Back
Home » ಇತ್ತೀಚಿನ
ಗೂಗಲ್ ಕ್ರೋಮ್ 'ವರ್ಷನ್ 69' ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು!!
Gizbot | 18th Apr, 2019 09:00 AM
 • ಏನಿದು 'ಗೂಗಲ್ ಕ್ರೋಮ್ 69'?

  ಯಾವಾಗಲೂ ಅಂತರ್ಜಾಲ ಜಾಲತಾಣಗಳಲ್ಲಿ ವಿಹಾರ ಮಾಡಲು ಇಚ್ಛಿಸುವವರ ಹಲವರ ನೆಚ್ಚಿನ ಬ್ರೌಸರ್ ಆಗಿರುವ ಕ್ರೋಮ್ ಈಗ ಹೊಸ ಸೌಲಭ್ಯಗಳೊಂದಿಗೆ ಹೊಸ ರೂಪದಲ್ಲಿ ಬಂದಿದೆ. ಇದಕ್ಕೆ 'ಗೂಗಲ್ ಕ್ರೋಮ್ 69' ಎಂದು ಹೆಸರಿಸಲಾಗಿದ್ದು, ಸ್ಮಾರ್ಟ್‌ಪೋನ್ ಸಾಧನಗಳಲ್ಲಿಯೂ ಸಹ ಹೆಚ್ಚು ಸ್ಥಳ ಬೇಡುವುದಿಲ್ಲದ ಈ ಕ್ರೋಮ್ ಬ್ರೌಸರ್ ಅನ್ನು ಬಳಸುವುದು ಕೂಡ ಸುಲಭ.ಕ್ರೋಮ್ ತೆರೆದು, 'ಮೋರ್' ಮೇಲೆ ಕ್ಲಿಕ್ ಮಾಡಿ. ಅಲ್ಲಿ 'ಅಪ್‌ ಡೇಟ್ ಗೂಗಲ್ ಕ್ರೋಮ್' ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಸಾಕು ನಿಮ್ಮ ಕ್ರೋಮ್ ಅಪ್‌ಡೇಟ್ ಆಗಲಿದೆ.


 • ಈಗ ದುರ್ಬಳಕೆಗೆ ಕಡಿವಾಣ

  ಒಂದು ವೇಳೆ ಬಳಕೆದಾರರು ಗೂಗಲ್ ಸೇವೆಗಳನ್ನು ಮಲ್ಟಿಪಲ್ ವಿಂಡೋಗಳಲ್ಲಿ ಬಳಸುತ್ತಿದ್ದು ಅಚಾನಕ್ ಆಗಿ ಎಲ್ಲಾ ವಿಂಡೋಗಳನ್ನು ಒನ್ ಶಾಟ್ ನಲ್ಲಿ ಕ್ಲೋಸ್ ಮಾಡಿ ತೆರಳಿದ್ದರೆ ಆಗ ನೀವಿನ್ನೂ ಸೈನ್ ಇನ್ ಆಗಿಯೇ ಇರುತ್ತೀರಿ ಮತ್ತು ಬೇರೊಬ್ಬ ಬಳಕೆದಾರ ಅದೇ ಪಿಸಿಯನ್ನು ಬಳಸಿದರೆ ನಿಮ್ಮ ವಯಕ್ತಿಕ ಡಾಟಾಗಳು ಕದಿಯಲ್ಪಡುವ ಸಾಧ್ಯತೆ ಇರುತ್ತದೆ. ಈ ಸಾಧ್ಯತೆಯನ್ನು ಗೂಗಲ್ ಕ್ರೋಮ್ 69' ನಿಯಂತ್ರಿಸುತ್ತದೆ. ಈ ವೈಶಿಷ್ಟ್ಯತೆಯ ಪ್ರಮುಖ ಉಪಯೋಗವಂತೂ ಇದೇ ಆಗಿದೆ.


 • ವಿಶೇಷವಾದ ಹೊಸ ಫೀಚರ್

  ಗೂಗಲ್ ತನ್ನ 69 ವರ್ಷನ್ ನಲ್ಲಿ ಸ್ವಯಂಚಾಲಿತವಾಗಿ ಗೂಗಲ್ ಅಕೌಂಟಿಗೆ ನೀವು ಸೈನ್ ಇನ್ ಆದ ಕೂಡಲೇ ಕ್ರೋಮ್ ಗೂ ಸೈನ್ ಇನ್ ಆಗುವಂತಹ ಅವಕಾಶವನ್ನು ಕಲ್ಪಿಸಿದೆ. ಕ್ರೋಮ್ ನ ಟೂಲ್ ಬಾರ್ ನಲ್ಲಿರುವ ಯ್ಯೂಸರ್ ಪ್ರೊಫೈಲ್ ಐಕಾನ್ ನೀವು ಸೈನ್ ಇನ್ ಆದ ಕೂಡಲೇ ಗೂಗಲ್ ಅಕೌಂಟ್ ಪ್ರೊಫೈಲ್ ಪಿಕ್ಚರ್ ಆಗಿ ಬದಲಾಗುತ್ತದೆ ಮತ್ತು ಸೈನ್ ಔಟ್ ಆದ ತಕ್ಷಣವೇ ಎಲ್ಲಾ ಗೂಗಲ್ ಸೇವೆಗಳಿಂದ ನೀವು ಲಾಗ್ ಔಟ್ ಆಗಿರುತ್ತೀರಿ.


 • ಪಾಸ್‌ವರ್ಡ್‌ ಮರೆತರೂ ಸಿಗುತ್ತದೆ!

  ನೀವು ಹಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತೇವೆ. ಕೆಲವು ಸೈಟ್‌ಗಳ ಲಾಗಿನ್ ವಿವರಗಳನ್ನು ಬ್ರೌಸರ್‌ನಲ್ಲಿ ಸೇವ್ ಮಾಡುತ್ತಿರುತ್ತೇವೆ. ಅಂತಹ ವಿವಿಧ ತಾಣಗಳ ಪಾಸ್‌ವರ್ಡ್‌ಗಳನ್ನು ಇನ್ಮುಂದೆ ಕ್ರೋಮ್‌ನಲ್ಲಿ ನಿರ್ವಹಿಸುವುದು ಸುಲಭ .ಹಿಂದೆ ಯಾವುದೋ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಬಳಸಿರಿವ ಪಾಸ್‌ವರ್ಡ್ ಕೂಡ ನೋಡಬಹುದು. ಹಾಗಾದರೆ ನೋಡುವುದು ಹೇಗೆ?,
  ಕ್ರೋಮ್ ಅಡ್ರಸ್‌ಬಾರ್ ಪಕ್ಕದಲ್ಲಿರುವ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿದರೆ, ಪಾಸ್‌ವರ್ಡ್ ವಿಭಾಗ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸೇವ್ ಮಾಡಿದ ಪಾಸ್‌ವರ್ಡ್ ವಿವರಗಳನ್ನು ಸುಲಭವಾಗಿ ಪಡೆಯಬಹುದು.


 • ಪಾಸ್‌ವರ್ಡ್‌ ಮ್ಯಾನೇಜರ್

  ಈಗ ನೀವು ಬಳಸುತ್ತಿರುವ ಜಿ-ಮೇಲ್ ಅಕೌಂಟ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡು ಬೇಕೆನಿಸಿದಾಗ ಬಳಸಿಕೊಳ್ಳಬಹುದಾಗಿದೆ. ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಪಿನ್‌ಗಳನ್ನೂ ಜಿ-ಮೇಲ್ ಖಾತೆಗೆ ಜೋಡಿಸಬಹುದು. ಪಾಸ್‌ವರ್ಡ್ ಮ್ಯಾನೇಜರ್ ಸಹಾಯದಿಂದ ಆಗಾಗ್ಗೆ ಹೊಸ ಪಾಸ್‌ವರ್ಡ್‌ಗಳನ್ನು ಜನರೇಟ್ ಕೂಡ ಮಾಡಿಕೊಳ್ಳಬಹುದು.


 • ಖಾಸಗಿತನಕ್ಕೆ ರಕ್ಷೆ

  'ಗೂಗಲ್ ಕ್ರೋಮ್ 69'ರಲ್ಲಿ ಅಂತರ್ಜಾಲವನ್ನು ಸುರಕ್ಷಿತವಾಗಿ ಬಳಕೆ ಮಾಡಲು 'ಪ್ರೈವಸಿ ಚೆಕ್ ಅಪ್' ಆಯ್ಕೆ ನೀಡಲಾಗಿದೆ. ಇದರಿಂದ ನೀವು ವೆಬ್, ಆಪ್ಸ್, ಲೋಕೆಷನ್ ಹೀಗೆ ಎಲ್ಲವನ್ನೂ ರಿವ್ಯೂ ಮಾಡಿ ನೋಡಬಹುದು. ಖಾಸಗೀತನಕ್ಕೆ ಧಕ್ಕೆ ತರುವಂತಹ ತಂತ್ರಾಂಶಗಳು ಏನಾದರೂ ಇದ್ದರೆ ಕೂಡಲೇ ಅವನ್ನು ಡಿಲೀಟ್ ಮಾಡಬಹುದು. ಇದು ಇತ್ತೀಚಿನ ಆಯ್ಕೆಯಾಗಿದೆ.


 • ನಿಮ್ಮನ್ನು ನೀವೇ ರಿವ್ಯೂ ಮಾಡಿ

  'ಗೂಗಲ್ ಕ್ರೋಮ್ 69'ಗೆ ನಿವು ಅಪ್‌ಡೇಟ್ ಆದ ನಂತರ, ಮೋರ್ ತೆರೆದು ನನೀವು ಲೋಕೆಷನ್ ಹಿಸ್ಟರಿಗೆ ಹೋದರೆ, ಅಲ್ಲಿ ನೀವು ಎಲ್ಲಿ, ಹೇಗೆ, ಯಾವ ಸ್ಥಳಗಳಲ್ಲಿ ಸುತ್ತಾಡಿದ್ದೀರಿ ಎಂಬುದನ್ನು ರಿವ್ಯೂ ಮಾಡಿ, ಅಗತ್ಯವಿಲ್ಲದನ್ನು ಅಳಿಸಬಹುದು. ಅದೇ ರೀತಿ ಯೂಟ್ಯೂಬ್, ಫೇಸ್‌ಬುಕ್‌ಗೆ ಸಂಬಂಧಿಸಿದ ವಿವರಗಳನ್ನೂ ಎಕ್ಸ್‌ಪ್ಲೋರ್ ಮಾಡಿ ನೋಡಬಹುದಾಗಿದೆ.


 • ಪಾವತಿಗೂ ನೆರವಾಗುತ್ತಿದೆ

  ಪ್ರತಿ ಬಾರಿ ಕ್ರೆಡಿಟ್, ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ವಿವರಗಳನ್ನು ಎಂಟರ್ ಮಾಡಿ ಆನ್‌ಲೈನ್ ಪಾವತಿ ಮಾಡುವ ಬದಲು ಜಿ-ಮೇಲ್ ಅಕೌಂಟ್‌ನಲ್ಲಿ ಕಾರ್ಡ್ ವಿವರಗಳನ್ನು ಸೇವ್ ಮಾಡಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿ ಪೇಮೆಂಟ್ ಮೆಥಡ್ಸ್ ಆಯ್ಕೆ ಮಾಡಿಕೊಂಡು, ಆ್ಯಡ್ ಆಪ್ಷನ್ ಮೇಲೆ ಕ್ಲಿಕ್ಕಿಸಿದರೆ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಅಡಗಿಸಿ ಇಡಬಹುದು.


 • ಒಟ್ಟಾರೆ ಉತ್ತಮ ಸಂಗತಿಗಳು

  ಗೂಗಲ್ ಹೇಳುವಂತೆ ಗೂಗಲ್ ಕ್ರೋಮ್ 69, ಜನರಿಗೆ ಗೊಂದಲ ಸೃಷ್ಟಿ ಮಾಡುವುದಿಲ್ಲ. ಯಾರು ಸೈನ್, ಯಾವ ಅಕೌಂಟಿನಲ್ಲಿ ಲಾಗಿನ್ ಆಗಿರುವುದು ಎಂಬುದು ಸ್ಪಷ್ಟವಾಗಿರುತ್ತದೆ. ಅವರ ಅಕೌಂಟನ್ನು ರಕ್ಷಸಿಕೊಳ್ಳಲು ಇದು ನೆರವಾಗುತ್ತದೆ. ಒಂದೇ ಲಾಗಿನ್ ನಲ್ಲಿ ತಮ್ಮೆಲ್ಲಾ ಗೂಗಲ್ ಖಾತೆಗಳನ್ನು ನಿಭಾಯಿಸುವುದಕ್ಕೆ ಬಳಕೆದಾರರಿಗೆ ಅನುಕೂಲಮಾಡಿಕೊಟ್ಟಂತಾಗುತ್ತದೆ.ಬ್ರೌಸರ್ ನಲ್ಲಿ ಗೂಗಲ್ ಅಕೌಂಟ್ ಸೈನ್ ಇನ್ ಆಗಿರುತ್ತದೆ.


 • ಸಮಸ್ಯೆಗಳು ಕೂಡ ಇವೆ.

  ಕೆಲವು ಬಳಕೆದಾರರು ಮಲ್ಟಿಪಲ್ ಅಕೌಂಟ್ ಗಳನ್ನು ಹೊಂದಿರುತ್ತಾರೆ. ಒಂದು ಅವರ ವಯಕ್ತಿಕ ಖಾತೆ ಮತ್ತು ಇನ್ನೊಂದು ಕೆಲಸದ ಕ್ರಿಡೆನ್ಶಿಯಲ್ಸ್ ಆಗಿರುತ್ತದೆ. ಇವುಗಳನ್ನು ಗೂಗಲ್ ಕ್ರೋಮ್ ನಲ್ಲಿ ಈ ವೈಶಿಷ್ಟ್ಯತೆಯೊಂದಿಗೆ ನಿಭಾಯಿಸುವುದು ಮತ್ತಷ್ಟು ಕ್ಲಿಷ್ಟಕರವಾಗುತ್ತದೆ.ಒಮ್ಮೆ ಯಾವುದಾದರೂ ಒಂದು ಗೂಗಲೇ ಸೇವೆಯಿಂದ ಗೂಗಲ್ ಕ್ರೋಮ್ ನಲ್ಲಿ ಸೈನ್ ಔಟ್ ಆದರೆ ಎಲ್ಲಾ ಸೇವೆಯಲ್ಲೂ ಸೈನ್ ಔಟ್ ಆಗಬೇಕಾಗುತ್ತದೆ. ಈ ಒತ್ತಾಯದ ಸೈನ್ ಔಟ್ ಮತ್ತು ಸೈನ್ ಇನ್ ಪ್ರಕ್ರಿಯೆಯು ಬಳಕೆದಾರರಿಗೆ ಕಿರಿಕಿರಿಯಾಗಬಹುದು.
ವಿಶ್ವದಾದ್ಯಂತ ಅತೀ ಹೆಚ್ಚು ಬಳಕೆಯಲ್ಲಿರುವ ವೆಬ್ ಬ್ರೌಸರ್ ಎಂದರೆ ಅದು ಗೂಗಲ್ ಕ್ರೋಮ್ ಮಾತ್ರ. ವೆಬ್ ಬ್ರೌಸರ್ ಗಳ ಬಳಕೆಯ ಶೇಕಡಾ 59 ರಿಂದ 67 ಬಳಕೆಯು ಗೂಗಲ್ ಕ್ರೋಮ್ ಆಗಿದೆ ಎಂಬುದು ನಿಮಗೆ ಈಗಾಗಲೇ ತಿಳಿದಿದೆ ಎನ್ನಬಹುದು. ಇನ್ನು ಗೂಗಲ್ ಕ್ರೋಮ್‌ಗೆ ಅಲ್ಪಸ್ವಲ್ಪ ಸ್ಪರ್ಧೆ ನೀಡುವುದು ಸಫಾರಿ ಮತ್ತು ಇಂಟರ್ನೆಟ್ ಎಕ್ಸ್ಪ್ಲೋರರ್‌ಗಳು ಮಾತ್ರ. ಅದು ಕೇವಲ ಶೇಕಡಾ 11 ರಿಂದ 15 ಶೇಕಡಾದಷ್ಟಿದೆ. ಅಂದರೆ, ಇವುಗಳ ಪ್ರಮಾಣ ಕ್ರೋಮ್‌ನ ಕಾಲು ಭಾಗ ಎಂದು ಹೇಳಬಹುದು.

ಇದು ವಿಶ್ವದ್ದಾದ್ದರೆ, ಭಾರತದಲ್ಲಿ ಶೇ. 90 ಕ್ಕಿಂತ ಹೆಚ್ಚು ಜನರು ಗೂಗಲ್ ಕ್ರೋಮ್‌ ಬಳಸುವ ಸಾಧ್ಯತೆ ಇದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಡೆಸ್ಕ್ ಟಾಪ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಯಾವುದೇ ಆಗಿರಲಿ ಭಾರತದಲ್ಲಿ ಗೂಗಲ್ ಕ್ರೋಮ್ ಬಳಕೆಯೇ ಹೆಚ್ಚಾಗಿದೆ. ಅಂದರೆ, ಗೂಗಲ್ ಕ್ರೋಮ್ ಬಳಸುವ ಪ್ರತಿಯೊಬ್ಬ ಭಾರತೀಯ ವ್ಯಕ್ತಿಯೂ ಗೂಗಲ್ ಕ್ರೋಮ್ ಮೇಲೆ ನಂಬಿಕೆ ಇಟ್ಟಿದ್ದಾನೆ. ಇಟ್ಟಿರುತ್ತಾನೆ ಕೂಡ. ಹಾಗಾಗಿ, ನಾವು ಗೂಗಲ್ ಕ್ರೋಮ್‌ ಬಗ್ಗೆ ಸಾಕಷ್ಟು ಮಾಹಿತಿಯನ್ನು ತಿಳಿಯಬೇಕು.

ಇನ್ನು ಇತ್ತೀಚಿಗಷ್ಟೇ ಗೂಗಲ್ ಕ್ರೋಮ್ ವರ್ಷನ್ 69 ಬಿಡುಗಡೆಗೊಂಡು ಕ್ರೋಮ್ ಬಳಕೆಯನ್ನು ಸಾಕಷ್ಟು ಸುಧಾರಿಸಿದೆ. ಕೆಲವೊಂದು ಪ್ರಮುಖ ಡಿಸೈನ್ ಗಳಲ್ಲಿ ಬದಲಾವಣೆ ಇದ್ದು ಬಳಕೆದಾರರ ಕ್ರಿಡೆನ್ಶಿಯಲ್ ನ್ನು ನಿರ್ವಹಿಸುವ ವಿಧಾನದಲ್ಲೂ ಕೂಡ ಕೆಲವು ಸಣ್ಣಪುಟ್ಟ ಬದಲಾವಣೆಗಳಾಗಿದೆ. ಈ ಹಿಂದಿನ ವರ್ಷನ್ ನಲ್ಲಿ ಕಾಣುತ್ತಿದ್ದ ಹಲವು ಸೇವೆಗಳಲ್ಲಿ ಬದಲಾವಣೆಗಳು ಕಂಡುಬಂದಿದೆ. ಹಾಗಾದರೆ, ಏನಿದು ಕ್ರೋಮ್ ವರ್ಷನ್ 69?, ಇದರ ಸಾಧಕ ಭಾದಕಗಳು ಯಾವುವು ಎಂಬುದನ್ನು ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್