Back
Home » ಇತ್ತೀಚಿನ
PDF ಫೈಲ್‌ಗಳನ್ನು JPG ಫಾರ್‌ಮೇಟ್‌ಗೆ ಕನ್‌ವರ್ಟ್‌ ಮಾಡುವುದು ಹೇಗೆ ಗೊತ್ತಾ.!
Gizbot | 16th Apr, 2019 05:45 PM
 • ಡಾಕ್ಯುಫ್ರಿಜರ್‌-DocuFreezer

  ಇಮೇಜ್‌ ಮಾದರಿಯಲ್ಲಿರುವ ಜೆಪಿಜಿ ಫೈಲ್‌ಗಳನ್ನು ಪಿಡಿಎಫ್‌ ಮಾದರಿಗೆ ವರ್ಗಾಯಿಸಲು ಅತ್ಯುತ್ತಮ ಅಪ್ಲಿಕೇಶನ್ ಡಾಕ್ಯುಫ್ರಜರ್‌ ಆಗಿದೆ. ಈ ಆಪ್‌ನ ಪ್ರಮುಖ ಪಾಯಿಂಟ್‌ಯೆಂದರೇ ಒಂದೆ ಬಾರಿಗೆ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಪಿಡಿಎಫ್‌ ಫೈಲ್‌ಗಳನ್ನು ಜೆಪಿಜಿ ಮಾದರಿಗೆ ಕನ್‌ವರ್ಟ್‌ ಮಾಡಿಕೊಳ್ಳಬಹುದಾಗಿದೆ. ಕನ್‌ವರ್ಟ್‌ ಮಾಡುವ ವೇಗವು ಉತ್ತಮವಾಗಿದ್ದು, ಇದರೊಂದಿಗೆ ಡಾಕ್ಯುಫ್ರಿಜರ್‌ ಆಪ್‌ PNG, TIFF ಮತ್ತು XPS ಮಾದರಿ ಆಯ್ಕೆಗಳನ್ನು ಸಹ ಹೊಂದಿದೆ.


 • ಪಿಡಿಎಫ್‌ ಟು ಜೆಪಿಜಿ -PDF to JPEG

  ಮೈಕ್ರೊಸಾಫ್ಟ್‌ ಆಪ್‌ ಸ್ಟೋರ್‌ನಲ್ಲಿ ಲಭ್ಯವಿದ್ದು, ವಿಂಡೊಸ್‌ 8.1 ಮತ್ತು ವಿಂಡೊಸ್‌ 10 ಓಎಸ್‌ ಗಳಲ್ಲಿ ದೊರೆಯುತ್ತದೆ. ಉಚಿತವಾಗಿ ಲಭ್ಯವಿದ್ದು ಆದರೆ ಜಾಹಿರಾತುಗಳ ಸಹಿತವಾಗಿದೆ. ಕೇವಲ ಪಿಡಿಎಫ್‌ ಕನ್‌ವರ್ಟ್‌ ಆಯ್ಕೆಯೊಂದನ್ನು ಮಾತ್ರ ಹೊಂದಿರುವ ಈ ಆಪ್‌ನಲ್ಲಿ ಪಿಡಿಎಫ್ ಫೈಲ್‌ಗಳನ್ನು ಸೆಲೆಕ್ಟ್‌ ಮಾಡಿ ಕನ್‌ವರ್ಟ್‌ ಕ್ಲಿಕ್‌ ಮಾಡಿದರೇ ಆಯಿತು. ನಂತರ ಸೇವ್‌ ಮಾಡಿಕೊಳ್ಳಲು ಫೋಲ್ಡರ್‌ ಸೆಲೆಕ್ಟ್ ಮಾಡಿಡಬೇಕು ಇಲ್ಲದಿದ್ದರೇ ಕನ್‌ವರ್ಟ್‌ ಕೆಲಸ ಮಾಡಲ್ಲ.


 • ಫ್ರಿ ಪಿಡಿಎಫ್‌ ಟು ಜೆಪಿಜಿ ಕನ್‌ವರ್ಟ್‌ರ-Free PDF to JPG converter

  ಈ ಅಪ್ಲಿಕೇಶನ್ ಉಚಿತವಾಗಿದ್ದು, ಪಕ್ಕಾ ಪಿಡಿಎಫ್‌ ಟು ಜೆಪಿಜಿ ಕನ್‌ವರ್ಟ್‌ರ ಆಗಿದೆ. ಫಾಸ್ಟ್‌ ಆಗಿ ಪಿಡಿಎಫ್‌ ಮಾದರಿಯ ಫೈಲ್‌ಗಳನ್ನು ಜೆಪಿಜಿ ಮಾದರಿಗೆ ಕನ್‌ವರ್ಟ್‌ ಮಾಡಿಕೊಡಲಿದ್ದು, ಕಂಪ್ಯೂಟರಿನ ಯಾವುದೇ ಸ್ಟೋರೇಜ್ ಸ್ಥಳದಿಂದ ಸಿಂಗಲ್‌ ಫೈಲ್‌ ಅಥವಾ ಮಲ್ಟಿಫೈಲ್‌ಗಳನ್ನು ಕನ್‌ವರ್ಟ್‌ಗೆ ನೀಡಬಹುದಾಗಿದೆ. ಕನ್‌ವರ್ಟ್‌ ಆಗುವ ಫೈಲ್‌ಗಳು ಉತ್ತಮ ಗುಣಮಟ್ಟದಲ್ಲಿ ಇರಲಿವೆ.


 • ಪಿಡಿಎಫ್‌ಮೇಟ್-PDFMate Free PDF Converter

  ಈ ಅಪ್ಲಿಕೇಶನ್ನಲ್ಲಿಯೂ ಸಹ ಪಿಡಿಟಫ್‌ನ ಸಿಂಗಲ್ ಅಥವಾ ಮಲ್ಟಿಫೈಲ್‌ಗಳನ್ನು ಒಂದೇ ವೇಳೆಗೆ ಕನ್‌ವರ್ಟ್‌ ಮಾಡಬಹುದಾಗಿದ್ದು, ಇದರ ಕನ್‌ವರ್ಟ್‌ ಪ್ರೊಸೆಸ್ ಸ್ವಲ್ಪ ನಿಧಾನವಾಗಿದೆ. ಆದರೆ ಈ ಆಪ್‌ ಜೆಪಿಜಿ ಮಾದರಿಯೊಂದಿಗೆ DOC, EPUB, HTML ಮತ್ತು TXT ಮಾದರಿಯ ಫೈಲ್‌ಗಳನ್ನು ಕನ್‌ವರ್ಟ್‌ ಮಾಡುವ ಆಯ್ಕೆಗಳನ್ನು ಹೊಂದಿದೆ. ಔಟ್‌ಪುಟ್‌ನಲ್ಲಿ ಹೈ ಕ್ವಾಲಿಟಿಯ ಜೆಪಿಜಿ ಮಾದರಿಯ ಫೈಲ್‌ಗಳು ಕನ್‌ವರ್ಟ್‌ ಆಗಿ ದೊರೆಯುತ್ತವೆ.


 • ಪಿಡಿಎಫ್‌ ಟು ಜೆಪಿಜಿ -PDF to JPEG

  ಮೈಕ್ರೊಸಾಫ್ಟ್‌ ಆಪ್‌ ಸ್ಟೋರ್‌ನಲ್ಲಿ ಲಭ್ಯವಿದ್ದು, ವಿಂಡೊಸ್‌ 8.1 ಮತ್ತು ವಿಂಡೊಸ್‌ 10 ಓಎಸ್‌ ಗಳಲ್ಲಿ ದೊರೆಯುತ್ತದೆ. ಉಚಿತವಾಗಿ ಲಭ್ಯವಿದ್ದು ಆದರೆ ಜಾಹಿರಾತುಗಳ ಸಹಿತವಾಗಿದೆ. ಕೇವಲ ಪಿಡಿಎಫ್‌ ಕನ್‌ವರ್ಟ್‌ ಆಯ್ಕೆಯೊಂದನ್ನು ಮಾತ್ರ ಹೊಂದಿರುವ ಈ ಆಪ್‌ನಲ್ಲಿ ಪಿಡಿಎಫ್ ಫೈಲ್‌ಗಳನ್ನು ಸೆಲೆಕ್ಟ್‌ ಮಾಡಿ ಕನ್‌ವರ್ಟ್‌ ಕ್ಲಿಕ್‌ ಮಾಡಿದರೇ ಆಯಿತು. ನಂತರ ಸೇವ್‌ ಮಾಡಿಕೊಳ್ಳಲು ಫೋಲ್ಡರ್‌ ಸೆಲೆಕ್ಟ್ ಮಾಡಿಡಬೇಕು ಇಲ್ಲದಿದ್ದರೇ ಕನ್‌ವರ್ಟ್‌ ಕೆಲಸ ಮಾಡಲ್ಲ.


 • ಬಾಕ್ಸ್‌ಓಫ್ಟಿ ಕನ್‌ವರ್ಟ್‌ರ-Boxoft PDF To JPG Converter

  ಪಿಡಿಎಫ್‌ ಟು ಜೆಪಿಜಿ ಮಾದರಿಗೆ ಕನ್‌ವರ್ಟ್‌ ಮಾಡುವ ಆಯ್ಕೆ ಜೊತೆಗೆ BMP, PNG ಮತ್ತು TIFF ಮಾದರಿಯ ಫೈಲ್‌ಗಳಿಗೂ ಕನ್‌ವರ್ಟ್‌ ಮಾಡಿಕೊಳ್ಳುವ ಅವಕಾಶವಿದೆ. ಹಲವು ಪೇಜ್‌ಗಳನ್ನು ಒಂದೇ ಬಾರಿಗೆ ಜೆಪಿಜಿ ಮಾದರಿಗೆ ಕನ್‌ವರ್ಟ್‌ಗೆ ಒಳಪಡಿಸಬಹುದಾದ ಆಯ್ಕೆಯನ್ನು ಹೊಂದಿದೆ. ತ್ವರಿತವಾದ ಪ್ರಕ್ರಿಯೇಯನ್ನು ಹೊಂದಿದ್ದು, ಆಟೋಮ್ಯಾಟಿಕ್‌ ಆಗಿ ಫೈಲ್‌ಗಳು ಸೇವ್‌ ಆಗುತ್ತವೆ.
ಕಂಪ್ಯೂಟರ್‌ನಲ್ಲಿ ಡಾಕ್ಯುಮೆಂಟ್ಸ್‌ಗಳನ್ನು ಸೇವ್ ಮಾಡಿಕೊಳ್ಳಲು ಹಲವು ಮಾದರಿಗಳಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ಫೈಲ್‌ ನೇಮ್‌ಗಳಿವೆ. ಅವುಗಳಲ್ಲಿ ಪಿಡಿಎಫ್‌ ಮಾದರಿಯಲ್ಲಿ ಫೈಲ್‌ಗಳು ಸೇಫ್ ಆಗಿರುತ್ತವೆ ಎಂದು ಬಹುತೇಕರು ಟೆಕ್ಟ್ಸ್ ಮಾದರಿಯ ಫೈಲ್‌ಗಳನ್ನು ಪಿಡಿಎಫ್‌ ಮಾದರಿಯಲ್ಲಿ ಸೇವ್‌ ಮಾಡಿಕೊಳ್ಳುತ್ತಾರೆ. ಹಾಗೇ ಪಿಡಿಎಫ್ ಮಾದರಿಯ ಫೈಲ್‌ಗಳನ್ನು ಜೆಪಿಜಿ ಮಾದರಿಗೆ ಬದಲಾಯಿಸಿಕೊಳ್ಳಬಹುದು.

ಹೌದು, ಪಿಡಿಎಫ್‌ನಲ್ಲಿ ಸೇವ್‌ ಇರುವ ನಿಮ್ಮ ಡಾಕ್ಯುಮೆಂಟ್‌ ಕನವರ್ಟ್ ಅಪ್ಲಿಕೇಶನ್ ಬಳಸಿ ಜೆಪಿಜಿ ಮಾದರಿಗೆ ಬದಲಾಯಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಹಲವು ಉಚಿತ ಅಪ್ಲಿಕೇಶನ್‌ಗಳು ಲಭ್ಯ ಇದ್ದು, ಅವುಗಳಲ್ಲಿ ಮೂಲಕ ಸರಳವಾಗಿ ಪಿಡಿಎಫ್‌ನಿಂದ ಜೆಪಿಜಿ ಮಾದರಿಗೆ ಕನ್‌ವರ್ಟ್‌ ಮಾಡಿಕೊಳ್ಳಬಹುದು. ಇಂದಿನ ಲೇಖನದಲ್ಲಿ 5 ಬೆಸ್ಟ್‌ ಕನ್‌ವರ್ಟ್‌ ಅಪ್ಲಿಕೇಶನ್‌ಗಳು ಕುರಿತು ಮಾಹಿತಿ ನೀಡಿದ್ದೆವೆ. ಅವು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್