Back
Home » ಬಾಲಿವುಡ್
ಕಂಗನಾ ಮೇಲೆ ಚಪ್ಪಲಿ ಎಸೆದಿದ್ರಾ ಅಲಿಯಾ ಭಟ್ ತಂದೆ?
Oneindia | 17th Apr, 2019 07:06 PM

ಬಾಲಿವುಡ್ ನಟಿ ಕಂಗನಾ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಹೆಚ್ಚಾಗಿ ವಿವಾದಗಳ ಮೂಲಕವೇ ಸುದ್ದಿಯಾಗುತ್ತಿದ್ದಾರೆ. ಯಶಸ್ವಿ ನಟಿ ಎನಿಸಿಕೊಂಡಿರುವ ಕಂಗನಾ ಮತ್ತು ನಟಿ ಅಲಿಯಾ ಭಟ್ ನಡುವೆ ಈಗ ಬೆಕ್ಕಿನ ಜಗಳ ಪ್ರಾರಂಭವಾಗಿದೆ. ಇದರ ನಡುವೆ ಕಂಗನಾ ಸಹೋದರಿ ರಂಗೋಲಿ ಮತ್ತು ಅಲಿಯಾ ಭಟ್ ತಾಯಿ ಸೋನಿ ರಜ್ದಾನ್ ನಡುವೆ ಟ್ವಿಟ್ಟರ್ ವಾರ್ ತಾರಕ್ಕಕ್ಕೇರಿದೆ.

"ಕಂಗನಾ ಅಭಿನಯದ 'ವಾಹ್ ಲಮ್ಹೇ' ಚಿತ್ರದ ಪ್ರಿವೀವ್ ವೇಳೆ ನಿರ್ಮಾಪಕ ಮಹೇಶ್ ಭಟ್ ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರು. ಆಕೆಗೆ ಸಿನಿಮಾ ಕೂಡ ನೋಡಲು ಬಿಟ್ಟಿರಲಿಲ್ಲ, ಆಗಿನ್ನು ಕಂಗನಾ 19ವರ್ಷದವಳಾಗಿದ್ದಳು" ಎಂದು ರಂಗೋಲಿ ಚಾಂದೇಲ್ ನಿರ್ಮಾಪಕ ಮಹೇಶ್ ಭಟ್ ವಿರುದ್ಧ ದೊಡ್ಡ ಆರೋಪ ಮಾಡಿದ್ದಾರೆ.

'ಬಾಹುಬಲಿ'ಗಿಂತ ದೊಡ್ಡ ಸಿನಿಮಾದಲ್ಲಿ ಕಂಗನಾ, ಡೈರೆಕ್ಟರ್ ಅವರೇ.!

ರಂಗೋಲಿ ಸಿಡಿದೇಳಲು ಕಾರಣ ಮಹೇಶ್ ಭಟ್ ಪತ್ನಿ ಸೋನಿ ರಜ್ದಾನ್ ಕಂಗನಾ ವಿರುದ್ಧ ಮಾಡಿದ ಟ್ವಿಟ್. ಅಲಿಯಾ ಮತ್ತು ಕಂಗನಾ ಜಗಳದ ನಡುವೆ ಎಂಟ್ರಿ ಕೊಟ್ಟ ಸೋನಿ ರಜ್ದಾನ್, "ಕಂಗನಾ ಅವರಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡಲು ಕಾರಣವಾಗಿದ್ದೇ ಪತಿ ಮಹೇಶ್ ಭಟ್, ಆದ್ರೆ ಕಂಗನಾ ಮಾತ್ರ ಮಗಳು ಆಲಿಯಾ ಮತ್ತು ಮಹೇಶ್ ಭಟ್ ವಿರುದ್ಧ ಮತನಾಡುತ್ತಿದ್ದಾರೆ" ಎಂದು ಕಂಗನಾ ವಿರುದ್ಧ ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದರು.

ಇದನ್ನ ನೋಡಿ ಸಿಟ್ಟಿಗೆದ್ದ ರಂಗೋಲಿ ಸಾಲು ಸಾಲು ಟ್ವೀಟ್ ಗಳನ್ನು ಮಾಡುವ ಮೂವಕ ಮಹೇಶ್ ಭಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಂಗನಾಗೆ ಬ್ರೇಕ್ ನೀಡಿದ್ದು ಮಹೇಶ್ ಭಟ್ ಅಲ್ಲ, ನಿರ್ದೇಶಕ ಅನುರಾಗ್ ಬಸು, ಮಹೇಶ್ ಭಟ್ ಕೇವಲ ಕ್ರಿಯೇಟಿವ್ ನಿರ್ದೇಶಕರಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ, ಅದು ಅವರ ಸ್ವಂತ ಪ್ರೊಡಕ್ಷನ್ ಹೌಸ್ ಕೂಡ ಅಲ್ಲ ಎನ್ನುವುದು ನೆನಪಿರಲಿ" ಎಂದು ಹೇಳಿದ್ದಾರೆ.

ಜಯಲಲಿತಾ ಪಾತ್ರಕ್ಕೆ ಕಂಗನಾ ಪಡೆದ ಸಂಭಾವನೆ ಇಷ್ಟೊಂದಾ

ಅಷ್ಟೆಯಲ್ಲ ಮಹೇಶ್ ಭಟ್ ಬರೆದಿದ್ದ ದೋಖ ಎಂಬ ಸಿನಿಮಾದಲ್ಲಿ ಕಂಗನಾ ಅಭಿನಯಿಸಬೇಕು ಎನ್ನುವುದು ಅವರ ಆಸೆಯಾಗಿತ್ತು. ಆ ಚಿತ್ರದಲ್ಲಿ ಕಂಗನಾ ಸೂಸೈಡ್ ಬಾಂಬರ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ ಕಂಗನಾ ನಿರಾಕರಿಸಿದ ಕಾರಣ ಆಕೆಯ ವಿರುದ್ಧ ಕಿರುಚಾಡಿದ್ದರು. ಅಷ್ಟಕ್ಕೆ ಸುಮ್ಮನಾಗದೆ ಮಹೇಶ್ ಭಟ್ ವಾಹ್ ಲಮ್ಹೇ ಚಿತ್ರದ ಪ್ರಿವೀವ್ ನಲ್ಲಿ ಚಪ್ಪಲಿ ಎಸೆದಿದ್ದರು ಎಂದು ಹೇಳಿದ್ದಾರೆ.

ಒಟ್ನಲ್ಲಿ ಬಾಲಿವುಡ್ ನಲ್ಲಿ ತಾರಕ್ಕಕ್ಕೇರಿರುವ ಕಂಗನಾ ಸಹೋದರಿಯರು ಮತ್ತು ಮಹೇಶ್ ಭಟ್ ಕುಟುಂಬದ ನಡುವಿನ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತೊ ಕಾದು ನೋಡಬೇಕು.

   
 
ಹೆಲ್ತ್