Back
Home » ಸಿನಿ ಸಮಾಚಾರ
ರಜನಿಕಾಂತ್ 'ದರ್ಬಾರ್'ಗೆ ವಿಲನ್ ಆದ ರಾಜ್ ಬಬ್ಬರ್ ಪುತ್ರ
Oneindia | 18th Apr, 2019 06:12 PM

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ 'ದರ್ಬಾರ್' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಸದ್ಯ ಮುಂಬೈನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ತಲೈವಾ ವಿರುದ್ಧ ಖ್ಯಾತ ನಟ ರಾಜ್ ಬಬ್ಬರ್ ಪುತ್ರ ಪ್ರತೀಕ್ ಬಬ್ಬರ್ ಅಖಾಡಕ್ಕೆ ಇಳಿದಿದ್ದಾರೆ. 'ದರ್ಬಾರ್' ಚಿತ್ರಕ್ಕೆ ಖಳ ನಟನಾಗಿ ಪ್ರತೀಕ್ ಬಬ್ಬರ್ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿಗೆ ಪ್ರತೀಕ್ ಸೂಪರ್ ಸ್ಟಾರ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ.

ರಜನಿಕಾಂತ್ ಜೊತೆ ತೆರೆಹಂಚಿಕೊಳ್ಳಬೇಕು ಎನ್ನುವುದು ಬಹುತೇಕ ಕಲಾವಿದರ ವರ್ಷಗಳ ಕನಸಾಗಿರುತ್ತೆ. ಅಂತಹದ್ರಲ್ಲಿ ಚಿಕ್ಕ ವಯಸ್ಸಿನಲ್ಲೇ ದೊಡ್ಡ ಅವಕಾಶ ಅರಸಿ ಬಂದಿರುವುದು ಪ್ರತೀಕ್ ಶ್ರಮಕ್ಕೆ ಸಿಕ್ಕ ಫಲವಾಗಿದೆ. ಬಾಲಿವುಡ್ ನಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ಪ್ರತೀಕ್ 'ಭಾಗಿ-2' ಚಿತ್ರದ ಖಳನಾಯಕನ ಪಾತ್ರದ ಮೂಲಕ ಸಿಪ್ರಿಯರ ಗಮನ ಸೆಳೆದಿದ್ದರು. ಆ ಪಾತ್ರವನ್ನೆ ನೋಡಿ ಇಂಪ್ರೆಸ್ ಆಗಿದ್ದ ನಿರ್ದೇಶಕ ಎ.ಆರ್ ಮುರುಗದಾಸ್ 'ದರ್ಬಾರ್' ಸಿನಿಮಾಗೆ ಆಯ್ಕೆ ಮಾಡಿಕೊಂಡಿದ್ದಾರೆ. ಮೊದಲ ಬಾರಿಗೆ ರಜನಿಕಾಂತ್ ಜೊತೆ ತೆರೆಹಂಚಿಕೊಳ್ಳುತ್ತಿರುವ ಪ್ರತೀಕ್ ಬಬ್ಬರ್ ಪಾತ್ರದ ಬಗ್ಗೆ ಸಖತ್ ಎಕ್ಸಾಯಿಟ್ ಆಗಿದ್ದಾರೆ.

Big Breaking: ವೀಕೆಂಡ್ ವಿತ್ ರಮೇಶ್ ನಲ್ಲಿ ರಜನಿಕಾಂತ್, ರಾಜಮೌಳಿ.!

ಅಂದಹಾಗೆ 'ದರ್ಬಾರ್' ಎ ಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ರಜನಿಕಾಂತ್ ಗೆ ನಾಯಕಿಯಾಗಿ ನಯನತಾರಾ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ ಚಿತ್ರತಂಡ. ವಿಶೇಷ ಅಂದ್ರೆ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 25 ವರ್ಷದ ನಂತರ ತಲೈವಾ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ.

   
 
ಹೆಲ್ತ್