Back
Home » Car News
ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!
DriveSpark | 18th Apr, 2019 02:24 PM
 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಹೌದು, ಭಾರತೀಯ ಆಟೋ ಉದ್ಯಮದಲ್ಲಿ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳು ತಮ್ಮದೆ ಆದ ಜನಪ್ರಿಯತೆ ಹೊಂದಿದ್ದು, ಇದೀಗ ಭವಿಷ್ಯ ಯೋಜನೆಗಳಿಗಾಗಿ ಪರಸ್ಪರ ಕೈ ಜೋಡಿಸಿವೆ. ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳ ನಿರ್ಮಾಣ, ಎಂಜಿನ್ ಅಭಿವೃದ್ದಿ ಮತ್ತು ಮಾರಾಟ ಪ್ರಕ್ರಿಯೆಯಲ್ಲೂ ಜೊತೆಯಾಗುವ ಸುಳಿವು ನೀಡಿರುವ ಆಟೋ ದಿಗ್ಗಜ ಸಂಸ್ಥೆಗಳು ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿವೆ.


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಈ ಹಿಂದೆ ಫೋರ್ಡ್ ಸಂಸ್ಥೆಗಾಗಿ ವಿನೂತನ ಮಾದರಿಯ ಪೆಟ್ರೋಲ್ ಎಂಜಿನ್ ಒಂದನ್ನು ನಿರ್ಮಾಣ ಮಾಡಿರುವುದಾಗಿ ಹೇಳಿಕೊಂಡಿದ್ದ ಮಹೀಂದ್ರಾ ಸಂಸ್ಥೆಯು ಇದೀಗ ಸಹಭಾಗಿತ್ವದ ಆಧಾರದಲ್ಲಿ ಕಾರು ನಿರ್ಮಾಣ ಮತ್ತು ಮಾರಾಟದಲ್ಲೂ ಒಂದಾಗಲು ಮುಂದಾಗಿವೆ.


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಹೊಸ ಯೋಜನೆ ಕುರಿತಂತೆ ಫೋರ್ಡ್ ಮತ್ತು ಮಹೀಂದ್ರಾ ಸಂಸ್ಥೆಗಳೇ ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಒಂದಾಗುತ್ತಿರುವುದಕ್ಕೆ ಉಭಯ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿವೆ.


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಇನ್ನು ಸದ್ಯದ ಮಾರುಕಟ್ಟೆಯ ಸನ್ನಿವೇಶದಲ್ಲಿ ಫೋರ್ಡ್ ಸಂಸ್ಥೆಯು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಬೃಹತ್ ಬಂಡವಾಳ, ಆಕರ್ಷಕ ಉತ್ಪನ್ನಗಳು ಮತ್ತು ಸ್ವಂತ ಕಾರು ಉತ್ಪಾದನಾ ಘಟಕಗಳಿದ್ದರೂ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಮಹೀಂದ್ರಾ ಜೊತೆಗಿನ ಸಹಭಾಗಿತ್ವದಲ್ಲಿನ ಕಾರು ಉತ್ಪಾದನೆ ಮತ್ತು ಮಾರಾಟ ಯೋಜನೆಯು ಒಂದು ರೀತಿಯಲ್ಲಿ ಲಾಭದಾಯಕ ಮಾರ್ಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಇನ್ನು ಹೊಸ ಯೋಜನೆಯಿಂದ ಮಹೀಂದ್ರಾ ಸಂಸ್ಥೆಗೂ ಇದರಿಂದ ಸಾಕಷ್ಟು ಅನುಕೂಲಕತೆಗಳಿದ್ದು, ಕಾರು ಉತ್ಪಾದನೆಯಿಲ್ಲದೇ ಆರ್ಥಿಕ ಹೊರೆ ಅನುಭವಿಸುತ್ತಿರುವ ಫೋರ್ಡ್ ಮಾಲೀಕತ್ವದ ಗುಜರಾತಿನ ಸನಂದಾ ಮತ್ತು ಚೆನ್ನೈ ಘಟಕಗಳನ್ನು ಸದ್ಭಳಕೆ ಮಾಡಿಕೊಳ್ಳಲು ಮಹೀಂದ್ರಾ ಸಂಸ್ಥೆಗೆ ಸಾಕಷ್ಟು ಸಹಕಾರಿಯಾಗಲಿದೆ.

  MOST READ: ಇನ್ಮುಂದೆ ಮಾಡಿಫೈ ವಾಹನಗಳ ಮಾರಾಟ ಮತ್ತು ಖರೀದಿ ಸಾಧ್ಯವೇ ಇಲ್ಲ..!


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಜೊತೆಗೆ ಉತ್ತರ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮಹೀಂದ್ರಾ ಸಂಸ್ಥೆಗೂ ಈ ಹೊಸ ಯೋಜನೆ ಸಹಕಾರಿಯಾಗಲಿದ್ದು, ಈ ಮೂಲಕ ಗ್ರಾಹಕರ ಬೇಡಿಕೆ ಕಳೆದುಕೊಳ್ಳುತ್ತಿರುವ ಫೋರ್ಡ್ ಕಾರುಗಳಿಗೆ ಮಹೀಂದ್ರಾದಿಂದಲೂ ಮತ್ತಷ್ಟು ಉತ್ತೇಜನ ಸಿಗಲಿದೆ.


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಯಾಕೆಂದ್ರೆ ಮೆಟ್ರೋ ನಗರಗಳಲ್ಲಿ ಅಷ್ಟೇ ಅಲ್ಲದೇ 2ನೇ ದರ್ಜೆಯ ಮತ್ತು 3ನೇ ದರ್ಜೆಯ ಮಹಾನಗರಗಳಲ್ಲೂ ವ್ಯಾಪಕವಾದ ಮಾರಾಟ ಮಳಿಗೆಗಳನ್ನು ಹೊಂದಿರುವ ಮಹೀಂದ್ರಾ ಸಂಸ್ಥೆಯು ಫೋರ್ಡ್ ಕಾರುಗಳ ಮಾರಾಟಕ್ಕೆ ಸಾಥ್ ನೀಡಲಿದೆ. ಅದೇ ರೀತಿಯಾಗಿ ಫೋರ್ಡ್ ಮಾರಾಟ ಮಳಿಗೆಗಳಲ್ಲಿ ಮಹೀಂದ್ರಾ ಕಾರುಗಳ ಮಾರಾಟಕ್ಕೂ ಅವಕಾಶ ದೊರೆಯಲಿದೆ.

  MOST READ: ಭಾರತದಲ್ಲೂ ಬಿಡುಗಡೆಯಾಗುತ್ತಾ ಲೆಕ್ಸಸ್ ಎಲ್ಎಂ ಲಗ್ಷುರಿ ವ್ಯಾನ್?


 • ಸಹಭಾಗಿತ್ವದಲ್ಲಿ ಕಾರು ಉತ್ಪಾದನೆಗಾಗಿ ಒಂದಾದ ಆಟೋ ದಿಗ್ಗಜರು..!

  ಹೀಗಾಗಿ ಸಹಭಾಗಿತ್ವದಲ್ಲಿ ಕಾರು ನಿರ್ಮಾಣ, ಎಂಜಿನ್ ಅಭಿವೃದ್ಧಿ ಮತ್ತು ಮಾರಾಟಕ್ಕೆ ಪರಸ್ಪರ ಸಹಕರಿಸುವ ಹೊಸ ಯೋಜನೆಯು ಭಾರತದಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿದ್ದು, ಹೊಸ ಒಪ್ಪಂದದ ಅಡಿಯಲ್ಲಿ ಮತ್ತಷ್ಟು ಹೊಸ ಯೋಜನೆಗಳ ಕುರಿತು ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿ ಸದ್ಯದಲ್ಲೇ ಸಿಗಲಿದೆ.
ದೇಶದಲ್ಲಿ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಮಾರುಕಟ್ಟೆ ವಿಸ್ತರಣೆಗಾಗಿ ಹೊಸ ಹೊಸ ಯೋಜನೆಯನ್ನು ರೂಪಿಸುತ್ತಿದ್ದು, ಹೊಸ ಕಾರು ಉತ್ಪಾದನೆಗಾಗಿ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಒಂದಾದಂತೆ ಇದೀಗ ಮಹೀಂದ್ರಾ ಮತ್ತು ಫೋರ್ಡ್ ಸಂಸ್ಥೆಗಳು ಕೂಡಾ ಕಾರು ಮಾರಾಟ ಮತ್ತು ಹೊಸ ಎಂಜಿನ್ ಅಭಿವೃದ್ದಿಗಾಗಿ ಪರಸ್ಪರ ಕೈ ಜೋಡಿಸಿವೆ.

   
 
ಹೆಲ್ತ್