Back
Home » ಇತ್ತೀಚಿನ
ಆಪಲ್ ಸಂಸ್ಥೆಯು 4.7 ಇಂಚಿನ ಚಿಕ್ಕ ಐಫೋನ್ ಪರಿಚಯಿಸಲಿದೆ!
Gizbot | 19th Apr, 2019 11:40 AM
 • ಮ್ಯೂಸಿಕ್‌ 'ಬಿಟ್ಸ್‌' ಹೆಚ್ಚಿಸಲಿದೆ ಆಪಲ್‌ನ ಹೊಸ ವೈಯರ್‌ಲೆಸ್‌ ಹೆಡ್‌ಫೋನ್‌.!

  ಟೆಕ್‌ ದಿಗ್ಗಜ ಆಪಲ್‌ ಸಂಸ್ಥೆ ಹೊಸತನದ ಉತ್ಪನ್ನಗಳನ್ನು ಪರಿಚಯಿಸಿರುವ ಟೆಕ್‌ ದಿಗ್ಗಜ ಆಪಲ್‌ ಸಂಸ್ಥೆ ಇದೀಗ ತನ್ನ ಗ್ರಾಹಕರಿಗೆ ಮತ್ತೊಂದು ಖುಷಿ ಸುದ್ದಿ ನೀಡುವ ಉತ್ಸಕದಲ್ಲಿದೆ. ಕಂಪನಿಯು ಮಾರುಕಟ್ಟೆಗೆ ನೂತನ ವೈಯರ್‌ಲೆಸ್‌ ಹೆಡ್‌ಫೋನ್‌ ಉತ್ಪನ್ನ ಒಂದನ್ನು ಪರಿಚಯಿಸಲು ಮುಂದಾಗಿದೆ. ಹೊಸ ವೈಯರ್‌ಲೆಸ್‌ ಹೆಡ್‌ಫೋನ್ ಶೀಘ್ರದಲ್ಲಿಯೇ ಗ್ರಾಹಕರ ಮೊಬೈಲ್‌ಗಳಿಗೆ ಕನೆಕ್ಟ್‌ ಆಗಲಿದೆ.

  ಹೌದು, ಆಪಲ್‌ ಸಂಸ್ಥೆಯು ಬ್ಲೂಟೂತ್ ಆಧಾರಿತ ವೈಯರ್‌ ಲೆಸ್‌ ಹೆಡ್‌ಫೋನ್‌ ಒಂದನ್ನು ಇದೇ ಏಪ್ರಿಲ್‌ ತಿಂಗಳಲ್ಲಿ ರಿಲೀಸ್‌ ಮಾಡಲಿದ್ದು, ಈ ಉತ್ಪನ್ನವನ್ನು ಕಂಪನಿಯು ತನ್ನ ಉಪಬ್ರ್ಯಾಂಡ್‌ ಆಗಿರುವ 'ಬಿಟ್ಸ್‌' ಕಂಪನಿಯ ಹೆಸರಿನಿಂದ ಪರಿಚಯವಾಗಲಿದೆ. ಇದು ಕಂಪನಿಯ ಮೊದಲ ಸಂಪೂರ್ಣ ವೈಯರ್‌ಲೆಸ್‌ ಹೆಡ್‌ಫೋನ್‌ ಎನ್ನಲಾಗುತ್ತಿದ್ದು, ಮ್ಯೂಸಿಕ್‌ ಪ್ರಿಯರು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ.

  ಬರಲಿರುವ ಬಿಟ್ಸ್‌ ಕಂಪನಿಯ ಹೊಸ ಹೆಡ್‌ಫೋನ್‌ಗಳು ಆಪಲ್‌ H1 ಚಿಪ್‌ಸೆಟ್ಟ್‌ ಅನ್ನು ಒಳಗೊಂಡಿರಲಿದ್ದು, ಆಪಲ್‌ ಸಿರಿ ಇದರಲ್ಲಿ ಕೆಲಸಮಾಡಲಿದೆ ಎನ್ನಲಾಗುತ್ತಿದೆ. ಆಪಲ್‌ ಏರ್‌ಫೋಡ್‌ಗಳಲ್ಲಿರುವ ಬ್ಯಾಟರಿ ಬಾಳಿಕೆಯ ಶಕ್ತಿಗಿಂತ ಹೆಚ್ಚಿನ ಬಾಳಿಕೆ ಸಾಮರ್ಥ್ಯವನ್ನು ಹೊಸ ಹೆಡ್‌ಫೋನ್‌ಗಳು ಹೊಂದಿರಲಿವೆ ಎಂದು ಹೇಳಲಾಗಿದೆ. ಹಾಗಾದರೇ ಬಿಟ್ಸ್‌ ಕಂಪನಿಯ ಇತರೆ ಹೆಡ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ ಬನ್ನಿರಿ.


 • ಬಿಟ್ಸ್‌ ಸ್ಟೋಡಿಯೊ 3

  ಬಿಟ್ಸ್‌ ಕಂಪನಿಯ ಪ್ರಮುಖ ಹೆಡ್‌ಫೋನ್‌ ಎಂದೆನಿಸಿಕೊಂಡಿರುವ ಸ್ಟೋಡಿಯೊ 3, ಆಪಲ್‌ W1 ಚಿಪ್‌ ಸೆಟ್‌ಅನ್ನು ಹೊಂದಿದ್ದು, ಕ್ಲಾಸ್‌ಒನ್‌ ವೈಯರ್‌ಲೆಸ್‌ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ. ಹೊರ ಶಬ್ದ ಕೇಳಿಸಿದಂತಹ ರಚನೆ ಇದ್ದು, 10ನಿಮಿಷ ಬ್ಯಾಟರಿ ಚಾರ್ಜ್ ಮಾಡಿದರೇ ಸುಮಾರು ಮೂರು ಗಂಟೆ ಬಾಳಿಕೆ ಒದಗಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ.


 • ಬಿಟ್ಸ್‌ ಸೊಲೊ 3

  ಇದು ಸಹ ಅತ್ಯುತ್ತಮ ವೈಯರ್‌ಲೆಸ್‌ ಹೆಡ್‌ಫೋನ್‌ ಆಗಿದ್ದು, ಸಂಪೂರ್ಣ ಚಾರ್ಜ್‌ ಆಗಿರುವ ಬ್ಯಾಟರಿ ಸುಮಾರು 40 ಗಂಟೆ ಕಾಲ ಬಾಳಿಕೆ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಲಾಸ್‌ಒನ್‌ ಬ್ಲೂಟೂತ್ ಕನೆಕ್ಟಿವಿಟಿ ಸಾಮರ್ಥ್ಯವನ್ನು ಸಹ ಹೊಂದಿದ್ದು, ಹೊರಗಡೆ ಶಬ್ದ ಕೇಳಿಸದ ರಚನೆಯಿದ್ದು, ಮ್ಯೂಸಿಕ್‌ನ ಉತ್ತಮ ಸೌಂಡ್‌ ಕೇಳಿಸಿಕೊಳ್ಳಬಹುದಾಗಿದೆ.


 • ಬಿಟ್ಸ್‌ EP

  ಬಿಟ್ಸ್‌ ಇಪಿ ಹೆಡ್‌ಫೋನ್‌ಹಾಡುಗಳ ಡೆಪ್ತ್‌ ಮತ್ತು ಕ್ಲಿಯರ್‌ ಸೌಂಡ್‌ನ ಅನುಭವ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ನಿರಂತರ ಹಾಡುಗಳ ಕೇಳಲು ಇದು ಬ್ಯಾಟರಿ ಮುಕ್ತವಾಗಿದೆ. ಹುಗುರವಾದ ರಚನೆಹೊಂದಿದ್ದು, ಹೆಚ್ಚು ಕಾಲ ತಾಳಿಕೆಬರುವ ಗುಣಮಟ್ಟ ಇದೆ. ಹಿತಕರವಾಗಿ ಧರಿಸಲು ಅನುಕೂಲವಾಗಲು, ಹೆಡ್‌ಫೋನ್‌ ಆಡ್ಜಸ್ಟೆಬಲ್‌ ಕ್ಲಿಪ್‌ಅನ್ನು ಹೊಂದಿದೆ.
ಟೆಕ್‌ ದಿಗ್ಗಜ ಆಪಲ್‌ ಕಂಪನಿಯು ತನ್ನ ಐಫೋನ್‌ಗಳ ಶ್ರೇಣಿಗಳ ಮೂಲಕ ದೊಡ್ಡ ಗ್ರಾಹಕ ವರ್ಗವನ್ನು ಹೊಂದಿದ್ದು, ಸಂಸ್ಥೆಯು ಹೊಸ ಐಫೋನ್‌ ಬಿಡುಗಡೆ ಮಾಡಲಿದೆ ಎಂದರೇ ಐಫೋನ್‌ ಪ್ರಿಯರು ಕಾತುರದಿಂದ ಎದುರು ನೋಡುತ್ತಿರುತ್ತಾರೆ. ಇದೀಗ ಕಂಪನಿಯು ತನ್ನ ಗ್ರಾಹಕರಿಗೆ ಸಂತಸದ ಸುದ್ದಿಯೊಂದನ್ನು ಹೊರಹಾಕಿದ್ದು, ಐಫೋನ್‌ ಪ್ರಿಯರು ಸೇರಿದಂತೆ ಇಡೀ ಮೊಬೈಲ್‌ ಮಾರುಕಟ್ಟೆ ಆಪಲ್‌ನತ್ತ ತಿರುಗಿ ನೋಡುವಂತೆ ಮಾಡಿದೆ.

ಹೌದು, ಆಪಲ್‌ ಸಂಸ್ಥೆಯು ಹೊಸ ಕಂಪಾಕ್ಟ್‌ ಐಫೋನ್‌ ತಯಾರಿಕೆಯಲ್ಲಿದ್ದು, 4.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿರುವ ಜೊತೆಗೆ ಐಫೋನ್ 8 ಮಾದರಿಯ ಡಿಸೈನ್‌ನಲ್ಲಿ ತಯಾರಾಗಲಿದೆ. ಚಿಕ್ಕ ಡಿಸ್‌ಪ್ಲೇ ಇದ್ದರೂ, ಅತ್ಯುತ್ತಮ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗುತ್ತಿದೆ. ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಐಫೋನ್ ಮುಂಬರುವ 2020ರ ಮಾರ್ಚ್‌ ತಿಂಗಳಲ್ಲಿ ಲಾಂಚ್‌ ಆಗಲಿದೆ ಎನ್ನುತ್ತಿವೆ ಮಾಹಿತಿಗಳು.

ಬರಲಿರುವ ಹೊಸ ಐಫೋನ್ 5G ನೆಟವರ್ಕ್‌ ಸೌಲಭ್ಯ ಪಡೆದಿರಲಿದ್ದು, ಕಂಪಾಕ್ಟ್‌ ಮಾದರಿಯಲ್ಲಿರುವುದರಿಂದ ಬಳಕೆದಾರರಿಗೆ ಉತ್ತಮ ಹಿಡಿತ ನೀಡಲಿದೆ. 4.7 ಇಂಚಿನ ಸಂಪೂರ್ಣ ಹೆಚ್‌ಡಿ LCD ಡಿಸ್‌ಪ್ಲೇಯೊಂದಿಗೆ ಹೆಚ್‌ಡಿ ರೇಟಿನಾ ಪ್ಯಾನಲ್‌ ಅನ್ನು ಹೊಂದಿರಲಿದ್ದು, ಡಿಸ್‌ಪ್ಲೇಯು ಅತ್ಯುತ್ತಮ ಪಿಕ್ಸಲ್ ಸಾಮರ್ಥ್ಯದಲ್ಲಿರಲಿದೆ. ಪುಟ್ಟ ಡಿಸ್‌ಪ್ಲೇಯು ಕಂಫರ್ಟ್‌ ಎನಿಸಲಿದ್ದು, 2.7 x 0.29 ಫ್ರೇಮ್‌ ರಚನೆ ಇರಲಿದೆ ಎನ್ನಲಾಗುತ್ತಿದೆ.

A13 ಪ್ರೊಸೆಸರ್‌ ಹೊಸ ಐಫೋನ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಒದಗಿಸುವ ಸಾಧ್ಯತೆಗಳಿವೆ. ಆಪಲ್‌ ತನ್ನ ಐಫೋನ್ ತಯಾರಿಕಾ ಪಾಲುದಾರ ಕಂಪನಿ ಪೆಗಟ್ರಾನ್ ಜೊತೆಗೂಡಿ 2020ರ ವೇಳೆಗೆ ಸುಮಾರು 20 ಮಿಲಿಯನ್ ಡಿವೈಸ್‌ಗಳನ್ನು ಉತ್ಪಾದಿಸುವ ಯೋಜನೆಯನ್ನು ಮಾಡಿಕೊಂಡಿದೆ. ಇದರ ಬೆಲೆಯು 45000ರೂ.ಗಳು ಆಗಿರಬಹುದು ಎಂದು ಊಹಿಸಲಾಗುತ್ತಿದೆ.

ಹೊಸ ಆಪಲ್ ಐಫೋನ್ ಮಿಡ್‌ರೇಂಜ್‌ ಮಾದರಿಯಲ್ಲಿರಲಿದ್ದು, ಸ್ಕ್ರೀನ್‌ ಗಾತ್ರದಲ್ಲಿಯೂ ಚಿಕ್ಕದಾಗಿದೆ. ಹೀಗಾಗಿ ಪುಟ್ಟ ಡಿಸ್‌ಪ್ಲೇ ಐಫೋನ್‌ ಇಷ್ಟಪಡುವ ಗ್ರಾಹಕರನ್ನು ಇದು ಅತ್ಯುತ್ತಮ ಎನಿಸಲಿದೆ. ಇತ್ತೀಚಿನ ಮುಂದುವರಿದ ಎಲ್ಲ ಫೀಚರ್ಸ್‌ಗಳನ್ನು ಈ ಐಫೋನ್ ಒಳಗೊಂಡಿರಲಿದೆ. ಆದರೆ ಗ್ರಾಹಕರು ಈ ಐಫೋನ್‌ಗಾಗಿ ಮುಂದಿನ ವರ್ಷದವರೆಗೂ ಕಾಯಬೇಕು.

   
 
ಹೆಲ್ತ್