Back
Home » ಇತ್ತೀಚಿನ
ಈ ವರ್ಷದ 'ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್' ಗೆದ್ದ ಬೆಳಗಾವಿ ಕುವರರು!!
Gizbot | 18th Apr, 2019 01:00 PM

ಡಿಜಿಟಲ್‌ ಇಂಡಿಯಾ ಕಾರ್ಯಕ್ರಮದಡಿ ಪ್ರತಿ ವರ್ಷ ಭಾರತ ಸರ್ಕಾರ ಆಯೋಜಿಸುವ ವಿಶ್ವದ ಅತ್ಯಂತ ದೊಡ್ಡ ಹ್ಯಾಕಥಾನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಬೆಳಗಾವಿಯ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ತಂಡ ಪಡೆದುಕೊಂಡಿದೆ. ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ -19 ಸ್ಪರ್ಧೆಯಲ್ಲಿ ವೈಶ್ನವಿ, ರಾಹುಲ್ ಮಹೇಂದ್ರಕರ್, ತನ್ವಿಶ್ ಮಿನಾಚೆ ಮತ್ತು ವೈಭವ್ ಕುಲಕರ್ಣಿ ಒಳಗೊಂಡ ಟೆಕ್‌ ಫನಾಟಿಕ್ ತಂಡಕ್ಕೆ ಪ್ರಥಮ ಸ್ಥಾನದ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ಕೂಡ ದೊರೆತಿದೆ.

ಹೌದು, ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್ -19 ಪ್ರತಿ ವರ್ಷ ಭಾರತ ಸರ್ಕಾರ ಆಯೋಜಿಸುವ ಒಂದು ದಿನದ ನಿರಂತರ ಸ್ಪರ್ಧೆಯಾಗಿದ್ದು ಇದರಲ್ಲಿ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ನವೀನ ಸ್ಮಾರ್ಟ್‌ ಪರಿಹಾರಗಳಿಗಾಗಿ ಸಮಸ್ಯೆಗಳನ್ನು ನೀಡಲಾಗುತ್ತದೆ. ಈ ಬಾರಿ "ಈಕೋ ಡ್ರೈವ್‌ ಗೋಲ್‌ -ರೆಡ್ನೂಸ್ ಕಾರ್ಬನ್‌ ಫುಟ್‌ ಪ್ರಿಂಟ್‌ ಆಫ್‌ ದಿ ಟ್ರಾವೆಲ್ ಪ್ರಪೋಸಲ್ ಬೆ„ ಬಿಲ್ಡಿಂಗ್ ಎ ಸ್ಮಾರ್ಟ್ಫೋನ್ ಆಪ್‌ ದ್ಯಾಟ್ ಹೆಲ್ಪ್ ಯು ಟು ಕಾರ್‌-ಬೈಕ್ ಪೂಲ್ ಅಡಿ ಕೆಲಸ ಮಾಡಿಕೆ ಕೆಎಲ್‌ಎಸ್‌ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ ತಂಡ ಮೊದಲ ಸ್ಥಾನವನ್ನು ಪಡೆದಿದೆ.

ಈ ಬಾರಿಯ ಹ್ಯಾಕಥಾನ್ ಸ್ಪರ್ಧೆಯಲ್ಲಿ ಒಟ್ಟು 550ಕ್ಕಿಂತ ಹೆಚ್ಚು ತಾಂತ್ರಿಕ ಸವಾಲು, ಸಮಸ್ಯೆ ಹಾಗೂ ಯೋಜನೆಗಳನ್ನು ವ್ಯಾಖ್ಯಾನ ಮಾಡಲಾಗಿತ್ತು. ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಿಂದ 34,000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ತಂಡಗಳು ಭಾಗವಹಿಸಿ ತಾಂತ್ರಿಕ ಪರಿಹಾರಗಳನ್ನೂ ಸಾಫ್ಟ್‌ ವೇರ್‌ ರೂಪದಲ್ಲಿ 57,000 ಕ್ಕಿಂತ ಹೆಚ್ಚು ಪರಿಹಾರಗಳನ್ನು ಆಯ್ಕೆ ಸುತ್ತಿನಲ್ಲಿ ನೀಡಿದ್ದರು. ಕಠಿಣ ಮೌಲ್ಯಮಾಪನದ ನಂತರ ರಾಷ್ಟ್ರದಾದ್ಯಂತ 1500 ತಂಡಗಳನ್ನು ರಾಷ್ಟ್ರ ಮಟ್ಟದ ಪ್ರಶಸ್ತಿ ಸುತ್ತಿಗೆ ಆಯ್ಕೆ ಮಾಡಲಾಯಿತು.

ಒಟ್ಟು 1500 ತಂಡಗಳಲ್ಲಿ 25 ವಿದ್ಯಾರ್ಥಿಗಳನ್ನು ಒಳಗೊಂಡ ನಾಲ್ಕು ತಂಡಗಳು ಫೈನಲ್‌ ಸುತ್ತಿಗೆ ಅರ್ಹತೆ ಪಡೆದು ಆಯ್ಕೆಯಾಗಿದ್ದವು. ಇದರಲ್ಲಿ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಟೆಕ್‌ ಫನಾಟಿಕ್‌ ತಂಡ ಪ್ರಥಮ ಸ್ಥಾನದ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ಪಡೆದುಕೊಂಡಿದೆ. ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಕೆಎಲ್‌ಎಸ್‌ ಸಂಸ್ಥೆಯ ಕಾರ್ಯಾಧ್ಯಕ್ಷ ಎಂ. ಆರ್‌. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಯು. ಎನ್‌. ಕಾಲಕುಂದ್ರಿಕರ್, ಪ್ರಾಂಶುಪಾಲ ಡಾ.ಎ. ಎಸ್‌. ದೇಶಪಾಂಡೆ ಅಭಿನಂದಿಸಿದ್ದಾರೆ.

2019 ರಲ್ಲಿ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ 2 ಉಪ ಆವೃತ್ತಿಗಳನ್ನು ಹೊಂದಿತ್ತು - ಸಾಫ್ಟ್‌ ವೇರ್‌ ಮತ್ತು ಯಂತ್ರಾಂಶ (ಹಾರ್ಡ್‌ವೇರ್‌). ಸಾಫ್ಟ್‌ ವೇರ್‌ ಇಂಡಿಯಾ ಆವೃತ್ತಿಯು 36 ಗಂಟೆಗಳ ಸಾಫ್ಟ್‌ ವೇರ್‌ ಅಭಿವೃದ್ಧಿ ಸ್ಪರ್ಧೆಯಾಗಿದ್ದು, ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌-2017 ಮತ್ತು 18 ರ ಪರಿಕಲ್ಪನೆಯಂತೆಯೇ ಆಯೋಜಿಸಲಾಗಿತ್ತು. ಇದರಲ್ಲಿ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ತಾಂತ್ರಿಕ ಸಂಸ್ಥೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದನ್ನು ನೀವು ನೋಡಬಹುದಾಗಿತ್ತು.

ಓದಿರಿ: 'ರೆಡ್‌ಮಿ ನೋಟ್ 7' ಖರೀದಿಸಬೇಕು ಎಂದುಕೊಂಡಿರುವವರಿಗೆ ಭರ್ಜರಿ ಸಿಹಿಸುದ್ದಿ!!

   
 
ಹೆಲ್ತ್