Back
Home » Car News
ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕಥೆ ಏನಾಯ್ತು ಗೊತ್ತಾ.?
DriveSpark | 18th Apr, 2019 12:51 PM
  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಆದ್ರೆ ಸಧ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರ ಓಲಾ ಸಂಸ್ಥೆಯ ಬೈಕ್ ಟ್ಯಾಕ್ಸಿ ಸೇವೆ ಪ್ರಾರಂಭಿಸುವುದಕ್ಕೆ ಯಾವುದೇ ನೋಂದಣಿ ಮಾಡ್ಕೊಂಡಿಲ್ಲವೆಂದು ಆರ್‍‍ಟಿಒ ಅಧಿಕಾರಿಗಳು ಬಹಿರಂಗಪಡಿಸಿದ್ದು, ಓಲಾ ಸಂಸ್ಥೆಯು 'ಆರ್‍‍ಟಿಒ'ಗೆ ರೂ. 15 ಲಕ್ಷದ ದಂಡವನ್ನು ತೆರಬೇಕಾದ ಪರಿಸ್ಥಿತಿ ಎದುರಾಯಿತು. ಇದೀಗ ಓಲಾ ನಂತರ ಕೆಲವು ದಿನಗಳ ಹಿಂದಷ್ಟೆ ಆರ್‍‍ಟಿಒ ಸುಮಾರು 270ಕ್ಕು ಹೆಚ್ಚಿನ ರ್‍ಯಾಪಿಡೋ ಬೈಕ್ ಟ್ಯಾಕ್ಸಿಗಳನ್ನು ಸೀಸ್ ಮಾಡಲಾಗಿದ್ದು, ಸೇವೆಯನ್ನು ಸಹ ಸ್ಥಗಿತಗೊಳಿಸಲು ಆದೇಶ ನೀಡಲಾಗಿದೆ.


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ನಿರುದ್ಯೋಗಿ ಯುವ ಸಮುದಾಯಕ್ಕೆ ರ್‍ಯಾಪಿಡೋ ಸಂಸ್ಥೆಯು ನಿಮ್ಮಲ್ಲಿ ವಾಹನವಿದ್ದರೆ ಸಾಕು ಯಾವ ಬಂಡವಾಳ ಸಹ ನಮಗೆ ಬೇಡವೆಂದು, ಎದ್ಯೊಗಾವಕಾಶ ಕಲ್ಪಿಸಿದ್ದಾರೆ. ಇದನ್ನು ನಂಬಿ ಸಾವಿರಾರು ನಿರುದ್ಯೀಗಿಗಳು ರ್‍ಯಾಪಿಡೋ ಬೈಕ್‍ ಟ್ಯಾಕ್ಸಿ ಸೇವೆಗಳಿಗೆ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಕೊಂಡು ಜೀವನ ನಡೆಸುತ್ತಿದ್ದರು.


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಸಧ್ಯಕ್ಕೆ ರ್‍ಯಾಪಿಡೋ ಬೈಕ್ ಟ್ಯಾಕ್ಸಿ ಸೇವೆಯನ್ನು ನಂಬಿಕೊಂಡು ತಮ್ಮ ವಾಹನವನ್ನು ಅಟ್ಯಾಚ್ ಮಾಡಿ, ಆರ್‍‍ಟಿಒ ಇಂದ ಸೇವೆ ಸ್ಥಗಿತಗೊಳಿಸಿದ ನಂತರ ತಮ್ಮ ವಾಹನಗಳನ್ನು ಕಳೆದುಕೊಂಡವರಲ್ಲಿ ಹಲವರಿದ್ದು, ಸ್ವತಃ ತಾವೇ ದಂಡ ಪಾವತಿಸಿ ತಮ್ಮ ವಾಹನಗಳನ್ನು ಹಿಂಪಡೆಯಲು ಕಾಯುತ್ತಿದ್ದಾರೆ.


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಬೆಂಗಳೂರು: ಪಿ. ಮಂಜುನಾಥ್ ಎಂಬಾತ ಏಪ್ರಿಲ್ 5, 2019ರಂದು ಕೆ.ಆರ್‍.ಪುರಂ ರಸ್ತೆಗಳಲ್ಲಿ ರೈಡ್ ಬುಕ್ಕಿಂಗ್ ಮಾಡಲಾದ ಕಸ್ಟಮರ್‍‍ಗಾಗಿ ಪಿಕ್ ಅಪ್ ಪಾಯಿಂಟ್‍ನಲ್ಲಿ ಕಾಯುತ್ತಿದ್ದರು. ಬುಕ್ಕಿಂಗ್ ಮಾದಿಕೊಂಡ ಗ್ರಾಹಕರು ಬಂದಾಗ ಮಂಜುನಾಥ್‍‍ರವರಿಗೆ ನಿಮ್ಮ ರ್‍ಯಾಪಿಡೋ ಸೇವೆಗಳನ್ನು ಆರ್‍‍ಟಿಒ ಸ್ಥಗಿತಗೊಳಿಸಿದೆ ಎಂದು ಕೇಳಿ ಅಚ್ಚರಿಗೊಂಡರು.


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಸೇವೆಗಳನ್ನು ಸ್ಥಗಿತಗೊಳಿಸಿದ ನಂತರ ಸೀಜ್ ಮಾಡಲಾದ ಬೈಕ್‍ಗಳಲ್ಲಿ ಪಿ.ಮಂಜುನಾಥ್‍ರವರದ್ದು ಸಹ ಬೈಕ್ ಇದ್ದು, ಕುದ್ದಾಗಿ ಅವತೆ ತಮ್ಮ ಬೈ‍ಕ್ ಅನ್ನು ಬಿಡಿಸಿಕೊಳ್ಳಲು ರೂ. 5000 ದಂಡವನ್ನು ಪಾವತಿಸಲಾಗಿದೆ. ಬೈಕ್ ಅಟ್ಯಾಚ್ ಮಾಡಿಸುವಾಗ ರ್‍ಯಾಪೊಡೋ ಸಂಸ್ಥೆಯವರು ನಮ್ಮ ಸಂಸ್ಥೆಯು ಅಧಿಕೃತವಾಗಿದೆ ಮತ್ತು ಬೈಕ್ ಟ್ಯಾಕ್ಸಿ ಸೇವೆ ನೀಡಲು ಲೈಸೆನ್ಸ್ ಪಡೆದಿದೆ ಎಂದು ಹೇಳಿದ್ದರಂತೆ.

    MOST READ: ತುಕ್ಕು ಹಿಡಿದಿದ್ದ ಅಂಬಾಸಿಡರ್ ಕಾರು ಹೇಗೆ ಐಷಾರಾಮಿ ಕಾರಾಗಿ ಪರಿವರ್ತನೆಯಾಗಿದೆ ನೀವೆ ನೋಡಿ...


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಇದು ಪಿ.ಮಂಜುನಾಥ್ ಅವರ ಕಥೆಯಾದರೆ ಹೀಗೆತೆ ವೆಂಕಟೇಶ್ ರೆಡ್ಡಿಯವರು ಸಹ ತಮ್ಮ ದುಖಃವನ್ನು ಹೇಳಿಕೊಂಡಿದ್ದಾರೆ. 'ಯಾವುದೇ ಬಂಡವಾಳವಿಲ್ಲದೆಯೆ ಕೇವಲ ನಾನು ದ್ವಿಚಕ್ರ ವಾಹನ ಹೊಂದಿರುವ ಏಕೈಕ ಕಾರಣದಿಂದ ನನಗೆ ರ್‍ಯಾಪಿಡೋ ನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮಾಡಲು ನನಗೆ ಅವಕಾಶ ಸಿಕ್ಕತ್ತು. ಆದ್ರೆ ಇದೀಗ ನನ್ನ ಬೈಕ್ ಸೀಜ್ ಆಗಿದ್ದು, ಮತ್ತೆ ನಾನು ಕೆಲಸ ಕಳೆದುಕೊಂಡು ನಿರುದ್ಯೋಗಿ ಆಗಿದ್ದೇನೆ' ಎಂದು ಹೇಳಿದ್ದಾರೆ.


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಸುಮಾರು 2016ರಿಂದ ಬೆಂಗಳೂರು ಸೇರಿದಂತೆ ಇನ್ನಿತರೆ ಪ್ರಮುಖ ನಗರಗಳಲ್ಲಿ ರ್‍ಯಾಪಿಡೋ ಸಂಸ್ಥೆಯು ಸೆವೆಯನ್ನು ನೀಡುತ್ತಿದ್ದು, ಇದೀಗ ಆರ್‍‍ಟಿಒ ರ್‍ಯಾಪಿಡೋ ಸೇವೆಯನ್ನು ಸ್ಥಗಿತಗೊಳಿಸಿ ಸುಮಾರು 300ಕ್ಕು ಹೆಚ್ಚಿನ ವಾಹನಗಳನ್ನು ಸೀಜ್ ಮಾಡಲಾಗಿದೆ.

    MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್


  • ರ್‍ಯಾಪಿಡೋ ನಂಬಿ ವಾಹನ ಕಳೆದುಕೊಂಡವರ ಕತೆ ಏನಾಯ್ತು ಗೊತ್ತಾ.?

    ಮಂಜುನಾಥ್ ಮತ್ತು ವೆಂಕಟೇಷ್‍‍ರವರಂತೆಯೆ ಇನ್ನು ಹಲವರು ರ್‍ಯಾಪಿಡೋ ಸಂಸ್ಥೆಯಲ್ಲಿ ತಮ್ಮ ವಾಹನಗಳನ್ನು ಅಟ್ಯಾಚ್ ಮಾಡಿಸಿಕೊಂಡು, ಬೈಕ್‍ಗಳು ಸೀಜ್ ಆದ ನಂತರ ಇದೀಗ ಮತ್ತೆ ನಿರುದ್ಯೋಗಿಗಳಾಗಿದ್ದಾರೆ. ಇನ್ನು ಆರ್‍‍ಟಿಒ ಅಧಿಕಾರಿಗಳು ರ್‍ಯಾಪಿಡೋ ಸಂಸ್ಥೆಯ ಬೈಕ್ ಟ್ಯಾಕ್ಸಿ ಸೇವೆಗಳನ್ನು ಪ್ರಾರಂಭಿಸಲು ಲೈಸೆನ್ಸ್ ನೀಡುವ ಬಗ್ಗೆ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ.

    Source: ETAuto




ಓಲಾ, ಊಬರ್‍‍ನಂತಹ ಟ್ಯಾಕ್ಸಿ ಸೇವೆಗಳು ನಮ್ಮ ದೇಶಗಳಲ್ಲಿ ಮಾತ್ರವಲ್ಲದೆಯೆ ಬೇರೆ ದೇಶಗಳಲ್ಲಿಯು ಸಹ ಟ್ಯಾಕ್ಸಿ ಸೇವೆಗಳಲ್ಲಿ ಜನಪ್ರೀಯತೆಯನ್ನು ಪಡೆಯುತ್ತಿದೆ. ಇವುಗಳಲ್ಲದೆಯೆ ಈ ಸಂಸ್ಥೆಗಳು ಹಲವಾರು ಪ್ರಾಂತ್ಯಗಳಲ್ಲಿ ಬೋಟ್ ಟ್ಯಾಕ್ಸಿ ಹಾಗ್ ಭವಿಷ್ಯದಲ್ಲಿ ಹೆಲಿ ಟ್ಯಾಕ್ಸಿಯನ್ನು ಸಹ ಬಿಡುಗಡೆಗೊಳಿಸುವುದಾಗಿ ಹೇಳಿಕೊಂಡಿದೆ.

   
 
ಹೆಲ್ತ್