Back
Home » ಇತ್ತೀಚಿನ
ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾಯಿಸಿ!
Gizbot | 18th Apr, 2019 12:50 PM
  • SMS ಮೂಲಕ ಖಚಿತಪಡಿಸಿಕೊಳ್ಳಿ

    ಹಂತ.1 ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಮೆಸೆಜ್‌ ತೆರೆಯಿರಿ
    ಹಂತ.2 EPIC ಎಂದು ಬರೆದು ಸ್ಪೇಸ್‌ ಬಿಟ್ಟು EPIC No.(ನಿಮ್ಮ ಚುನಾವಣೆ ಚೀಟಿಯಲ್ಲಿರುವ ಎಪಿಕ್ ನಂಬರ್‌ ಬರೆಯಿರಿ)
    ಹಂತ.3 ನಂತರ ಈ ನಂಬರ್‌ಗೆ ಕಳುಹಿಸಿ-7738299899
    ಹಂತ.4 ನಿಮಗೊಂದು ಎಸ್‌ಎಮ್‌ಎಸ್‌ ಬರುತ್ತದೆ ಅದರಲ್ಲಿ ಹೆಸರು ನಮೂದಾಗಿಯೋ ಅಥಾವಾ ಇಲ್ಲಯೋ ಎಂಬ ಮಾಹಿತಿ ಇರುತ್ತದೆ.


  • ಕರೆಯ ಮೂಲಕ ಖಚಿತಪಡಿಸಿಕೊಳ್ಳಿ

    ಹಂತ.1 ನಿಮ್ಮ ಮೊಬೈಲ್‌ನಲ್ಲಿ ಕಾಲ್‌ ಡೈಯಲ್‌ ತೆರೆಯಿರಿ
    ಹಂತ.2 ನಂತರ 1950 ನಂಬರ್‌ಗೆ ಕರೆ ಮಾಡಿರಿ
    ಹಂತ.3 ಕರೆಯಲ್ಲಿ ನಿಮಗೆ ಚುನಾವಣಾ ಗುರುತಿನ ಚೀಟಿಯ (Voter ID) ಎಪಿಕ್ ನಂಬರ್, ಸ್ಥಳದ, ಮಾಹಿತಿ ಕೇಳಲಾಗುತ್ತದೆ.
    ಹಂತ.4 ನೀವು ಮಾಹಿತಿ ತಿಳಿಸಿದ ನಂತರ ನಿಮ್ಮ ಹೆಸರು ನಮೂದಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತಾರೆ.


  • ವೆಬ್‌ಸೈಟ್‌ನಿಂದ ಖಚಿತಪಡಿಸಿಕೊಳ್ಳಬಹುದು

    ಹಂತ.1 ​ಸ್ಮಾರ್ಟ್‌ಫೋನ್‌ ಅಥವಾ ಪಿಸಿಯಲ್ಲಿ www.nvsp.in ವೆಬ್‌ಸೈಟ್‌ಗೆ ಭೇಟಿ ನೀಡಿ.
    ಹಂತ.2 ಮತದಾರರ ಪಟ್ಟಿಯಲ್ಲಿ ಹೆಸರಿದೆ ಆಯ್ಕೆಯನ್ನು ಕ್ಲಿಕ್‌ ಮಾಡಿ.(Search Your Name in Electoral Roll)
    ಹಂತ.3 ನಂತರ ಎಪಿಕ್ ನಂಬರ್‌ ಎಂಟ್ರಿ ಮಾಡಿ ಸರ್ಜ್‌ ಆಯ್ಕೆ ಒತ್ತಿರಿ.
    ಹಂತ.4 ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎನ್ನುವ ಮಾಹಿತಿ ಕಾಣಿಸುತ್ತದೆ.


  • ಚುನಾವಣಾ ಗುರುತಿನ ಚೀಟಿ ಇಲ್ಲದಿದ್ದರೇ

    ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನಮೂದಾಗಿದ್ದು, ಆದರೆ ನಿಮ್ಮ ಬಳಿ ಚುನಾವಣಾ ಗುರುತಿನ ಚೀಟಿ (Voter ID) ಇಲ್ಲದಿದ್ದರೇ ನೀವು ಈ ಕೆಳಗಿನ ಯಾವುದಾದರು ಐಡಿಯನ್ನು ತೋರಿಸುವ ಮೂಲಕ ಮತ ಚಲಾಯಿಸಬಹುದಾಗಿದೆ.
    * ಡ್ರೈವಿಂಗ್ ಲೈಸನ್ಸ್‌
    * ಪಾಸ್‌ಪೋರ್ಟ್
    * ಬ್ಯಾಂಕ್‌ ಪಾಸ್‌ಬುಕ್‌
    * ಆಧಾರ ಕಾರ್ಡ್‌
    * ಹೆಲ್ತ್ ಇನ್ಶೂರೆನ್ಸ್‌
    * ಪಾನ್‌ಪಾರ್ಡ್‌
    * ನರೇಗಾ ಜಾಬ್‌ ಕಾರ್ಡ್‌
    * ಪಿಂಚಣೀ ದಾಖಲೆ(ಭಾವಚಿತ್ರ ಇರುವ)
    * ಸೇವಾ ಗುರುತಿನ ಚೀಟಿಗಳು.




ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆ ಕಾವು ಚುರುಕುಗೊಳ್ಳುತ್ತಿದ್ದು, ಪ್ರತಿಯೊಬ್ಬರು ತಮ್ಮ ಮತವನ್ನು ಹಾಕಲು ಮತಗಟ್ಟೆಗಳತ್ತ ಮುಖ ಮಾಡುತ್ತಿದ್ದಾರೆ. ಮತ ಚಲಾಯಿಸಲು ಚುನಾವಣೆ ಆಯೋಗವು ನೀಡುವ ಗುರುತಿನ ಚೀಟಿ(ವೋಟರ್‌ ಐಡಿ)ಅಗತ್ಯವಿದೆ. ವೋಟರ್‌ ಐಡಿ ಇಲ್ಲವೆಂದು ಮತ ಚಲಾಯಿಸುವುದನ್ನು ಬಿಡಬೇಡಿ, ಏಕೆಂದರೇ ವೋಟರ್‌ ಐಡಿ ಇಲ್ಲದಿದ್ದರೂ ನೀವು ಮತದಾನ ಮಾಡಬಹುದಾಗಿದೆ.

ಹೌದು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ನಮೂದಾಗಿದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಿ, ಒಂದು ವೇಳೆ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದ್ದರೇ, ನೀವು ವೋಟರ್‌ ಐಡಿ ಇಲ್ಲದೇ ಮತ ಚಲಾಯಿಸಬಹುದು. ಆಧಾರ ಕಾರ್ಡ್‌, ಡ್ರೈವಿಂಗ್ ಲೈಸನ್ಸ್‌ ಸೇರಿದಂತೆ 11 ಬಗೆಯ ಇತರೆ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ತೋರಿಸುವ ಮೂಲಕ ನೀವು ಮತ ಚಲಾಯಿಸಿ. ಹಾಗಾದರೇ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನು ತಿಳಿಯುವುದು ಹೇಗೆ ಮತ್ತು ವೋಟರ್‌ ಐಡಿ ಇಲ್ಲದಿದ್ದರೂ ಮತ ಚಲಾಯಿಸಲು ಬೇಕಾಗುವ ಇತರೆ ದಾಖಲೆಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿ.

   
 
ಹೆಲ್ತ್