Back
Home » ಗಾಸಿಪ್
ಕಮಲ್-ಶಂಕರ್ ಜೋಡಿಯ 'ಇಂಡಿಯನ್-2' ನಿಂತು ಹೋಯ್ತಂತೆ.!
Oneindia | 17th Apr, 2019 06:55 PM
 • ಲೋಕಸಭೆ ಎಲೆಕ್ಷನ್ ಬಳಿಕ ಶುರು

  ಬಜೆಟ್ ಸಮಸ್ಯೆಯಿಂದ ಇಂಡಿಯನ್ 2 ಸಿನಿಮಾದ ಚಿತ್ರೀಕರಣ ನಿಂತಿದೆ ಎಂಬ ಸುದ್ದಿ ವರದಿಯಾಗಿದೆ. ಕಾರಣ, ನಿರ್ಮಾಪಕರು ಹಿಂದೆ ಸರಿದಿರುವುದು. ಆದ್ರೆ, ನಿರ್ದೇಶಕ ಶಂಕರ್ ಇದನ್ನ ಅಲ್ಲೆಗಳೆಯುತ್ತಿದ್ದು, ಕಮಲ್ ಹಾಸನ್ ಅವರು ಲೋಕಸಭೆ ಚುನಾವಣೆ ಹಿನ್ನೆಲೆ ಬ್ಯುಸಿಯಾಗಿದ್ದಾರೆ. ಎಲೆಕ್ಷನ್ ಬಳಿ ಸಿನಿಮಾ ಶುರು ಮಾಡ್ತೀವಿ ಎನ್ನುತ್ತಿದ್ದಾರೆ.

  'ಕೆಜಿಎಫ್' ಸಿನಿಮಾಗೂ ಕಮಲ್ ಹಾಸನ್ ಗೂ ಸಂಬಂಧ ಇದ್ಯಾ?


 • ಬೇರೆ ಪ್ರೊಡಕ್ಷನ್ ಹುಡುಕುತ್ತೇವೆ

  ಲೈಕಾ ಪ್ರೊಡಕ್ಷನ್ ಹಿಂದೆ ಸರಿದಿರುವ ಕಾರಣ, ಇನ್ನೊಂದು ದೊಡ್ಡ ಸಂಸ್ಥೆಯನ್ನ ಇಂಡಿಯನ್ 2 ಚಿತ್ರ ನಿರ್ಮಿಸಲು ಕರೆತರುವ ಪ್ರಯತ್ನ ಸಾಗುತ್ತಿದೆಯಂತೆ. ಸದ್ಯದ ಮಾಹಿತಿ ಪ್ರಕಾರ, ಕಾರ್ಪೊರೇಟ್ ಕಂಪನಿಯ ಜೊತೆ ಮಾತುಕತೆ ಆಗುತ್ತಿದೆಯಂತೆ.


 • ಇದು ಕೊನೆಯ ಚಿತ್ರ

  ಅಂದ್ಹಾಗೆ, ಕಮಲ್ ಹಾಸನ್ ಅವರಿಗೆ ಇದು ಕೊನೆಯ ಸಿನಿಮಾ ಆಗಲಿದೆಯಂತೆ. ಇಂಡಿಯನ್ 2 ಸಿನಿಮಾ ಮುಗಿಸಿ, ಸಂಪೂರ್ಣವಾಗಿ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂಬ ನಿರ್ಧಾರ ಮಾಡಿದ್ದಾರೆ. ಆದ್ರೀಗ, ಕೊನೆಯ ಚಿತ್ರಕ್ಕೆ ಹಲವು ವಿಘ್ನ ಎದುರಾಗುತ್ತಿದೆ.

  ತಮಿಳು ನಟ ವಿಜಯ್ 'ಸಿಎಂ' ಆದ್ರೆ 'ಸರ್ಕಾರ' ಹೀಗಿರುತ್ತಂತೆ.!


 • 2020ರ ಟಾರ್ಗೆಟ್ ಮಾಡಿರುವ ಕಮಲ್

  ಹಾಗ್ನೋಡಿದ್ರೆ, 2020ಕ್ಕೆ ಇಂಡಿಯನ್ 2 ಸಿನಿಮಾ ರಿಲೀಸ್ ಆಗಬೇಕಿದೆ. ಅದೇ ವರ್ಷದಿಂದ ಕಮಲ್ ಹಾಸನ್ ರಾಜಕೀಯದಲ್ಲೂ ತೊಡಗಿಕೊಳ್ಳಬೇಕಿದೆ. ಈ ಸಿನಿಮಾದಲ್ಲಿ ಕಾಜಲ್ ಅಗರ್ ವಾಲ್ ನಾಯಕಿಯಾಗಿ ನಟಿಸಿದ್ದಾರೆ. ಹಾಗಿದ್ರೆ, ಇಂಡಿಯನ್ ಸಿನಿಮಾ ನಿಂತು ಹೋಗುತ್ತಾ ಅಥವಾ ಬೇರೆ ನಿರ್ಮಾಣ ಸಂಸ್ಥೆಯೊಂದಿಗೆ ಮತ್ತೆ ಶುರುವಾಗುತ್ತಾ? ಪ್ಲಾನ್ ಪ್ರಕಾರ 2020ರಲ್ಲೇ ಬಿಡುಗಡೆಯಾಗುತ್ತಾ? ಕಾದುನೋಡಬೇಕಿದೆ.
ಕಮಲ್ ಹಾಸನ್ ಮತ್ತು ಶಂಕರ್ ಜೋಡಿಯಲ್ಲಿ ಸೆಟ್ಟೇರಿದ್ದ ಇಂಡಿಯನ್ 2 ಸಿನಿಮಾ ದೊಡ್ಡ ಸದ್ದು ಮಾಡಿತ್ತು. ಅತಿ ದೊಡ್ಡ ಬಜೆಟ್ ನಲ್ಲಿ ಈ ಸಿನಿಮಾ ಬರಲಿದ್ದು, ದಾಖಲೆಗಳೆಲ್ಲಾ ಉಡೀಸ್ ಆಗಲಿದೆ ಎಂಬ ಭರವಸೆ ಮೂಡಿತ್ತು. ಆದ್ರೀಗ ಆ ಆಸೆ ಬರಿ ಆಸೆಯಾಗಿಯೇ ಉಳಿಯಲಿದೆ.

ಹೌದು, ಇಂಡಿಯನ್ 2 ಸಿನಿಮಾ ನಿಂತು ಹೋಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಅತಿ ದೊಡ್ಡ ಬಜೆಟ್ ನಲ್ಲಿ ತಯಾರಾಗಬೇಕಿರುವ ಈ ಚಿತ್ರಕ್ಕೆ ಬಂಡವಾಳ ಹಾಕಲು ನಿರ್ಮಾಪಕರು ಮುಂದೆ ಬರುತ್ತಿಲ್ಲ. ಹಣ ಹೂಡಿಕೆಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

'ಇಂಡಿಯನ್-2' ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಈ ಹಿಂದೆ ರಜನಿಕಾಂತ್ ಅಭಿನಯದ '2.0' ಚಿತ್ರವನ್ನ ಸುಮಾರು 450 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ಇಂಡಿಯನ್ 2 ಚಿತ್ರವನ್ನ ನಿರ್ಮಾಣ ಮಾಡುತ್ತಿತ್ತು. ಆದ್ರೀಗ, ದಿಢೀರ್ ಅಂತ ಪ್ರಾಜೆಕ್ಟ್ ಕೈಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ನಿರ್ದೇಶಕ ಶಂಕರ್ ಬೇರೆಯದ್ದೇ ಕಥೆ ಹೇಳ್ತಾರೆ. ಏನಂದ್ರು?

   
 
ಹೆಲ್ತ್