದಲಿಗೆ ಕಂಡೀಶನಿಂಗ್ ಹಾಗೂ ಹೊಳಪನ್ನು ನೀಡಲು ನೆರವಾಗುತ್ತದೆ. ಇದಕ್ಕಾಗಿ ಎರಡು ಚೆನ್ನಾಗಿ ಕಳಿತ ಬಾಳೆಹಣ್ನು, ಎರಡು ಮೊಟ್ಟೆ ಒಂದು ಲಿಂಬೆಯ ರಸ ಮತು ಎರಡು ವಿಟಮಿನ್ ಇ ಮಾತ್ರೆಗಳು, ಇಷ್ಟನ್ನೂ ಒಂದು ಚಿಕ್ಕ ಪಾತ್ರೆ ಯಲ್ಲಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಅರ್ಧ ಘಂಟೆ ತಲೆಕವಚ ತೊಟ್ಟುಕೊಳ್ಳಿ. . ಬಳಿಕ ತಲೆಸ್ನಾನ ಮಾಡಿ.


 • ತಲೆಹೊಟ್ಟು ನಿವಾರಿಸಲು

  ಕೊಂಚ ಮೆಂತೆಯನ್ನು ಇಡಿಯ ರಾತ್ರಿ ನೆನೆಸಿಡಿ. ಮರುದಿನ ಬೆಳಿಗ್ಗೆ ಇದನ್ನು ಚೆನ್ನಾಗಿ ಅರೆಯಿರಿ. ಕೊಂಚ ದಾಸವಾಳದ ಎಲೆಗಳು ಮತ್ತು ಹೂವಿನ ದಳಗಳನ್ನು ಅರೆದಿಟ್ಟುಕೊಳ್ಳಿ. ಎರಡು ಚಿಕ್ಕ ಚಮಚ ಅರೆದಿರುವ ಮೆಂತೆಗೆ ಸಮಪ್ರಮಾಣದ ದಾಸವಾಳದ ಅರೆದ ಲೇಪವನ್ನು ಬೆರೆಸಿ, ಬಳಿಕ ಎರಡು ಚಿಕ್ಕ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ. ಚೆನ್ನಾಗಿ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಇಪ್ಪತ್ತರಿಂದ ಮೂವತ್ತು ನಿಮಿಷ ಬಿಟ್ಟು ತೊಳೆದುಕೊಳ್ಳಿ. ಒಂದು ವೇಳೆ ನಿಮ್ಮ ನೆತ್ತಿಯ ಚರ್ಮ ಎಣ್ಣೆಚರ್ಮವಾಗಿದ್ದರೆ ಹಾಗೂ ಹೆಚ್ಚು ತಲೆಹೊಟ್ಟಿದ್ದರೆ ಕೊಂಚ ಪೊಪ್ಪಾಯಿ ಹಣ್ಣಿನ ತಿರುಳು ಮತ್ತು ಕಡ್ಲೆಹಿಟ್ಟನ್ನು ಬೆರೆಸಿ ಇದಕ್ಕೆ ಕೊಂಚ ಮೊಟ್ಟೆಯ ಬಿಳಿಭಾಗ, ನಾಲ್ಕು ಚಿಕ್ಕ ಚಮಚ ಸೇಬಿನ ಶಿರ್ಕಾ ಹಾಕಿ ಮಿಶ್ರಣ ಮಾಡಿ ತಲೆಗ ಹಚ್ಚಿಕೊಂಡು ಮೇಲಿನ ವಿಧಾನ ಅನುಸರಿಸಿ. ಸೇಬಿನ ಶಿರ್ಕಾ ಕೂದಲ ಹೊಳಪನ್ನು ಹೆಚ್ಚಿಸುತ್ತದೆ.


 • ಬೆಣ್ಣೆಹಣ್ಣಿನ ಲೇಪ

  ಒಂದು ಬೆಣ್ಣೆಹಣ್ಣಿನ ತಿರುಳನ್ನು ಕಿವುಚಿ ತಲಾ ಒಂದು ದೊಡ್ಡ ಚಮಚ ಹಸಿರು ಟೀ, ಮೆಂತೆಯ ಬೀಜದ ಪುಡಿ ಬೆರೆಸಿ ಮಿಶ್ರಣ ಮಾಡಿ. ಕೊಂಚವೇ ಉಗುರುಬೆಚ್ಚನೆಯ ನೀರನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಳ್ಳಿ. ಈ ವಿಧಾನದಿಂದ ಬೆಣ್ಣೆಹಣ್ಣಿನಲ್ಲಿರುವ ಪ್ರೋಟೀನ್ ಕೂದಲಿಗೆ ದೊರೆತು ಉತ್ತಮ ಪೋಷಣೆ ದೊರಕುತ್ತದೆ.


 • ಕೂದಲನ್ನು ಮೃದುವಾಗಿಸಲು

  ಒಂದು ಕಪ್ ತೆಂಗಿನ ಹಾಲು, ತಲಾ ಎರಡು ದೊಡ್ಡ ಚಮಚ ಕರಿಬೇವಿನ ಎಲೆ ಮತ್ತು ಕಡ್ಲೆಹಿಟ್ಟು ಹಾಕಿ ಮಿಶ್ರಣ ಮಾಡಿ. ಇದನ್ನು ತಲೆಗೆ ಹಚ್ಚಿಕೊಂಡು ಒಂದು ಘಂಟೆ ಬಿಡಿ. ಕರಿಬೇವಿನಲ್ಲಿರುವ ಬೀಟಾ ಕ್ಯಾರೋಟೀನ್ ಮತ್ತು ತೆಂಗಿನಲ್ಲಿರುವ ಪ್ರೋಟೀನ್ ಕೂದಲನ್ನು ಮೃದುವಾಗಿಸುತ್ತವೆ.


 • ಕೂದಲ ಒಟ್ಟಾರೆ ಪೋಷಣೆಗೆ ಹಾಲಿನ ಬಳಕೆ

  ಹಾಲನ್ನು ಸೌಂದರ್ಯವರ್ಧಕವಾಗಿ ಶತಮಾನಗಳಿಂದ ಬಳಸಲಾಗುತ್ತಾ ಬರಲಾಗಿದೆ. ಹಾಲಿನ ಪುಡಿ ಮತ್ತು ಮೊಟ್ಟೆಯ ಹಳದಿ ಭಾಗವನ್ನು ಬಳಸಿ ಸ್ನಾನಕ್ಕೂ ಮುನ್ನ ಕೂದಲಿಗೆ ಪೋಷಣೆ ಒದಗಿಸಬಹುದು. ಈ ಸಾಮಾಗ್ರಿಗಳನ್ನು ಕೊಂಚ ನೀರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿಕೊಂಡು ಸುಮಾರು ಹದಿನೈದರಿಂದ ಇಪ್ಪತ್ತು ನಿಮಿಷ ಬಿಡಿ. ಬಳಿಕ ನಿತ್ಯದಂತೆ ಸ್ನಾನ ಮಾಡಿ. ಹಾಲಿನ ಪೋಷಕ ಮತ್ತು ಮೃದುವಾಗಿಸುವ ಗುಣಗಳು ಕೂದಲನ್ನು ಮೃದುವಾಗಿಸುವುದು ಹಾಗೂ ಹೊಳಪನ್ನೂ ಪಡೆಯುವಂತೆ ಮಾಡುತ್ತದೆ.


 • ಗಾಢ ಕಂಡೀಶನ್ ಮನೆಯಲ್ಲಿಯೇ ನಿರ್ವಹಿಸಿ

  ಒಂದು ಮೊಟ್ಟೆ, ಒಂದು ದೊಡ್ಡ ಚಮಚ ಅಪ್ಪಟ ಬಾದಾಮಿ ಎಣ್ಣೆ, ಒಂದು ಲಿಂಬೆಯ ರಸ ಹಾಗೂ ಒಂದು ಚಿಕ್ಕ ಚಮಚ ಗ್ಲಿಸರಿನ್ ಎಲ್ಲವನ್ನೂ ಮಿಶ್ರಣಮಾಡಿ ಕೂದಲಿಗೆ ಹಚ್ಚಿಕೊಳ್ಳಿ. ತಲೆಕವಚ ತೊಟ್ಟು ಒಂದು ಗಂಟೆ ಹಾಗೇ ಬಿಡಿ. ಬಳಿಕ ನಿತ್ಯದಂತೆ ಸ್ನಾನ ಮಾಡಿ.
ರೇಷ್ಮೆಯಂತೆ ಹೊಳೆಯುವ, ಉದ್ದಗಿನ ಹಾಗೂ ಕಡುಕಪ್ಪಗಿನ ಕೂದಲು ಪ್ರತಿಯೊಬ್ಬರಿಗೂ ಇಷ್ಟವಾಗಿರುವುದು. ಇಂತಹ ಕೂದಲು ಸೌಂದರ್ಯ ಮತ್ತಷ್ಟು ಎದ್ದು ಕಾಣುವಂತೆ ಮಾಡುವುದು. ಕೂದಲು ಆರೋಗ್ಯ ಹಾಗೂ ಸುಂದರವಾಗಿದ್ದರೆ ಆಗ ನೋಡುಗರಿಗೂ ಅದು ಚಂದ. ಇಂತಹ ಕೂದಲು ಪಡೆಯಲು ಹೆಚ್ಚಿನವರು ತುಂಬಾ ಕಷ್ಟಪಡುವರು. ಯಾಕೆಂದರೆ ಸುಂದರ ಕೂದಲು ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಶ್ರಮ ಅಗತ್ಯ. ಶ್ರಮವಿದ್ದಲ್ಲಿ ಕೂದಲು ಸುಂದರವಾಗಿರುವುದು.

ಆರೋಗ್ಯಕರ ಕೂದಲನ್ನು ಪಡೆಯಲು ಅದಕ್ಕೆ ಪ್ರತಿನಿತ್ಯದ ಆರೈಕೆ ಕೂಡ ಬೇಕಾಗಿರುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ಹಲವಾರು ಶಾಂಪೂ ಹಾಗೂ ಕಂಡೀಷನರ್ ಗಳನ್ನು ಬಳಸಿಕೊಂಡು ಕೂದಲಿನ ಆರೈಕೆ ಮಾಡುವವರು ಇದ್ದಾರೆ. ಇಂತಹ ಉತ್ಪನ್ನಗಳು ತಕ್ಷಣಕ್ಕೆ ಕೂದಲಿಗೆ ಕಾಂತಿ ನೀಡಿದರೂ ಮುಂದೆ ಇದು ಅಡ್ಡ ಪರಿಣಾಮ ತೋರಿಸಲು ಆರಂಭವಾಗುವುದು. ಇದರಿಂದ ಕೂದಲು ನಿಸ್ತೇಜವಾಗಿ, ತನ್ನ ನೈಸರ್ಗಿಕ ಕಾಂತಿ ಕಳೆದುಕೊಳ್ಳುವುದು. ಇಂತಹ ಸಮಸ್ಯೆ ನಿವಾರಣೆ ಮಾಡಲು, ಮನೆಯಲ್ಲಿಯೇ ಸರಳವಾಗಿ ತಯಾರಿಸ ಬಹುದಾದ, ಪರಿಣಾಮಕಾರಿಯಾದ ಹೇರ್ ಮಾಸ್ಕ್ ಗಳ ಬಗ್ಗೆ ಈ ಲೇಖನದಲ್ಲಿ ನೀಡಿದ್ದೇವೆ, ಮುಂದೆ ಓದಿ...

   
 
ಹೆಲ್ತ್