Back
Home » ಇತ್ತೀಚಿನ
ಎಪ್ರಿಲ್ 22 ಕ್ಕೆ ರಿಯಲ್ ಮಿ 3 ಪ್ರೊ ಬಿಡುಗಡೆ- ಏನೆಲ್ಲಾ ಫೀಚರ್ ಇರಲಿದೆ ಗೊತ್ತಾ?
Gizbot | 17th Apr, 2019 07:15 PM
 • ಪವರ್ ಫುಲ್ ಸ್ನ್ಯಾಪ್ ಡ್ರ್ಯಾಗನ್ 710 ಚಿಪ್ ಸೆಟ್

  ರಿಯಲ್ ಮಿ 3 ಪ್ರೋ ಇತ್ತೀಚೆಗೆ ಬ್ಲೂಟೂತ್ ಎಸ್ಐಜಿಯಿಂದ ಸರ್ಟಿಫೈ ಆಗಿದ್ದು, ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 710 ಆಕ್ಟಾ ಕೋರ್ ಪ್ರೊಸೆಸರ್ ನ್ನು ಒಳಭಾಗದಲ್ಲಿ ಹೊಂದಿದೆ. ಬ್ಲೂಟೂತ್ ಎಸ್ಐಜಿಯನ್ನು ಹೊರತು ಪಡಿಸಿ, ಈ ಡಿವೈಸ್ ನಲ್ಲಿ ಇದೇ ಚಿಪ್ ಸೆಟ್ ನೊಂದಿಗೆ ಇತ್ತೀಚೆಗೆ ಗೀಕ್ ಬೆಂಚ್ ನಲ್ಲೂ ಇದು ಕಾಣಿಸಿಕೊಂಡಿತ್ತು. ಇದನ್ನು 10nm ಪ್ರೊಸೆಸ್ ನಲ್ಲಿ ತಯಾರಿಕೆ ಮಾಡಲಾಗಿದ್ದು, ಸ್ನ್ಯಾಪ್ ಡ್ರ್ಯಾಗನ್ 710 Adreno 616 GPU,ಸ್ನ್ಯಾಪ್ ಡ್ರ್ಯಾಗನ್ 675ನಲ್ಲಿನ Adreno 612 ಗಿಂತ ಹೆಚ್ಚು ಪವರ್ ಫುಲ್ ಆಗಿದೆ. ರಿಯಲ್ ಮಿ ಸಿಇಓ ಮಹದೇವ್ ಶೇಟ್ ಇತ್ತೀಚೆಗೆ ಖಾತ್ರಿ ಪಡಿಸಿರುವಂತೆ ಇದು ಫೋರ್ಟ್ ನೈಟ್ ಗೆ ಬೆಂಬಲ ನೀಡುವ ಈ ಸೆಗ್ಮೆಂಟ್ ನಲ್ಲಿ ಲಭ್ಯವಾಗುವ ಮೊದಲ ಫೋನ್ ಆಗಿದೆ..


 • ದೊಡ್ಡ ಬ್ಯಾಟರಿ

  ರಿಯಲ್ ಮಿ 2 ಪ್ರೋ ಅತ್ಯಂತ ಆಕರ್ಷಕವಾಗಿರುವ ಬಜೆಟ್ ಸ್ಮಾರ್ಟ್ ಫೋನ್ ಆಗಿತ್ತು.ಆದರೆ ಬ್ಯಾಟರಿ ವಿಚಾರಕ್ಕೆ ಬಂದಾಗ ಅಷ್ಟೇನು ಆಕರ್ಷಕವಾದ ಪ್ರದರ್ಶನವನ್ನು ನೀಡಲಿಲ್ಲ. ರಿಯಲ್ ಮಿ 3 ಪ್ರೋನಲ್ಲಿ ದೊಡ್ಡದಾದ ಮತ್ತು ಪ್ರೊ 2 ಗಿಂತ ಅಧ್ಬುತ ಪ್ರದರ್ಶನ ನೀಡುವ ಬ್ಯಾಟರಿಯನ್ನು ನಿರೀಕ್ಷಿಸಲಾಗಿದೆ. ಬ್ಲೂಟೂತ್ ಎಸ್ಐಜಿ ಲಿಸ್ಟ್ ಮಾಡಿರುವ ಪ್ರಕಾರ ರಿಯಲ್ ಮಿ 3 ಪ್ರೋ ನಲ್ಲಿ ಅತೀ ದೊಡ್ಡ ಅಂದರೆ 3960mAh ಸಾಮರ್ಥ್ಯವಿರುವ ಬ್ಯಾಟರಿಯನ್ನು ಅಳವಡಿಸಲಾಗಿದೆ.


 • ಕಲರ್ ಓಎಶ್ 6.0

  ರಿಯಲ್ ಮಿ 3 ಪ್ರೋ ರಿಯಲ್ ಮಿ 3 ನಂತೆಯೇ ಇದೆ. ಆಂಡ್ರಾಯ್ಡ್ ಪೈ ಆಧಾರಿತ ColorOS 6.0 ನಲ್ಲೇ ಇದೆ. ಸಾಕಷ್ಟು ಡಿಸೈನಿನ ಥೀಮ್ ಗಳನ್ನು ಹೊರತು ಪಡಿಸಿ ColorOS 6.0 ಬಳಕೆದಾರರ ಅನುಭವವನ್ನು ಹೆಚ್ಚಿಸುವ ಹಲವು ಅಭಿವೃದ್ಧಿ ಪಡಿಸಲಾಗಿರುವ ಫೀಚರ್ ಗಳನ್ನು ಇದು ಆಫರ್ ಮಾಡುತ್ತದೆ. ಅದರಲ್ಲಿ ಪ್ರಮುಖವಾಗಿ ಗೆಷ್ಚರ್ ನೇವಿಗೇಷನ್, ಆಪ್ ಡ್ರಾವರ್ ಮೂಲಕ ಹೊಸ ಲಾಂಚರ್ ಮತ್ತು ಹೈಪರ್ ಬೂಸ್ಟ್ ಇದ್ದು ಸೂಪರ್ ಪ್ಲಡ್ ಗೇಮಿಂಗ್ ಎಕ್ಸ್ ಪೀರಿಯನ್ಸ್ ನ್ನು ನೀಡುತ್ತದೆ.


 • ಅಭಿವೃದ್ಧಿ ಪಡಿಸಲಾಗಿರುವ ಕ್ಯಾಮರಾಗಳು :

  ರಿಯಲ್ ಮಿ ಸಿಇಓ ಮಹದೇ ಶೇಟ್ ಇತ್ತೀಚೆಗೆ ಹೊಸ ಕ್ಯಾಮರಾ ಸ್ಯಾಂಪಲ್ ಗಳನ್ನು ಹಂಚಿಕೊಂಡಿದ್ದು ಇವುಗಳನ್ನು ರಿಯಲ್ ಮಿ 3 ಪ್ರೋ ನಲ್ಲಿ ಕ್ಲಿಕ್ಕಿಸಲಾಗಿದೆ. ಆದರೆ ನಿರೀಕ್ಷೆಯಂತೆ EXIF ಡಾಟಾವನ್ನು ಇಮೇಜ್ ನಿಂದ ಪಬ್ಲಿಷ್ ಮಾಡುವ ಮುನ್ನವೇ ಡಿಲೀಟ್ ಮಾಡಲಾಗಿದೆ. ಆದರೆ ಎರಡು ಇಮೇಜ್ ಗಳು HDR ಪ್ರದರ್ಶನವನ್ನು ಹಿಂಭಾಗದ ಕ್ಯಾಮರಾಗಳಿಂದ ತೋರಿಸಿದೆ ಮತ್ತು ಮತ್ತೊಂದು ಸೆಲ್ಫೀ ಕ್ಯಾಮರಾವನ್ನು ಟೀಸ್ ಮಾಡಿದೆ. ಶೇಟ್ ಹಂಚಿಕೊಂಡ ಸೆಲ್ಫಿಯನ್ನೇ ಗಮನಿಸಿ ಫೋಟೋ ರೆಸಲ್ಯೂಷನ್ ಬಗ್ಗೆ ಮಾತನಾಡುವುದಾದರೆ 13 ಮೆಗಾಪಿಕ್ಸಲ್ ಗೂ ಅಧಿಕವಾಗಿರುವ ಹೈಯರ್ ರೆಸಲ್ಯೂಷನ್ ಇರುವ ಕ್ಯಾಮರಾವನ್ನು ಈ ಫೋನ್ ಹೊಂದಿರುತ್ತದೆ. ವದಂತಿಗಳು ಹೇಳುವ ಪ್ರಕಾರ 25ಎಂಪಿ ಸಾಮರ್ಥ್ಯದ ಮುಂಭಾಗದ ಕ್ಯಾಮರಾ ಜೊತೆಗೆ ಎಐ ಪವರ್ಡ್ ಆಗಿರುವ ಬ್ಯೂಟಿಫಿಕೇಷನ್ ಫೀಚರ್ ಗಳು ಇದರಲ್ಲಿ ಇರಲಿವೆ ಎನ್ನಲಾಗುತ್ತಿದೆ.


 • ವೇಗದ ಚಾರ್ಜಿಂಗ್

  ರಿಯಲ್ ಮಿ 2 ಗಿಂತ ಉತ್ತಮ ಬ್ಯಾಟರಿಯ ಜೊತೆಗೆ ರಿಯಲ್ ಮಿ3 ನಲ್ಲಿ ಕಂಪೆನಿಯು ಇದೇ ಮೊದಲ ಬಾರಿಗೆ ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುವ ನಿರೀಕ್ಷೆ ಇದೆ. ರಿಯಲ್ ಮಿ ಫೆಬ್ರವರಿಯಲ್ಲಿ ಈ ಬಗ್ಗೆ ಟೀಸರ್ ಬಿಡುಗಡೆಗೊಳಿಸಿತ್ತು. ಆದರೆ ಅಧಿಕೃತವಾಗಿ ಯಾವುದನ್ನೂ ಖಾತ್ರಿ ಗೊಳಿಸಿಲ್ಲ.ಸ್ಮಾರ್ಟ್ ಫೋನ್ ಒಪ್ಪೋದ VOOC 3.0 ಫ್ಲ್ಯಾಶ್ ಚಾರ್ಜ್ ತಂತ್ರಗಾರಿಕೆಯನ್ನು ಹೊಂದಿರುವ ನಿರೀಕ್ಷೆ ಇದೆ. ವಿಭಿನ್ನ ಮಾನಿಕರ್ ಬಳಶಿ ಮಾರ್ಕೆಟಿಂಗ್ ಮಾಡುವ ಸಾಧ್ಯತೆ ಇದೆ. ಈ ಫೋನಿಗೆ ಸ್ಪರ್ಧೆಯೊಡ್ಡುವ ರೆಡ್ಮಿ ನೋಟ್ 7 ಪ್ರೋ ಕ್ವಾಲ್ಕಂ ಕ್ವಿಕ್ ಚಾರ್ಜ್ 4.0 ಬೆಂಬಲದೊಂದಿಗೆ ಬಿಡುಗಡೆಗೊಂಡಿದೆ.
ಎಪ್ರಿಲ್ 22 ರಂದು ದೆಹಲಿ ಯುನಿವರ್ಸಿಯ ಕಾರ್ಯಕ್ರಮವೊಂದರಲ್ಲಿ ರಿಯಲ್ ಮಿ 3 ಪ್ರೋವನ್ನು ಭಾರತದಲ್ಲಿ ಬಿಡುಗಡಗೊಳಿಸುವ ಬಗ್ಗೆ ಇತ್ತೀಚೆಗಷ್ಟೇ ರಿಯಲ್ ಮಿ ಸಂಸ್ಥೆ ತಿಳಿಸಿದೆ. ಕಳೆದ ವರ್ಷ ಬಿಡುಗಡೆಗೊಂಡ ರಿಯಲ್ ಮಿ 2 ಪ್ರೋ ಫೋನಿನ ಯಶಸ್ಸಿನ ಅವತರಣಿಗೆ ಈ ರಿಯಲ್ ಮಿ 3 ಪ್ರೋ ಸ್ಮಾರ್ಟ್ ಫೋನ್ ಆಗಿದೆ.ಮಾರ್ಚ್ ನಲ್ಲಿ ಭಾರತದಲ್ಲಿ ಬಿಡುಗಡೆಗೊಂಡ ರೆಡ್ಮಿ ನೋಟ್ 7 ಪ್ರೋ ಈ ಫೋನಿನ ಪ್ರಮುಖ ಸ್ಪರ್ಧಿಯಾಗಿದೆ.

ಈಗಾಗಲೇ ಎಲ್ಲರೂ ಅಂದುಕೊಂಡಂತೆ ರಿಯಲ್ ಮಿ 3 ಸಾಕಷ್ಟು ಆಕರ್ಷಕ ಫೀಚರ್ ಗಳನ್ನು ಮತ್ತು ಅಧ್ಬುತ ಡಿಸೈನ್ ಹೊಂದಿರುವ ಡಿವೈಸ್ ಆಗಿರುತ್ತದೆ. ಈ ಲೇಖನದಲ್ಲಿ ನಾವು ರಿಯಲ್ ಮಿ 3 ಪ್ರೋ ಗಾಗಿ ಯಾಕೆ ಕಾಯಬೇಕು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ.ಫ್ಲಿಪ್ ಕಾರ್ಟ್ ಈ ಫೋನಿನ ಟೀಸರ್ ಪೇಜ್ ಕೂಡ ಈಗಾಗಲೇ ಆರಂಭವಾಗಿದೆ.

   
 
ಹೆಲ್ತ್