Back
Home » ಇತ್ತೀಚಿನ
'ಗ್ಯಾಲಕ್ಸಿ ಎಂ20' ಖರೀದಿಸಲು ಪ್ರೀ ಬುಕ್ ಮಾಡಲು ಅವಕಾಶ!!
Gizbot | 17th Apr, 2019 09:00 AM
 • ಗ್ಯಾಲಕ್ಸಿ ಎ20 ಡಿಸ್‌ಪ್ಲೇ

  ಕೈಗೆಟುಕುವ ಬೆಲೆಯ ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20ಯ ಡಿಸ್ಪ್ಲೇಯು 6.4-ಇಂಚಿನ HD+ (720x1560)ಸೂಪರ್ AMOLED ಪ್ಯಾನಲ್ ಅನ್ನು ಹೊಂದಿದೆ. ವಾಟರ್ ಡ್ರಾಪ್ ನೋಚ್ ಹೊಂದಿದ್ದು ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಅನ್ನು ಒಳಗೊಂಡಿದೆ. ಹಿಂಭಾಗದಲ್ಲಿ ಫಿಂಗರ್ ಪ್ರಿಂಟ್ ಸೆನ್ಸರ್ ಇದ್ದು ನಿಮ್ಮ ದೃಢೀಕರಣಕ್ಕೆ ಸಹಾಯ ಮಾಡುತ್ತದೆ ಮತ್ತು ಭದ್ರತೆ ಒದಗಿಸುತ್ತದೆ.


 • ಗ್ಯಾಲಕ್ಸಿ ಎ20 ಪ್ರೊಸೆಸರ್

  ಗ್ಯಾಲಕ್ಸಿ ಎ20 ಆಕ್ಟಾ-ಕೋರ್ Exynos 7884 ಸಾಕೆಟ್ ನ್ನು ಹೊಂದಿದ್ದು, ಅದರಲ್ಲಿ ಎರಡೂ ಹೆಚ್ಚು ಪವರ್‌ನ ಅಂದರೆ, 1.6GHz ಕ್ಲಾಕ್ ಸ್ಪೀಡ್ ಇದೆ. ಇದು ಏಕಮಾತ್ರ ಮೆಮೊರಿ ಕಾನ್ಫಿಗರೇಷನ್ ಹೊಂದಿದೆ ಜೊತೆಗೆ 3GB RAM ಮತ್ತು 32GB ಇನ್ ಬಿಲ್ಟ್ ಸ್ಟೋರೇಜ್ ವ್ಯವಸ್ಥೆ ಇದೆ. ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೂ ಸಹ ಅವಕಾಶವಿದೆ.


 • ಕ್ಯಾಮೆರಾ ಹೇಗಿದೆ?

  ಗ್ಯಾಲಕ್ಸಿ ಎ20ನಲ್ಲಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದೆ. ಇದರಲ್ಲಿ ಪ್ರೈಮರಿ ಕ್ಯಾಮರಾವು 13 ಮೆಗಾಪಿಕ್ಸಲ್ ಸಾಮರ್ಥ್ಯವಿದ್ದು f/1.9 ಅಪರ್ಚರ್ ಮತ್ತು ಸೆಕೆಂಡರಿ 5-ಮೆಗಾಪಿಕ್ಸಲ್ ಕ್ಯಾಮರಾವು f/2.2 ಅಪರ್ಚರ್ ಹೊಂದಿದೆ. ಮುಂಭಾಗದ ಕ್ಯಾಮರಾವು 8-ಮೆಗಾಪಿಕ್ಸಲ್ ಕ್ಯಾಮರಾವಿದ್ದು f/2.0 ಅಪರ್ಚರ್ ನ್ನು ಹೊಂದಿದ್ದು ಸೆಲ್ಫೀ ತೆಗೆದುಕೊಳ್ಳಲು ಅನುಕೂಲಕರವಾಗಿದೆ.


 • ಗ್ಯಾಲಕ್ಸಿ ಎ20 ಬ್ಯಾಟರಿ

  ಗ್ಯಾಲಕ್ಸಿ ಎ20 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುವ ಎಂಬ ಬಗ್ಗೆ ಈ ವರೆಗೂ ಮಾಹಿತಿ ತಿಳಿದಿಲ್ಲ.ಇನ್ನು ಬೆಳಕಿನ ಸಂವೇದಕ, ಸಾಮೀಪ್ಯ ಸಂವೇದಕ, ಅಕ್ಸೆಲೆರೊಮೀಟರ್, ಗೈರೋಸ್ಕೋಪ್ ಫೀಚರ್ಸ್ ಅನ್ನು ಒಳಗೊಂಡಿರುವ ಈ ಸ್ಮಾರ್ಟ್‌ಫೋನ್ ಫಿಂಗರ್ಪ್ರಿಂಟ್ ಸಂವೇದಕವನ್ನು ಹೊಂದಿರುವುದನ್ನು ನೋಡಬಹುದು.


 • ಗ್ಯಾಲಕ್ಸಿ ಎ20 ಬೆಲೆಗಳು

  ಎಕ್ಸನೋಸ್ 7884B ಪ್ರೊಸೆಸರ್ ಜೊತೆಗೆ 3 ಜಿಬಿ RAM ಮತ್ತು 32 ಜಿಬಿ ಆಂತರಿಕ ಮೆಮೊರಿ ಹೊಂದಿರುವ ಗ್ಯಾಲಕ್ಸಿ ಎ20 ಪೋನ್ ಬೆಲೆ ಮಧ್ಯಮ ವರ್ಗದ ಮೊಬೈಲ್ ಖರೀದಿದಾರರಿಗೆ ಕೈಗೆಟಕುವಂತಿದೆ. ಏಪ್ರಿಲ್ 12 ರಿಂದ ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಯಾಮ್ಸಂಗ್ ಆನ್ಲೈನ್ ಮತ್ತು ಮೊಬೈಲ್ ಮಾರಾಟ ಮಳಿಗೆಗಳಲ್ಲಿ 12,490 ರೂ.ಗೆ ಈ ಮೊಬೈಲ್ ಅನ್ನು ಖರೀದಿಸಬಹುದು.
ಏಪ್ರಿಲ್ 12 ರಿಂದ ಫ್ಲಿಪ್‌ಕಾರ್ಟ್ ಸೇರಿದಂತೆ ಸ್ಯಾಮ್ಸಂಗ್ ಆನ್ಲೈನ್ ತಾಣಗಳಲ್ಲಿ ಮಾರಾಟಕ್ಕೆ ಬಂದಿರುವ ಗ್ಯಾಲಕ್ಸಿ ಎಂ20 ಸ್ಮಾರ್ಟ್‌ಫೋನ್ ಭರ್ಜರಿ ಮಾರಾಟ ಕಂಡಿದೆ. ಮೊದಲ ಸೇಲ್‌ನಲ್ಲಿ ಸ್ಯಾಮ್‌ಸಂಗ್‌ನ ನೂತನ ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ ಗ್ಯಾಲಕ್ಸಿ ಎಂ20 ಫೋನ್ ಅನ್ನು ಬುಕ್ ಮಾಡಲು ಸಾಧ್ಯವಾಗದಿದ್ದರವರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಪ್ರೀ ಬುಕ್ ಮಾಡಲು ಇದೀಗ ಅವಕಾಶ ಕಲ್ಪಿಸಲಾಗಿದೆ.

ಹೌದು, ಭಾರತದಲ್ಲಿ ಸ್ಯಾಮ್‌ಸಂಗ್‌ ಎ ಸರಣಿ ಸ್ಮಾರ್ಟ್‌ಫೋನ್ಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾದ ಗ್ಯಾಲಕ್ಸಿ ಎ20 ಅತ್ಯುತ್ತಮ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದ್ದು, ಕೈಗೆಟುಕುವ ಬೆಲೆಯಲ್ಲಿ ಅಂದರೆ ಕೇವಲ 12,490 ರೂ.ಗಳಿಗೆ ಖರೀದಿಗೆ ಲಭ್ಯವಿದೆ. ಅಧಿಕೃತ ಸ್ಯಾಮ್‌ಸಂಗ್ ರೀಟೇಲ್ ಸ್ಟೋರ್, ಫ್ಲಿಪ್‌ಕಾರ್ಟ್‌ ಆನ್ ಲೈನ್ ಸ್ಟೋರ್ ಗಳಲ್ಲಿ ಈಗ ಸ್ಮಾರ್ಟ್‌ಫೋನ್‌ ಅನ್ನು ಪ್ರೀ ಬುಕ್ ಮಾಡಬಹುದಾಗಿದೆ.

6.4 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿರುವ ಈ ಸ್ಮಾರ್ಟ್‌ಪೋನ್ HD+ (720x1560)ಸೂಪರ್ AMOLED ಪ್ಯಾನಲ್, ಇನ್ಫಿನಿಟಿ-ವಿ ಡಿಸ್ಪ್ಲೇ ಡಿಸೈನ್ ಲಾಂಗ್ವೇಜ್ ಮತ್ತು ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿದ್ದು,4,000mAh ಸಾಮರ್ಥ್ಯದ ಬ್ಯಾಟರಿ ಹೊಂದಿರುವುದನ್ನು ಸಹ ನೋಡಬಹುದು. ಹಾಗಾದರೆ, ಈ ಸ್ಮಾರ್ಟ್‌ಫೋನ್‌ ಇತರೆ ವಿಶೇಷ ಫೀಚರ್ಸ್‌ಗಳ ಬಗ್ಗೆ ನೋಡೋಣ ಬನ್ನಿ.

   
 
ಹೆಲ್ತ್