Back
Home » ಸಿನಿ ಸಮಾಚಾರ
ಮತದಾನ ಮಾಡದೆ ಇರುವವರಿಗೆ ಕಿಚ್ಚನ ಬುದ್ಧಿ ಮಾತು
Oneindia | 18th Apr, 2019 05:18 PM

ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಚಿತ್ರರಂಗದ ಬಹುತೇಕರು ಇಂದು ಮತದಾನ ಮಾಡಿದ್ದಾರೆ.

ಜೆ ಪಿ ನಗರದಲ್ಲಿ ಮತದಾನ ಮಾಡಿದ ನಟ ಸುದೀಪ್ ''ಮತದಾನ ಮಾಡುವುದು ನನ್ನ ಕರ್ತವ್ಯ. ನಾವು ಅದನ್ನು ಮಾಡಲೇಬೇಕು. ಅದರಿಂದ ನಾವು ದೂರ ಹೋಗಲು ಆಗುವುದಿಲ್ಲ. ಎಲ್ಲರಿಗೂ ಕೆಲಸ ಇದ್ದೆ ಇರುತ್ತದೆ. ಅದನ್ನು ಬಿಟ್ಟು ಮತದಾನ ಮಾಡಬೇಕು.'' ಎಂದರು.

RR ನಗರದಲ್ಲಿ ವೋಟ್ ಮಾಡಿದ 'ಜೋಡೆತ್ತು' ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ

''ಒಬ್ಬ ಒಳ್ಳೆಯ ವ್ಯಕ್ತಿ ಅಧಿಕಾರಕ್ಕೆ ಬಂದರೆ, ಒಳ್ಳೆಯದು ಆಗುತ್ತದೆ ಎಂಬ ಕಾರಣಕ್ಕೆ ಮತ ಹಾಕಬೇಕು. ಸ್ಟಾರ್ ಗಿರಿ ಅಲ್ಲ, ಒಬ್ಬ ಸಾಮಾನ್ಯನಾಗಿ ಮತ ಹಾಕಿದ್ದೇನೆ.'' ಎಂದು ಮತದಾನ ಮಹತ್ವ ತಿಳಿಸಿದರು.

ಮತದಾನ ನಿರ್ಲಕ್ಷಾ ಮಾಡುವವರ ಕುರಿತು ''ಯಾರಾದರೂ ಇನ್ನು ಮತದಾನ ಮಾಡಿಲ್ಲ ಅಂದರೆ ಅದರ ಬಗ್ಗೆ ಹೇಳುವ ವಿಷಯ ಅಲ್ಲ. ಅದು ಅವರ ಜವಾಬ್ದಾರಿ. ಮತದಾನ ಮಾಡದೆ ಮನೆಯಲ್ಲಿ ಇದ್ದರೆ ಚೆನ್ನಾಗಿ ಇರಲಿ'' ಎಂದು ಮಾತಿನ ಮೂಲಕ ಪೆಟ್ಟು ನೀಡಿದ್ದಾರೆ ಸುದೀಪ್.

ನಟ ಸುದೀಪ್, ದರ್ಶನ್, ಶಿವರಾಜ್ ಕುಮಾರ್, ಜಗ್ಗೇಶ್, ಅಜಯ್ ರಾವ್, ಪ್ರೇಮ್, ರಮೇಶ್, ಅರ್ಜುನ್ ಸರ್ಜಾ, ಗಣೇಶ್, ಉಪೇಂದ್ರ, ಧನಂಜಯ್ ಸೇರಿದಂತೆ ಬಹುತೇಕರು ವೋಟ್ ಮಾಡಿದ್ದಾರೆ.

   
 
ಹೆಲ್ತ್