Back
Home » ಇತ್ತೀಚಿನ
ಫೋನಿನ್ ಪವರ್‌ ಬಟನ್ ವರ್ಕ್‌ ಮಾಡುತ್ತಿಲ್ಲವೇ?.ಈ ಸ್ಮಾರ್ಟ್‌ಟ್ರಿಕ್ಸ್‌ ಬಳಸಿ!
Gizbot | 18th Apr, 2019 08:01 AM
 • ಗೆಸ್ಚರ್‌ ಫೀಚರ್‌ ಬಳಸಬಹುದು

  ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಗೆಸ್ಚರ್ ಫೀಚರ್ (ಸನ್ನೆ/ಸೂಚನೆ ಸೆನ್ಸಾರ್‌ ಮೂಲಕ) ಆಯ್ಕೆ ಇದ್ದೇ ಇರುತ್ತದೆ. ಈ ಆಯ್ಕೆ ಬಳಸುವ ಮೂಲಕವು ಸ್ಮಾರ್ಟ್‌ಫೋನ್‌ ಅನ್‌ಲಾಕ್‌ ಮಾಡಬಹುದಾಗಿದ್ದು, ಸೆಟ್ಟಿಂಗ್‌ನಲ್ಲಿ ಗೆಸ್ಚರ್‌ ಆನ್‌ ಮಾಡಿಕೊಂಡಿರಬೇಕು. ಉದಾಹರಣಗೆ ಡಬಲ್‌ ಟ್ಯಾಪ್‌ ಮಾಡಿದರೇ ಡಿಸ್‌ಪ್ಲೇ ಆನ್‌ ಆಗುವುದು, ಕೈ ಸನ್ನೆಯಿಂದ ಫೋಟೋ ಕ್ಲಿಕ್ಕಿಸುವುದು.


 • ಥರ್ಡ್‌ಪಾರ್ಟಿ ಆಪ್ಸ್‌

  ಪವರ್‌ ಬಟನ್‌ಗೆ ಪರ್ಯಾಯವಾಗಿ ಕೆಲಸ ಮಾಡಬಲ್ಲ ಅನೇಕ ಆಪ್‌ಗಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ. ಇವು ಪವರ್‌ ಬಟನ್‌ ಬದಲಿಗೆ ವ್ಯಾಲ್ಯೂಮ್‌ ಬಟನ್‌ ಆಯ್ಕೆಯನ್ನು ನೀಡಿ ಸ್ಮಾರ್ಟ್‌ಫೋನ್‌ ಆನ್‌ ಆಫ್‌ ಮಾಡಲು ನೆರವಾಗುತ್ತವೆ. ಗ್ರ್ಯಾವಿಟಿ ಸ್ಕ್ರೀನ್, ಪ್ರೊಕ್ಸಿಮಿಟಿ ಆಕ್ಷನ್ಸ್‌, ಸೇರಿದಂತೆ ಇಂಥಹ ಆಪ್‌ಗಳನ್ನು ಬಳಸಬಹುದಾಗಿದೆ.


 • ಫಿಂಗರ್‌ಪ್ರಿಂಟ್ ಸ್ಕ್ಯಾನರ್‌

  ಪ್ರಸ್ತುತ ಎಲ್ಲ ಸ್ಮಾರ್ಟ್‌ಫೋನ್‌ಗಳಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ ಫೀಚರ್‌ ಅನ್ನು ನೀಡಲಾಗುತ್ತಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಿಂದ ಪವರ್ ಬಟನ್ ಇಲ್ಲದೇ ಸ್ಮಾರ್ಟ್‌ಫೋನ್‌ ಅನ್‌ಲಾಕ್‌ ಮಾಡಬಹುದಾಗಿದೆ. ಸ್ಮಾರ್ಟ್‌ಫೋನ್‌ ಸೆಟ್ಟಿಂಗ್‌ಗಳಲ್ಲಿ ಈ ಆಯ್ಕೆಯನ್ನು ಆನ್‌ ಮಾಡಿಕೊಂಡಿರಬೇಕು.


 • ಇತರೆ ಪ್ರಯತ್ನಗಳು

  ಸ್ಮಾರ್ಟ್‌ಫೋನ್‌ನಲ್ಲಿ ಅಲಾರಂ ಇಟ್ಟಾಗ, ಅಲಾರಂ ಸೌಂಡ್‌ ಮಾಡುವುದರ ಜೊತೆಗೆ ಡಿಸ್‌ಪ್ಲೇ ಆನ್‌ ಆಗುತ್ತದೆ. ಹಾಗೇ ಕೆಲವೊಂದು ಸ್ಮಾರ್ಟ್‌ಫೋನ್‌ಗಳು ಚಾರ್ಜಿಂಗ್ ಮಾಡುವಾಗ ಡಿಸ್‌ಪ್ಲೇ ಆನ್‌ ಆಗುವುದು ಮತ್ತು ನೋಟಿಫಿಕೇಶನ್‌ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ.
ಯಾವುದೇ ಅತ್ಯುತ್ತಮ ಸ್ಮಾರ್ಟ್‌ಪೋನ್ ಖರೀದಿಸಿದರೂ ಕೆಲವೊಮ್ಮೆ ಸಣ್ಣ ಪುಟ್ಟ ರಿಪೇರಿ ತಪ್ಪಿದಲ್ಲಾ. ಸ್ಮಾರ್ಟ್‌ಫೋನಿನಲ್ಲಿ ಪ್ರತಿ ಬಟನ್‌ ತನ್ನ ಮಹತ್ವವನ್ನು ಹೊಂದಿದ್ದು, ಯಾವುದೇ ಬಟನ್ ಹಾಳಾದರು ಸ್ಮಾರ್ಟ್‌ಫೋನ್ ಕೆಲಸದಲ್ಲಿ ಏರುಪೇರು ಕಂಡಿತ. ಸ್ಮಾರ್ಟ್‌ಫೋನಿನಲ್ಲಿ ಹೆಚ್ಚಾಗಿ ಬಳಕೆಯಾಗುವುದ 'ಪವರ್‌ ಬಟನ್‌' ಏನಾದರೂ ಕೈಕೊಟ್ಟರೆ ಸ್ಮಾರ್ಟ್‌ಫೋನ್‌ ಇದ್ದು, ಇಲ್ಲದಂತಾಗುತ್ತದೆ.

ಹೌದು, ನಿಮ್ಮ ಸ್ಮಾರ್ಟ್‌ಫೋನ್ ಪವರ್‌ ಬಟನ್ ಕೆಲಸ ಮಾಡದಿದ್ದರೂ ಸಹ ನೀವು ಸ್ಮಾರ್ಟ್‌ಫೋನ್ ಬಳಸಬಹುದಾಗಿದೆ. ಅದಕ್ಕಾಗಿ ಹಲವು ಪರ್ಯಾಯ ಮಾರ್ಗಗಳಿದ್ದು, ಅವುಗಳನ್ನು ಅನುಸರಿಸುವ ಮೂಲಕ ಪವರ್‌ ಬಟನ್ ಸ್ಥಾನವನ್ನು ತುಂಬ ಬಹುದಾಗಿದೆ.ಹಾಗಾದರೇ ಪವರ್‌ ಬಟನ್‌ಗೆ ಪರ್ಯಾಯವಾಗಿ ಸ್ಮಾರ್ಟ್‌ಫೋನಿನಲ್ಲಿ ಕೆಲಸ ಮಾಡಬಲ್ಲ ಸ್ಮಾರ್ಟ್‌ದಾರಿಗಳು (ಫೀಚರ್ಸ್‌) ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

   
 
ಹೆಲ್ತ್